ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಲ್ಲಿ ಮತ್ತೆ 240 ಟ್ರೈನಿಗಳ ವಜಾ!
Infosys layoffs: ಕೆಲಸದಿಂದ ವಜಾ ಮಾಡಿರುವ ಬಗ್ಗೆ ಟ್ರೈನಿಗಳಿಗೆ ಇನ್ಫೋಸಿಸ್ ಕಂಪನಿಯಿಂದ ಇ-ಮೇಲ್ ಕಳುಹಿಸಲಾಗಿದೆ. ಫೆಬ್ರವರಿಯಲ್ಲಿ 300 ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಈಗ ಮತ್ತೊಮ್ಮೆ ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಲ್ಲಿ 240 ಟ್ರೈನಿಗಳನ್ನು ಕಂಪನಿ ವಜಾಗೊಳಿಸಿರುವುದು ಕಂಡುಬಂದಿದೆ.