Konda Surekha: ತೆಲಂಗಾಣದಲ್ಲಿ ಹೈಡ್ರಾಮಾ! ರಾಜ್ಯ ಸರ್ಕಾರ ಕೊಲೆ ಯತ್ನ ಮಾಡುತ್ತಿದೆ ಎಂದು ಕಿರುಚಿದ ಸಚಿವೆಯ ಪುತ್ರಿ
Extortion allegation: ಸುಲಿಗೆ ಆರೋಪದಲ್ಲಿ ಪರಿಸರ ಸಚಿವೆ ಕೊಂಡ ಸುರೇಖಾ ಅವರ ಮಾಜಿ ಸಹಾಯಕ ಎನ್. ಸುಮಂತ್ ನನ್ನು ಹುಡುಕಲು ಪೊಲೀಸರು ಕೊಂಡ ಸುರೇಖಾ ಅವರ ಹೈದರಾಬಾದ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೊಂಡ ಸುರೇಖಾ ಅವರ ಪುತ್ರಿ ರಾಜ್ಯ ಸರ್ಕಾರ ತನ್ನ ಪೋಷಕರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

-

ಹೈದರಾಬಾದ್: ಡೆಕ್ಕನ್ ಸಿಮೆಂಟ್ಸ್ ಸುಲಿಗೆ ಪ್ರಕರಣದ (Deccan Cements extortion claims) ಆರೋಪಿ, ಪರಿಸರ ಸಚಿವೆ ಕೊಂಡ ಸುರೇಖಾ ( Konda Surekha) ಅವರ ಮಾಜಿ ಸಹಾಯಕ ಎನ್. ಸುಮಂತ್ ನನ್ನು ಹುಡುಕಲು ಪೊಲೀಸರು (Police raid) ಕೊಂಡ ಸುರೇಖಾ ಅವರ ಹೈದರಾಬಾದ್ ನಿವಾಸದ (Hyderabad home) ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರು ಬುಧವಾರ ಜುಬಿಲಿ ಹಿಲ್ಸ್‌ನಲ್ಲಿರುವ ಪರಿಸರ ಸಚಿವೆಯ ನಿವಾಸದ ಮೇಲೆ ದಾಳಿ ನಡೆಸಿದ್ದು, ಇದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಪಕ್ಷದ ಆಂತರಿಕ ಕಲಹವನ್ನು ಬಹಿರಂಗಪಡಿಸಿದೆ. ಇದರಿಂದಾಗಿ ತೆಲಂಗಾಣದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.
ವಾರಂಗಲ್‌ನ ಕಾಂಗ್ರೆಸ್ ಸಂಸದೆ ಸುರೇಖಾ ಅವರ ಮಾಜಿ ಸಹಾಯಕ ಸುಮಂತ್ ಡೆಕ್ಕನ್ ಸಿಮೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಅಧಿಕಾರಿಯೊಬ್ಬರಿಗೆ ಬಂದೂಕು ತೋರಿಸಿ ಹಣ ಸುಲಿಗೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಭ್ರಷ್ಟಾಚಾರದ ಆರೋಪದಲ್ಲಿ ವಜಾಗೊಳಿಸಲಾದ ಕೇವಲ ಒಂದು ದಿನದ ಅನಂತರ ಎನ್. ಸುಮಂತ್‌ಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಹೈದರಾಬಾದ್ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ವಿಶೇಷ ತಂಡವು ಸಚಿವರ ಮನೆ ಮೇಲೆ ದಾಳಿ ನಡೆಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುರೇಖಾ ಅವರ ಪುತ್ರಿ ಕೊಂಡ ಸುಶ್ಮಿತಾ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಕಚೇರಿಯು ಸುಮಂತ್ ಮತ್ತು ಅವರ ಕುಟುಂಬವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
ತಂದೆ ಕೊಂಡ ಮುರಳಿ ಅವರು ಸುಲಿಗೆಗೆ ಆದೇಶಿಸಿದ್ದಾರೆ ಎಂದು ಹೇಳುವಂತೆ ಸುಮಂತ್ ಅವರಿಗೆ ಒತ್ತಾಯಿಸಲಾಗಿದೆ ಎಂದು ಸುಶ್ಮಿತಾ ತಿಳಿಸಿದ್ದಾರೆ. ನನ್ನ ತಾಯಿ ಮತ್ತು ತಂದೆಯನ್ನು ರಾಜ್ಯ ಸರ್ಕಾರ ಗುರಿಯಾಗಿಸಿಕೊಂಡಿದೆ. ತಾಯಿ ಸಚಿವೆಯಾದರೂ ಅಧಿಕಾರಿಗಳು ನಮ್ಮೊಂದಿಗೆ ಹೇಗೆ ವರ್ತಿಸುತ್ತಿದ್ದಾರೆಂದು ನೋಡಿ. ನಾವು ಏನು ತಪ್ಪು ಮಾಡಿದ್ದೇವೆಂದು ನಮಗೆ ಅರ್ಥವಾಗುತ್ತಿಲ್ಲ. ನಮ್ಮ ಮೇಲೆ ಕೊಲೆ ಪ್ರಯತ್ನಗಳಿವೆ ಎಂದು ಹೇಳಿದರು.
ಈ ಹಿಂದೆ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಒಬಿಸಿಗಳನ್ನು ಬೆಂಬಲಿಸಿ ಪ್ರಚಾರ ಮಾಡುತ್ತಿದ್ದಾಗಲೂ ಪಕ್ಷವು ಹಿಂದುಳಿದ ವರ್ಗಗಳ ಸಚಿವರನ್ನು ಗುರಿಯಾಗಿಸಿಕೊಂಡಿತ್ತು. ಸುಮಂತ್ ಅವರನ್ನು ವಾರಂಟ್ ಇಲ್ಲದೆ ವಶಕ್ಕೆ ಪಡೆಯುವ ಪ್ರಯತ್ನವನ್ನು ವಿರೋಧಿಸುವುದಾಗಿ ಹೇಳಿದರು. ಮುಖ್ಯಮಂತ್ರಿ ಕಚೇರಿಯ ಆದೇಶದ ಮೇರೆಗೆ ಸುಮಂತ್ ಅವರನ್ನು ಗುರಿಯಾಗಿಸಲಾಗಿದೆ. ಕಂದಾಯ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಮತ್ತು ಶಾಸಕ ಕಡಿಯಂ ಶ್ರೀಹರಿ ತಮ್ಮ ವಿರುದ್ಧ ಪಿತೂರಿ ನಡೆಸಿದ್ದಾರೆ. ಈ ವಿಷಯದಲ್ಲಿ ಮುಖ್ಯಮಂತ್ರಿಯ ಸಲಹೆಗಾರ ವೆಮ್ ನರೇಂದರ್ ರೆಡ್ಡಿ ಅವರ ಪಾತ್ರವೂ ಇದೆ ಎಂದರು.
ಮುಖ್ಯಮಂತ್ರಿ ಕೂಡ ಈ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ. ಮುಖ್ಯಮಂತ್ರಿಯ ಮತ್ತೊಬ್ಬ ಸಹಾಯಕ ರೋಹಿನ್ ರೆಡ್ಡಿ ಡೆಕ್ಕನ್ ಸಿಮೆಂಟ್ಸ್ ಜೊತೆಗಿನ ಸಭೆಯಲ್ಲಿದ್ದರು. ಅವರು ಇಲ್ಲಿಯವರೆಗೆ ಯಾವುದೇ ಕ್ರಮವನ್ನು ಏಕೆ ಎದುರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸುರೇಖಾ ಮತ್ತು ಸುಮಂತ್ ಮನೆಯಿಂದ ಕಾರಿನಲ್ಲಿ ಹೊರಗೆ ಹೋದರು.
ದತ್ತಿ ಇಲಾಖೆಯನ್ನು ನಿರ್ವಹಿಸುತ್ತಿರುವ ಸುರೇಖಾ ಅವರು ಮೇಡಾರಂನ 71 ಕೋಟಿ ರೂ. ಮೂಲಸೌಕರ್ಯ ಒಪ್ಪಂದದ ಕುರಿತು ಶ್ರೀನಿವಾಸ ರೆಡ್ಡಿ ಜೊತೆ ಘರ್ಷಣೆಗೆ ಇಳಿದ ಬಳಿಕ ಈ ಬೆಳವಣಿಗೆಗಳು ನಡೆದಿವೆ ಎನ್ನಲಾಗಿದೆ.
ಇದನ್ನೂ ಓದಿ: ಡಬ್ಲ್ಯುಎಚ್-1000ಎಕ್ಸ್‌ಎಂ6 ಹೆಡ್‌ಫೋನ್‌ನಲ್ಲಿ ಸದ್ದು ತಡೆಯುವ ಭವಿಷ್ಯದ ಬದಲಾವಣೆ ಪರಿಚಯಿಸಿದ ಸೋನಿ ಇಂಡಿಯಾ
ತಮಗೆ ತಿಳಿಯಡಾಂಟೆ ಈ ಒಪ್ಪಂದವನ್ನು ಮಾಡಲಾಗಿದೆ ಎಂದು ಸುರೇಖಾ ಆರೋಪಿಸಿದ್ದು, ತಮ್ಮ ಸಚಿವಾಲಯದ ವ್ಯವಹಾರಗಳಲ್ಲಿ ಸುರೇಖಾ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಶ್ರೀನಿವಾಸ್ ರೆಡ್ಡಿ ದೂರಿದ್ದಾರೆ.