ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿಜೆಪಿ ಅಭಿಜಿತ್‌ ದೀಪ್ಕೆ ಕಸ್ಟಡಿಯಲ್ಲಿದ್ದಗಾಲೇ ಅಜ್ಜಿ ನಿಧನ; ಸೋಶಿಯಲ್‌ ಮೀಡಿಯಾದ ಆರೋಪಗಳಿಗೆ ದೆಹಲಿ ಪೋಸರಿಂದ ಸ್ಪಷ್ಟನೆ

ದೆಹಲಿಯಲ್ಲಿ ಪೊಲೀಸ್ ವಶದಲ್ಲಿರುವ ಕಾಕ್ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರಿಗೆ ಅವರ ಅಜ್ಜಿಯ ನಿಧನದ ಸುದ್ದಿಯನ್ನು ತಲುಪಿಸಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸ್ವಗ್ರಾಮದಲ್ಲಿ ಅಭಿಜಿತ್ ಅವರ ಅಜ್ಜಿ ಸಾವಿತ್ರಿಬಾಯಿ ಶಂಕರ್‌ರಾವ್ ದೀಪ್ಕೆ (85) ಅವರು ದೀರ್ಘಕಾಲದ ಅನಾರೋಗ್ಯದಿಂದ ಶನಿವಾರ ಬೆಳಿಗ್ಗೆ ನಿಧನರಾಗಿದ್ದರು.

CJP ಅಭಿಜಿತ್‌ ಕಸ್ಟಡಿಯಲ್ಲಿದ್ದಗಾಲೇ ಅಜ್ಜಿ ನಿಧನ; ಪೊಲೀಸರು ಹೇಳಿದ್ದೇನು?

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Oct 11, 2026 11:04 AM

ನವದೆಹಲಿ: ದೆಹಲಿಯಲ್ಲಿ ಪೊಲೀಸ್ ವಶದಲ್ಲಿರುವ ಕಾಕ್ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ (Abhijeet Dipke) ಅವರಿಗೆ ಅವರ ಅಜ್ಜಿಯ ನಿಧನದ ಸುದ್ದಿಯನ್ನು ತಲುಪಿಸಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಮುಂಬೈನಿಂದ ದೆಹಲಿಗೆ ಆಗಮಿಸಿದ್ದ ಸಿಜೆಪಿ ನಾಯಕರನ್ನು ಪೊಲೀಸರು ಶನಿವಾರ ವಿಮಾನ ನಿಲ್ದಾಣದಲ್ಲೇ ವಶಕ್ಕೆ ಪಡೆದಿದ್ದರು.

ಇದರ ಬೆನ್ನಲ್ಲೇ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸ್ವಗ್ರಾಮದಲ್ಲಿ ಅಭಿಜಿತ್ ಅವರ ಅಜ್ಜಿ ಸಾವಿತ್ರಿಬಾಯಿ ಶಂಕರ್‌ರಾವ್ ದೀಪ್ಕೆ (85) ಅವರು ದೀರ್ಘಕಾಲದ ಅನಾರೋಗ್ಯದಿಂದ ಶನಿವಾರ ಬೆಳಿಗ್ಗೆ ನಿಧನರಾಗಿದ್ದರು. ಆದರೆ, "ಪೊಲೀಸ್ ವಶದಲ್ಲಿರುವ ಅಭಿಜಿತ್ ಅವರಿಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿಲ್ಲ" ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಅಧಿಕೃತ ಸ್ಪಷ್ಟನೆ ನೀಡಿದ್ದಾರೆ.

ದೀಪ್ಕೆ ಅವರಿಗೆ ಅವರ ಅಜ್ಜಿಯ ಸಾವಿನ ಸುದ್ದಿಯನ್ನು ಅತ್ಯಂತ ಸಂವೇದನಾಶೀಲತೆಯಿಂದ ತಿಳಿಸಲಾಗಿದೆ. ಮಾನವೀಯತೆಯ ಆಧಾರದ ಮೇಲೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವರ ಸ್ವಗ್ರಾಮಕ್ಕೆ ಮರಳಲು ದೆಹಲಿ ಪೊಲೀಸರು ಅಗತ್ಯವಿರುವ ಎಲ್ಲಾ ಪ್ರಯಾಣದ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಕಸ್ಟಡಿಯಲ್ಲೇ ಮುಂದುವರಿಯಬೇಕೇ ಅಥವಾ ಅಂತ್ಯಕ್ರಿಯೆಗೆ ತೆರಳಬೇಕೇ ಎನ್ನುವ ನಿರ್ಧಾರವನ್ನು ಅವರಿಗೇ ಬಿಡಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿದ್ದಾರೆ.

"ಸಮವಸ್ತ್ರ ಹರಿದು, ಕಚ್ಚಿದ್ದಾರೆ"; ರಾಹುಲ್ ಗಾಂಧಿ ಬಂಧನದ ವೇಳೆ ಪ್ರತಿಭಟನಾಕಾರರಿಂದ ದೆಹಲಿ ಪೊಲೀಸರ ಮೇಲೆ ಹಲ್ಲೆ?

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ತಮ್ಮ ಸ್ವಗ್ರಾಮವಾದ ಸಂತುಕ್ ಪಿಂಪ್ರಿಯಲ್ಲಿ, ಸಾವಿತ್ರಿಬಾಯಿಯವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಅಭಿಜೀತ್ ದೀಪ್ಕೆ ಪೋಷಕರಾದ ಭಗವಾನ್ ದೀಪ್ಕೆ ಮತ್ತು ಅನಿತಾ ಸದ್ಯ ಛತ್ರಪತಿ ಸಂಭಾಜಿನಗರದಲ್ಲಿದ್ದಾರೆ. ಅದರಂತೆ, ತಾಯಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹಿಂಗೋಲಿಯತ್ತ ಪ್ರಯಾಣ ಬೆಳೆಸಿದ್ದು, ಇತ್ತ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಂಭಾಜಿನಗರದ ಎಂಐಡಿಸಿ ವಾಲುಜ್ ಪ್ರದೇಶದಲ್ಲಿರುವ ದೀಪ್ಕೆ ನಿವಾಸಕ್ಕೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಬಿಗಿಗೊಳಿಸಲಾಗಿದೆ.