ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದಿಲ್ಲಿಯಲ್ಲಿ ಮತ್ತೆ ಅತ್ಯಂತ ಕಳಪೆ ಶ್ರೇಣಿಗೆ ಕುಸಿದ ವಾಯುಗುಣಮಟ್ಟ

Delhi pollution: ಮಾಲಿನ್ಯ ನಿಯಂತ್ರಣ (ಪಿಯುಸಿ) ಪ್ರಮಾಣಪತ್ರವಿಲ್ಲದ ವಾಹನಗಳಿಗೆ ದಿಲ್ಲಿಯಲ್ಲಿ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ತುಂಬಲು ಅವಕಾಶ ಇರುವುದಿಲ್ಲ ಎಂಬ ನಿಮಯ ಈಗಾಗಲೇ ಜಾರಿಗೆ ತರಲಾಗಿದೆ. ಪೆಟ್ರೋಲ್ ಪಂಪ್‌ಗಳಲ್ಲಿ ಅಳವಡಿಸಲಾದ ಕ್ಯಾಮೆರಾಗಳು ಸ್ವಯಂ ಚಾಲಿತವಾಗಿ ಪಿಯುಸಿ ಪ್ರಮಾಣಪತ್ರ ಇಲ್ಲದ ವಾಹನಗಳ್ನು ಪತ್ತೆ ಹಚ್ಚಲಿವೆ.

ದಿಲ್ಲಿಯಲ್ಲಿ ಮತ್ತೆ ಅತ್ಯಂತ ಕಳಪೆ ಶ್ರೇಣಿಗೆ ಕುಸಿದ ವಾಯುಗುಣಮಟ್ಟ

Delhi pollution -

Abhilash BC
Abhilash BC Dec 27, 2025 2:31 PM

ನವದೆಹಲಿ, ಡಿ. 27: ವಾರದ ಆರಂಭದಲ್ಲಿ ಸ್ವಲ್ಪ ಸುಧಾರಣೆ ಕಂಡಿದ್ದ ದೆಹಲಿಯ ಗಾಳಿಯ ಗುಣಮಟ್ಟ(Delhi pollution) ಶನಿವಾರ ಮತ್ತೆ ಹದಗೆಟ್ಟಿದ್ದು, ನಗರದ ಹಲವಾರು ಭಾಗಗಳು ಮಾಲಿನ್ಯ ಮಟ್ಟವನ್ನು 'ತುಂಬಾ ಕಳಪೆ' ಮತ್ತು 'ತೀವ್ರ' ವರ್ಗಗಳಲ್ಲಿ ದಾಖಲಿಸಿವೆ. ಇದರಿಂದಾಗಿ ವಾತಾವರಣದಲ್ಲಿ ಕನಿಷ್ಠ ತಾಪಮಾನ 7.7 ಡಿಗ್ರಿ ಸೆಂಟಿಗ್ರೇಡ್‌ಗೆ ಸಾಧಾರಣ ಏರಿಕೆಯಾಗಿದೆ. ಸೋಮವಾರದದವರೆಗೆ ತಾಪಮಾನವು 5ರಿಂದ 8 ಡಿಗ್ರಿ ಸೆಂಟಿಗ್ರೇಡ್‌ವರೆಗೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ದತ್ತಾಂಶದ ಪ್ರಕಾರ, ಧೌಲಾ ಕುವಾನ್‌ನಲ್ಲಿ ಗಾಳಿಯ ಗುಣಮಟ್ಟವು 252 ರ ವಾಯು ಗುಣಮಟ್ಟ ಸೂಚ್ಯಂಕ (AQI) ನಲ್ಲಿದ್ದು, 'ಕಳಪೆ' ಎಂದು ವರ್ಗೀಕರಿಸಲಾಗಿದೆ. ಅಕ್ಷರಧಾಮ ಮತ್ತು ಆನಂದ್ ವಿಹಾರ್‌ನಲ್ಲಿ, ವಾಯು ಗುಣಮಟ್ಟ ಸೂಚ್ಯಂಕ '410' ತಲುಪಿದ್ದು, ಎರಡೂ ಪ್ರದೇಶಗಳನ್ನು 'ತೀವ್ರ' ವರ್ಗಕ್ಕೆ ಸೇರಿಸಿದೆ.

ಗುರುವಾರ 234 ಕ್ಕೆ ಹೋಲಿಸಿದರೆ ಶುಕ್ರವಾರ ಸಂಜೆ 4 ಗಂಟೆಗೆ ನಗರದ 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 332 ರಷ್ಟಿತ್ತು. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ, ವಾಯು ಗುಣಮಟ್ಟ ಸೂಚ್ಯಂಕ 320 ಕ್ಕೆ ದಾಖಲಾಗಿತ್ತು. ಗಾಳಿಯ ವೇಗವು ಕುಂಠಿತವಾಗುತ್ತಿದ್ದಂತೆಯೇ ಅತ್ಯಂತ ದಟ್ಟವಾದ ಮಂಜು ಆವರಿಸಿದೆ.

ಇದನ್ನೂ ಓದಿ ದೆಹಲಿ ಮಾಲಿನ್ಯ: ಪ್ರಮುಖ ಟೂರ್ನಮೆಂಟ್‌ನ ನಾಕೌಟ್ ಹಂತಗಳನ್ನು ದೆಹಲಿಯಿಂದ ಮುಂಬೈಗೆ ಸ್ಥಳಾಂತರಿಸಿದ ಬಿಸಿಸಿಐ

ಎಕ್ಯೂಐ ಪ್ರಮಾಣ ಸೊನ್ನೆಯಿಂದ 50 ರಷ್ಟಿದ್ದರೆ ‘ಉತ್ತಮ’ ಎಂದು, 51ರಿಂದ 100ರಷ್ಟಿದ್ದರೆ ‘ಸಮಾಧಾನಕರ’, 101ರಿಂದ 200ರಷ್ಟಿದ್ದರೆ ‘ಸಾಧಾರಣ’, 201 ರಿಂದ 300ರಷ್ಟಿದ್ದರೆ ‘ಕಳಪೆ’ ಹಾಗೂ 301ರಿಂದ 400ರಷ್ಟಿದ್ದರೆ ‘ಅತ್ಯಂತ ಕಳಪೆ’ ಎಂದು ಹೇಳಲಾಗುತ್ತದೆ. 401ರಿಂದ 450ರಷ್ಟು ಕಂಡು ಬಂದರೆ ‘ತೀವ್ರ ಕಳಪೆ’ ಹಾಗೂ 450ಕ್ಕಿಂತ ಹೆಚ್ಚಾದರೆ ‘ತೀವ್ರಕ್ಕಿಂತಲೂ ಅಪಾಯಕಾರಿ’ ಎಂದು ಪರಿಗಣಿಸಲಾಗುತ್ತದೆ.

ಮಾಲಿನ್ಯ ನಿಯಂತ್ರಣ (ಪಿಯುಸಿ) ಪ್ರಮಾಣಪತ್ರವಿಲ್ಲದ ವಾಹನಗಳಿಗೆ ದಿಲ್ಲಿಯಲ್ಲಿ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ತುಂಬಲು ಅವಕಾಶ ಇರುವುದಿಲ್ಲ ಎಂಬ ನಿಮಯ ಈಗಾಗಲೇ ಜಾರಿಗೆ ತರಲಾಗಿದೆ. ಪೆಟ್ರೋಲ್ ಪಂಪ್‌ಗಳಲ್ಲಿ ಅಳವಡಿಸಲಾದ ಕ್ಯಾಮೆರಾಗಳು ಸ್ವಯಂ ಚಾಲಿತವಾಗಿ ಪಿಯುಸಿ ಪ್ರಮಾಣಪತ್ರ ಇಲ್ಲದ ವಾಹನಗಳ್ನು ಪತ್ತೆ ಹಚ್ಚಲಿವೆ.