Chikkaballapur News: ದೇವರಾಜ್ ಅರಸು ಮೆಡಿಕಲ್ ಕಾಲೇಜು ಅಧ್ಯಕ್ಷ ಜಿ.ಹೆಚ್.ನಾಗರಾಜ್ ಜನ್ಮದಿನ ಆಚರಣೆ
ಜಿಲ್ಲೆಯಲ್ಲಿ ಅಷ್ಟೇ ಅಲ್ಲದೆ ರಾಜ್ಯದಲ್ಲಿ ಕೂಡ ಜಿ.ಹೆಚ್.ನಾಗರಾಜ್ ಅವರಿಗೆ ಮತ್ತು ಅವರ ಕುಟುಂಬಕ್ಕೆ ಅಪಾರ ಬಂಧು ಬಳಗದ ನಂಟಿದೆ. ಕೊಡುಗೈ ದಾನಿಗಳಾಗಿ, ಸಮಾಜ ಸೇವಕರಾಗಿ, ರಾಜಕೀಯ ಧುರೀಣ ರಾಗಿ ಅಪಾರವಾದ ಜನಪ್ರೀತಿಯನ್ನು ಗಳಿಸಿದ್ದಾರೆ. ಇಂತಹ ಜನಪರ ನಾಯಕರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಹರಿಪ್ರಸಾದ್ ಆಗಮಿಸಿದ್ದು ವಿಶೇಷವಾಗಿದೆ ಎಂಬುದು ಅವರ ಯುವ ಮುಖಂಡ ವಿನಯ್‌ಶ್ಯಾಮ್ ಅವರ ಮಾತಾಗಿದೆ
ನಗರ ಹೊರವಲಯ ಹಾರೋಬಂಡೆ ಸಮೀಪದ ಸಾಯಿ ಮಂದಿರದಲ್ಲಿ ಸರಳವಾಗಿ ಆಚರಿಸಿಕೊಂಡ ಜನ್ಮದಿನದ ಕಾರ್ಯಕ್ರಮದಲ್ಲಿ ಬಿ.ಕೆ,ಹರಿಪ್ರಸಾದ್ ಭಾಗವಹಿಸಿ ಶುಭ ಕೋರಿದರು. -
ಚಿಕ್ಕಬಳ್ಳಾಪುರ : ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ದೇವರಾಜು ಅರಸು ಎಜುಕೇಷನಲ್ ಟ್ರಸ್ಟ್, ದೇವರಾಜ ಅರಸು ಡೀಮ್ಡ್ ಯೂನಿವರ್ಸಿಟಿಯ ಅಧ್ಯಕ್ಷರು,ಶ್ರೀಸಾಯಿ ಮಂದಿರದ ಧರ್ಮದರ್ಶಿಗಳಾದ ಜಿ.ಹೆಚ್.ನಾಗರಾಜ್ ಅವರ 79ನೇ ಹುಟ್ಟುಹಬ್ಬದ ಅಂಗವಾಗಿ ಚಿಕ್ಕಬಳ್ಳಾ ಪುರಕ್ಕೆ ಆಗಮಿಸಿದ್ದ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿ.ಕೆ.ಹರಿಪ್ರಸಾದ್ ಕೇಕ್ ಕತ್ತರಿಸಿ ಸಿಹಿ ತಿನ್ನಿಸಿದ ಅಪರೂಪದ ಪ್ರಸಂಗ ಗುರುವಾರ ನಡೆಯಿತು.
ಈ ವೇಳೆ ಮಾತನಾಡಿದ ಅವರು ನಮ್ಮ ಸಮುದಾಯದ ಹಿರಿಯ ಚೇತನದ ಹುಟ್ಟುಹಬ್ಬಕ್ಕೆ ಬಂದು ಶುಭಕೋರುವ ಮೂಲಕ ಅವರ ಆಶೀರ್ವಾದ ಪಡೆಯಲಾಗಿದೆ. ಇದೊಂದು ಖಾಸಗಿ ಭೇಟಿಯಾಗಿ ರುವ ಕಾರಣ ರಾಜಕೀಯ ಮಾತನಾಡುವುದಿಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ಅಷ್ಟೇ ಅಲ್ಲದೆ ರಾಜ್ಯದಲ್ಲಿ ಕೂಡ ಜಿ.ಹೆಚ್.ನಾಗರಾಜ್ ಅವರಿಗೆ ಮತ್ತು ಅವರ ಕುಟುಂಬಕ್ಕೆ ಅಪಾರ ಬಂಧು ಬಳಗದ ನಂಟಿದೆ. ಕೊಡುಗೈ ದಾನಿಗಳಾಗಿ, ಸಮಾಜ ಸೇವಕರಾಗಿ, ರಾಜಕೀಯ ಧುರೀಣರಾಗಿ ಅಪಾರವಾದ ಜನಪ್ರೀತಿಯನ್ನು ಗಳಿಸಿದ್ದಾರೆ. ಇಂತಹ ಜನಪರ ನಾಯಕರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಹರಿಪ್ರಸಾದ್ ಆಗಮಿಸಿದ್ದು ವಿಶೇಷವಾಗಿದೆ ಎಂಬುದು ಅವರ ಯುವ ಮುಖಂಡ ವಿನಯ್‌ಶ್ಯಾಮ್ ಅವರ ಮಾತಾಗಿದೆ.
ಇದನ್ನೂ ಓದಿ: Chikkaballapur News: ನೂರಾರು ಭಕ್ತರ ಸಮ್ಮುಖದಲ್ಲಿ: ವಾಪಸಂದ್ರದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಕಲ್ಯಾಣ ಮಹೋತ್ಸವ
ಮಾಜಿ ಸಂಸದ ಆರ್.ಎಲ್.ಜಾಲಪ್ಪ ಅವರ ಸೋದರಳಿಯರಾದ ಜಿ.ಹೆಚ್.ನಾಗರಾಜ್ ಅವರು ಜನ್ಮದಿನವನ್ನು ಹಬ್ಬದಂತೆ ಆಚರಿಸಿಕೊಂಡು ಬಂದಿದ್ದು ಆ ದಿನ ಸಾವಿರಾರು ಮಂದಿಗೆ ಸ್ವಾಧಿಷ್ಠ ಆಹಾರ ಉಣಬಡಿಸುವುದು ಅವರು ಪಾಲಿಸಿಕೊಂಡು ಬಂದಿರುವ ಪದ್ಧತಿಯಾಗಿದೆ.
ಅದರಂತೆ ಜ.1ರಂದು ತಮ್ಮ 79ನೇ ಜನ್ಮದಿನವನ್ನು ಹಾರೋಬಂಡೆ ಸಮೀಪದ ಶ್ರೀ ಸಾಯಿ ಮಂದಿರದಲ್ಲಿ ಸರಳವಾಗಿ ಆಚರಿಸಿಕೊಂಡರು. ಜ.3ರಂದು ತಮ್ಮ ಪುತ್ರ ವಿನಯ್ ಶ್ಯಾಮ್ ಅವರ ಹುಟ್ಟು ಹಬ್ಬ ತಮ್ಮ ಹುಟ್ಟು ಹಬ್ಬವಿದ್ದು ಎರಡನ್ನೂ ಸೇರಿಸಿ ಜ.2ರಂದು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಹೀಗಾಗಿ ಗುರುವಾರ ಆಪ್ತರ ಸಮ್ಮುಖದಲ್ಲಿ ದೈವ ಸನ್ನಿಧಿಯಲ್ಲಿ ಸಾಂಕೇತಿಕವಾಗಿ ಆಚರಿಸಿಕೊಂಡರು.
*
ತಂದೆಯ ಜನ್ಮದಿನದ ಮಹತ್ವದ ಬಗ್ಗೆ ಮಾತನಾಡಿದ ಯುವ ಮುಖಂಡ, ಜಿ.ಹೆಚ್.ಎನ್. ಫೌಂಡೇಷನ್ ಅಧ್ಯಕ್ಷ ವಿನಯ್ ಶ್ಯಾಮ್ ನನಗೆ ಬುದ್ಧಿ ಬಂದಾಗಿನಿಂದ ತಂದೆಯ ಜನ್ಮದಿನಕ್ಕೆ ಹೊಸಬಟ್ಟೆಯನ್ನು ನಾನೇ ತಂದುಕೊಡುವ ಅಭ್ಯಾಸ ಬೆಳೆಸಿಕೊಂಡಿದ್ದೇನೆ.ನನಗೆ ದುಡಿಯುವ ವಯಸ್ಸಿಲ್ಲದಿದ್ದಾಗಲೂ ಕೂಡ ಅಮ್ಮ ಮತ್ತು ಅಪ್ಪನ ಬಳಿ ಹಣವನ್ನು ಪಡೆದು ಅದರಲ್ಲಿಯೇ ಬಟ್ಟೆ ತಂದು ಕೊಡುತ್ತಿದ್ದೆ. ದೊಡ್ಡವನಾದ ಮೇಲೆ ನಾನೇ ಅವರಿಗೆ ಬಟ್ಟೆ ಸೆಲೆಕ್ಟ್ ಮಾಡಿ ತಂದು ಕೊಡುತ್ತಿದ್ದೇನೆ. ಇದು ಮಾತ್ರ ಮಗನಾಗಿ ನಾನು ಅವರಿಗೆ ಸಲ್ಲಸುವ ಕಿರುಕಾಣಿಕೆ.ಈ ಕರ್ತವ್ಯ ನನ್ನ ಬದುಕಿನಲ್ಲಿ ಅತ್ಯಂತ ಮಹತ್ವದ್ದು ಎಂದು ನಾನು ಭಾವಿಸಿದ್ದೇನೆ.ಎಲ್ಲಾ ಮಕ್ಕಳು ಕೂಡ ಇದೇ ರೀತಿ ತಂದೆ ತಾಯಿಯ ಜನ್ಮದಿನಕ್ಕೆ ಬಟ್ಟೆಯನ್ನು ಉಡುಗೊರೆಯಾಗಿ ಕೊಡುವ ಮೂಲಕ ಜನ್ಮದಿನ ಸ್ಮರಣೀಯವಾಗಿಸಿಕೊಳ್ಳಬಹುದು ಎಂದರು.
ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಇಂದಿಗೂ ಕೂಡ ತಮ್ಮ ಪ್ರಭಾವ ಉಳಿಸಿಕೊಂಡಿರುವ ಹಿರಿಯ ಜೀವ ಸರಳ ಸಜ್ಜನ ರಾಜಕೀಯ ಮುತ್ಸದ್ಧಿ ಜಿ.ಹೆಚ್.ನಾಗರಾಜ್ ಅವರ ಹುಟ್ಟುಹಬ್ಬದ ಅಂಗವಾಗಿ ಅನೇಕ ಮುಖಂಡರು ಅಭಿಮಾನಿಗಳು ಕಾರ್ಯಕರ್ತರು ನಗರದ ಮನೆ ಮತ್ತು ಸಾಯಿ ಮಂದಿರಕ್ಕೆ ಭೇಟಿ ನೀಡಿದ್ದಲ್ಲದೆ ಕೇಕ್ ಕತ್ತರಿಸಿ ಹಾರಹಾಕಿ ಪೋಟೋ ತೆಗೆಸಿಕೊಂಡು ಸಂತೋಷಪಟ್ಟರಲ್ಲದೆ ಜನ್ಮದಿನದ ಶುಭಾಶಯ ಕೋರುತ್ತಿದ್ದುದು ವಿಶೇಷವಾಗಿತ್ತು.
ಶುಕ್ರವಾರ ನಗರದ ಪ್ರಶಾಂತ್‌ನಗರ ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ತಂದೆ ಮತ್ತು ಮಗನ ಹುಟ್ಟುಹಬ್ಬದ ಆಚರಣೆಗೆ ಭರ್ಜರಿ ಸಿದ್ಧತೆಗಳು ನಡೆದಿದ್ದು,ಸಾವಿರಾರು ಮಂದಿಗೆ ಪುಷ್ಕಳ ಭೋಜನದ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಇದೊಂದು ಪಕ್ಷಾತೀತವಾಗಿ, ಧರ್ಮಾತೀತವಾಗಿ ನಡೆಯುವ ಕಾರ್ಯಕ್ರಮವಾಗಿದ್ದು ನಾಳಿನ ಕಾರ್ಯಕ್ರಮ ಅನೇಕ ವಿದ್ಯಮಾನಗಳಿಗೆ ಸಾಕ್ಷಿ ಯಾಗಬಲ್ಲದು ಎಂಬುದು ರಾಜಕೀಯ ಪಂಡಿತರ ಮಾತಾಗಿದೆ.
ಈ ವೇಳೆ ಯುವ ಮುಖಂಡ ವಿನಯ್‌ಶ್ಯಾಮ್, ಮಾಜಿ ಶಾಸಕ ಶಿವಾನಂದ್, ನಗರಸಭಾ ಸದಸ್ಯ ನರಸಿಂಹಮೂರ್ತಿ ಮತ್ತಿತರರು ಇದ್ದರು.