Operation Sindoor: ಪಾಕಿಸ್ತಾನದ ಕುತಂತ್ರ ಬಯಲು; ರಜೌರಿಯ ನಾಗರಿಕ ಪ್ರದೇಶದಲ್ಲಿ ಜೀವಂತ ಶೆಲ್ ಪತ್ತೆ
ಭಾರತ ಹಾಗೂ ಪಾಕಿಸ್ತಾನ ನಡುವೆ ಇರುವ ಸಂಘರ್ಷಕ್ಕೆ (Operation Sindoor) ಇದೀಗ ಕೊನೆ ಬಿದ್ದಿದೆ. ಕದನ ವಿರಾಮ ಏರ್ಪಟ್ಟ ನಂತರವೂ ಪಾಕಿಸ್ತಾನ ತನ್ನ ಕುತಂತ್ರಿ ಬುದ್ಧಿಯನ್ನು ಮತ್ತೆ ತೋರಿಸಿದೆ. ಕದನ ವಿರಾಮದ ನಂತರ ಪಾಕಿಸ್ತಾನ ಮತ್ತೆ ಶೆಲ್ ದಾಳಿಯನ್ನು ಮುಂದುವರಿಸಿತ್ತು.
 
                                -
 Vishakha Bhat
                            
                                May 12, 2025 5:51 PM
                                
                                Vishakha Bhat
                            
                                May 12, 2025 5:51 PM
                            ಶ್ರೀನಗರ: ಭಾರತ ಹಾಗೂ ಪಾಕಿಸ್ತಾನ ನಡುವೆ ಇರುವ ಸಂಘರ್ಷಕ್ಕೆ (Operation Sindoor) ಇದೀಗ ಕೊನೆ ಬಿದ್ದಿದೆ. ಕದನ ವಿರಾಮ ಏರ್ಪಟ್ಟ ನಂತರವೂ ಪಾಕಿಸ್ತಾನ ತನ್ನ ಕುತಂತ್ರಿ ಬುದ್ಧಿಯನ್ನು ಮತ್ತೆ ತೋರಿಸಿದೆ. ಕದನ ವಿರಾಮದ ನಂತರ ಪಾಕಿಸ್ತಾನ ಮತ್ತೆ ಶೆಲ್ ದಾಳಿಯನ್ನು ಮುಂದುವರಿಸಿತ್ತು. ಇದೀಗ ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ನಾಗರಿಕ ಪ್ರದೇಶಗಳಲ್ಲಿ ಸ್ಫೋಟಗೊಳ್ಳದ ಬಹು ಶೆಲ್‌ಗಳು ಕಂಡುಬಂದಿವೆ. ಯಾವುದೇ ನಾಗರಿಕ ಪ್ರದೇಶವನ್ನು ಗುರಿಯಾಗಿಸಿಕೊಂಡಿಲ್ಲ ಎಂಬ ಪಾಕಿಸ್ತಾನ ಹೇಳಿತ್ತು. ಆಪರೇಷನ್ ಸಿಂಧೂರ್ ನಡೆಸಿದ ಸ್ವಲ್ಪ ಸಮಯದ ನಂತರ, ಬುಧವಾರದಿಂದ ಒಟ್ಟು 27 ಸಾವುಗಳಲ್ಲಿ ಪೂಂಚ್ ಜಿಲ್ಲೆಯಲ್ಲಿ ಅತಿ ಹೆಚ್ಚು 20 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ .
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಒಜೆಕೆ) ದಲ್ಲಿರುವ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ನಂತರ ನಾಗರಿಕ ಪ್ರದೇಶಗಳ ಮೇಲೆ ಭಾರೀ ಬಾಂಬ್ ದಾಳಿ ನಡೆಯಿತು . ಪಾಕಿಸ್ತಾನ ತಾವು ಭಾರತದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದೇವೆ, ಯಾವುದೇ ನಾಗರಿಕ ಪ್ರದೇಶವನಲ್ಲ ಎಂದು ಹೇಳಿತ್ತು. ಆದರೆ ಇದೀಗ ಜೀವಂತ ಶೆಲ್‌ಗಳು ಪತ್ತೆಯಾಗಿವೆ.
ಮೇ 11 ರಂದು ಉಭಯ ದೇಶಗಳ ಒಪ್ಪಿಗೆಯ ಮೇರೆಗೆ ಕದನ ವಿರಾಮವನ್ನು ಘೋಷಿಸಲಾಯಿತು. ಆದರೆ ರಾತ್ರಿಯಾಗುತ್ತಿದ್ದಂತೆ ಗಡಿ ರಾಜ್ಯಗಳಾದ ಜಮ್ಮು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಗುಜರಾತ್‌ನ ಹಲವೆಡೆಗೆ ಡ್ರೋನ್‌ಗಳನ್ನು ಪಾಕಿಸ್ತಾನ ಹಾರಿಸಿತ್ತು. ಅದನ್ನು ಸೇನೆ ಯಶಸ್ವಿಯಾಗಿ ಹೊಡೆದುರುಳಿಸಿದೆ. ಡ್ರೋನ್ ಜತೆಗೆ ಜಮ್ಮು ಕಾಶ್ಮೀರದ ಶ್ರೀನಗರ, ಉದ್ಧಂಪುರದಲ್ಲಿ ಶೆಲ್ ದಾಳಿಯೂ ನಡೆಯಿತು. ಈ ಹಿನ್ನಲೆಯಲ್ಲಿ ಹಲವು ನಗರಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಬ್ಲ್ಯಾಕ್‌ಔಟ್ ಮಾಡಲಾಯಿತು. ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ಚಕಮಕಿ ನಡೆದಿರುವುದಾಗಿ ವರದಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Fact Check: ಭಾರತದ ಮೇಲೆ ಕ್ಷಿಪಣಿ ದಾಳಿ ಮಾಡುವಾಗ ಪಾಕಿಸ್ತಾನಿಗಳು ವಿಡಿಯೋ ಮಾಡಿದ್ರಾ? ಅಸಲಿ ವಿಚಾರ ಬಯಲು
ಪಂಜಾಬ್‌ನ ಭಟಿಂಡಾದಲ್ಲಿ ಸೈರನ್ ಸದ್ದು ಕೇಳಿಬಂದಿದ್ದು, ಸಾರ್ವಜನಿಕರು ಕ್ಷಣ ಕಾಲ ಆತಂಕಕ್ಕೆ ಒಳಗಾದರು. ಇದಕ್ಕೆ ಪ್ರತಿಕ್ರಿಯಿಸಿದ ಭಟಿಂಡಾ ಜಿಲ್ಲಾಡಳಿತವು, ಯಾದರೆ ಬೆದರಿಕೆ ಇಲ್ಲ, ಮುನ್ನೆಚ್ಚರಿಕೆ ಕ್ರಮವಾಗಿ ಸೈರನ್ ಮೊಳಗಿಸಿದ್ದಾಗಿ ಧೈರ್ಯ ತುಂಬಿತು. ಪಾಕ್‌ನ ಈ ಕುತಂತ್ರಿ ನಡೆಗೆ ಭಾರತೀಯ ಸೇನೆ ತಕ್ಕ ಉತ್ತರವನ್ನು ನೀಡಿದೆ.
 
            