ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rahul Gandhi: ರಾಹುಲ್‌ ಗಾಂಧಿಯವರ "ಮತಗಳ್ಳತನʼ ಆರೋಪದ ಸುತ್ತಮುತ್ತ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಮಹದೇವಪುರ, ಆಳಂದ ಮಾತ್ರವಲ್ಲದೆ ವ್ಯಾಪಕವಾಗಿ ಮತಗಳ್ಳತನ ನಡೆದಿರುವುದರ ಬಗ್ಗೆ ಆರೋಪಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮತಗಳ್ಳತನ ಪ್ರಕರಣಗಳು ನಡೆದಿವೆ ಎಂಬುದು ಅವರ ದೂರು. ಮತದಾರರ ಪಟ್ಟಿಯಲ್ಲಿ ಹಳೆಯ ಮಹಿಳೆಯೊಬ್ಬರ ಹೆಸರು 220 ಸಲ ಕಾಣಿಸಿಕೊಂಡಿದೆ ಎಂದು ರಾಹುಲ್‌ ಗಾಂಧಿಯವರು ಹೇಳಿದ್ದಾರೆ. ಆದರೆ ಮೌಲಾನಾ ವಿಧಾನಸಭಾ ಕ್ಷೇತ್ರದಲ್ಲಿ ಆ ಮಹಿಳೆ ಇದ್ದಾರೆ. ಆ ಕ್ಷೇತ್ರವನ್ನು ಸ್ವತಃ ಕಾಂಗ್ರೆಸ್‌ ಪಕ್ಷವೇ ಗೆದ್ದಿರುವುದನ್ನು ಗಮನಿಸಬಹುದು.

ರಾಹುಲ್‌ ಗಾಂಧಿಯವರ "ಮತಗಳ್ಳತನʼ ಆರೋಪದ ಸುತ್ತಮುತ್ತ

ಮತಗಳ್ಳತನದ ಕುರಿತು ರಾಹುಲ್‌ ಗಾಂಧಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು -

ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು (Rahul Gandhi) ಮಹದೇವಪುರ, ಆಳಂದ (Alanda Vote Chori)) ಮಾತ್ರವಲ್ಲದೆ ವ್ಯಾಪಕವಾಗಿ ಮತಗಳ್ಳತನ ನಡೆದಿರುವುದರ ಬಗ್ಗೆ ಆರೋಪಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮತಗಳ್ಳತನ ಪ್ರಕರಣಗಳು ನಡೆದಿವೆ ಎಂಬುದು ಅವರ ದೂರು. ಇಂಥ ಆರೋಪಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ನಂಬಿಕೆಗೆ ಚ್ಯುತಿ ಉಂಟು ಮಾಡಬಲ್ಲುದು ಎಂದು ಎಂಬ ವಾದವೂ ಇದೆ.

ಮತದಾರರ ಪಟ್ಟಿಯಲ್ಲಿ ಹಳೆಯ ಮಹಿಳೆಯೊಬ್ಬರ ಹೆಸರು 220 ಸಲ ಕಾಣಿಸಿಕೊಂಡಿದೆ ಎಂದು ರಾಹುಲ್‌ ಗಾಂಧಿಯವರು ಹೇಳಿದ್ದಾರೆ. ಆದರೆ ಮೌಲಾನಾ ವಿಧಾನಸಭಾ ಕ್ಷೇತ್ರದಲ್ಲಿ ಆ ಮಹಿಳೆ ಇದ್ದಾರೆ. ಆ ಕ್ಷೇತ್ರವನ್ನು ಸ್ವತಃ ಕಾಂಗ್ರೆಸ್‌ ಪಕ್ಷವೇ ಗೆದ್ದಿರುವುದನ್ನು ಗಮನಿಸಬಹುದು.

ಈ ಸುದ್ದಿಯನ್ನೂ ಓದಿ: Delhi Election 2025: ವೋಟ್‌ ಮಾಡಿ ಶೇ.50ರಷ್ಟು ರಿಯಾಯಿತಿ ಪಡೆಯಿರಿ! ಡೆಲ್ಲಿ ಮತದಾರರಿಗೆ ವಿಶೇಷ ಆಫರ್‌

ರಾಹುಲ್‌ ಗಾಂಧಿಯವರ ಮತ್ತೊಂದು ಆರೋಪವು ಹರಿಯಾಣ, ಛತ್ತೀಸಗಢ ಮತ್ತು ಮಹಾರಾಷ್ಟ್ರ ಚುನಾವಣೋತ್ತರ ಸಮೀಕ್ಷೆಗಳಿಗೆ ಸಂಬಂಧಿಸಿದೆ. ಆದರೆ ಎಕ್ಸಿಟ್‌ ಪೋಲ್‌ಗಳು ಯಾವುದೇ ಚುನಾವಣಾ ಫಲಿತಾಂಶಗಳಿಗೆ ಆಧಾರವಲ್ಲ. 2014, 2019 ಮತ್ತು 2024ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಎಕ್ಸಿಟ್‌ ಪೋಲ್‌ಗಳನ್ನು ಒಪ್ಪಿರಲಿಲ್ಲ. 2014 ಮತ್ತು 2019 ಹಾಗೂ 2024ರ ಲೋಕಸಭಾ ಚುನಾವಣೆಯ ಹಲವು ಎಕ್ಸಿಟ್‌ ಪೋಲ್‌ಗಳಲ್ಲಿ ಬಿಜೆಪಿಗೆ ಪೂರ್ಣ ಬಹುಮತವನ್ನು ನಿರೀಕ್ಷಿಸಿರಲಿಲ್ಲ. ಆದರೂ ಪಕ್ಷವು ಜಯಭೇರಿ ಬಾರಿಸಿತ್ತು. 2024ರಲ್ಲಿ ಎಕ್ಸಿಟ್‌ ಪೋಲ್‌ಗಳು ಬಿಜೆಪಿಗೆ 350 ಸೀಟುಗಳನ್ನು ನಿರೀಕ್ಷಿಸಿತ್ತು. ಸ್ವಾರಸ್ಯವೆಂದರೆ ಜಾರ್ಖಂಡ್‌ನಲ್ಲಿ ಚುನಾವಣೋತ್ತರ ಸಮೀಕ್ಷೆಗಳನ್ನೂ ಮೀರಿ ಕಾಂಗ್ರೆಸ್-ಜೆಎಂಎಂ ಮೈತ್ರಿಕೂಟ ಗೆದ್ದಿತ್ತು. ಆಗ ರಾಹುಲ್‌ ಗಾಂಧಿ ಆಕ್ಷೇಪಿಸಿರಲಿಲ್ಲ.

Rahul Gandhi (10)

ಹರಿಯಾಣದಲ್ಲಿ ಮತಪತ್ರಗಳ ಲೆಕ್ಕದಲ್ಲಿ ಕಾಂಗ್ರೆಸ್‌ ಮುಂಚೂಣಿಯಲ್ಲಿತ್ತು, ಅಂತಿಮವಾಗಿ ಸೋಲಾಯಿತು ಎಂಬ ಆರೋಪ ಇದೆ. ಆದರೆ ಹರಿಯಾಣದಲ್ಲಿ ಒಟ್ಟು ಮತಗಳಲ್ಲಿ 0.57 ಪರ್ಸೆಂಟ್‌ನಷ್ಟು ಮಾತ್ರ ಮತಪತ್ರಗಳ ರೂಪದಲ್ಲಿ ಇರುತ್ತದೆ. ಉಳಿದ 99.43 ಪರ್ಸೆಂಟ್‌ ಮತಗಳು ಇವಿಎಂ ಮೂಲಕ ಬರುತ್ತವೆ ಎಂಬುದನ್ನು ಇಲ್ಲಿ ಗಮನಿಸಬಹುದು.

2015ರಲ್ಲಿ ಬಿಹಾರದ ಅಸೆಂಬ್ಲಿ ಎಲೆಕ್ಷನ್‌ ಸಂದರ್ಭದಲ್ಲೂ ಮತಪತ್ರಗಳನ್ನು ಎಣಿಸುವ ಸಂದರ್ಭ ಬಿಜೆಪಿ ಮತ್ತು ಎನ್‌ಡಿಎ ಮುಂಚೂಣಿಯಲ್ಲಿ ಇತ್ತು. ಆದರೆ ಅಂತಿಮವಾಗಿ ಮಗಾ ಘಟಬಂಧನ್‌ ಮೈತ್ರಿಕೂಟವು ಜಯ ಗಳಿಸಿತ್ತು. ಆಗ ಮತಗಳ್ಳತನದ ಆರೋಪ ಇದ್ದಿರಲಿಲ್ಲ. ರಾಹುಲ್‌ ಗಾಂಧಿಯವರು ವಾರಾಣಸಿಯಲ್ಲಿ ಪ್ರಧಾನಿ ನರೇಂದರ ಮೋದಿಯವರು ಸೋಲುವ ಸಾಧ್ಯತೆ ಇದೆ ಎಂದು ಹೇಳಿದ್ದರು. 2019, 2024ರಲ್ಲಿ ಅಂಥ ಹೇಳಿಕೆ ನೀಡಿದ್ದರು. ಆದರೆ ಅದಕ್ಕೆ ಯಾವುದೇ ಆಧಾರ ಇದ್ದಂತಿರಲಿಲ್ಲ.

ಹರಿಯಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಒಟ್ಟು ಮತಗಳ ಹಂಚಿಕೆ ಕೇವಲ 1.18 ಲಕ್ಷ ಮತಗಳಾಗಿತ್ತು ಎಂಬ ಆರೋಪ ಇದೆ. ಕಾಂಗ್ರೆಸ್‌ ಒಟ್ಟು 22,779 ಮತಗಳಿಂದ ಎಂಟು ಸೀಟುಗಳನ್ನು ಸೋತಿತ್ತು. ಾದರೆ ಪ್ರತಿ ಚುನಾವಣೆಯಲ್ಲಿಯೂ ಅತ್ಯಲ್ಪ ಮತಗಳ ಅಂತರದಲ್ಲಿ ಅಭ್ಯರ್ಥಿಗಳು ಪರಾಭವಗೊಳ್ಳುವುದು ಸಾಮಾನ್ಯ. ವಿಶ್ಲೇಷಕರ ಪ್ರಕಾರ ಹರಿಯಾಣದಲ್ಲಿ 10 ಕ್ಷೇತ್ರಗಳಲ್ಲಿ ಅಲ್ಪ ಅಂತರದಲ್ಲಿ ಅಭ್ಯರ್ಥಿಗಳು ಗೆದ್ದಿದ್ದರು. ಅದರಲ್ಲಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡರಲ್ಲಿ ಗೆದ್ದಿತ್ತು. ಆದ್ದರಿಂದ ಅಲ್ಪಮತಗಳ ಅಂತರದಲ್ಲಿ ಸೋಲು-ಗೆಲುವು ನಿರ್ಣಯ ಆಗುವುದು ಕೂಡ ಸಹಜ. ಯಾವುದೇ ಪಕ್ಷದ ಅಭ್ಯರ್ಥಿಗಳು ಹೀಗೆ ಗೆಲ್ಲುವುದು ಅಥವಾ ಸೋಲು ಕಾಣುವುದು ವಿಶೇಷವೇನಲ್ಲ. ಈ ಹಿಂದೆ ಸಾಕಷ್ಟು ಸಲ ಅಂಥ ಘಟನೆಗಳು ನಡೆದಿವೆ.

Rahul Gandhi (11)

ಮಧ್ಯಪ್ರದೇಶದಲ್ಲಿ 2018ರಲ್ಲಿ ಚುನಾವಣೆ ನಡೆದಾಗ ಬಿಜೆಪಿಯು 41.0 ಪರ್ಸೆಂಟ್‌ ಮತ ಹಂಚಿಕೆಯೊಂದಿಗೆ ಮುಂಚೂಣಿಯಲ್ಲಿ ಇತ್ತು. ಕಾಂಗ್ರೆಸ್‌ 40.9 ಪರ್ಸೆಂಟ್‌ ಮತ ಹಂಚಿಕೆ ಗಳಿಸಿತ್ತು. ಆದರೆ ಬಿಜೆಪಿ ಪ್ರಮುಖ ಕ್ಷೇತ್ರಗಳಲ್ಲಿ ಅಲ್ಪ ಅಂತರದಲ್ಲಿ ಪರಾಭವಗೊಂಡಿತ್ತು. ಚುನಾವಣೆಯಲ್ಲಿ ಗೆದ್ದಿರಲಿಲ್ಲ. ನಿರ್ಣಾಯಕ ಕ್ಷೇತ್ರಗಳಲ್ಲಿ ಬಿಜೆಪಿಯು 1,000 ಮತಗಳ ಅಂತರದಲ್ಲಿ ಸೋಲು ಕಂಡಿತ್ತು. ಕಾಂಗ್ರೆಸ್‌ ಸರಕಾರ ರಚಿಸಿತ್ತು. ಕಮಲ್‌ ನಾಥ್‌ ಮುಖ್ಯಮಂತ್ರಿಯಾಗಿದ್ದರು.

ಈ ಸುದ್ದಿಯನ್ನೂ ಓದಿ: Rahul Gandhi: "ನಿಮ್ಮ ಕಳ್ಳಾಟ ಜನರಿಗೆ ಈಗ ತಿಳಿದಿದೆ"; ವೋಟ್‌ ಚೋರಿ ಕುರಿತು ವಿಡಿಯೋ ಹಂಚಿಕೊಂಡ ರಾಹುಲ್‌ ಗಾಂಧಿ

ರಾಯ್‌ ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬ ಮಹಿಳೆ ಹತ್ತು ಮತಗಟ್ಟೆಗಳಲ್ಲಿ ಮತದಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಗುರುತಿನ ಹೆಸರುಗಳು ಹಲವು ಮತಗಟ್ಟೆಗಳಲ್ಲಿ ಕಂಡು ಬಂದರೆ ಒಬ್ಬರೇ ವ್ಯಕ್ತಿ ಹಲವು ಮತಗಟ್ಟೆಗಳಲ್ಲಿ ಮತ ಚಲಾಯಿಸಿದ್ದಾರೆ ಎಂದು ಸಾಬೀತುಪಡಿಸಿದಂತೆ ಅಲ್ಲ. ವಲಸೆ, ತಾಂತ್ರಿಕ ಅಡಚಣೆಯ ಕಾರಣ ಇರಬಹುದು. ಆದ್ದರಿಂದ ಚುನಾವಣಾ ಆಯೋಗವು ಮತದಾರರ ಗುರುತಿನ ಚೀಟಿ ಪರಿಷ್ಕರಣೆಗೆ ಅವಕಾಶ ನೀಡುತ್ತದೆ. ವಿಶೇಷ ಅಭಿಯಾನಗಳನ್ನು ನಡೆಸುತ್ತದೆ. ಮತಪತ್ರಗಳಲ್ಲಿ ಲೋಪದೋಷಗಳು ಪತ್ತೆಯಾದರೆ, ಎಲ್ಲವನ್ನೂ ಮತಗಳ್ಳತನ ಎನ್ನಲಾಗದು. ಪ್ರತಿಯೊಂದು ಮತಗಟ್ಟೆಯಲ್ಲೂ ಪಕ್ಷಗಳ ಏಜೆಂಟರು ಇರುತ್ತಾರೆ. ಅಕ್ರಮ ನಡೆಯುತ್ತಿದ್ದರೆ ದೂರುಗಳನ್ನು ಸಲ್ಲಿಸಲು ಅವಕಾಶಗಳು ಇರುತ್ತದೆ.

ಮತಗಟ್ಟೆಗಳಲ್ಲಿ ಸಿಸಿಟಿವಿಗಳ ವ್ಯವಸ್ಥೆ ಇರುತ್ತದೆ. ಸಿಸಿಟಿವಿ ದೃಶ್ಯಗಳನ್ನು 45 ದಿನಗಳ ಕಾಲ ಸಂರಕ್ಷಿಸಿ ಇಡಲಾಗುತ್ತದೆ. ಹರಿಯಾಣದಲ್ಲಿ 25 ಲಕ್ಷ ಮತಗಳು ಕಳ್ಳತನವಾಗಿದೆ ಎಂಬ ಆರೋಪಗಳು ಸಮಂಜಸವಲ್ಲ ಎಂಬ ವಾದವಿದೆ. 2024ರ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಪಾರದರ್ಶಕತೆ ಇತ್ತು. ಚುನಾವಣಾ ಆಯೋಗವು ಅಚ್ಚುಕಟ್ಟಾಗಿ ನಿರ್ವಹಿಸಿತ್ತು. ಆಗಸ್ಟ್‌ 2ರಂದು ಡ್ರಾಫ್ಟ್‌ ರೂಲ್ಸ್‌ ಬಿಡುಗಡೆಯಾಗಿತ್ತು. 4.16 ಲಕ್ಷ ಕ್ಲೇಮ್ಸ್‌ ಗಳು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಲಾಗಿತ್ತು. ಆಗ ಮತಗಟ್ಟೆ ಏಜೆಂಟರಿಂದಲೂ ಕಳವಳ ವ್ಯಕ್ತವಾಗಿರಲಿಲ್ಲ. ಆಗಸ್ಟ್‌ 27ರಂದು ಫೈನಲ್‌ ರೂಲ್ಸ್‌ ಪ್ರಕಟವಾಗಿತ್ತು. ಸೆಪ್ಟೆಂಬರ್‌ 16ರಂದು ಎಲ್ಲ ಮತದಾರರ ಪಟ್ಟಿ ಪ್ರಕಟವಾಗಿತ್ತು. 87,000 ಮತಗಟ್ಟೆ ಏಜೆಂಟರು 20,000 ಮತಗಟ್ಟೆಗಳನ್ನು ಪರಿಶೀಲಿಸಿದ್ದರು. ಮತಎಣಿಕೆ ದಿನ ಐದು ದೂರುಗಳು ಮಾತ್ರ ಬಂದಿತ್ತು.ಭಾರತದ ಯುವ ಜನತೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿದ್ದಾರೆ. ದೇಶದ ಸರ್ವಾಂಗೀಣ ಅಭ್ಯುದಯವನ್ನು ಬಯಸುತ್ತಿದ್ದಾರೆ.