Bomb threat: ತಮಿಳುನಾಡು ಸಿಎಂ ಸ್ಟಾಲಿನ್ ನಿವಾಸ, ಬಿಜೆಪಿ ಕಚೇರಿ, ವಿಜಯ್, ತ್ರಿಶಾ ಮನೆಗಳಿಗೆ ಬಾಂಬ್ ದಾಳಿ ಬೆದರಿಕೆ
MK Stalin: ತಮಿಳು ನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ನಟ ವಿಜಯ್, ನಟಿ ತ್ರಿಶಾ ಬಾಂಬ್ ಬೆದರಿಕೆ ಕರೆಗಳನ್ನು ಪಡೆದಿದ್ದಾರೆ. ಚೆನ್ನೈಯ ಬಿಜೆಪಿ ಪ್ರಧಾನ ಕಚೇರಿಗೂ ಬಾಂಬ್ ಇಟ್ಟಿರುವುದಾಗಿ ಯಾರೋ ಬೆದರಿಕೆ ಹಾಕಿದ್ದಾರೆ. ತಪಾಸಣೆಯ ಸಂದರ್ಭದಲ್ಲಿ ಇವು ಹುಸಿ ಬೆದರಿಕೆಗಳು ಎಂದು ಗೊತ್ತಾಗಿವೆ.

-

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಚೆನ್ನೈ ನಿವಾಸ, ರಾಜ್ಯ ಬಿಜೆಪಿ ಪ್ರಧಾನ ಕಚೇರಿ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಅವರ ಮನೆ ಮೇಲೆ ಬಾಂಬ್ ಬೆದರಿಕೆಗಳು ಬಂದಿವೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ತಮಿಳುನಾಡು ರಾಜ್ಯಪಾಲರ ನಿವಾಸಕ್ಕೂ ಇದೇ ರೀತಿಯ ಬೆದರಿಕೆಗಳನ್ನು ನೀಡಲಾಗಿದೆ ಎಂದು ಹಲವಾರು ವರದಿಗಳು ತಿಳಿಸಿವೆ.
ಚೆನ್ನೈನ ತೆನಾಂಪೇಟೆ ಪ್ರದೇಶದಲ್ಲಿರುವ ನಟಿ ತ್ರಿಶಾ ಅವರ ನಿವಾಸಕ್ಕೆ ಬಾಂಬ್ ಬೆದರಿಕೆ ವರದಿಯಾಗಿದ್ದು, ಪೊಲೀಸರು ಸ್ನಿಫರ್ ನಾಯಿಗಳೊಂದಿಗೆ ಶೋಧ ನಡೆಸಿದ್ದಾರೆ. ಆಗಸ್ಟ್ 15ರಂದು ಧ್ವಜಾರೋಹಣ ಸಮಾರಂಭಕ್ಕೂ ಮುನ್ನ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಬಾಂಬ್ ಬೆದರಿಕೆ ಬಂದಿರುವುದಾಗಿ ವರದಿಯಾದ ಒಂದು ತಿಂಗಳ ನಂತರ ಈ ಘಟನೆ ಸಂಭವಿಸಿದೆ. ಈ ಬೆದರಿಕೆ ಕೋಲಾಹಲವನ್ನು ಸೃಷ್ಟಿಸಿತ್ತು. ಪೊಲೀಸ್ ಇಲಾಖೆಯಲ್ಲಿಯೂ ಆತಂಕ ಉಂಟುಮಾಡಿತ್ತು. ಕರೆ ಮಾಡಿದ ಗಣೇಶ್ ಎಂದು ಗುರುತಿಸಲಾದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಜುಲೈನಲ್ಲಿ, ಸ್ಟಾಲಿನ್ ಅವರ ಚೆನ್ನೈ ನಿವಾಸಕ್ಕೂ ಇದೇ ರೀತಿಯ ಬಾಂಬ್ ಬೆದರಿಕೆ ಬಂದಿತ್ತು. ಹಳೆಯ ಆಯುಕ್ತರ ಕಚೇರಿಯ ನಿಯಂತ್ರಣ ಕೊಠಡಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ವಿನೋದ್‌ಕುಮಾರ್ ಎಂದು ಗುರುತಿಸಲಾದ ವ್ಯಕ್ತಿ ಕರೆ ಮಾಡಿ, ಸಿಎಂ ಮನೆಯಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹೇಳಿದ್ದ.
ಸ್ಟಾಲಿನ್‌ಗೆ ಸಂಬಂಧಿಸಿದ ಬಾಂಬ್ ಬೆದರಿಕೆಗಳ ದೀರ್ಘ ಪಟ್ಟಿಗೆ ಇದು ಇನ್ನೊಂದು ಸೇರ್ಪಡೆ. 2024 ರಲ್ಲಿ, ಸ್ಟಾಲಿನ್ ಸ್ಯಾನ್ ಫ್ರಾನ್ಸಿಸ್ಕೋಗೆ ಹೋಗಬೇಕಿದ್ದ ವಿಮಾನವನ್ನು ಗುರಿಯಾಗಿಸಿಕೊಂಡು ಬಂದ ಬಾಂಬ್ ಬೆದರಿಕೆ ಇಮೇಲ್ ಚೆನ್ನೈ ವಿಮಾನ ನಿಲ್ದಾಣದಲ್ಲಿ ಭೀತಿಯನ್ನು ಉಂಟು ಟುಮಾಡಿತ್ತು. ಸಂಪೂರ್ಣ ತನಿಖೆಯ ನಂತರ ಆ ಬೆದರಿಕೆ ಹುಸಿ ಎಂದು ಘೋಷಿಸಲಾಯಿತು. ಆಗಸ್ಟ್ 2023ರಲ್ಲಿ ಸ್ಟಾಲಿನ್ ಅವರ ನಿವಾಸಕ್ಕೆ ಬಾಂಬ್ ಬೆದರಿಕೆ ಒಡ್ಡಿದ್ದಕ್ಕಾಗಿ ಯುವಕನೊಬ್ಬನನ್ನು ಬಂಧಿಸಲಾಗಿತ್ತು.
ಈ ಮಧ್ಯೆ, ಈ ವಾರದ ಆರಂಭದಲ್ಲಿ ಚೆನ್ನೈನ ನೀಲಂಕರೈನಲ್ಲಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರ ನಿವಾಸಕ್ಕೂ ಬಾಂಬ್ ಬೆದರಿಕೆ ಬಂದಿತ್ತು, ಕರೂರ್‌ನಲ್ಲಿ ಅವರ ರಾಜಕೀಯ ರ್ಯಾಲಿಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ ಒಂದು ದಿನದ ನಂತರ ಇದು ಬಂದಿತ್ತು. ಕರೂರಿನಲ್ಲಿ ನಡೆದ ಅವರ ರ್ಯಾಲಿಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದ ದುರಂತದ ನಂತರ, ಶನಿವಾರ ಮಧ್ಯರಾತ್ರಿ ವಿಜಯ್ ಅವರ ನಿವಾಸವನ್ನು ತಲುಪಿದ ನಂತರ, ಅವರ ನಿವಾಸದಲ್ಲಿ ಭದ್ರತೆಯನ್ನು ಹೆಚ್ಚಿಸಲಾಯಿತು. ಚೆನ್ನೈ ನಗರ ಪೊಲೀಸರು ಮತ್ತು CRPF ಸಿಬ್ಬಂದಿಯನ್ನು ಅವರ ಮನೆಯ ಸುತ್ತಲೂ ನಿಯೋಜಿಸಲಾಗಿತ್ತು.