Caste Census: ಬಿಗ್ ಬ್ರೇಕಿಂಗ್! ದೇಶಾದ್ಯಂತ ಜಾತಿಗಣತಿ ನಡೆಸಲು ಮೋದಿ ಸರ್ಕಾರ ನಿರ್ಧಾರ
Centre's Big Announcement on Caste Census: ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆದಿದ್ದು, ದೇಶಾದ್ಯಂತ ಜಾತಿಗಣತಿ ನಡೆಸುವ ಬಗ್ಗೆ ಘೋಷಿಸಲಾಗಿದೆ. ಜನಗಣತಿಯ ಭಾಗವಾಗಿಯೇ ಜಾತಿಗಣತಿ ನಡೆಸುವುದಾಗಿ ಕೇಂದ್ರ ಘೋಷಿಸಿದೆ.


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಜಾತಿಗಣತಿ(Caste Census) ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ರಾಷ್ಟ್ರೀಯ ಜನಗಣತಿಯ ಜೊತೆ ಜಾತಿಗಣತಿಯೂ ನಡೆಯಲಿದೆ. ಇದೇ ವರ್ಷ ಕೇಂದ್ರದಿಂದಲೇ ಜಾತಿಗಣತಿ ನಡೆಯಲಿದೆ. ಜಾತಿಗಣತಿ ಬಗ್ಗೆ ಕೆಲವರು ರಾಜಕೀಯ ಮಾಡುತ್ತಿದೆ ಎಂದು ಅವರು ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದ್ದಾರೆ.
ಅಶ್ವಿನಿ ವೈಷ್ಣವ್ ಪತ್ರಿಕಾಗೋಷ್ಠಿ ವಿಡಿಯೊ ಇಲ್ಲಿದೆ
#WATCH | Delhi | "Cabinet Committee on Political Affairs has decided today that Caste enumeration should be included in the forthcoming census," says Union Minister Ashiwini Vaishnaw on Union Cabinet decisions. pic.twitter.com/0FtK0lg9q7
— ANI (@ANI) April 30, 2025
ಪ್ರತ್ಯೇಕ ಜಾತಿಗಣತಿ ನಡೆಸುವ ಅವಶ್ಯಕತೆ ಇಲ್ಲ. ಜನಗಣತಿಯ ಜೊತೆಗೇ ಅದನ್ನು ನಡೆಸಲಾಗುತ್ತದೆ. ಈ ಹಿಂದಿನ ಸರ್ಕಾರಗಳು ಜಾತಿಗಣತಿಯಲ್ಲಿ ಸಾಕಷ್ಟು ರಾಜಕೀಯ ನಡೆದಿವೆ. ನಾವು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲ್ಲ. ಕಾಂಗ್ರೆಸ್ ಕೇವಲ ಜಾತಿಗಣತಿಯನ್ನು ಮಾಡಿತ್ತು. ಹಲವಾರು ರಾಜ್ಯಗಳಲ್ಲಿ ನಡೆಸಲಾದ ಜಾತಿ ಜನಗಣತಿ ಕಾರ್ಯವು "ಅವೈಜ್ಞಾನಿಕ" ಎಂದು ವೈಷ್ಣವ್ ಹೇಳಿದರು. 2022 ರಲ್ಲಿ, ಇಂಡಿ ಒಕ್ಕೂಟದಲ್ಲಿದ್ದ ಬಿಹಾರ ಸರ್ಕಾರ, ಸ್ವತಂತ್ರ ಭಾರತದಲ್ಲಿ ಎಲ್ಲಾ ಜಾತಿ ಗಣತಿ ನಡೆಸಿದ ಮೊದಲ ರಾಜ್ಯವಾಗಿದೆ. ಆದರೆ ಅದು ಸರಿಯಾದ ಕ್ರಮವಹಿಸಿ ನಡೆದಿರುವ ಜಾತಿಗಣತಿ ಅಲ್ಲ ಎಂದು ಅಶ್ವಿನಿ ವೈಷ್ಣವ್ ಆರೋಪಿಸಿದ್ದಾರೆ.
On caste census included with national census, Union Minister Ashiwini Vaishnaw says, "Congress govts have always opposed the caste census. In 2010, the late Dr Manmohan Singh said that the matter of caste census should be considered in the Cabinet. A group of ministers was… pic.twitter.com/xTzQeVYNYV
— ANI (@ANI) April 30, 2025
ಇನ್ನು 1931ರನಂತರ ಇದುವರೆಗೆ ಜಾತಿಗಣತಿ ನಡೆದೇ ಇಲ್ಲ. ಇದೀಗ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿರುವುದರಿಂದ ಇದೇ ವರ್ಷ ಜಾತಿಗಣತಿ ನಡೆಯುವ ಸಾಧ್ಯತೆ ದಟ್ಟವಾಗಿದೆ.