Delhi Red Fort Blast: ಭಯಾನಕ ದುರ್ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿಗಳು! ವಿಡಿಯೊ
ಹಳೆ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಬಳಿ ಸ್ಪೋಟ ನಡೆದಿದ್ದು ಎಂಟು ಮಂಡಿ ಸಾವಿಗೀಡಾಗಿದ್ದಾರೆ ಹಾಗೂ ಹಲವು ಮಂದಿ ಗಾಯಕ್ಕೆ ತುತ್ತಾಗಿದ್ದಾರೆ. ಈ ದುರ್ಘಟನೆಯಿಂದ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಈ ಭಯಾನಕ ದೃಶ್ಯಗಳ ಬಗ್ಗೆ ಪ್ರತ್ಯಕ್ಷದರ್ಶಿಗಳು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ದೆಹಲಿ ಸ್ಪೋಟದ ಭಯಾನಕ ದೃಶ್ಯಗಳ ಅನುಭವ ಹಂಚಿಕೊಂಡ ಸ್ಥಳೀಯ. -
ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪು ಕೋಟೆ (Delhi’s iconic Red Fort) ಬಳಿ ಭಾನುವಾರ ಸಂಜೆ ಸಂಭವಿಸಿದ ಪ್ರಬಲ ಸ್ಫೋಟದಿಂದ (Delhi Red Fort Blast) ಎಂಟು ಮಂದಿ ಸಾವಿಗೀಡಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಗೌರಿ ಶಂಕರ್ ಮಂದಿರದ ಸನಿಹವಿರುವ ಲಾಲ್ ಕಿಲಾ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ ಒಂದರ ಹೊರಗೆ ಹೆಚ್ಚು ಜನದಟ್ಟಣೆ ಇರುವ ಪ್ರದೇಶದಲ್ಲಿ ಈ ಸ್ಫೋಟ ನಡೆದಿದೆ. ಗಾಯದಿಂದ ಕನಿಷ್ಠ 15 ಮಂದಿಯನ್ನು ಲೋಕ ನಾಯಕ್ ಆಸ್ಪತ್ರೆಗೆ ದಾಖಲಿಸಲಾಗಿದೆ, ಮೂವರ ಸ್ಥಿತಿ ಗಂಭೀರವಾಗಿದೆ ಮತ್ತು ಒಬ್ಬರ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಹದಿನೈದು ಜನರನ್ನು ಲೋಕ ನಾಯಕ ಆಸ್ಪತ್ರೆಗೆ ಕರೆತರಲಾಗಿದೆ. ಅವರಲ್ಲಿ ಎಂಟು ಮಂದಿ ಆಸ್ಪತ್ರೆ ತಲುಪುವ ಮೊದಲೇ ಸಾವಿಗೀಡಾಗಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಬ್ಬರ ಸ್ಥಿತಿ ಸ್ಥಿರವಾಗಿದೆ ಎಂದು ಲೋಕ ನಾಯಕ್ ಜೈ ಪ್ರಕಾಶ್ ನಾರಾಯಣ್ (ಎಲ್‌ಎನ್‌ಜೆಪಿ) ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಎಎನ್‌ಐಗೆ ತಿಳಿಸಿದ್ದಾರೆ.
Delhi Blast: ದೆಹಲಿ ಕೆಂಪು ಕೋಟೆ ಸಮೀಪ ಕಾರು ಸ್ಫೋಟ; 8 ಮಂದಿ ಸಾವು
ಭಯಾನಕ ದೃಶ್ಯಗಳ ಬಗ್ಗೆ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ
"ನನ್ನ ಜೀವನದಲ್ಲಿ ಇಷ್ಟು ದೊಡ್ಡ ಸ್ಫೋಟವನ್ನು ನಾನು ಎಂದಿಗೂ ಕೇಳಿಲ್ಲ. ಇದರ ಪರಿಣಾಮದಿಂದ ನಾನು ಮೂರು ಬಾರಿ ಬಿದ್ದೆ. ನಾವೆಲ್ಲರೂ ಸಾಯುತ್ತೇವೆಯೇನೋ ಎಂಬಂತೆ ಭಾಸವಾಯಿತು," ಎಂದು ಸ್ಥಳೀಯ ಅಂಗಡಿಯೊಬ್ಬ ಸ್ಫೋಟದ ನಂತರದ ಭಯಾನಕ ಕ್ಷಣಗಳನ್ನು ಎಎನ್‌ಐಗೆ ವಿವರಿಸಿದ್ದಾರೆ.
#WATCH | Delhi: "I never heard such a loud explosion ever in my life. I fell three times due to the explosion. It felt as if we were all going to die..." said a local shopkeeper to ANI https://t.co/mNFJMPex0i pic.twitter.com/KQcbOYYNu6
— ANI (@ANI) November 10, 2025
"ನನ್ನ ಮನೆಯಿಂದ ಜ್ವಾಲೆಗಳನ್ನು ನೋಡಿದೆ ಮತ್ತು ನಂತರ ಏನಾಯಿತು ಎಂದು ನೋಡಲು ಕೆಳಗೆ ಇಳಿದೆ. ಜೋರಾದ ಸ್ಫೋಟ ಸಂಭವಿಸಿದೆ. ನಾನು ಹತ್ತಿರದಲ್ಲಿ ವಾಸಿಸುತ್ತಿದ್ದೇನೆ," ಎಂದು ಸ್ಥಳೀಯ ನಿವಾಸಿ ರಾಜಧರ್ ಪಾಂಡೆ ಹೇಳಿದರು.
#WATCH | Delhi: "I saw the flames from my house and then came down to see what had happened. There was a loud explosion. I live nearby," said local resident Rajdhar Pandey pic.twitter.com/mPVLWdxLPP
— ANI (@ANI) November 10, 2025
"ರಸ್ತೆಯ ಮೇಲೆ ಒಬ್ಬರ ಕೈಯನ್ನು ನೋಡಿದಾಗ, ನಾವು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದೇವೆ. ನಾನು ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ," ಎಂದು ಮತ್ತೊಬ್ಬ ಸ್ಥಳೀಯರು ಎಎನ್‌ಐಗೆ ತಿಳಿಸಿದ್ದಾರೆ.
#WATCH | Delhi: Blast near Red Fort | "When we saw someone's hand on the road, we were absolutely shocked. I can't explain it in words..." said a local to ANI pic.twitter.com/vmibMbPFUk
— ANI (@ANI) November 10, 2025
ದೆಹಲಿ ಪೊಲೀಸರು ಹೇಳಿದ್ದೇನು?
ಈ ದುರ್ಘಟನೆಯ ಬಗ್ಗೆ ದೆಹಲಿ ಪೊಲೀಸರು ಪ್ರತಿಕ್ರಿಯೆ ನೀಡಿ, "ಸದ್ಯ ಈ ಈ ದುರ್ಘೆನೆಯ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ಇದರ ಬಗ್ಗೆ ತನಿಖೆ ನಡೆಯುತ್ತಿದೆ," ಎಂದು ತಿಳಿಸಿದ್ದಾರೆ.
"ಚಾಂದನಿ ಚೌಕ್ ಮೆಟ್ರೋ ನಿಲ್ದಾಣದ ಬಳಿ ಕಾರಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ನಮಗೆ ಮಾಹಿತಿ ಲಭಿಸಿತು. ನಾವು ತಕ್ಷಣ ಪ್ರತಿಕ್ರಿಯಿಸಿದೆವು ಮತ್ತು ಏಳು ಘಟಕಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಸಂಜೆ 7:29 ಕ್ಕೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಇದರಲ್ಲಿ ಸಾವುನೋವುಗಳಿರುವ ಸಾಧ್ಯತೆಯಿದೆ. ನಮ್ಮ ಎಲ್ಲಾ ತಂಡಗಳು ಸ್ಥಳದಲ್ಲಿವೆ," ಎಂದು ಉಪ ಮುಖ್ಯ ಅಗ್ನಿಶಾಮಕ ಅಧಿಕಾರಿ ಎಕೆ ಮಲಿಕ್ ಹೇಳಿದ್ದಾರೆ.
Delhi Police Commissioner Satish Golcha on blast-#RedFort #HomeMinister #लालकिले pic.twitter.com/fXmhDw25Cv
— NEWSDAILY MEDIA GROUP (@NEWSDAILY123) November 10, 2025
ಜನರು ಸುರಕ್ಷತೆಗಾಗಿ ಓಡುತ್ತಿದ್ದಂತೆ ಉರಿಯುತ್ತಿರುವ ವಾಹನಗಳಿಂದ ದಟ್ಟವಾದ ಹೊಗೆ ಬರುತ್ತಿರುವುದು ಕಂಡುಬಂದಿದೆ. ಸ್ಥಳದ ವೀಡಿಯೊಗಳಲ್ಲಿ ಒಂದು ಕಾರು ಬೆಂಕಿಯಲ್ಲಿ ಮುಳುಗಿರುವುದನ್ನು ಮತ್ತು ಹತ್ತಿರದ ವಾಹನಗಳು ನಜ್ಜುಗುಜ್ಜಾಗಿರುವುದನ್ನು ತೋರಿಸಲಾಗಿದೆ. ಸ್ಫೋಟದ ತೀವ್ರತೆಗೆ ಹಲವು ಮೀಟರ್ ದೂರದಲ್ಲಿ ನಿಲ್ಲಿಸಲಾಗಿದ್ದ ಕಾರುಗಳ ವಿಂಡ್‌ಸ್ಕ್ರೀನ್‌ಗಳು ಛಿದ್ರಗೊಂಡಿದ್ದು, ಗಾಜುಗಳು ರಸ್ತೆಯಾದ್ಯಂತ ಹರಡಿಕೊಂಡಿವೆ.
ಮತ್ತೊಂದು ವೀಡಿಯೊದಲ್ಲಿ ಬಾಗಿಲುಗಳು ಹಾರಿಹೋಗಿರುವ ವ್ಯಾನ್ ಮತ್ತು ಗಾಯಗೊಂಡ ವ್ಯಕ್ತಿಯೊಬ್ಬರು ನೆಲದ ಮೇಲೆ ಬಿದ್ದಿರುವುದನ್ನು ಸೆರೆಹಿಡಿಯಲಾಗಿದೆ, ಆದರೆ ಪಕ್ಕದಲ್ಲಿದ್ದವರು ಸಹಾಯ ಮಾಡಲು ಧಾವಿಸಿದ್ದಾರೆ.
ಘಟನಾ ಸ್ಥಳಕ್ಕೆ ಇಪ್ಪತ್ತು ಅಗ್ನಿಶಾಮಕ ದಳಗಳನ್ನು ತಕ್ಷಣವೇ ರವಾನಿಸಲಾಯಿತು ಮತ್ತು ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಕ್ಷಿಪ್ರವಾಗಿ ಕೆಲಸ ಮಾಡಿದರು. ಹಲವು ಗಾಯಾಳುಗಳನ್ನು ಲೋಕ ನಾಯಕ್ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೆಹಲಿ ಪೊಲೀಸ್ ವಿಶೇಷ ಘಟಕವು ಪ್ರದೇಶವನ್ನು ಸುತ್ತುವರೆದು ತನಿಖೆ ಆರಂಭಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಳೆಯ ದೆಹಲಿಯಲ್ಲಿ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಗಿದೆ.