ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Fact Check: ತಿಂಗಳಿಗೆ 15 ಲಕ್ಷ ರುಪಾಯಿ ಲಾಭದ ಹೂಡಿಕೆ ಬಗ್ಗೆ ವಿವರಿಸಿದ್ರಾ ರಕ್ಷಣಾ ಸಚಿವ ರಾಜನಾಥ್ ಸಿಂಗ್? ವೈರಲ್‌ ವಿಡಿಯೊದ ಅಸಲಿಯತ್ತೇನು?

22,000 ರುಪಾಯಿ ಹೂಡಿಕೆಗೆ ದಿನಕ್ಕೆ 80,000 ರುಪಾಯಿ ಲಾಭ ಸಿಗುತ್ತದೆ ಎಂದು ಹೇಳುವಂತೆ ರಾಜನಾಥ್ ಸಿಂಗ್ ಅವರ ಧ್ವನಿಯಲ್ಲಿ ಸೃಷ್ಟಿಸಲಾದ ಎಐ ಡೀಪ್‌ಫೇಕ್ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೊ ಸಂಪೂರ್ಣ ನಕಲಿ ಎಂದು ಫ್ಯಾಕ್ಟ್ ಚೆಕ್ ಘಟಕವು ಸ್ಪಷ್ಟಪಡಿಸಿದೆ. ಸರ್ಕಾರ ಅಥವಾ ಸಚಿವರು ಇಂತಹ ಯಾವುದೇ ಹೂಡಿಕೆ ಯೋಜನೆಯನ್ನು ಅನುಮೋದಿಸಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

ಎಐ ಡೀಪ್‌ಫೇಕ್ ವಿಡಿಯೊ: ರಾಜನಾಥ್ ಸಿಂಗ್ ಹೆಸರಿನಲ್ಲಿ ನಕಲಿ ಹೂಡಿಕೆ ಯೋಜನೆ

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (ಸಂಗ್ರಹ ಚಿತ್ರ) -

Profile
Sushmitha Jain May 2, 2026 5:14 PM

ನವದೆಹಲಿ, ಮೇ 2: ಕೇವಲ 22,000 ರುಪಾಯಿ ಹೂಡಿಕೆ ಮಾಡಿದರೆ ದಿನಕ್ಕೆ 80,000 ರುಪಾಯಿ ಹಾಗೂ ತಿಂಗಳಿಗೆ 15 ಲಕ್ಷ ರುಪಾಯಿವರೆಗೆ ಬೃಹತ್ ಲಾಭ ಸಿಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Defence Minister Rajnath Singh) ಭರವಸೆ ನೀಡುತ್ತಿರುವಂತೆ ಬಿಂಬಿಸುವ ಕೃತಕ ಬುದ್ಧಿಮತ್ತೆ (Artificial intelligence) ಆಧಾರಿತ 'ಡಿಪ್‌ಫೇಕ್ʼ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ಸಾರ್ವಜನಿಕರನ್ನು ದಾರಿ ತಪ್ಪಿಸುವ ಸಂಚು ಎಂದು ಸರ್ಕಾರ ಎಚ್ಚರಿಸಿದೆ.

ಈ ವಂಚನೆಯ ವಿಡಿಯೊದಲ್ಲಿ ಸ್ವತಃ ರಾಜನಾಥ್ ಸಿಂಗ್ ಅವರೇ ಮಾತನಾಡುತ್ತಿರುವಂತೆ ಎಐ ತಂತ್ರಜ್ಞಾನವನ್ನು ಅತ್ಯಂತ ಚಾಣಾಕ್ಷತನದಿಂದ ಬಳಸಲಾಗಿದೆ. ವಿಡಿಯೊಗೆ ಹೆಚ್ಚಿನ ವಿಶ್ವಾಸಾರ್ಹತೆ ನೀಡಲು ಹಿನ್ನೆಲೆಯಲ್ಲಿ ಭಾರತದ ರಾಷ್ಟ್ರಧ್ವಜ ಮತ್ತು ರಾಷ್ಟ್ರೀಯ ಲಾಂಛನವನ್ನು ಅಕ್ರಮವಾಗಿ ಬಳಸಿಕೊಳ್ಳಲಾಗಿದೆ. ಈ ಬಗ್ಗೆ ಸಂಶೋಧನೆ ನಡೆಸಿ ಎಚ್ಚರಿಕೆ ನೀಡಿರುವ 'ಅಥೇನಿಯನ್ ಟೆಕ್' ಸಂಸ್ಥೆಯು, ವಿಡಿಯೊದ ಕೆಳಭಾಗದಲ್ಲಿ ಎಸ್‌ಬಿಐ, ಪಿಎನ್‌ಬಿ, ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಇನ್ಫೋಸಿಸ್‌ನಂತಹ ಪ್ರಮುಖ ಬ್ಯಾಂಕ್ ಹಾಗೂ ಸಂಸ್ಥೆಗಳ ಲಾಂಛನಗಳನ್ನು ಅಧಿಕೃತ ಪಾಲುದಾರರು ಎಂಬಂತೆ ಬಿಂಬಿಸಲಾಗಿದೆ ಎಂದು ತಿಳಿಸಿದೆ. ಇವುಗಳನ್ನು ಯಾವುದೇ ಅನುಮತಿಯಿಲ್ಲದೆ ಕೇವಲ ಜನರನ್ನು ನಂಬಿಸಲು ಬಳಸಲಾಗಿದೆ.

ರಾಜನಾಥ್‌ ಸಿಂಗ್‌ ಅವರದ್ದೆನ್ನಲಾದ ವಿಡಿಯೊ ಕುರಿತಾದ ಸುದ್ದಿ:



ಸುಮಾರು ಎರಡು ನಿಮಿಷಗಳ ಈ ಸುಳ್ಳು ಮಾಹಿತಿ ನೀಡುವ ವಿಡಿಯೊ ಕ್ಲಿಪ್‌ನಲ್ಲಿ ಈ ಹೂಡಿಕೆ ಯೋಜನೆಯು ಭಾರತ ಸರ್ಕಾರದಿಂದ ಅನುಮೋದಿಸಲ್ಪಟ್ಟಿದೆ ಮತ್ತು ಪ್ರಭಾವಿ ಬ್ಯಾಂಕ್‌ಗಳ ಬೆಂಬಲ ಹೊಂದಿದೆ ಎಂದು ವಂಚಕರು ಸುಳ್ಳು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, "ಒಂದು ವೇಳೆ ನಿಮಗೆ ಭರವಸೆ ನೀಡಿದಷ್ಟು ಹಣ ಲಾಭವಾಗಿ ಬರದಿದ್ದರೆ, ನಾವು ವೈಯಕ್ತಿಕವಾಗಿ 10 ಲಕ್ಷ ರುಪಾಯಿ ಪರಿಹಾರ ನೀಡುತ್ತೇವೆ" ಎಂದು ಸಿಂಗ್ ಅವರ ಧ್ವನಿಯಲ್ಲಿ ನಕಲಿ ಭರವಸೆ ನೀಡಲಾಗಿದೆ. ಜನರಲ್ಲಿ ಅವಸರ ಮೂಡಿಸಿ ಹಣ ಲಪಟಾಯಿಸಲು "ನೋಂದಣಿ ಇಂದು ಮಾತ್ರ ಲಭ್ಯ" ಎಂಬ ತಂತ್ರವನ್ನೂ ಇಲ್ಲಿ ಬಳಸಲಾಗಿದೆ. ಇದರಲ್ಲಿರುವ ಲಿಂಕ್ ಕ್ಲಿಕ್ ಮಾಡಿದರೆ ಅದು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ವೆಬ್‌ಸೈಟ್‌ನಂತೆ ಕಾಣುವ ನಕಲಿ ಪುಟಕ್ಕೆ ಕರೆದೊಯ್ಯುತ್ತದೆ.

ಬಿಜೆಪಿ ಸೇರಿದ್ದ ಸಂದೀಪ್‌ ಪಾಠಕ್‌ಗೆ ಸಂಕಷ್ಟ; ಪಂಜಾಬ್‌ನ 2 ಜಿಲ್ಲೆಗಳಲ್ಲಿ FIR

ಸ್ಪಷ್ಟನೆ

ಈ ಕುರಿತು ಅಧಿಕೃತ ಸ್ಪಷ್ಟನೆ ನೀಡಿರುವ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (PIB) ಫ್ಯಾಕ್ಟ್ ಚೆಕ್ ಘಟಕವು, ಈ ವಿಡಿಯೊ ಸಂಪೂರ್ಣ ನಕಲಿ ಮತ್ತು ಎಐ ನಿರ್ಮಿತ ಎಂದು ಖಚಿತಪಡಿಸಿದೆ. ರಕ್ಷಣಾ ಸಚಿವರಾಗಲಿ ಅಥವಾ ಭಾರತ ಸರ್ಕಾರವಾಗಲಿ ಇಂತಹ ಯಾವುದೇ ಹೂಡಿಕೆ ಯೋಜನೆಯನ್ನು ಆರಂಭಿಸಿಲ್ಲ ಅಥವಾ ಅನುಮೋದಿಸಿಲ್ಲ. ಸಾರ್ವಜನಿಕರು ಇಂತಹ ಆಮಿಷಗಳಿಗೆ ಬಲಿಯಾಗಿ ತಮ್ಮ ಕಷ್ಟದ ಹಣವನ್ನು ಕಳೆದುಕೊಳ್ಳಬಾರದು. ಯಾವುದೇ ಹೂಡಿಕೆ ಮಾಡುವ ಮುನ್ನ ಅಧಿಕೃತ ಸರ್ಕಾರಿ ಮೂಲಗಳಿಂದ ಮಾಹಿತಿ ಪರಾಮರ್ಶಿಸುವುದು ಅತ್ಯಗತ್ಯ ಎಂದು ಪಿಐಬಿ ಎಚ್ಚರಿಸಿದೆ. ಇಂತಹ ಡಿಜಿಟಲ್ ವಂಚನೆಗಳ ಬಗ್ಗೆ ಜನಸಾಮಾನ್ಯರು ಜಾಗರೂಕರಾಗಿರಬೇಕು ಎಂದೂ ಕಿವಿ ಮಾತು ಹೇಳಿದೆ.