Suvendu Adhikari: ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮೇಲೆ ದಾಳಿ; TMC ಕೈವಾಡ ಎಂದು ಆರೋಪಿಸಿದ ಪಕ್ಷ
ಮಂಗಳವಾರ ಕೂಚ್ ಬೆಹಾರ್‌ನಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಬೆಂಗಾವಲು ಪಡೆಯ ಮೇಲೆ ಉತ್ತರ ಬಂಗಾಳದ ಖಗ್ರಾಬರಿ ಪ್ರದೇಶದಲ್ಲಿ ಲಾಠಿಗಳಿಂದ ದಾಳಿ ನಡೆಸಲಾಯಿತು. ಈ ದಾಳಿಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ವಿರೋಧ ಪಕ್ಷದ ಧ್ವನಿಗಳನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಟಿಎಂಸಿ ಹಿಂಸಾಚಾರವನ್ನು ಸಂಘಟಿಸುತ್ತಿದೆ ಎಂದು ಆರೋಪಿಸಿದೆ.
-
ಕೊಲ್ಕತ್ತಾ: ಮಂಗಳವಾರ ಕೂಚ್ ಬೆಹಾರ್‌ನಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ (Suvendu Adhikari) ಅವರ ಬೆಂಗಾವಲು ಪಡೆಯ ಮೇಲೆ ಉತ್ತರ ಬಂಗಾಳದ ಖಗ್ರಾಬರಿ ಪ್ರದೇಶದಲ್ಲಿ ಲಾಠಿಗಳಿಂದ ದಾಳಿ ನಡೆಸಲಾಯಿತು. ವರದಿಗಳ ಪ್ರಕಾರ, ಅಧಿಕಾರಿ ಅವರ ಬೆಂಗಾವಲು ಪಡೆಯು ಆ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬೆಂಬಲಿಗರು ಕಪ್ಪು ಬಾವುಟಗಳನ್ನು ಬೀಸಿದರು, "ಕಳ್ಳ" ಎಂಬ ಘೋಷಣೆಗಳನ್ನು ಎಸೆದರು ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಈ ದಾಳಿಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ವಿರೋಧ ಪಕ್ಷದ ಧ್ವನಿಗಳನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಟಿಎಂಸಿ ಹಿಂಸಾಚಾರವನ್ನು ಸಂಘಟಿಸುತ್ತಿದೆ ಎಂದು ಆರೋಪಿಸಿದೆ. ಅಧಿಕಾರಿ ಇಂದು ಕೂಚ್ ಬೆಹಾರ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಮಹಿಳಾ ಸುರಕ್ಷತೆಯ ಕುರಿತು ಸಾರ್ವಜನಿಕ ಸಭೆಗೆ ತೆರಳುವವರಿದ್ದರು. ಬಿಜೆಪಿ ನಾಯಕರ ಪ್ರಕಾರ, ಮಧ್ಯಾಹ್ನ 12.35 ರ ಸುಮಾರಿಗೆ ಅಧಿಕಾರಿಯವರ ಬೆಂಗಾವಲು ಪಡೆ ಖಗ್ರಾಬರಿ ಕ್ರಾಸಿಂಗ್‌ನಲ್ಲಿ ಟಿಎಂಸಿ ಪಕ್ಷದ ಧ್ವಜಗಳನ್ನು ಹಿಡಿದಿದ್ದ ಗುಂಪೊಂದು ಜಮಾಯಿಸಿತು. ಅವರು ಅವರ ವಾಹನದ ಮೇಲೆ ಬೂಟುಗಳನ್ನು ಎಸೆದರು ಎಂದು ಬಿಜೆಪಿ ತಿಳಿಸಿದೆ. ಅವರ ಒಂದು ಬೆಂಗಾವಲು ಪಡೆಯ ವಾಹನದ ಗಾಜನ್ನು ಒಡೆಯಲಾಗಿದೆ. \
TMC’s anti-Bengali intolerance was on full display today, not just in Coochbehar, but across North Bengal.
— Amit Malviya (@amitmalviya) August 5, 2025
Leader of Opposition Suvendu Adhikari had visited Coochbehar to protest the rising violence against BJP MLAs — Bengali citizens, and members of the Rajbanshi, Gorkha, and… pic.twitter.com/nuhrzD5ERo
NRC ವಿರುದ್ಧ ಟಿಸಿಎಂ ಕಿಡಿ
ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸುವ ಮೂಲಕ ಮತದಾರರ ಪಟ್ಟಿ ಪರಿಶೀಲನೆಯ ತಂತ್ರವನ್ನು ಬಳಸಿಕೊಂಡು ಬಿಜೆಪಿ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಕಡೆಗೆ ಕಸರತ್ತು ನಡೆಸಲು ಪ್ರಯತ್ನಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ .ಜುಲೈ 28 ರಂದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿರ್ಭುಮ್ ಜಿಲ್ಲೆಯ ಬೋಲ್ಪುರದಿಂದ 'ಭಾಷಾ ಆಂದೋಲನ'ವನ್ನು ಪ್ರಾರಂಭಿಸಿದರು, ಅವರು "ತನ್ನ ಪ್ರಾಣವನ್ನು ತ್ಯಜಿಸುತ್ತೇನೆ, ಆದರೆ ತನ್ನ ಭಾಷೆಯನ್ನು ಕಸಿದುಕೊಳ್ಳಲು ಯಾರಿಗೂ ಬಿಡುವುದಿಲ್ಲ ಎಂದು ಹೇಳಿದ್ದರು. ಬಂಗಾಳಿ ಮಾತನಾಡುವ ವಲಸಿಗರನ್ನು ಗುರಿಯಾಗಿಸಿಕೊಂಡು ಮತ್ತು ಮತದಾರರ ಪಟ್ಟಿಯಿಂದ ನಿಜವಾದ ಮತದಾರರನ್ನು ಕೈಬಿಡುವ ಪ್ರಯತ್ನಗಳನ್ನು ಮಾಡುವ ಮೂಲಕ ಕೇಂದ್ರ ಮತ್ತು ಚುನಾವಣಾ ಆಯೋಗವು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯನ್ನು ಜಾರಿಗೆ ತರಲು" ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.