ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಅಜ್ಜಿಯ ಸಾವಿನ ಬಗ್ಗೆ ಪೊಲೀಸರು ಬಿಡುಗಡೆ ಮಾಡಿರುವ ವಿಡಿಯೊ ಎಡಿಟ್ ಮಾಡಿದ್ದು": ಅಭಿಜೀತ್ ದೀಪ್ಕೆ ಗಂಭೀರ ಆರೋಪ

edited video allegation: ತಮ್ಮ ಅಜ್ಜಿಯ ನಿಧನದ ಸುದ್ದಿಯನ್ನು ತಮಗೆ ತಿಳಿಸಿದ ಕ್ಷಣದ ಕುರಿತು ದೆಹಲಿ ಪೊಲೀಸರು ಬಿಡುಗಡೆ ಮಾಡಿರುವ ವಿಡಿಯೋ ಎಡಿಟ್ ಮಾಡಲ್ಪಟ್ಟಿದೆ ಎಂದು ಅಭಿಜೀತ್ ದೀಪ್ಕೆ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಅಜ್ಜಿಯೊಂದಿಗೆ ವಾಸಿಸುತ್ತಿದ್ದ ಸೋದರಸಂಬಂಧಿಯನ್ನು ಸಂಪರ್ಕಿಸಲು ತಮ್ಮ ಫೋನ್ ಬಳಸಲು ಪೊಲೀಸರು ಏಕೆ ಅವಕಾಶ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪೊಲೀಸರ ವಿರುದ್ಧ ಅಭಿಜೀತ್ ದೀಪ್ಕೆ ಗಂಭೀರ ಆರೋಪ

ದೆಹಲಿ ಪೊಲೀಸರ ವಿರುದ್ಧ ಅಭಿಜೀತ್ ದೀಪ್ಕೆ ಗಂಭೀರ ಆರೋಪ -

Priyanka P
Priyanka P Oct 12, 2026 3:35 PM

ಮುಂಬೈ, ಅ.12: ತಮ್ಮ ಅಜ್ಜಿಯ ನಿಧನದ ಸುದ್ದಿಯನ್ನು ತಮಗೆ ತಿಳಿಸಿದ ಕ್ಷಣದ ಕುರಿತು ದೆಹಲಿ ಪೊಲೀಸರು ಬಿಡುಗಡೆ ಮಾಡಿರುವ ವಿಡಿಯೋ ಎಡಿಟ್ ಮಾಡಲ್ಪಟ್ಟಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ (Abhijeet Dipke) ಗಂಭೀರ ಆರೋಪ ಮಾಡಿದ್ದಾರೆ. ಸಂಪೂರ್ಣ ವಿಡಿಯೋವನ್ನು ಬಿಡುಗಡೆ ಮಾಡುವಂತೆ ದೀಪ್ಕೆ ಪೊಲೀಸರಿಗೆ ಸವಾಲು ಹಾಕಿದರು. ಅಭಿಜೀತ್ ದೀಪ್ಕೆ ಅವರ ಅಜ್ಜಿ ನಿಧನರಾದ ವಿಷಯ ತಿಳಿದ ಬಳಿಕ, ಅವರಿಗೆ ಪ್ರಯಾಣದ ವ್ಯವಸ್ಥೆ ಮಾಡಿಕೊಡುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಿರುವ ವಿಡಿಯೋವನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಅಕ್ಟೋಬರ್ 10ರ ಶನಿವಾರದಂದು ಸಿಜೆಪಿ ನಾಯಕ ಪೊಲೀಸ್ ವಶದಲ್ಲಿದ್ದಾಗ ಅವರಿಗೆ ಈ ಸುದ್ದಿಯನ್ನು ತಿಳಿಸಿರಲಿಲ್ಲ ಎಂಬ ಗಂಭೀರ ಆರೋಪಗಳನ್ನು ಸುಳ್ಳು ಎಂದು ಸಾಬೀತುಪಡಿಸಲು ಮತ್ತು ಅದಕ್ಕೆ ಪ್ರತಿಯಾಗಿ ಸಾಕ್ಷ್ಯ ಒದಗಿಸಲು ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದರು. ಪೊಲೀಸರ ಸ್ಪಷ್ಟನೆಗೆ ಪ್ರತಿಕ್ರಿಯಿಸಿರುವ ದೀಪ್ಕೆ, ತಮ್ಮ ಅಜ್ಜಿಯೊಂದಿಗೆ ವಾಸಿಸುತ್ತಿದ್ದ ಸೋದರಸಂಬಂಧಿಯನ್ನು ಸಂಪರ್ಕಿಸಲು ತಮ್ಮ ಫೋನ್ ಬಳಸಲು ಪೊಲೀಸರು ಏಕೆ ಅವಕಾಶ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಮಾತನಾಡಿದ ಅವರು, “ದೆಹಲಿ ಪೊಲೀಸರೇ, ನಿಮಗೆ ಧೈರ್ಯವಿದ್ದರೆ, ನನ್ನ ಸೋದರಸಂಬಂಧಿ ಜೊತೆ ಮಾತನಾಡಲು ಅವಕಾಶ ನೀಡಿ, ಎರಡು ನಿಮಿಷಗಳ ಕಾಲ ನನ್ನ ಫೋನ್ ನೀಡಿ ಮತ್ತು ನನ್ನ ವಕೀಲರೊಂದಿಗೆ ಮಾತನಾಡಲು ಅವಕಾಶ ನೀಡಿ ಎಂದು ನಾನು ಪದೇ ಪದೇ ಕೇಳುತ್ತಿದ್ದ ಸಂಪೂರ್ಣ ವಿಡಿಯೋವನ್ನು ಬಿಡುಗಡೆ ಮಾಡಿ” ಎಂದು ಹೇಳಿದರು.

ಇಲ್ಲಿದೆ ವಿಡಿಯೊ:



“ನೀವು ಆ ವಿಡಿಯೋವನ್ನು ಏಕೆ ಬಿಡುಗಡೆ ಮಾಡುತ್ತಿಲ್ಲ? ನೀವು ಕೇವಲ ಎಡಿಟ್ ಮಾಡಿದ್ದನ್ನು ಮಾತ್ರ ತೋರಿಸುತ್ತಿದ್ದೀರಿ. ನಿಮಗೆ ಧೈರ್ಯವಿದ್ದರೆ, ಇಡೀ ವಿಡಿಯೋವನ್ನು ಬಿಡುಗಡೆ ಮಾಡಿ. ಆಗ ಬಂಧನದ ನಂತರ ಅಥವಾ ಕಸ್ಟಡಿಯಲ್ಲಿದ್ದಾಗ ನನ್ನ ಮೂಲಭೂತ ಹಕ್ಕುಗಳನ್ನು ನೀವು ಹೇಗೆ ನಿರಾಕರಿಸಿದ್ದೀರಿ ಎಂಬುದು ಜನರಿಗೆ ಅರ್ಥವಾಗುತ್ತದೆ. ಬಂಧನ ಅಥವಾ ವಶಕ್ಕೆ ಪಡೆದ ನಂತರ ವ್ಯಕ್ತಿಯೊಬ್ಬನಿಗೆ ತನ್ನ ವಕೀಲರ ಜೊತೆ ಫೋನ್ ಮೂಲಕ ಮಾತನಾಡಲು ಅವಕಾಶ ನೀಡುವುದು ಕಾನೂನುಬದ್ಧ ಹಕ್ಕಾಗಿದೆ” ಎಂದು ದೀಪ್ಕೆ ಹೇಳಿದ್ದಾರೆ.

ಅಜ್ಜಿಯ ಅಂತ್ಯಕ್ರಿಯೆಗಾಗಿ ಮಹಾರಾಷ್ಟ್ರಕ್ಕೆ ಮರಳಿದ ಅಭಿಜಿತ್ ದೀಪ್ಕೆ; ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ಪ್ರತಿಜ್ಞೆ

ಅಕ್ಟೋಬರ್ 11 ರ ಭಾನುವಾರದಂದು ದೆಹಲಿ ಪೊಲೀಸರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾದ ವಿಡಿಯೋದಲ್ಲಿ, ಪೊಲೀಸರು ದೀಪ್ಕೆ ಜೊತೆ ಮಾತನಾಡುತ್ತಿರುವುದನ್ನು ನೋಡಬಹುದು. ಸಿಜೆಪಿ ನಾಯಕ ತನ್ನ ಕೈಗಳಿಂದ ಮುಖ ಮುಚ್ಚಿಕೊಳ್ಳುತ್ತಿದ್ದಂತೆ, ಪೊಲೀಸ್ ಅವರಿಗೆ ನೀರು ನೀಡಿದ್ದಾರೆ. ಮಹಿಳಾ ಪೊಲೀಸ್, ದೀಪ್ಕೆ ಅವರ ಅಜ್ಜಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಈ ವೇಳೆ ಪುರುಷ ಅಧಿಕಾರಿ ಮನೆಗೆ ಮರಳಲು ಬಯಸುತ್ತೀರಾ ಎಂದು ದೀಪ್ಕೆ ಅವರಲ್ಲಿ ಕೇಳಿದ್ದಾರೆ. ಪೊಲೀಸರು ಅವರಿಗೆ ಬಸ್ ಅಥವಾ ವಿಮಾನ ವ್ಯವಸ್ಥೆ ಮಾಡಬಹುದು ಎಂದು ಹೇಳಿದರ. ಆದರೆ, ದೀಪ್ಕೆ ಆ ಪ್ರಸ್ತಾಪವನ್ನು ನಿರಾಕರಿಸುತ್ತಾ, ನಾನು ಇಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ.

ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದೀಪ್ಕೆ ಅವರ ಅಜ್ಜಿ ಶನಿವಾರ (ಅ.10) ಬೆಳಗ್ಗೆ 11.30 ಕ್ಕೆ ಹಿಂಗೋಲಿಯಲ್ಲಿ ನಿಧನರಾದರು. ಅದಕ್ಕೂ ಮುನ್ನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ್ದ ಅಭಿಜೀತ್ ದೀಪ್ಕೆ, ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರನ್ನು ವಿಮಾನದೊಳಗೆ ಬಂಧಿಸಲಾಯಿತು. ನಂತರ ಭಾನುವಾರ (ಅ.11) ಮೂವರನ್ನು ಷರತ್ತುಬದ್ಧ ಜಾಮೀನಿನೊಂದಿಗೆ ಬಿಡುಗಡೆ ಮಾಡಲಾಯಿತು.