ಪಾಕ್ ಆಟಗಾರನ ಖರೀದಿ; ಐಪಿಎಲ್ ಆರಂಭಕ್ಕೂ ಮುನ್ನ ಸನ್‌ರೈಸರ್ಸ್ ತಂಡಕ್ಕೆ ಬಾಯ್ಕಾಟ್ ಬಿಸಿ!
Boycott SRH in IPL: ಅಬ್ರಾರ್ ಅಹ್ಮದ್ 2026ರ ಟಿ20 ವಿಶ್ವಕಪ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆಡಿದ 4 ಪಂದ್ಯಗಳಲ್ಲಿ ಅವರು ಕೇವಲ 6 ವಿಕೆಟ್ ಪಡೆದಿದ್ದರು. ಅವರ ಎಕಾನಮಿ ರೇಟ್ ಕೂಡ ಉತ್ತಮವಾಗಿರಲಿಲ್ಲ. ವಿಶೇಷವಾಗಿ ಭಾರತ ವಿರುದ್ಧದ ಪಂದ್ಯದಲ್ಲಿ ಅವರು 38 ರನ್ ಬಿಟ್ಟುಕೊಟ್ಟು ಒಂದೂ ವಿಕೆಟ್ ಪಡೆದಿರಲಿಲ್ಲ.
kavya maran -
ಹೈದರಾಬಾದ್, ಮಾ.13: ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಇರುವಾಗಲೇ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಬಾಯ್ಕಾಟ್(Boycott SRH in IPL) ಬಿಸಿ ತಟ್ಟಿದೆ. ಹೌದು, ಇಂಗ್ಲೆಂಡ್‌ನ 'ದಿ ಹಂಡ್ರೆಡ್' (The Hundred) ಕ್ರಿಕೆಟ್ ಟೂರ್ನಿಯ ಹೊಸ ಸೀಸನ್‌ಗಾಗಿ ನಡೆದ ಹರಾಜಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಒಡತಿ ಕಾವ್ಯಾ ಮಾರನ್ ಅವರ 'ಸನ್ ರೈಸರ್ಸ್ ಲೀಡ್ಸ್' ತಂಡವು ಪಾಕಿಸ್ತಾನದ ಆಟಗಾರನನ್ನು ಖರೀದಿಸಿದ್ದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಈ ಬಾರಿಯ ಐಪಿಎಲ್‌ನಲ್ಲಿ ಹೈದರಾಬಾದ್ ತಂಡವನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದ್ದಾರೆ.
ಹಲವು ವರ್ಷಗಳಲ್ಲಿ ಭಾರತೀಯ ಮಾಲೀಕತ್ವವನ್ನು ಹೊಂದಿರುವ ಫ್ರಾಂಚೈಸಿ ಪಾಕಿಸ್ತಾನಿ ಅಂತರರಾಷ್ಟ್ರೀಯ ಆಟಗಾರನನ್ನು ಸಕ್ರಿಯವಾಗಿ ನೇಮಕ ಮಾಡಿಕೊಂಡಿರುವುದು ಇದೇ ಮೊದಲು. ಈ ಕ್ರಮವನ್ನು ಯುಕೆಯಲ್ಲಿ ಶ್ಲಾಘಿಸಲಾಗಿದ್ದರೂ, ಇದು ಭಾರತೀಯ ಅಭಿಮಾನಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಎಂಟು ತಂಡಗಳ 'ದಿ ಹಂಡ್ರೆಡ್' ಟೂರ್ನಮೆಂಟ್ ಜುಲೈ 21 ರಿಂದ ಆಗಸ್ಟ್ 16 ರವರೆಗೆ ಯುಕೆಯಲ್ಲಿ ನಡೆಯಲಿದೆ.
ಅಬ್ರಾರ್ ಅಹ್ಮದ್ ಕಳೆದ ವರ್ಷ ಭಾರತದ ವಿರುದ್ಧ ವಿವಾದಾತ್ಮಕ ಪೋಸ್ಟ್ ಮಾಡಿದ್ದು ಆಕ್ರೋಶಕ್ಕೆ ಪ್ರಮುಖ ಕಾರಣ. ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಅಬ್ರಾರ್ ಭಾರತೀಯ ಸಶಸ್ತ್ರ ಪಡೆಗಳನ್ನು ಅಪಹಾಸ್ಯ ಮಾಡಿದ್ದರು. ಹೀಗಿದ್ದರೂ ಅವರನ್ನು ಭಾರತೀಯ ಮೂಲದ ತಂಡ ಖರೀದಿ ಮಾಡಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣ.
"ಹಲವು ವರ್ಷಗಳ ಕಾಲ ಭಾರತೀಯ ತಂಡಗಳು ರಾಷ್ಟ್ರೀಯ ಭಾವನೆಯನ್ನು ಗೌರವಿಸುವ ಕಾರಣ ಪಾಕಿಸ್ತಾನಿ ಆಟಗಾರರನ್ನು ತಪ್ಪಿಸುತ್ತಿದ್ದವು. ಆದರೆ ಹಣ ಮತ್ತು ವಿದೇಶಿ ಲೀಗ್‌ಗಳು ಮುನ್ನಲೆಗೆ ಬಂದ ಕ್ಷಣ, ಆ ಬೆನ್ನುಮೂಳೆಯು ಕಣ್ಮರೆಯಾಗುತ್ತದೆ. ಭಾರತೀಯ ಮಾಲೀಕರು, ಭಾರತೀಯ ಬ್ರ್ಯಾಂಡ್, ಶೂನ್ಯ ರಾಷ್ಟ್ರೀಯ ಬೆನ್ನೆಲುಬು. ದೇಶಕ್ಕಿಂತ ಲಾಭ ಮುಖ್ಯವಾಗಿದ್ದರೆ ಭಾರತವನ್ನು ಪ್ರತಿನಿಧಿಸುವಂತೆ ನಟಿಸುವುದನ್ನು ನಿಲ್ಲಿಸಿ" ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದಿದ್ದಾರೆ.
IPL 2026 Schedule: ಐಪಿಎಲ್ 19ನೇ ಆವೃತ್ತಿಯ ಮೊದಲ ಅವಧಿಗೆ ವೇಳಾಪಟ್ಟಿ ಪ್ರಕಟ, ಮೊದಲ ಪಂದ್ಯ RCB vs SRH!
ಸನ್ ರೈಸರ್ಸ್ ಲೀಡ್ಸ್ ತಂಡವು ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು 2.34 ಕೋಟಿ ರೂಪಾಯಿಗಳಿಗೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಅಬ್ರಾರ್ ಅವರನ್ನು ಪಡೆಯಲು 'ಟ್ರೆಂಟ್ ರಾಕೆಟ್ಸ್' ತಂಡ ಕೂಡ ಪೈಪೋಟಿ ನಡೆಸಿತು. ಆದರೆ ಅಂತಿಮವಾಗಿ ಸನ್ ರೈಸರ್ಸ್ ದೊಡ್ಡ ಮೊತ್ತದ ಬಿಡ್ ಮಾಡಿ ಅಬ್ರಾರ್ ಅವರನ್ನು ತನ್ನದಾಗಿಸಿಕೊಂಡಿತು.
ಅಬ್ರಾರ್ ಅಹ್ಮದ್ 2026ರ ಟಿ20 ವಿಶ್ವಕಪ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆಡಿದ 4 ಪಂದ್ಯಗಳಲ್ಲಿ ಅವರು ಕೇವಲ 6 ವಿಕೆಟ್ ಪಡೆದಿದ್ದರು. ಅವರ ಎಕಾನಮಿ ರೇಟ್ ಕೂಡ ಉತ್ತಮವಾಗಿರಲಿಲ್ಲ. ವಿಶೇಷವಾಗಿ ಭಾರತ ವಿರುದ್ಧದ ಪಂದ್ಯದಲ್ಲಿ ಅವರು 38 ರನ್ ಬಿಟ್ಟುಕೊಟ್ಟು ಒಂದೂ ವಿಕೆಟ್ ಪಡೆದಿರಲಿಲ್ಲ.