Viral Video: ದೆಹಲಿ ಬಾಂಬ್ ಸ್ಫೋಟ ಹೇಗಿತ್ತು ಗೊತ್ತೇ? ಇಲ್ಲಿದೆ ಭಯಾನಕ ವಿಡಿಯೊ..
ದೆಹಲಿಯ ಕೆಂಪು ಕೋಟೆಯಲ್ಲಿ ಸೋಮವಾರ ರಾತ್ರಿ ನಡೆದ ಭಯಾನಕ ಬಾಂಬ್ (Delhi bomb blast) ಸ್ಪೋಟದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸ್ಥಳೀಯ ಬ್ಲಾಗರ್ ಒಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ ಜನನಿಬಿಡ ಪ್ರದೇಶದಲ್ಲಿ ಉಂಟಾದ ಅತ್ಯಂತ ಭಯಾನಕ ಕ್ಷಣ ಹೇಗಿತ್ತು ಎಂಬುದನ್ನು ಕಾಣಬಹುದಾಗಿದೆ.
ದೆಹಲಿ ಬಾಂಬ್ ಸ್ಪೋಟ. (ಸಂಗ್ರಹ ಚಿತ್ರ) -
ನವದೆಹಲಿ: ದೆಹಲಿಯ ಕೆಂಪು ಕೋಟೆಯ (delhi bomb blast) ಬಳಿ ಸೋಮವಾರ ರಾತ್ರಿ ನಡೆದ ಭಯಾನಕ ಕಾರು ಬಾಂಬ್ ಸ್ಪೋಟದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗಿದೆ. ಸ್ಥಳೀಯ ವ್ಲಾಗರ್ (Vlogger) ಒಬ್ಬರು ಸೆರೆ ಹಿಡಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕಾರು ಸ್ಫೋಟದ ಅನಂತರ ಕಂಡು ಬಂದ ಅವ್ಯವಸ್ಥೆ ಮತ್ತು ಭೀತಿಯ ಕ್ಷಣಗಳನ್ನು ಇದರಲ್ಲಿ ಕಾಣಬಹುದಾಗಿದೆ. ದೀಪಕ್ ಎಂಬವರು ಇಲ್ಲಿ ಸ್ಫೋಟ ಸಂಭವಿಸಿದಾಗ ತಮ್ಮ ಯೂಟ್ಯೂಬ್ ಚಾನೆಲ್‌ಗಾಗಿ (youtube channel) ವಿಷಯವನ್ನು ರೆಕಾರ್ಡ್ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ದೆಹಲಿಯ ಕೆಂಪು ಕೋಟೆ ಬಳಿ ಸೋಮವಾರ ರಾತ್ರಿ ದೀಪಕ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ಗಾಗಿ ಮಾಹಿತಿ ರೆಕಾರ್ಡ್ ಮಾಡುತ್ತಿದ್ದ ವೇಳೆ ಭಾರಿ ಸ್ಪೋಟದ ಸದ್ದು ಕೇಳಿಸಿದೆ. ಸ್ಫೋಟ ಸಂಭವಿಸಿದ ಕೆಲವೇ ಸೆಕೆಂಡುಗಳಲ್ಲಿ ಜನನಿಬಿಡ ಪ್ರದೇಶದಲ್ಲಿ ಭಯಭೀತರಾದ ಕ್ಷಣವನ್ನು ಈ ವಿಡಿಯೊದಲ್ಲಿ ಸೆರೆ ಹಿಡಿಯಲಾಗಿದೆ.
ಇದನ್ನೂ ಓದಿ: Karnataka Weather: ಹವಾಮಾನ ವರದಿ; ಬೀದರ್, ವಿಜಯಪುರ ಸೇರಿ ಈ ಜಿಲ್ಲೆಗಳಲ್ಲಿ ಉಷ್ಣಾಂಶದಲ್ಲಿ ಭಾರಿ ಇಳಿಕೆ ಸಾಧ್ಯತೆ
ದೀಪಕ್ ಅವರು ರೆಕಾರ್ಡ್ ಮಾಡಿರುವ ವಿಡಿಯೊದಲ್ಲಿ ಸ್ಫೋಟವು ಗೋಚರಿಸದಿದ್ದರೂ ಹಿನ್ನೆಲೆಯಲ್ಲಿ ದೊಡ್ಡ ಶಬ್ದ ಕೇಳಿಸುತ್ತದೆ. ತಕ್ಷಣ ಜನರೆಲ್ಲ ಗೊಂದಲದಲ್ಲಿ ಓಡುತ್ತಿರುವ ದೃಶ್ಯವನ್ನು ವಿಡಿಯೊದಲ್ಲಿ ಕಾಣಬಹುದು.
ಜನರು ಆಘಾತದ ವೇಳೆ ಗೊಂದಲದಿಂದ ಓಡುವುದು, ಕೆಲವರು ಕಿರುಚುವುದನ್ನು ಕಾಣಬಹುದು. ಅವರ ಸುತ್ತಲೂ ಸ್ಪೋಟದ ಅವಶೇಷಗಳು ಬಿದ್ದಿರುವುದು ಕೂಡ ನೋಡಬಹುದಾಗಿದೆ.
ಐತಿಹಾಸಿಕ ಕೆಂಪು ಕೋಟೆಯ ಎದುರು ಮೆಟ್ರೋ ನಿಲ್ದಾಣದ ಬಳಿಯ ಜನನಿಬಿಡ ಸಂಚಾರ ಸಿಗ್ನಲ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿದ್ದಾರೆ. ಹಲವಾರು ವಾಹನಗಳು ಹಾನಿಗೊಳಗಾಗಿವೆ.
New visual 🚨🚨
— Avarodh 🚨 (@starvivex) November 10, 2025
Moments before the car blast near the Red Fort a huge blast was heard loud and clear.
Does this look like a CNG blast? This wasn't an accident. This is an explosive blast not an accident.
NIA arrived on the spot#delhiblast #redfort #indiaunderattack… pic.twitter.com/9duFxlVkxn
ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಸ್ಫೋಟಕ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದು, ವಿಧಿವಿಜ್ಞಾನ ತಜ್ಞರು ಸೇರಿದಂತೆ ಹಲವಾರು ತಂಡಗಳು ಸ್ಫೋಟದ ಕಾರಣವನ್ನು ತನಿಖೆ ನಡೆಸುತ್ತಿವೆ. ಭಯೋತ್ಪಾದಕ ದಾಳಿಯ ಸಾಧ್ಯತೆ ಸೇರಿದಂತೆ ವಿವಿಧ ದೃಷ್ಟಿ ಕೋನಗಳಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Bigg Boss Kannada 12: ಮಾಳು ನೇರನುಡಿ ಮನೆಯವರಿಗೆ ಅರಗಿಸಿಕೊಳ್ಳೋಕೆ ಆಗ್ತಿಲ್ವಾ? ರಾಶಿಕಾ ಕಣ್ಣೀರು, ಅಶ್ವಿನಿ ಗರಂ
ರಾಷ್ಟ್ರ ರಾಜಧಾನಿ ಮತ್ತು ನೆರೆಯ ರಾಜ್ಯಗಳಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ದೆಹಲಿಯ ಸ್ಪೋಟಕ್ಕೂ ಫರಿದಾಬಾದ್‌ನಲ್ಲಿ ಪತ್ತೆಯಾಗಿರುವ ಭಯೋತ್ಪಾದಕ ಮಾಡ್ಯೂಲ್‌ಗೆ ಸಂಬಂಧವಿದೆ ಎನ್ನುವ ಕುರಿತು ತನಿಖೆಯಲ್ಲಿ ತಿಳಿದು ಬಂದಿರುವುದರಿಂದ ಇತರ ಸ್ಥಳಗಳಲ್ಲೂ ಸ್ಪೋಟದ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗುತ್ತಿದೆ.
ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಗುಪ್ತಚರ ಬ್ಯೂರೋ ನಿರ್ದೇಶಕ ತಪನ್ ದೇಕಾ, ದೆಹಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ ಮತ್ತು ಎನ್‌ಐಎ ಡಿಜಿ ಸದಾನಂದ ವಸಂತ್ ಡೇಟ್, ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ನಳಿನ್ ಪ್ರಭಾತ್ ಕೂಡ ಪಾಲ್ಗೊಂಡಿದ್ದರು.