ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Yash: ಕೊನೆಗೂ ತೆಲಂಗಾಣದಲ್ಲಿ 'ಟಾಕ್ಸಿಕ್‌' ಟಿಕೆಟ್ ಬುಕಿಂಗ್ ಆರಂಭ; ಚಿತ್ರತಂಡಕ್ಕೆ ಅಲ್ಲಿನ ಸರ್ಕಾರ ವಿಧಿಸಿರುವ ನಿಯಮಗಳೇನು ಗೊತ್ತಾ?

'ಟಾಕ್ಸಿಕ್‌' ಸಿನಿಮಾದ ಮುಂಗಡ ಬುಕಿಂಗ್ ತೆಲಂಗಾಣದಲ್ಲಿ ಅಧಿಕೃತವಾಗಿ ಶುರುವಾಗಿದ್ದು, ಕೆಲವೇ ನಿಮಿಷಗಳಲ್ಲಿ ದಾಖಲೆ ಬರೆದಿದೆ. ಸರ್ಕಾರ ನಿಗದಿಪಡಿಸಿದಂತೆ ದಿನಕ್ಕೆ ಐದು ಶೋಗಳಿಗೆ ಅನುಮತಿ ಲಭಿಸಿದ್ದು, ಟಿಕೆಟ್ ದರ ಏರಿಕೆಗೆ ಒಪ್ಪಿಗೆ ಸಿಕ್ಕಿದೆ. ಇದೇ ವೇಳೆ ಚಿತ್ರತಂಡವು ಸ್ಥಳೀಯ ಕಾರ್ಮಿಕರ ನಿಧಿಗೆ ಒಂದು ಕೋಟಿ ದೇಣಿಗೆ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ.

Yash: 'ಟಾಕ್ಸಿಕ್‌' ಟೀಮ್‌ಗೆ ತೆಲಂಗಾಣ ಸರ್ಕಾರ ವಿಧಿಸಿರುವ ಷರತ್ತುಗಳೇನು?

-

Avinash GR
Avinash GR Aug 25, 2026 5:25 PM

ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಟಾಕ್ಸಿಕ್'ನ ಟಿಕೆಟ್ ಬುಕಿಂಗ್ ತೆಲಂಗಾಣದಲ್ಲಿ ಕೊನೆಗೂ ಅಧಿಕೃತವಾಗಿ ಆರಂಭವಾಗಿದೆ. ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇದ್ದರೂ ಟಿಕೆಟ್ ಬುಕಿಂಗ್ ತೆರೆಯದಿರುವುದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿತ್ತು.

ಚಿತ್ರತಂಡವು ಟಿಕೆಟ್ ದರ ಏರಿಕೆಗೆ ಅನುಮತಿ ಕೋರಿ ತೆಲಂಗಾಣ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಈ ವಿಳಂಬ ಉಂಟಾಗಿತ್ತು. ಇದೀಗ ಸರ್ಕಾರದಿಂದ ಅಧಿಕೃತ ಒಪ್ಪಿಗೆ ಸಿಕ್ಕಿದ್ದು, ಮಂಗಳವಾರ (ಆ.25) ಮಧ್ಯಾಹ್ನದಿಂದ ರಾಜ್ಯಾದ್ಯಂತ ಬುಕಿಂಗ್ ವಿಂಡೋ ತೆರೆದುಕೊಂಡಿದೆ.

ಒಂದು ಕೋಟಿ ರೂ. ಕೊಡುವಂತೆ ಆದೇಶ

ತೆಲಂಗಾಣ ಸರ್ಕಾರವು ಚಿತ್ರತಂಡದ ಮನವಿಯನ್ನು ಪುರಸ್ಕರಿಸಿ ಮಹತ್ವದ ಆದೇಶ ಹೊರಡಿಸಿದೆ. ಇದರ ಅನ್ವಯ ಚಿತ್ರಮಂದಿರಗಳಲ್ಲಿ ದಿನಕ್ಕೆ ಐದು ಪ್ರದರ್ಶನಗಳನ್ನು ನಡೆಸಲು ಹಾಗೂ ಟಿಕೆಟ್ ದರವನ್ನು ಹೆಚ್ಚಿಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಇದೇ ವೇಳೆ ಚಿತ್ರತಂಡವು ತೆಲುಗು ಚಿತ್ರರಂಗದ ಕಾರ್ಮಿಕರ ಹಿತದೃಷ್ಟಿಯಿಂದ, ಅಲ್ಲಿನ ಚಿತ್ರರಂಗದ ಕಾರ್ಮಿಕರ ಕಲ್ಯಾಣ ನಿಧಿಗೆ (Industry Employees Welfare Fund) ₹1 ಕೋಟಿ ದೇಣಿಗೆ ನೀಡುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ.

Yash: 'ಟಾಕ್ಸಿಕ್‌' ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಅವಘಡ; ಕಾಲು ಮುರಿದುಕೊಂಡ ವಿದ್ಯಾರ್ಥಿ, ಪೊಲೀಸರು ಕೇಸ್‌ ದಾಖಲಿಸಿದ್ದು ಯಾರ ಮೇಲೆ?

ಎಷ್ಟಿದೆ ಟಿಕೆಟ್‌ ದರ?

ಚಿತ್ರ ಬಿಡುಗಡೆಯಾದ ಮೊದಲ ದಿನದಿಂದ ಹತ್ತನೇ ದಿನದವರೆಗೆ (ದಿನ 1 ರಿಂದ 10) ವಿಶೇಷ ದರಗಳು ಜಾರಿಯಲ್ಲಿರಲಿವೆ. ಈ ಅವಧಿಯಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಪ್ರತಿ ಟಿಕೆಟ್‌ಗೆ 227 ರೂಪಾಯಿ ಹಾಗೂ ಮಲ್ಟಿಪ್ಲೆಕ್ಸ್‌ಗಳು ಮತ್ತು ವಿಶೇಷ ಚಿತ್ರಮಂದಿರಗಳಲ್ಲಿ ಪ್ರತಿ ಟಿಕೆಟ್‌ಗೆ 395 ರೂಪಾಯಿ ದರ ನಿಗದಿಯಾಗಿದೆ. ಆರಂಭಿಕ ದಿನಗಳಲ್ಲಿ ಪ್ರೇಕ್ಷಕರಿಂದ ವ್ಯಕ್ತವಾಗುವ ಭಾರೀ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ತಾತ್ಕಾಲಿಕ ದರ ಹೆಚ್ಚಳಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇನ್ನು ಬಿಡುಗಡೆಯಾದ 11ನೇ ದಿನದಿಂದ ಟಿಕೆಟ್ ದರಗಳಲ್ಲಿ ಇಳಿಕೆಯಾಗಲಿದ್ದು, ಸಾಮಾನ್ಯ ದರಗಳು ಅನ್ವಯವಾಗಲಿವೆ. 11ನೇ ದಿನದಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಟಿಕೆಟ್ ಬೆಲೆ 177 ರೂಪಾಯಿ ಆಗಿದ್ದರೆ, ಮಲ್ಟಿಪ್ಲೆಕ್ಸ್ ಹಾಗೂ ವಿಶೇಷ ಚಿತ್ರಮಂದಿರಗಳಲ್ಲಿ 295 ರೂಪಾಯಿಗೆ ಟಿಕೆಟ್‌ಗಳು ಲಭ್ಯವಾಗಲಿವೆ.

Yash-Radhika Pandit: ರಾಕಿ ಭಾಯ್‌‌ಗೆ ಮದುವೆ ಆನಿವರ್ಸರಿ ಸಂಭ್ರಮ; ಯಶ್-ರಾಧಿಕಾ ಜೋಡಿ ದಾಂಪತ್ಯ ಜೀವನಕ್ಕೆ ಈಗ ಎಂಟರ ನಂಟು!

ಒಂದು ಗಂಟೆಗೆ 40+ ಟಿಕೆಟ್‌ ಸೋಲ್ಡ್‌ಔಟ್‌

ಬುಕಿಂಗ್ ಆರಂಭವಾಗುತ್ತಿದ್ದಂತೆಯೇ 'ಟಾಕ್ಸಿಕ್' ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಮುನ್ನುಗ್ಗಿದೆ. ಈಗಾಗಲೇ ಮುಂಗಡ ಬುಕಿಂಗ್‌ನಲ್ಲಿ ಭರ್ಜರಿ ಬೇಡಿಕೆ ಕಂಡುಕೊಂಡಿರುವ ಈ ಚಿತ್ರ, ಈ ಹಿಂದೆ 'ಕಾಂತಾರ ಚಾಪ್ಟರ್ 1' (896K) ನಿರ್ಮಿಸಿದ್ದ ಮುಂಗಡ ಬುಕಿಂಗ್ ದಾಖಲೆಯನ್ನು ಹಿಂದಿಕ್ಕಿದೆ. ಬುಕ್‌ಮೈಶೋ (BookMyShow) ಹಾಗೂ ಡಿಸ್ಟ್ರಿಕ್ಟ್ (District) ಪ್ಲಾಟ್‌ಫಾರ್ಮ್‌ಗಳಲ್ಲಿ ಒಟ್ಟಾರೆಯಾಗಿ ಬರೋಬ್ಬರಿ 1.5 ಮಿಲಿಯನ್‌ಗೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ. ಅದರಲ್ಲೂ ತೆಲುಗು ಆವೃತ್ತಿಯ ಬುಕಿಂಗ್ ಆರಂಭವಾದ ಕೇವಲ ಒಂದು ಗಂಟೆಯಲ್ಲೇ 41.7 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಬಿಕರಿಯಾಗುವ ಮೂಲಕ ತೆಲುಗು ರಾಜ್ಯಗಳಲ್ಲೂ ಯಶ್ ಅವರ ಸ್ಟಾರ್‌ಡಮ್ ಸಾಬೀತಾಗಿದೆ.

ಫ್ಯಾನ್ಸ್‌ ನಿರೀಕ್ಷೆ ಜೋರಾಗಿದೆ!

ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಅಪಾರ ನಿರೀಕ್ಷೆ ಗರಿಗೆದರಿದೆ. ಭರ್ಜರಿ ಆಕ್ಷನ್ ಸನ್ನಿವೇಶಗಳಿಂದ ನಿರೀಕ್ಷೆ ದೊಡ್ಡದಾಗಿದೆ. ಯಶ್‌ ಜೊತೆಗೆ ನಯನತಾರಾ, ಹುಮಾ ಖುರೀಷಿ, ರುಕ್ಮಿಣಿ ವಸಂತ್‌, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಹೈದರಾಬಾದ್‌, ಚೆನ್ನೈನಲ್ಲಿ ನಡೆದ ಅದ್ಧೂರಿ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಸಿಕ್ಕ ಅಭೂತಪೂರ್ವ ಜನಬೆಂಬಲವು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಚಿತ್ರಮಂದಿರಗಳಲ್ಲಿ 'ಟಾಕ್ಸಿಕ್' ಸುನಾಮಿ ಎಬ್ಬಿಸಲು ಸಜ್ಜಾಗಿದೆ.