ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohammed Shami: ಖ್ಯಾತ ಕ್ರಿಕೆಟಿಗನ ಪತ್ನಿ-ಮಗಳ ವಿರುದ್ಧ ಕೊಲೆ ಯತ್ನ; ಕೇಸ್‌ ದಾಖಲು

ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿಯ ಪತ್ನಿ ಹಸಿನ್ ಜಹಾನ್ ತನ್ನ ನೆರೆಹೊರೆಯವರೊಂದಿಗೆ ಜಗಳವಾಡಿದ ಘಟನೆಯ ವಿಡಿಯೋ ವೈರಲ್ ಆಗಿದೆ. ಪಶ್ಚಿಮ ಬಂಗಾಳದ ಬಿರ್ಭುಮ್‌ನಲ್ಲಿ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಖ್ಯಾತ ಕ್ರಿಕೆಟಿಗನ ಪತ್ನಿ-ಮಗಳ ವಿರುದ್ಧ ಕೊಲೆ ಯತ್ನ!

Profile Vishakha Bhat Jul 18, 2025 1:43 PM

ಬಿರ್ಭುಮ್: ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿಯ ಪತ್ನಿ ಹಸಿನ್ ಜಹಾನ್ ತನ್ನ ನೆರೆಹೊರೆಯವರೊಂದಿಗೆ ಜಗಳವಾಡಿದ ಘಟನೆಯ ವಿಡಿಯೋ ವೈರಲ್ ಆಗಿದೆ. ಪಶ್ಚಿಮ ಬಂಗಾಳದ ಬಿರ್ಭುಮ್‌ನಲ್ಲಿ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಹಸಿನ್ ಜಹಾನ್ ಹಾಗೂ ಆಕೆಯ ಪುತ್ರಿ ನೆರೆಹೊರೆಯವರೊಂದಿಗೆ ಜಗಳವಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹಸಿನ್ ಜಹಾನ್ ತನ್ನ ನೆರೆಹೊರೆಯ ಮಹಿಳೆಯರೊಂದಿಗೆ ತೀವ್ರ ವಾಗ್ವಾದದಲ್ಲಿ ಭಾಗಿಯಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಸಿನ್ ಜಹಾನ್ ಮತ್ತು ಅವರ ಪುತ್ರಿ ಅರ್ಷಿ ಜಹಾನ್ ಭೂ ವಿವಾದದ ವಿಚಾರದಲ್ಲಿ ತಮ್ಮ ನೆರೆಹೊರೆಯವರೊಂದಿಗೆ ಜಗಳವಾಡಿದ್ದಾರೆ ಎಂದು ಹೇಳಲಾಗಿದೆ. ಹಸಿನ್ ಅಕ್ರಮವಾಗಿ ಭೂಮಿಯನ್ನು ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನೆರೆಹೊರೆಯವರು ಆಕೆಯನ್ನು ವಿರೋಧಿಸಿದಾಗ, ವಾಗ್ವಾದವು ತೀವ್ರಗೊಂಡು ದೈಹಿಕ ಜಗಳಕ್ಕೆ ತಿರುಗಿತು ಎಂದು ವರದಿಯಾಗಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಇಬ್ಬರು ಮಹಿಳೆಯರು ಭಾಗಿಯಾಗಿರುವುದನ್ನು ಕಾಣಬಹುದು. @NCMIndiaa ಎಂಬ ಪೇಜ್ ಈ ಜಗಳದ ವಿಡಿಯೋವನ್ನು ಹಂಚಿಕೊಂಡಿದೆ. ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಸೂರಿ ಪಟ್ಟಣದಲ್ಲಿ ಮೊಹಮ್ಮದ್ ಶಮಿ ಅವರ ಪತ್ನಿ ಅರ್ಷಿ ಜಹಾನ್ ಅವರ ಮೊದಲ ಪತಿಯ ಮಗಳು ಅರ್ಷಿ ಜಹಾನ್ ಕೂಡ ಈ ವಾಗ್ವಾದದಲ್ಲಿ ಭಾಗಿಯಾಗಿದ್ದಾರೆ. ಘಟನೆಯ ಸಂಬಂಧ ಹಸಿನ್ ಜಹಾನ್ ಹಾಗೂ ಅರ್ಷಿ ಜಹಾನ್ ವಿರುದ್ಧ BNS ಸೆಕ್ಷನ್ 126(2), 115(2), 117(2), 109, 351(3) ಮತ್ತು 3(5) ರ ಅಡಿಯಲ್ಲಿ ಕೊಲೆಗೆ ಯತ್ನ ಎಫ್‌ಐಆರ್ ದಾಖಲಿಸಲಾಗಿದೆ.



ಹಸಿನ್ ಜಹಾನ್ ಸೂರಿ ಪಟ್ಟಣದ ವಾರ್ಡ್ ಸಂಖ್ಯೆ 5 ರಲ್ಲಿನ ವಿವಾದಿತ ಜಾಗದಲ್ಲಿ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದ ನಂತರ ಜಗಳ ಪ್ರಾರಂಭವಾಯಿತು. ಅದು ಅವರ ಮಗಳು ಅರ್ಷಿ ಜಹಾನ್ ಹೆಸರಿನಲ್ಲಿದೆ ಎಂದು ಹೇಳಲಾಗಿದೆ. ನಿರ್ಮಾಣ ಕಾರ್ಯವನ್ನು ತಡೆಯಲು ಪ್ರಯತ್ನಿಸಿದಾಗ ನೆರೆಹೊರೆಯವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಸ್ತುತ ತನಿಖೆ ಮುಂದುವರೆದಿದೆ.

ಈ ಸುದ್ದಿಯನ್ನೂ ಓದಿ: ʻನಿಮ್ಮ ಬಾಕಿ ದಿನಗಳನ್ನು ಎಣಿಸಿʼ: ಮಾಧ್ಯಮಗಳ ವಿರುದ್ಧ ಮೊಹಮ್ಮದ್‌ ಶಮಿ ಕಿಡಿ!

ಅರ್ಷಿ ಜಹಾನ್ ಯಾರು?

ಅರ್ಷಿ ಜಹಾನ್, ಹಸಿನ್ ಜಹಾನ್ ಅವರ ಮೊದಲ ಪತಿಯ ಮಗಳು. ಅವರು ಮೊಹಮ್ಮದ್ ಶಮಿಯ ಪುತ್ರಿಯಲ್ಲ. ಹಸಿನ್ ತನ್ನ ಹೆಣ್ಣುಮಕ್ಕಳೊಂದಿಗೆ ಬಿರ್ಭಮ್‌ನಲ್ಲಿ ವಾಸಿಸುತ್ತಿದ್ದಾರೆ. ಹಸಿನ್ ಜಹಾನ್, ಭಾರತೀಯ ಕ್ರಿಕೆಟ್ ತಂಡದಲ್ಲಿ ವೇಗದ ಬೌಲರ್ ಆಗಿರುವ ತನ್ನ ಪತಿ ಮೊಹಮ್ಮದ್ ಶಮಿ ಅವರೊಂದಿಗೆ ದೀರ್ಘಕಾಲದ ಕಾನೂನು ಮತ್ತು ವೈಯಕ್ತಿಕ ವಿವಾದವನ್ನು ಹೊಂದಿದ್ದಾರೆ. ಇಬ್ಬರೂ ಹಲವಾರು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ, ಕೋಲ್ಕತ್ತಾ ಹೈಕೋರ್ಟ್ ಶಮಿ ಅವರ ಪತ್ನಿ ಮತ್ತು ಮಗಳು ಇರಾ ಅವರ ಜೀವನಾಂಶಕ್ಕಾಗಿ 4 ಲಕ್ಷ ರೂ. ಮಾಸಿಕ ಭತ್ಯೆಯನ್ನು ಪಾವತಿಸಲು ಆದೇಶಿಸಿದೆ.