ʼʼಅಹಂಕಾರಿಗಳಿಂದ ದೂರವಿರಿʼʼ: ರಾಹುಲ್ ಗಾಂಧಿ ಭೇಟಿಗೂ ಮುನ್ನ ಮೋಹನ್ ಭಾಗವತ್ ಕರೆ; ರಾಜಕೀಯ ಚರ್ಚೆ ಶುರು
RSS Chief Mohan Bhagwat: ಅಹಂಕಾರದಿಂದ ವರ್ತಿಸುವ ವ್ಯಕ್ತಿಯೊಬ್ಬ ಎಲ್ಲೆಡೆ ತನ್ನ ಅಧಿಕಾರವೇ ನಡೆಯುತ್ತದೆ ಮತ್ತು ಎಲ್ಲವೂ ತನ್ನ ಇಚ್ಛೆಯಂತೆ ನಡೆಯಬೇಕು ಎಂದು ಭಾವಿಸುತ್ತಾನೆ. ಆದರೆ ವಾಸ್ತವ ಪರಿಸ್ಥಿತಿ ಹಾಗಿರುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ -
ಭೋಪಾಲ್, ಸೆ. 19: ಅಹಂಕಾರದಿಂದ ವರ್ತಿಸುವ ವ್ಯಕ್ತಿಯೊಬ್ಬ ಎಲ್ಲೆಡೆ ತನ್ನ ಅಧಿಕಾರವೇ ನಡೆಯುತ್ತದೆ ಮತ್ತು ಎಲ್ಲವೂ ತನ್ನ ಇಚ್ಛೆಯಂತೆ ನಡೆಯಬೇಕು ಎಂದು ಭಾವಿಸುತ್ತಾರೆ. ಆದರೆ ವಾಸ್ತವ ಪರಿಸ್ಥಿತಿ ಹಾಗಿರುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ. ಉಜ್ಜಯಿನಿಯಲ್ಲಿ ಮಾತನಾಡಿದ ಅವರು, ಅಹಂಕಾರದಿಂದ ವರ್ತಿಸುವವರಿಂದ ದೂರವಿರುವಂತೆ ಎಚ್ಚರಿಕೆ ನೀಡಿದರು. ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ʼಛತ್ರೋನ್ ಕಿ ಗೂಂಜ್ʼ ಕಾರ್ಯಕ್ರಮಕ್ಕೆ ನಡೆಯಲಿದೆ. ಅದಕ್ಕೂ ಮುನ್ನ ಭಾಗವತ್ ಈ ಹೇಳಿಕೆ ನೀಡಿದ್ದಾರೆ.
ಭಾಗವತ್ ತಮ್ಮ ಹೇಳಿಕೆಯಲ್ಲಿ ರಾಹುಲ್ ಗಾಂಧಿ ಅಥವಾ ಯಾವುದೇ ಇತರ ರಾಜಕೀಯ ನಾಯಕರ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಅವರು ಈ ಮಾತುಗಳನ್ನು ಹೇಳಿದ ಸಮಯ ಮತ್ತು ಎಲ್ಲವನ್ನೂ ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂಬ ಮನೋಭಾವದ ವಿರುದ್ಧ ಪದೇ ಪದೆ ಎಚ್ಚರಿಕೆ ನೀಡಿದ್ದು, ಅವರ ಭಾಷಣಕ್ಕೆ ರಾಜಕೀಯ ಆಯಾಮ ನೀಡಿದೆ.
ಧರ್ಮದ ಕುರಿತು ಜೆನ್-ಝೀ (Gen Z) ಪೀಳಿಗೆಯ ಚರ್ಚೆಗೆ ಮೋಹನ್ ಭಾಗವತ್ ಮೆಚ್ಚುಗೆ ವ್ಯಕ್ತಪಡಿಸಿದರು. ಜೆನ್-ಝೀ ಪೀಳಿಗೆಯು ಧರ್ಮ ಮತ್ತು ಕರ್ತವ್ಯಗಳ ಕುರಿತು ಗಂಭೀರ ಚರ್ಚೆ ನಡೆಸುತ್ತಿರುವುದನ್ನು ಕಂಡು ತಮಗೆ ಅಪಾರ ಸಂತಸವಾಗಿದೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯು ಧರ್ಮದ ಆಲೋಚನೆಗಳಲ್ಲಿ ತೊಡಗಿಸಿಕೊಳ್ಳುವುದು ತೀರಾ ವಿರಳ. ʼಭಗವದ್ಗೀತೆʼ, ʼರಾಮಾಯಣʼ ಮತ್ತು ಇತರ ಪವಿತ್ರ ಗ್ರಂಥಗಳನ್ನು ಕೇವಲ ಉದ್ಯೋಗದಿಂದ ನಿವೃತ್ತರಾದ ನಂತರ ಓದಬೇಕಾದ ಪುಸ್ತಕಗಳು ಎಂದು ಬಿಂಬಿಸಲಾಗಿದೆ. ಆದರೆ ವಾಸ್ತವದಲ್ಲಿ ಅದು ಹಾಗಲ್ಲ ಎಂದು ಭಾಗವತ್ ಸ್ಪಷ್ಟಪಡಿಸಿದ್ದಾರೆ.
ಪ್ರೇಕ್ಷಕರು ಬದಲಾದಾಗ ಭಾಷೆಯಲ್ಲೂ ಬದಲಾವಣೆ; ಮೋಹನ್ ಭಾಗವತ್ ಅಮೆರಿಕ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ
ಸೂರ್ಯ ಉದಯಿಸುವುದು ಮತ್ತು ಅಸ್ತಮಿಸುವುದು ನಿಶ್ಚಿತ. ನೀವು ಅದನ್ನು ನಂಬಿದರೂ, ನಂಬದಿದ್ದರೂ ಅದು ತನ್ನ ನಿಯಮದಂತೆಯೇ ನಡೆಯುತ್ತದೆ. ಧರ್ಮದ ಸತ್ಯವೂ ಇದೇ ರೀತಿಯಾಗಿದೆ ಎಂದು ಅವರು ವಿವರಿಸಿದ್ದಾರೆ. ನಮ್ಮ ಸಂಪ್ರದಾಯವನ್ನು ಹೇಗೆ ಪೂಜಿಸುತ್ತೇವೆಯೋ, ಅಷ್ಟೇ ಇತರರ ಸಂಪ್ರದಾಯ ಪೂಜಾ ವಿಧಾನಗಳನ್ನೂ ಗೌರವಿಸುತ್ತೇವೆ ಎಂದು ಅವರು ಹೇಳಿದರು.
ಭಾರತ ಮಹಾಶಕ್ತಿಯಲ್ಲ, ವಿಶ್ವಗುರು
ಭಾರತವು ಮಹಾಶಕ್ತಿಯಾಗಿ ನಿಲ್ಲದೆ, ಮಾನವೀಯತೆಗೆ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ವಿಶ್ವಗುರು ಆಯಿತು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇತ್ತೀಚೆಗೆ ಕೆನಡಾದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದರು. ಭಾರತದ ಸಾಂಸ್ಕೃತಿಕ ಮತ್ತು ನಾಗರಿಕತೆಯ ಡಿಎನ್‌ಎ ಜಾಗತಿಕ ಸ್ನೇಹ, ಆಶ್ರಯ ಹಾಗೂ ವೈವಿಧ್ಯತೆಯ ಮೇಲಿನ ಗೌರವದಲ್ಲಿ ಬೇರೂರಿದೆ ಎಂದು ಅವರು ಒತ್ತಿ ಹೇಳಿದ್ದರು.
ಜಗತ್ತಿನಾದ್ಯಂತ ಕಿರುಕುಳ ಮತ್ತು ಯುದ್ಧದಿಂದ ಪಲಾಯನ ಮಾಡಿ ಬರುವವರಿಗೆ ಭಾರತವು ಐತಿಹಾಸಿಕವಾಗಿ ಆಶ್ರಯ ನೀಡಿರುವುದನ್ನು ಒತ್ತಿ ಹೇಳಿದ್ದರು. ಭಾರತವನ್ನು ಸೂಪರ್‌ಪವರ್ ಎಂದು ಕರೆಯಬಹುದು. ಆದರೆ ಅದು ಸೂಪರ್‌ಪವರ್ ಆಗಿಲ್ಲ. ಭಾರತವು ಜಗತ್ತಿನ ಸೇವೆ ಮಾಡಿತು. ಮಹಾಶಕ್ತಿಯಾಗುವ ಬದಲು, ತನ್ನ ಸ್ವಭಾವ ಮತ್ತು ಗುಣಗಳಿಂದಲೇ ಅದು ವಿಶ್ವಗುರುವಾಯಿತು ಎಂದು ಅವರು ಹೇಳಿದ್ದರು.