Bigg Boss Kannada 13: ಅದ್ಭುತವಾಗಿ ಆಟ ಆಡಿದ ಸೌಂದರ್ಯಾ ಈ ವಾರದ ಕ್ಯಾಪ್ಟನ್, ʻಉತ್ತಮʼ ಪಟ್ಟ; ಕಿಚ್ಚನ ಚಪ್ಪಾಳೆ ಯಾರಿಗೆ?
Bigg Boss Kannada 13: ಬಿಗ್ಬಾಸ್ ಮನೆಯಲ್ಲಿ ಮೆಚ್ಚುಗೆ ಪಡೆದ ಟಾಸ್ಕ್ ‘ಲೂಟಿಕೋರರು ಮತ್ತು ರಕ್ಷಕರು’. . ಲೂಟಿಕೋರರು, ಮತ್ತು ಕಾವಲುಗಾರರ ನಡುವೆ ನಡೆದ ಟಾಸ್ಕ್ನಲ್ಲಿ ಅಂತಿಮವಾಗಿ ಲೂಟಿಕೋರರು ಗೆದ್ದರು. ಡೈಮಂಡ್ ಹಾಗೂ ಕಿರೀಟ ಕದ್ದು ತಾಂಡವ್ , ಆಸಿಯಾ, ಸೌಂದರ್ಯಾ, ಲಕ್ಷ್ಮಿ ಮತ್ತು ಸೋನಿಕಾ ಅವರ ನಡುವೆ ಕ್ಯಾಪ್ಟೆನ್ಸಿಗೆ ಸ್ಪರ್ಧೆ ನಡೆಯಿತು. ಕೊನೆಗೆ ಸೌಂದರ್ಯ ಶೆಟ್ಟಿ ಕ್ಯಾಪ್ಟನ್ ಆಗಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ಬಾಸ್ ಮನೆಯಲ್ಲಿ (Bigg Boss Kannada 13) ಮೆಚ್ಚುಗೆ ಪಡೆದ ಟಾಸ್ಕ್ ‘ಲೂಟಿಕೋರರು ಮತ್ತು ರಕ್ಷಕರು’. . ಲೂಟಿಕೋರರು, ಮತ್ತು ಕಾವಲುಗಾರರ ನಡುವೆ ನಡೆದ ಟಾಸ್ಕ್ನಲ್ಲಿ ಅಂತಿಮವಾಗಿ ಲೂಟಿಕೋರರು ಗೆದ್ದರು. ಡೈಮಂಡ್ ಹಾಗೂ ಕಿರೀಟ ಕದ್ದು ತಾಂಡವ್ (Thandav Ram), ಆಸಿಯಾ, ಸೌಂದರ್ಯಾ, ಲಕ್ಷ್ಮಿ ಮತ್ತು ಸೋನಿಕಾ ಅವರ ನಡುವೆ ಕ್ಯಾಪ್ಟೆನ್ಸಿಗೆ ಸ್ಪರ್ಧೆ ನಡೆಯಿತು. ಕೊನೆಗೆ ಸೌಂದರ್ಯ ಶೆಟ್ಟಿ (Soundarya shetty) ಕ್ಯಾಪ್ಟನ್ ಆಗಿದ್ದಾರೆ.
ಕ್ಯಾಪ್ಟೆನ್ಸಿ ಪಟ್ಟಕ್ಕೆ ಸ್ಪರ್ಧೆ
ಅಕ್ಷರಗಳನ್ನು ಜೋಡಿಸುವ ರೌಂಡ್ನಲ್ಲಿ ಆಸಿಯಾ ಮತ್ತು ಸೌಂದರ್ಯಾ ಗೆದ್ದರು. ಅಂತಿಮವಾಗಿ ಸೌಂದರ್ಯಾ ಮತ್ತು ಆಸಿಯಾ ಅವರುಗಳೇ ಕ್ಯಾಪ್ಟೆನ್ಸಿ ಪಟ್ಟಕ್ಕೆ ಸ್ಪರ್ಧೆ ಮಾಡುವಂತಾಯ್ತು. ಕ್ಯಾಪ್ಟೆನ್ಸಿಗಾಗಿ ನಡೆದ ಬ್ಯಾಲೆನ್ಸಿಂಗ್ ಟಾಸ್ಕ್ನಲ್ಲಿ ಸೌಂದರ್ಯಾ ಅದ್ಭುತವಾಗಿ ಆಟ ಆಡಿ ಗೆದ್ದರು. ಸೌಂದರ್ಯಾ ಅವರು ಟಾಸ್ಕ್ನ ವೇಳೆ ಸಹ ಅದ್ಭುತವಾದ ಪ್ರದರ್ಶನ ನೀಡಿದರು.ಜೊತೆಗೆ ಲೂಟಿಕೋರರ ತಂಡ ಟಾಸ್ಕ್ ಗೆಲ್ಲುವಲ್ಲಿ ಬಹಳ ಪ್ರಮುಖವಾದ ಪಾತ್ರ ಸಹ ವಹಿಸಿದರು. ಇದೇ ಕಾರಣಕ್ಕೆ ಅವರಿಗೆ ಈ ವಾರದ ಉತ್ತಮ ಸಹ ದೊರಕಿತು. ಅಂದಹಾಗೆ ಈ ವಾರದ ಕಿಚ್ಚನ ಚಪ್ಪಾಳೆಯೂ ಸಹ ಸೌಂದರ್ಯಾ ಅವರಿಗೇ ಹೋಗುವ ಸಾಧ್ಯತೆ ಇದೆ.
ಇದನ್ನೂ ಓದಿ: Ramayana Movie: ‘ರಾಮಾಯಣ 2’ ರಿಲೀಸ್ ದಿನಾಂಕ ಪೋಸ್ಟ್‌ಪೋನ್?
. ಸಸ್ಪೆನ್ಸ್, ಥ್ರಿಲ್ಲಿಂಗ್ ಅಂಶಗಳಿಂದ ಕೂಡಿದ್ದ ಟಾಸ್ಕ್‌ನ್ನ ಸ್ಪರ್ಧಿಗಳ ಜೊತೆಗೆ ವೀಕ್ಷಕರು ಕೂಡ ಬಹಳ ಎಂಜಾಯ್ ಮಾಡಿದ್ದಾರೆ.ಟಾಸ್ಕ್ ಗೆದ್ದ ಲೂಟಿಕೋರರ ತಂಡಕ್ಕೆ ಬಿಗ್ ಬಾಸ್ ಒಂದು ಆದೇಶ ನೀಡಿದರು, ತಮ್ಮ ಆದೇಶ ಬರುವವರೆಗೂ ನೀವು ಬಚ್ಚಿಟ್ಟ ಡೈಮಂಡ್ ಮತ್ತು ಕಿರೀಟದ ಜಾಗವನ್ನ ಯಾರಿಗೂ ಹೇಳುವಂತಿಲ್ಲ. ಹಾಗೇ ರಕ್ಷಕರ ತಂಡದ ಸದಸ್ಯರ ಜೊತೆಗೆ ಚರ್ಚೆ ಮಾಡುವಂತಿಲ್ಲ ಎಂದು ಆಜ್ಙೆ ಮಾಡಿದರು. ಏಕೆ ಎಂಬುವುದಕ್ಕೆ ಉತ್ತರ ಇಂದು ಗೊತ್ತಾಗಲಿದೆ.
ಇದನ್ನೂ ಓದಿ: Bigg Boss Kannada 13: ಆಸಿಯಾ Vs ಸೌಂದರ್ಯ; ಯಾರಾಗ್ತಾರೆ ಕ್ಯಾಪ್ಟನ್?
ಸೌಂದರ್ಯಾ ಅವರು ಕ್ಯಾಪ್ಟೆನ್ಸಿ ಗೆದ್ದ ಕೂಡಲೇ ಎಲ್ಲರಿಗೂ ಈ ವಾರ ಫ್ರೀ, ನಿಮ್ಮಷ್ಟದಂತೆ ಇರಿ ಎಂದರು. , ಸುದೀಪ್ ಅವರು ಯಾವ ವಿಷಯವನ್ನು ಎತ್ತಿಕೊಳ್ಳಲಿದ್ದಾರೆ ಎಂಬುದು ಇಂದು ಗೊತ್ತಾಗಲಿದೆ.