ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಭಾರತೀಯ ಅಧಿಕಾರಿಯ ಮೃತದೇಹ ಪತ್ತೆ; ಕಾರಣ ನಿಗೂಢ

ಕೆಲವು ದಿನಗಳ ಬ್ರೇಕ್‌ ಬಳಿಕ ಬಾಂಗ್ಲಾದೇಶದಲ್ಲಿ ಭಾರತೀಯರ ಸಾವು ಸಂಭವಿಸಿದೆ. ಭಾರತೀಯ ಅಧಿಕಾರಿಯೊಬ್ಬರು ನಿಗೂಢವಾಗಿ ಮೃತಪಟ್ಟಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಾಂಗ್ಲಾದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ನಿಯೋಜನೆಗೊಂಡಿದ್ದ ಪ್ರೋಟೋಕಾಲ್ ಅಧಿಕಾರಿ, ಚಂಡೀಗಢದ ನರೇನ್ ಧರ್ (38) ಅವರ ಮೃತದೇಹ ಮಂಗಳವಾರ (ಮೇ 19) ಪತ್ತೆಯಾಗಿದೆ.

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಭಾರತೀಯ ಅಧಿಕಾರಿಯ ಮೃತದೇಹ ಪತ್ತೆ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole May 19, 2026 10:20 PM

ಢಾಕಾ, ಮೇ 19: ನೆರೆಯ ಬಾಂಗ್ಲಾದೇಶದಲ್ಲಿ (Bangladesh) ಭಾರತೀಯ ಅಧಿಕಾರಿಯೊಬ್ಬರು ನಿಗೂಢವಾಗಿ ಮೃತಪಟ್ಟಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಾಂಗ್ಲಾದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ನಿಯೋಜನೆಗೊಂಡಿದ್ದ ಪ್ರೋಟೋಕಾಲ್ ಅಧಿಕಾರಿ ನರೇನ್ ಧರ್ (38) ಅವರ ಮೃತದೇಹ ಮಂಗಳವಾರ (ಮೇ 19) ಪತ್ತೆಯಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿತ್ತಗಾಂಗ್ ವೈದ್ಯಕೀಯ ಕಾಲೇಜು (CMC) ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ನರೇನ್ ಧರ್ ಅವರ ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ʼʼಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಿದ ಬಳಿಕವಷ್ಟೆ ನರೇನ್ ಧರ್ ಸಾವಿಗೆ ಕಾರಣವೇನು ಎನ್ನುವುದು ಗೊತ್ತಾಗಲಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಧರ್ ಭಾರತೀಯ ಸಹಾಯಕ ಹೈಕಮಿಷನ್‌ನಲ್ಲಿ ಪ್ರೋಟೋಕಾಲ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಸಾವಿನ ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಳಗ್ಗೆ 9:30ರ ಸುಮಾರಿಗೆ ಮೃತದೇಹ ಹೊರತೆಗೆದರು. ನಂತರ ಶವಪರೀಕ್ಷೆಗಾಗಿ ಸಿಎಂಸಿ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಯಿತು" ಎಂದು ನಗರ ಪೊಲೀಸ್ ಸಹಾಯಕ ಆಯುಕ್ತ ಅಮಿನೂರ್ ರಶೀದ್ ತಿಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಭಾರತೀಯ ಅಧಿಕಾರಿಯ ಸಾವು:



ಹೈಕಮಿಷನ್ ಅಧಿಕಾರಿಯ ಕುಟುಂಬದೊಂದಿಗೆ ಸಂಪರ್ಕದಲ್ಲಿರುವುದಾಗಿ ಬಾಂಗ್ಲಾದೇಶ ಸರ್ಕಾರ ಹೇಳಿದೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಮರಣೋತ್ತರ ಪರೀಕ್ಷಾ ವರದಿ ಕೈ ಸೇರಿದ ಬಳಿಕ ಅನುಮಾನಗಳಿಗೆಲ್ಲ ಉತ್ತರ ಸಿಗಲಿದೆ.

ಬಿಜೆಪಿ ಭರ್ಜರಿ ಗೆಲುವು: ಬಾಂಗ್ಲಾದೇಶ, ಬಂಗಾಳ ಗಡಿಯಲ್ಲಿ ಢಾಕಾ ಎಚ್ಚರಿಕೆ

bdnews24.com ಪ್ರಕಾರ, ಮೃತ ವ್ಯಕ್ತಿ ನರೇನ್ ಧರ್ ಚಂಡೀಗಢ ಮೂಲದವರು. ಅವರು ಬಾಂಗ್ಲಾದೇಶದ ಭಾರತೀಯ ಕಾರ್ಯಾಚರಣೆಯಲ್ಲಿ ಸಹಾಯಕ ಪ್ರೋಟೋಕಾಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಮೃತದೇಹ ಮಂಗಳವಾರ ಬಂದರು ನಗರ ಖುಲ್ಶಿ ಪ್ರದೇಶದ ಜಾಕಿರ್ ಹೊಸೈನ್ ರಸ್ತೆಯಲ್ಲಿರುವ ಕಚೇರಿ ಆವರಣದಲ್ಲಿ ಪತ್ತೆಯಾಗಿದೆ. ಕಟ್ಟಡದ 2ನೇ ಅಂತಸ್ತಿನಲ್ಲಿರುವ ಡೇಟಾ ಎಂಟ್ರಿ ಕಚೇರಿಯ ಬಾತ್‌ರೂಂನ ಬಾಗಿಲು ಪಕ್ಕದಲ್ಲಿ ನರೇನ್‌ ಮೃತದೇಹ ಕಂಡು ಬಂದಿತ್ತು. ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಮೃತದೇಹದಲ್ಲಿ ಯಾವುದೇ ಗಾಯ ಗುರುತು ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಸದ್ಯ ಭಾರತ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕೆಲವು ತಿಂಗಳ ಹಿಂದೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ಹಿಂಸಾಚಾರ, ಸರಣಿ ಹತ್ಯೆ ನಡೆದಿತ್ತು. ಈ ಬಗ್ಗೆ ಭಾರತ ಖಡಕ್‌ ಎಚ್ಚರಿಕೆ ನೀಡಿದ ಬಳಿಕ ಬಾಂಗ್ಲದೇಶ ಕ್ರಮ ಕೈಗೊಂಡು ಅಲ್ಪ ಸಂಖ್ಯಾತರರಕ್ಷಣೆಗೆ ಕ್ರಮ ಕೈಗೊಂಡಿತ್ತು. ಅಲ್ಲದೆ ಇತ್ತೀಚೆಗೆ ಅಲ್ಲಿ ನಡೆದ ಚುನಾವಣೆಯಲ್ಲಿ ತಾರಿಖ್ ರೆಹಮಾನ್ ನೇತೃತ್ವದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಮುಂದಾಗಿದೆ. ಇದರ ಭಾಗವಾಗಿ ಏಪ್ರಿಲ್‌ನಲ್ಲಿ ಬಾಂಗ್ಲಾದೇಶದ ವಿದೇಶಾಂಗ ಸಚಿವ ಡಾ. ಖಲೀಲೂರ್ ರೆಹಮಾನ್ ಭಾರತ ಪ್ರವಾಸ ಕೈಗೊಂಡಿದ್ದರು. ಈ ಭೇಟಿಯ ವೇಳೆ ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಾನ ಹಿತಾಸಕ್ತಿಯ ವಿಷಯಗಳ ಮೇಲೆ ಗಮನ ಹರಿಸಲಾಗಿತ್ತು.

ಭಾರತೀಯರ ಸರಣಿ ಹತ್ಯೆ ನಡೆದಿತ್ತು

ಕೆಲವು ತಿಂಗಳ ಹಿಂದೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ಹಿಂಸಾಚಾರ, ಸರಣಿ ಹತ್ಯೆ ನಡೆದಿತ್ತು. ಈ ಬಗ್ಗೆ ಭಾರತ ಖಡಕ್‌ ಎಚ್ಚರಿಕೆ ನೀಡಿದ ಬಳಿಕ ಬಾಂಗ್ಲದೇಶ ಕ್ರಮ ಕೈಗೊಂಡು ಅಲ್ಪ ಸಂಖ್ಯಾತರ ರಕ್ಷಣೆಗೆ ಕ್ರಮ ಕೈಗೊಂಡಿತ್ತು. ಅಲ್ಲದೆ ಇತ್ತೀಚೆಗೆ ಅಲ್ಲಿ ನಡೆದ ಚುನಾವಣೆಯಲ್ಲಿ ತಾರಿಖ್ ರೆಹಮಾನ್ ನೇತೃತ್ವದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಮುಂದಾಗಿದೆ. ಇದರ ಭಾಗವಾಗಿ ಏಪ್ರಿಲ್‌ನಲ್ಲಿ ಬಾಂಗ್ಲಾದೇಶದ ವಿದೇಶಾಂಗ ಸಚಿವ ಡಾ. ಖಲೀಲೂರ್ ರೆಹಮಾನ್ ಭಾರತ ಪ್ರವಾಸ ಕೈಗೊಂಡಿದ್ದರು. ಈ ಭೇಟಿಯ ವೇಳೆ ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಾನ ಹಿತಾಸಕ್ತಿಯ ವಿಷಯಗಳ ಮೇಲೆ ಗಮನ ಹರಿಸಲಾಗಿತ್ತು.

ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.