ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Assembly Elections 2026: ಪುದುಚೇರಿ, ಅಸ್ಸಾಂನಲ್ಲಿ ದಾಖಲೆ ಪ್ರಮಾಣದ ಮತದಾನ

2021ರ ಬಳಿಕ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಈ ಮತದಾನದಲ್ಲಿ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ದಾಖಲೆಯನ್ನು ಬರೆದಿದೆ. ಇಲ್ಲಿ ಗರಿಷ್ಠ ಶೇಕಡಾ 86.92ರಷ್ಟು ಮತದಾನವಾಗಿದೆ. ಬಳಿಕ ಅಸ್ಸಾಂನಲ್ಲಿ ಶೇಕಡಾ 84.42, ಅನಂತರ ಕೇರಳದಲ್ಲಿ ಶೇಕಡಾ 75.01ರಷ್ಟು ಮತದಾನವಾಗಿದೆ. ಕಳೆದ ಚುನಾವಣೆಗಳಿಗಿಂತ ಈ ಬಾರಿ ಮತದಾನ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳವಾಗಿದೆ.

ಪುದುಚೇರಿ, ಅಸ್ಸಾಂನಲ್ಲಿ ಗರಿಷ್ಠ ಮತದಾನ

ಸಂಗ್ರಹ ಚಿತ್ರ -

ನವದೆಹಲಿ: ಹಿಂದಿನ ಚುನಾವಣೆಗಳಿಗೆ ಈ ಬಾರಿ ಪುದುಚೇರಿ (Puducherry), ಅಸ್ಸಾಂ (Assam), ಕೇರಳದಲ್ಲಿ (kerala) ಮತದಾನ ಪ್ರಮಾಣ ಕೊಂಚ ಹೆಚ್ಚಳವಾಗಿದೆ. ಪುದುಚೇರಿಯಲ್ಲಿ ಗರಿಷ್ಠ ಶೇಕಡಾ 86.92ರಷ್ಟು ಮತದಾನವಾಗಿದ್ದು (Assembly Elections 2026), ಬಳಿಕ ಅಸ್ಸಾಂನಲ್ಲಿ ಶೇಕಡಾ 84.42, ಅನಂತರ ಕೇರಳದಲ್ಲಿ ಶೇಕಡಾ 75.01ರಷ್ಟು ಮತದಾನವಾಗಿದೆ. 2021ರಲ್ಲಿ ದಾಖಲಾದ ಮತದಾನ ಪ್ರಮಾಣವನ್ನು ಈ ಬಾರಿ ಮೀರಿದ್ದು, 2026 ವಿಧಾನ ಸಭಾ ಚುನಾವಣೆಯಲ್ಲಿ ಪುದುಚೇರಿ, ಅಸ್ಸಾಂ, ಕೇರಳದಲ್ಲಿ ಗುರುವಾರ ಸಂಜೆ 5 ಗಂಟೆಯವರೆಗೆ ಗರಿಷ್ಠ ಮತದಾನ ದಾಖಲಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಪುದುಚೇರಿಯಲ್ಲಿ ಅತ್ಯಧಿಕ ಮತದಾನವಾಗಿದೆ. ಅಸ್ಸಾಂ, ಕೇರಳ ಮತ್ತು ಪುದುಚೇರಿಯಾದ್ಯಂತ ಗುರುವಾರ ದಿನವಿಡೀ ಮತದಾನವು ವೇಗವಾಗಿ ಸಾಗುತ್ತಿತ್ತು. ಸಂಜೆ 5 ಗಂಟೆಯ ವೇಳೆಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ; ಮಹಿಳೆಯರಿಗೆ ಮಾಸಿಕ 2 ಸಾವಿರ, 3 ಲಕ್ಷ ಸರ್ಕಾರಿ ಹುದ್ದೆ ಭರ್ತಿ, ಭೂರಹಿತ ರೈತರಿಗೆ ವಾರ್ಷಿಕ 6 ಸಾವಿರ ಭರವಸೆ

ಅಸ್ಸಾಂ ರಾಜ್ಯದಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬರಲು ಬಯಸುತ್ತಿದ್ದು, ದಶಕದ ಬಳಿಕ ಇಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ.

ಅಸ್ಸಾಂನ 35 ಜಿಲ್ಲೆಗಳಾದ್ಯಂತ ಇರುವ 126 ವಿಧಾನಸಭಾ ಕ್ಷೇತ್ರಗಳ 31,490 ಮತಗಟ್ಟೆಗಳಲ್ಲಿ ಮತದಾನ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಿ ಸಂಜೆ 5 ಗಂಟೆಯವರೆಗೆ ನಡೆಯಿತು. ಸಂಜೆ 5 ಗಂಟೆ ವೇಳೆಗೆ ರಾಜ್ಯದಲ್ಲಿ ಒಟ್ಟು ಶೇ. 84.42 ರಷ್ಟು ಮತದಾನವಾಗಿದೆ. 2021ರಲ್ಲಿ ಇಲ್ಲಿ ಗರಿಷ್ಠ ಶೇ. 82.04 ರಷ್ಟು ಮತದಾನವಾಗಿತ್ತು. ಕ್ಷೇತ್ರವಾರು ಪೈಕಿ ದಲ್ಗಾಂವ್‌ನಲ್ಲಿ ಶೇ. 94.57, ಅಮ್ರಿಯಲ್ಲಿ ಶೇ. 70.40ರಷ್ಟು ಗರಿಷ್ಠ ಮತದಾನವಾಗಿದೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ನಡೆಯುವ ಚುನಾವಣಾ ಕಣದಲ್ಲಿ ಒಟ್ಟು 722 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳದ ಎಲ್ಲಾ 140 ವಿಧಾನಸಭಾ ಸ್ಥಾನಗಳಿಗೆ ಸಂಜೆ 5 ಗಂಟೆ ಸುಮಾರಿಗೆ ಶೇಕಡಾ 75.01 ರಷ್ಟು ಮತದಾನವಾಗಿದೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 74.06ರಷ್ಟು ಮತದಾನವಾಗಿತ್ತು. ಹಲವು ಮತಗಟ್ಟೆಗಳಲ್ಲಿ ಮತದಾರರು ಸಂಜೆ 5 ಗಂಟೆ ಬಳಿಕವೂ ಸರತಿ ಸಾಲಿನಲ್ಲಿ ನಿಂತಿದ್ದರು. 2021ರ ವಿಧಾನಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಶೇಕಡಾ 74.06 ರಷ್ಟು ಮತದಾನವಾಗಿತ್ತು.

Gen Z ಪಕ್ಷ ಸ್ಥಾಪಿಸಲಿದ್ದಾರಾ ರಾಘವ್ ಚಡ್ಡಾ? ಆಮ್ ಆದ್ಮಿ ಜೊತೆಗಿನ ಬಿಕ್ಕಟ್ಟಿನ ನಡುವೆ ರಾಜ್ಯಸಭಾ ಸಂಸದರ ಮುಂದಿನ ನಡೆಯೇನು?

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ 30 ವಿಧಾನಸಭಾ ಕ್ಷೇತ್ರಗಳಿಗೆ ಸಂಜೆ 6 ಗಂಟೆವರೆಗೆ ಮತದಾನ .ನಡೆಯಿತು. ಒಟ್ಟು ಮತದಾನ ಪ್ರಮಾಣ ಶೇಕಡಾ 86 ದಾಟಿತ್ತು. ಇಲ್ಲಿ ಸಂಜೆ 5 ಗಂಟೆಯವರೆಗೆ ಶೇಕಡಾ 86.92ರಷ್ಟು ಮತದಾನ ದಾಖಲಾಗಿದೆ. 1977 ರಿಂದ ಇಲ್ಲಿ ಅತ್ಯಧಿಕ ಮತದಾನವು 2006ರಲ್ಲಾಗಿದ್ದು ಶೇ. 86 ಆಗಿತ್ತು. 2021ರಲ್ಲಿ ಇಲ್ಲಿ ಶೇ. 82.2ರಷ್ಟು ಮತದಾನವಾಗಿತ್ತು. ಈ ಎರಡು ದಾಖಲೆಗಳು ಈ ಬಾರಿ ಮುರಿದಿದ್ದು, ಗರಿಷ್ಠ ಮತದಾನವಾಗಿದೆ.