Bomb threat: ಅಫ್ಜಲ್ ಗುರುನನ್ನು ಅನ್ಯಾಯವಾಗಿ ಗಲ್ಲಿಗೇರಿಸಲಾಗಿದೆ... ಬಾಂಬ್ ಸ್ಫೋಟಿಸುತ್ತೇವೆ; ತಾಜ್ ಹೊಟೇಲ್‌ಗೆ ಬೆದರಿಕೆ
Bomb threat mail: ಮುಂಬೈ ವಿಮಾನ ನಿಲ್ದಾಣ ಪೊಲೀಸರಿಗೆ ಕಿಡಿಗೇಡಿಗಳು ಇ-ಮೇಲ್ ಕಳುಹಿಸಿದ್ದಾರೆ. ಉಗ್ರರಾದ ಅಫ್ಜಲ್ ಗುರು ಮತ್ತು ಸಾಯಿಬಾಬು ಶಂಕರ್‌ನನ್ನು ಅನ್ಯಾಯವಾಗಿ ಗಲ್ಲಿಗೇರಿಸಲಾಗಿದೆ. ಮುಂಬೈನ ಕೆಲವೊಂದು ಸ್ಥಳಗಳ ಮೇಲೆ ಬಾಂಬ್ ಸ್ಫೋಟ ನಡೆಸಲಾಗುತ್ತದೆ ಎಂದು ಸಂದೇಶದಲ್ಲಿತ್ತು. ಇ-ಮೇಲ್ ಸಂದೇಶ ಸ್ವೀಕರಿಸಿದ ಬೆನ್ನಲ್ಲೇ ಪೊಲೀಸರು ಹೈ ಅಲರ್ಟ್ ಆಗಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ವಿಮಾನ ನಿಲ್ದಾಣ ಮತ್ತು ಹೋಟೆಲ್ ಆವರಣದಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಅಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.


ನವದೆಹಲಿ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಐತಿಹಾಸಿಕ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ಗೆ ಬಾಂಬ್ ಬೆದರಿಕೆ(Bomb threat mail) ಬಂದಿದೆ. ಮುಂಬೈ ವಿಮಾನ ನಿಲ್ದಾಣ ಪೊಲೀಸರಿಗೆ ಕಿಡಿಗೇಡಿಗಳು ಇ-ಮೇಲ್ ಕಳುಹಿಸಿದ್ದಾರೆ. ಉಗ್ರರಾದ ಅಫ್ಜಲ್ ಗುರು ಮತ್ತು ಸಾಯಿಬಾಬು ಶಂಕರ್‌ನನ್ನು ಅನ್ಯಾಯವಾಗಿ ಗಲ್ಲಿಗೇರಿಸಲಾಗಿದೆ. ಮುಂಬೈನ ಕೆಲವೊಂದು ಸ್ಥಳಗಳ ಮೇಲೆ ಬಾಂಬ್ ಸ್ಫೋಟ ನಡೆಸಲಾಗುತ್ತದೆ ಎಂದು ಸಂದೇಶದಲ್ಲಿತ್ತು. ಇ-ಮೇಲ್ ಸಂದೇಶ ಸ್ವೀಕರಿಸಿದ ಬೆನ್ನಲ್ಲೇ ಪೊಲೀಸರು ಹೈ ಅಲರ್ಟ್ ಆಗಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.
ವಿಮಾನ ನಿಲ್ದಾಣ ಮತ್ತು ಹೋಟೆಲ್ ಆವರಣದಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಅಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇಮೇಲ್‌ನ ಮೂಲವನ್ನು ಪತ್ತೆಹಚ್ಚಲು ಮತ್ತು ಬೆದರಿಕೆಯ ಹಿಂದಿನ ವ್ಯಕ್ತಿಯನ್ನು ಗುರುತಿಸಲು ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಎರಡೂ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಈ ಸುದ್ದಿಯನ್ನೂ ಓದಿ: provocative video: "ಮೋದಿ ಮನೆ ಮೇಲೆ ಬಾಂಬ್ ಹಾಕಿ" ಎಂದು ವಿಡಿಯೋ ಮಾಡಿದ ನವಾಜ್ ಬಂಧನ
ಮಹಾರಾಷ್ಟ್ರ ಸಚಿವಾಲಯಕ್ಕೂ ಬಾಂಬ್ ಬೆದರಿಕೆ
ಮತ್ತೊಂದೆಡೆ ಎರಡು ದಿನಗಳ ಹಿಂದೆ ಮಹಾರಾಷ್ಟ್ರ ಸಚಿವಾಲಯಕ್ಕೂ ಬಾಂಬ್ ಬೆದರಿಕೆ ಬಂದಿದೆ ಎನ್ನಲಾಗಿದೆ. ದಕ್ಷಿಣ ಮುಂಬೈನಲ್ಲಿರುವ ಮಹಾರಾಷ್ಟ್ರ ಸರ್ಕಾರದ ಆಡಳಿತ ಕೇಂದ್ರ ಕಚೇರಿಯಾದ ಮಂತ್ರಾಲಯಕ್ಕೆ ಬಾಂಬ್ ಸ್ಫೋಟದ ಎಚ್ಚರಿಕೆ ಇಮೇಲ್ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವಿಪತ್ತು ನಿರ್ವಹಣಾ ನಿಯಂತ್ರಣ ಕೊಠಡಿಯಲ್ಲಿ ಪೋಸ್ಟ್ ಮಾಡಲಾದ ಅಧಿಕಾರಿಗೆ ಬಂದ ಅನಾಮಧೇಯ ಇಮೇಲ್‌ನಲ್ಲಿ 48 ಗಂಟೆಗಳ ಒಳಗೆ ಸ್ಫೋಟ ಸಂಭವಿಸಲಿದೆ ಎಂದು ಹೇಳಲಾಗಿತ್ತು. ನಿಗದಿತ ಸ್ಥಳವನ್ನು ಉಲ್ಲೇಖಿಸಿರಲಿಲ್ಲ. ಇದರ ಬೆನ್ನಲ್ಲೇ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕೂಡ ತನಿಖೆ ಕೈಗೆತ್ತಿಕೊಂಡಿದ್ದು, ಮೆರೈನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.