ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಿಹಾರ ಸಿಎಂ ನಿತೀಶ್ ಕುಮಾರ್ ಬಳಿಯಿದೆ 1.65 ಕೋಟಿ ರುಪಾಯಿ ಮೌಲ್ಯದ ಆಸ್ತಿ; ಹಿಂದಿನ ವರ್ಷಕ್ಕಿಂತ 68,455 ರುಪಾಯಿಗಿಂತ ಹೆಚ್ಚು

Bihar CM Nitish Kumar: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಒಟ್ಟು ಆಸ್ತಿ ಮೌಲ್ಯ 1.65 ಕೋಟಿ ರುಪಾಯಿಯಾಗಿದ್ದು, ಹಿಂದಿನ ವರ್ಷದ ಹೋಲಿಕೆಯಲ್ಲಿ 68,455 ರುಪಾಯಿ ಹೆಚ್ಚಳವಾಗಿದೆ. ನಿತೀಶ್ ಕುಮಾರ್ ಸರ್ಕಾರವು ವರ್ಷಾಂತ್ಯದಲ್ಲಿ ಸಚಿವ ಸಂಪುಟ ಸದಸ್ಯರು ತಮ್ಮ ಆಸ್ತಿ ಹಾಗೂ ಬಾಧ್ಯತೆಗಳ ವಿವರಗಳನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ನಿತೀಶ್ ಕುಮಾರ್ ಬಳಿಯಿದೆ 1.65 ಕೋಟಿ ರುಪಾಯಿ ಮೌಲ್ಯದ ಆಸ್ತಿ

ನಿತೀಶ್‌ ಕುಮಾರ್‌ (ಸಂಗ್ರಹ ಚಿತ್ರ) -

Priyanka P
Priyanka P Jan 1, 2026 8:13 PM

ಪಾಟ್ನಾ, ಜ. 1: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar CM Nitish Kumar) 1.65 ಕೋಟಿ ರುಪಾಯಿ ಮೌಲ್ಯದ ಚರಾಸ್ತಿ ಮತ್ತು ಸ್ಥಿರ ಆಸ್ತಿಗಳನ್ನು ಹೊಂದಿದ್ದಾರೆ. ಆ ಮೂಲಕ ಅವರ ಆಸ್ತಿ ಮೌಲ್ಯ ಕಳೆದ ವರ್ಷಕ್ಕಿಂತ ಸುಮಾರು 68,455 ರುಪಾಯಿ ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ. ಡಿಸೆಂಬರ್ 31ರಂದು ಬಿಹಾರ ಸರ್ಕಾರದ (Bihar Government) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಆಸ್ತಿ ವಿವರಗಳ ಪ್ರಕಾರ, ನಿತೀಶ್ ಕುಮಾರ್ 20,552 ರುಪಾಯಿ ನಗದು ಮತ್ತು ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 57,800 ರುಪಾಯಿ ಡೆಪಾಸಿಟ್‌ ಹೊಂದಿದ್ದಾರೆ.

ನಿತೀಶ್ ಕುಮಾರ್ ಸರ್ಕಾರವು ಪ್ರತಿಯೊಂದು ಕ್ಯಾಲೆಂಡರ್ ವರ್ಷದ ಕೊನೆಯ ದಿನದಂದು ಎಲ್ಲ ಸಚಿವ ಸಂಪುಟ ಸದಸ್ಯರು ತಮ್ಮ ಆಸ್ತಿ ಹಾಗೂ ಬಾಧ್ಯತೆಗಳ ವಿವರಗಳನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಿದೆ. ಆಸ್ತಿ ವಿವರ ಬಹಿರಂಗವಾದ ಪ್ರಕಾರ ಹಲವು ಸಚಿವರು ಮುಖ್ಯಮಂತ್ರಿಗಿಂತ ಶ್ರೀಮಂತರಾಗಿದ್ದಾರೆ.

ಬದಲಾದ ಬಿಹಾರ, ಬದಲಾಗದ ನಿತೀಶ್‌ ಸರಕಾರ

ಸಂಪುಟ ಸಚಿವಾಲಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಮಾಹಿತಿಯ ಪ್ರಕಾರ, ನಿತೀಶ್‌ ಕುಮಾರ್ ಸುಮಾರು 7.66 ಲಕ್ಷ ರುಪಾಯಿ ಮೌಲ್ಯದ ಚರ ಆಸ್ತಿಗಳನ್ನು ಹೊಂದಿದ್ದರೆ, 1.48 ಕೋಟಿ ರುಪಾಯಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಹೊಂದಿದ್ದಾರೆ. ನವದೆಹಲಿಯ ದ್ವಾರಕಾದಲ್ಲಿರುವ ಸಹಕಾರಿ ವಸತಿ ಸಂಘದಲ್ಲಿ ಮುಖ್ಯಮಂತ್ರಿಗೆ ಕೇವಲ ಒಂದು ವಸತಿ ಫ್ಲಾಟ್ ಮಾತ್ರ ಇದೆ. 2024ರಲ್ಲಿ ಮುಖ್ಯಮಂತ್ರಿ 1.64 ಕೋಟಿ ರುಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಹೊಂದಿದ್ದರು. ಮುಖ್ಯಮಂತ್ರಿ ಬಳಿ 10 ಹಸುಗಳು ಮತ್ತು 13 ಕರುಗಳಿವೆ. ಹಾಗೆಯೇ 11.32 ಲಕ್ಷ ರುಪಾಯಿ ಮೌಲ್ಯದ ಕಾರು ಇದೆ.

ಕಾಂಗ್ರೆಸ್‌ ಎಂದರೆ ಎಂಎಂಸಿ-ಮುಸ್ಲಿಂ ಲೀಗ್‌ ಮಾವೋಯಿಸ್ಟ್‌ ಕಾಂಗ್ರೆಸ್‌: ಬಿಹಾರ ವಿಧಾನಸಭೆ ಫಲಿತಾಂಶ ಬೆನ್ನಲ್ಲೇ ಮೋದಿ ಹೊಸ ವ್ಯಾಖ್ಯಾನ

ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ 1.35 ಲಕ್ಷ ರುಪಾಯಿ ನಗದು ಹೊಂದಿದ್ದರೆ, ಅವರ ಪತ್ನಿ ಕುಮಾರಿ ಮಮತಾ 35,000 ರುಪಾಯಿ ನಗದು ಹೊಂದಿದ್ದಾರೆ. ಚೌಧರಿ ಬಳಿ 4 ಲಕ್ಷ ರುಪಾಯಿ ಮೌಲ್ಯದ ರೈಫಲ್ ಕೂಡ ಇದೆ. ಕೃಷಿಯೇತರ ಭೂಮಿ ಸೇರಿದಂತೆ ಅವರ ಸ್ಥಿರ ಆಸ್ತಿ 4.91 ಕೋಟಿರುಪಾಯಿ ಮೌಲ್ಯದ್ದು. ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಮಾಹಿತಿಯ ಪ್ರಕಾರ, ಮತ್ತೊಬ್ಬ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ 48.46 ಲಕ್ಷ ರುಪಾಯಿ ಮೌಲ್ಯದ ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ. ಅವರ ಬಳಿ 77,181 ರುಪಾಯಿ ಮೌಲ್ಯದ ರಿವಾಲ್ವರ್ ಕೂಡ ಇದೆ.

ಮಂಗಲ್ ಪಾಂಡೆ (ಆರೋಗ್ಯ), ವಿಜಯ್ ಕುಮಾರ್ ಚೌಧರಿ (ಸಂಸದೀಯ ವ್ಯವಹಾರಗಳು), ಲೆಶಿ ಸಿಂಗ್ (ಆಹಾರ ಮತ್ತು ಗ್ರಾಹಕ ರಕ್ಷಣೆ), ಜಮಾ ಖಾನ್ (ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ), ಮದನ್ ಸಾಹ್ನಿ (ಸಮಾಜ ಕಲ್ಯಾಣ), ದಿಲೀಪ್ ಜೈಸ್ವಾಲ್ ಮತ್ತು ಅಶೋಕ್ ಚೌಧರಿ ತಮ್ಮ ಆಸ್ತಿಯನ್ನು ಘೋಷಿಸಿದ ಇತರ ಸಚಿವರು.