ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ಕೊಚ್ಚಿ ಹೋದ ಕಾರ್: ಒಂದೇ ಕುಟುಂಬದ 7 ಜನ ಸೇರಿ 8 ಮಂದಿ ದುರ್ಮರಣ
Madhya Pradesh Road Accident: ದೇವಸ್ಥಾನದ ಬಳಿ ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ಕಾರ್ ಕೊಚ್ಚಿ ಹೋದ ಪರಿಣಾಮ ಒಡಿಶಾದ ಒಂದೇ ಕುಟುಂಬದ ಏಳು ಸದಸ್ಯರು ಮತ್ತು ಟ್ಯಾಕ್ಸಿ ಚಾಲಕ ಸೇರಿ ಎಂಟು ಜನರು ಮೃತಪಟ್ಟಿದ್ದಾರೆ. ಮಾಹಿತಿ ಪಡೆದ ತಕ್ಷಣ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ವಾಹನವನ್ನು ಚರಂಡಿಯಿಂದ ಹೊರತೆಗೆಯಲಾಗಿದೆ.
ಸಾಂದರ್ಭಿಕ ಚಿತ್ರ -
ಭೋಪಾಲ್, ಸೆ. 19: ದೇವಸ್ಥಾನದ ಬಳಿ ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ಕಾರು ಕೊಚ್ಚಿ ಹೋದ ಪರಿಣಾಮ ಒಡಿಶಾದ ಒಂದೇ ಕುಟುಂಬದ ಏಳು ಸದಸ್ಯರು ಮತ್ತು ಟ್ಯಾಕ್ಸಿ ಚಾಲಕ ಸೇರಿ ಎಂಟು ಜನರು ಮೃತಪಟ್ಟಿದ್ದಾರೆ (Accident). ಮಧ್ಯ ಪ್ರದೇಶದ (Madhya Pradesh) ಅಗರ್‌ಮಾಲ್ವಾ ಜಿಲ್ಲೆಯ ನಲ್ಖೇಡಾದಲ್ಲಿರುವ ಮಾ ಬಾಗಲಮುಖಿ ಬಳಿ ದುರಂತ ಸಂಭವಿಸಿದೆ. ಮೃತರಲ್ಲಿ ಇಬ್ಬರು ಮಹಿಳೆಯರು, ಮೂವರು ಪುರುಷರು ಮತ್ತು ಮೂವರು ಮಕ್ಕಳು ಸೇರಿದ್ದಾರೆ.
ಮೃತರ ಗುರುತು ಪತ್ತೆಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಟುಂಬವು ಉಜ್ಜಯಿನಿಗೆ ಪ್ರಯಾಣ ಬೆಳೆಸಿ ನಲ್ಖೇಡಾಗೆ ಭೇಟಿ ನೀಡಲು ಟ್ಯಾಕ್ಸಿ ಬಾಡಿಗೆಗೆ ಪಡೆದಿತ್ತು ಎಂದು ಅಗರ್ಮಾಲ್ವಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ದಿಲೀಪ್ ಸೋನಿ ಹೇಳಿದ್ದಾರೆ. ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಕಾರ್ ದೇವಾಲಯದ ಬಳಿ ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ಕೊಚ್ಚಿ ಹೋಗಿದೆ ಎಂದು ಅವರು ಹೇಳಿದರು.
ಮಧ್ಯ ಪ್ರದೇಶದಲ್ಲಿ ಚರಂಡಿಗೆ ಬಿದ್ದ ಕಾರ್:
MP में कार ड्राइवर की लापरवाही से बड़ा हादसा, 8 की मौत
— Ravish Pal Singh (@ReporterRavish) September 19, 2026
मध्य प्रदेश के आगर मालवा जिले के नलखेड़ा में मां बगलामुखी मंदिर के पास शनिवार को बड़ा हादसा हो गया. मंदिर के समीप बरसाती नाले में श्रद्धालुओं से भरी कार बह गई. हादसे में कार सवार 8 श्रद्धालुओं की मौत हो गई. मृतकों में 3… pic.twitter.com/BoB3weSlXH
ಮಾಹಿತಿ ಪಡೆದ ತಕ್ಷಣ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ವಾಹನವನ್ನು ಚರಂಡಿಯಿಂದ ಹೊರತೆಗೆಯಲಾಗಿದೆ. ಕೂಡಲೇ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಾಗಲೇ ಎಲ್ಲರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಭೀಕರ ಅಪಘಾತ; ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ತಂದೆ-ತಾಯಿ, ಮಗಳ ಸಾವು!
ಈ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 37 ಮಿ.ಮೀ. ಮಳೆಯಾಗಿದ್ದು, ದೇವಾಲಯದ ಮುಂಭಾಗದಲ್ಲಿರುವ ಚರಂಡಿ ಅಪಾಯಕಾರಿಯಾಗಿ ತುಂಬಿ ಹರಿಯುತ್ತಿತ್ತು ಎಂದು ಜಿಲ್ಲಾಧಿಕಾರಿ ಶೇರ್ ಸಿಂಗ್ ಮೀನಾ ತಿಳಿಸಿದ್ದಾರೆ. ಇದೇನು ಭಾರಿ ಮಳೆಯಾಗಿರಲಿಲ್ಲ. ಘಟನೆಯ ನಂತರ ಸಿಟ್ಟಿಗೆದ್ದ ಸ್ಥಳೀಯರು ಪ್ರತಿಭಟನೆ ನಡೆಸಿದರು. ಚರಂಡಿ ದಾಟಲು ಸೇತುವೆ ಸೇರಿದಂತೆ ಪ್ರದೇಶದ ಅಭಿವೃದ್ಧಿಗಾಗಿ ಒತ್ತಾಯಿಸಿದರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಭೀಕರ ಅಪಘಾತ
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮೇಲ್ಸೇತುವೆಯಿಂದ ಬಿದ್ದ ಪರಿಣಾಮ ಮಹಿಳೆ ಮೃತಪಟ್ಟಿರುವ ಘಟನೆ ಮಂಡ್ಯದ ಬಳಿಯ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ನಡೆದಿದೆ. ಉಮ್ಮಡಹಳ್ಳಿ ಗೇಟ್ ಸಮೀಪ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ, ಕಾರು ಎಕ್ಸ್‌ಪ್ರೆಸ್‌ವೇ ಫ್ಲೈ ಓವರ್‌ನಿಂದ ಹಾರಿ ಅಂಡರ್ ಪಾಸ್‌ಗೆ ಬಿದ್ದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಮೃತ ಮಹಿಳೆಯನ್ನು ಅಂಜನಾ (32) ಎಂದು ಗುರುತಿಸಲಾಗಿದೆ. ಅಂಜನಾ ಬೆಂಗಳೂರು, ಮೈಸೂರಿನಲ್ಲಿ ಸ್ವಂತ ಸಾಫ್ಟ್‌ವೇರ್ ಕಂಪನಿ ಹೊಂದಿದ್ದ ಹರೀಶ್ ಎಂಬವವರ ಪತ್ನಿಯಾಗಿದ್ದು, ಸ್ನೇಹಿತ ನಿತಿನ್ ಜತೆಗೆ ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ನಡೆದಿದೆ.