ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅಂತ್ಯಕ್ರಿಯೆಗೂ ಮುನ್ನ ಅವರ ಪುತ್ರ ತಾರಿಕ್‌ಗೆ ಪತ್ರ ಬರೆದ ಭಾರತದ ಪ್ರಧಾನಿ; ಮೋದಿ ಹೇಳಿದ್ದೇನು?
Khaleda Zia: ಬಾಂಗ್ಲಾದೇಶದ ಮಾಜಿ ಪ್ರಧಾನಮಂತ್ರಿ ಖಲೀದಾ ಜಿಯಾ ಅಂತ್ಯಕ್ರಿಯೆಗೆ ಮುನ್ನ, ಭಾರತದ ಪ್ರಧಾನಿ ನರೇಂದ್ರ ಮೋದಿ, ಜಿಯಾ ಅವರ ಪುತ್ರ ತಾರಿಕ್ ಜಿಯಾ ಅವರಿಗೆ ಸಂತಾಪ ಸೂಚಿಸಿ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಖಲೀದಾ ಜಿಯಾ ಅವರ ನಿಧನದಿಂದ ಉಂಟಾದ ನಷ್ಟ ಹಾಗೂ ಅವರ ದೃಷ್ಟಿಕೋನ ಮತ್ತು ಪರಂಪರೆ ಶಾಶ್ವತವಾಗಿ ಉಳಿಯಲಿದೆ ಎಂದು ಮೋದಿ ಹೇಳಿದ್ದಾರೆ.
ಖಲೀದಾ ಜಿಯಾ ಮತ್ತು ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ಢಾಕಾ, ಜ. 1: ಇತ್ತೀಚೆಗೆ ನಿಧನರಾದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ (80) ಅವರ ಅಂತ್ಯಕ್ರಿಯೆ ಡಿಸೆಂಬರ್ 31ರಂದು ಢಾಕಾದಲ್ಲಿ ನಡೆಯಿತು. ಜಿಯಾ (Khaleda Zia) ಅವರ ಅಂತ್ಯಕ್ರಿಯೆಗೂ ಮುನ್ನ ಅವರ ಪುತ್ರ ತಾರಿಕ್ ಅವರಿಗೆ ಪತ್ರದ ಮೂಲಕ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಸಂತಾಪ ಸೂಚಿಸಿದರು. 17 ವರ್ಷಗಳ ಸ್ವಯಂ ವನವಾಸದ ನಂತರ ಇತ್ತೀಚೆಗೆ ಬಾಂಗ್ಲಾದೇಶಕ್ಕೆ ಮರಳಿದ ಜಿಯಾ ಅವರ ಮಗ ಮತ್ತು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಹಂಗಾಮಿ ಮುಖ್ಯಸ್ಥ ತಾರಿಕ್ ರೆಹಮಾನ್ ಅವರಿಗೆ ಮೋದಿ ಸಂತಾಪ ಸೂಚಿಸಿ ಪತ್ರ ಬರೆದಿದ್ದಾರೆ.
ರೆಹಮಾನ್ ಅವರಿಗೆ ಬರೆದ ಪತ್ರದಲ್ಲಿ ಮೋದಿ, ಜಿಯಾ ಅವರ ನಿಧನವು ತುಂಬಲಾರದ ನಷ್ಟವಾಗಿದ್ದರೂ, ಅವರ ದೃಷ್ಟಿಕೋನ ಮತ್ತು ಪರಂಪರೆ ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದರು. ಖಲೀದಾ ಜಿಯಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬುಧವಾರ ಬಾಂಗ್ಲಾದೇಶಕ್ಕೆ ತೆರಳಿದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪ್ರಧಾನಿ ಮೋದಿ ಅವರ ಪತ್ರವನ್ನು ತಾರಿಕ್ ರೆಹಮಾನ್ ಅವರಿಗೆ ಹಸ್ತಾಂತರಿಸಿದರು.
ಮೋದಿ ಅವರ ಪತ್ರ ಹಸ್ತಾಂತರಿಸಿದ ಜೈಶಕಂರ್:
On arrival in Dhaka, met with Mr Tarique Rahman @trahmanbnp, Acting Chairman of BNP and son of former PM of Bangladesh Begum Khaleda Zia.
— Dr. S. Jaishankar (@DrSJaishankar) December 31, 2025
Handed over to him a personal letter from Prime Minister @narendramodi.
Conveyed deepest condolences on behalf of the Government and… pic.twitter.com/xXNwJsRTmZ
ರೆಹಮಾನ್‌ಗೆ ಬರೆದ ಪತ್ರದಲ್ಲಿ ಮೋದಿ, ಜಿಯಾ ಅವರನ್ನು ಅಪರೂಪದ ದೃಢಸಂಕಲ್ಪ ಮತ್ತು ದೃಢನಿಶ್ಚಯದ ನಾಯಕಿಯಾಗಿದ್ದರು ಎಂದು ಹೇಳಿದರು. ʼʼನಿಮ್ಮ ತಾಯಿ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷದ ಅಧ್ಯಕ್ಷೆ, ಬೇಗಂ ಖಲೀದಾ ಜಿಯಾ ಅವರ ನಿಧನದ ಸುದ್ದಿ ತಿಳಿದು ನನಗೆ ತುಂಬಾ ದುಃಖವಾಯಿತು. ಅವರ ನಿಧನದಿಂದ ತುಂಬಲಾರದ ನಷ್ಟವಾಗಿದ್ದು, ದಯವಿಟ್ಟು ನನ್ನ ಹೃತ್ಪೂರ್ವಕ ಸಂತಾಪವನ್ನು ಸ್ವೀಕರಿಸಿ. ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಲಿʼʼ ಎಂದು ಹೇಳಿದ್ದಾರೆ.
2015ರಲ್ಲಿ ಢಾಕಾದಲ್ಲಿ ಜಿಯಾ ಅವರೊಂದಿಗಿನ ತಮ್ಮ ಮೊದಲ ಭೇಟಿಯನ್ನು ಅವರು ನೆನಪಿಸಿಕೊಂಡರು. ಬಾಂಗ್ಲಾದೇಶದ ಅಭಿವೃದ್ಧಿಗೆ ಹಾಗೂ ಭಾರತ-ಬಾಂಗ್ಲಾದೇಶ ಸಂಬಂಧಗಳ ಬಲವರ್ಧನೆಗೆ ಅವರು ನೀಡಿದ ಕೊಡುಗೆಗಳನ್ನು ಪ್ರಧಾನಿ ಮೋದಿ ಸ್ಮರಿಸಿದರು.
ಚುನಾವಣೆ ಹೊಸ್ತಿಲಿನಲ್ಲಿ ಬಾಂಗ್ಲಾದೇಶ ಧಗಧಗ: ಕಾರಣವೇನು?
ಅವರ ನಿಧನದಿಂದ ತುಂಬಲಾಗದ ನಷ್ಟ ಉಂಟಾದರೂ, ಅವರ ದೃಷ್ಟಿಕೋನ ಹಾಗೂ ಪರಂಪರೆ ಶಾಶ್ವತವಾಗಿ ಉಳಿಯಲಿದೆ. ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷವು ನಿಮ್ಮ ಸಮರ್ಥ ನಾಯಕತ್ವದ ಅಡಿಯಲ್ಲಿ ಅವರ ಆದರ್ಶಗಳನ್ನು ಮುಂದುವರಿಸಲಾಗುವುದು ಎಂಬ ವಿಶ್ವಾಸ ನನಗಿದೆ. ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಆಳವಾದ ಹಾಗೂ ಐತಿಹಾಸಿಕ ಸಹಭಾಗಿತ್ವಕ್ಕೆ ಹೊಸ ಆರಂಭವನ್ನು ನೀಡುವ ಜತೆಗೆ ಅದನ್ನು ಮತ್ತಷ್ಟು ವೃದ್ಧಿಸಲು ಅವು ಮಾರ್ಗದರ್ಶಕ ಬೆಳಕಾಗಿ ಮುಂದುವರಿಯಲಿವೆ ಎಂಬ ವಿಶ್ವಾಸವಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ರಾಷ್ಟ್ರೀಯ ಶೋಕದ ಈ ಕ್ಷಣದಲ್ಲಿ, ನನ್ನ ಚಿಂತನೆಗಳು ಬಾಂಗ್ಲಾದೇಶದ ಜನರೊಂದಿಗೆ ಇವೆ. ಅವರು ತಮ್ಮ ಇತಿಹಾಸದುದ್ದಕ್ಕೂ ತೋರಿದ ಅಸಾಧಾರಣ ಶಕ್ತಿ ಮತ್ತು ಘನತೆಯನ್ನು ಗಮನಿಸಿದ್ದೇನೆ. ಶಾಂತಿ ಮತ್ತು ಸಾಮರಸ್ಯದಲ್ಲಿ ಮುಂದುವರಿಯುವಂತೆ ಅವರು ಹಂಚಿಕೊಂಡ ತಮ್ಮ ಮೌಲ್ಯಗಳು, ಪ್ರಜಾಪ್ರಭುತ್ವದ ಸಂಪ್ರದಾಯಗಳು ಮತ್ತು ಆಳವಾದ ರಾಷ್ಟ್ರೀಯ ಏಕತೆಯ ಭಾವನೆಯಿಂದ ಮಾರ್ಗದರ್ಶನ ಪಡೆಯುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದೂ ಪತ್ರದಲ್ಲಿ ಬರೆಯಲಾಗಿದೆ.