Viral Video: ಮರವೇರಿ ಹಾಯಾಗಿ ಕುಳಿತ ಹುಲಿ; AI ವಿಡಿಯೊ ಎಂದ ನೆಟ್ಟಿಗರು
ರಾಜಸ್ಥಾನದ ಪ್ರಸಿದ್ಧ ರಣಥಂಬೋರ್ ಪಾರ್ಕ್‌ನಲ್ಲಿ ಬೃಹತ್ ಗಾತ್ರದ ಹುಲಿಯೊಂದು ಮರದ ಕೊಂಬೆಯ ಮೇಲೆ ಆರಾಮವಾಗಿ ಕುಳಿತು ವನ್ಯಜೀವಿ ಪ್ರಿಯರನ್ನು ಅಚ್ಚರಿಗೊಳಿಸಿದೆ. ಸದ್ಯ ಈ ಅಪಾಯಕಾರಿ ವಿಡಿಯೊ ನೋಡಿ ನೆಟ್ಟಿಗರು ಆಘಾತ ವ್ಯಕ್ತ ಪಡಿಸಿದ್ದಾರೆ. ಜತೆಗೆ ಅನುಮಾನವೂ ಮೂಡಿದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಮರವೇರಿ ಹಾಯಾಗಿ ಕುಳಿತ ಹುಲಿ -
ಜೈಪುರ, ಜ. 19: ಹುಲಿ, ಸಿಂಹ, ಆನೆಗಳಂತಹ ದೈತ್ಯ ವನ್ಯ ಜೀವಿಗಳ ಬಗ್ಗೆ, ಅವುಗಳ ಜೀವನದ ಬಗ್ಗೆ ಕುತೂಹಲ ಸಹಜ. ಇದೀಗ ಹುಲಿ ಮರದ ಮೇಲೆ ಹಾಯಾಗಿ ಕುಳಿತಿರುವ ದೃಶ್ಯವೊಂದು ಎಲ್ಲರನ್ನು ಅಚ್ಚರಿಗೊಳಿಸಿದೆ. ರಾಜಸ್ಥಾನದ ಪ್ರಸಿದ್ಧ ರಣಥಂಬೋರ್ ಪಾರ್ಕ್‌ನಲ್ಲಿ ಬೃಹತ್ ಗಾತ್ರದ ಹುಲಿಯೊಂದು ಮರದ ಕೊಂಬೆಯ ಮೇಲೆ ಆರಾಮವಾಗಿ ಕುಳಿತು ವನ್ಯಜೀವಿ ಪ್ರಿಯರನ್ನು ಅಚ್ಚರಿಗೊಳಿಸಿದೆ. ಸದ್ಯ ಈ ವಿಡಿಯೊ ನೋಡಿ ನೆಟ್ಟಿಗರು ಆಘಾತ ವ್ಯಕ್ತ ಪಡಿಸಿದ್ದಾರೆ. ಸಾಮಾನ್ಯವಾಗಿ ಚಿರತೆಗಳು ಮರವೇರಿ ಕೂರುವುದನ್ನು ನಾವು ಕಂಡಿದ್ದೇವೆ. ಆದರೆ ದೈತ್ಯ ಆಕಾರದ ಹುಲಿ ಹೀಗೆ ಮರದ ಮೇಲೆ ಕುಳಿತಿರುವುದು ಪ್ರಾಣಿ ಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ
ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ದೃಶ್ಯ ಕಂಡುಬಂದಿದ್ದು ಹುಲಿ ಮರವೇರಿ ಶಾಂತ ರೀತಿಯಾಗಿ ಕುಳಿತಿದೆ. ಈ ವಿಡಿಯೊವನ್ನು ವನ್ಯಜೀವಿ ಛಾಯಾಗ್ರಾಹಕ ಫೈಜ್ ಉಲ್ ಇಸ್ಲಾಂ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಕಂಡು ಬಂದಂತೆ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಬೃಹತ್ ಗಾತ್ರದ ಹುಲಿ ಮರದ ಕೊಂಬೆಯ ಮೇಲೆ ಆರಾಮವಾಗಿ ಕುಳಿತು ಬಿಸಿಲು ಕಾಯಿಸಿಕೊಳ್ಳುತ್ತಿದೆ.
ವಿಡಿಯೊ ನೋಡಿ:
ಈ ಬಗ್ಗೆ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ, ಒಬ್ಬರು, ಹುಲಿಗಳು ಅಪರೂಪವಾಗಿ ಮರಗಳನ್ನು ಏರುತ್ತವೆ. ಏಕೆಂದರೆ ಅವುಗಳ ಭಾರವಾದ ದೇಹ, ಉದ್ದವಾದ ಉಗುರುಗಳು ಮತ್ತು ದೊಡ್ಡ ಗಾತ್ರವು ಮರ ಏರಲು ಸಹಕರಿಸುವುದಿಲ್ಲ. ಮರದಿಂದ ಕೆಳಗಿಳಿಯುವಾಗ ಸಮತೋಲನ ಸಿಗುವುದಿಲ್ಲ. ಆದರೆ ಈ ವಿಡಿಯೊದಲ್ಲಿರುವ ಮರವು ಸುಮಾರು 4ರಿಂದ 6 ಅಡಿ ಎತ್ತರವಿದ್ದು, ಹುಲಿಗೆ ಹತ್ತಲು ಸುಲಭವಾಗುವಂತಿದೆ ಎಂದು ಬರೆದುಕೊಂಡಿದ್ದಾರೆ.
ಅಕ್ಷಯ್ ಖನ್ನಾ ವೈರಲ್ ಡ್ಯಾನ್ಸ್‌ಗೆ ದೆಹಲಿ ಪೊಲೀಸರು ಫಿದಾ
ರಣಥಂಬೋರ್ ರಾಷ್ಟ್ರೀಯ ಉದ್ಯಾನವನವು ಅನೇಕ ವನ್ಯಜೀವಿಗಳಿಗೆ ಹೆಸರುವಾಸಿ. ಸದ್ಯ ಈ ದೃಶ್ಯ ಅಚ್ಚರಿ ಮೂಡಿಸಿದ್ದು ಅನೇಕ ಜನರು ಇದು ಕೃತಕ ಬುದ್ಧಿಮತ್ತೆ (AI) ಮೂಲಕ ರಚಿಸಿದ ವಿಡಿಯೊ ಎಂದಿದ್ದಾರೆ. ಮತ್ತೊಬ್ಬರು ಈಗ ಹುಲಿ ಕೂಡ ಅಪ್‌ಡೇಟ್ ಆಗಿದೆ ಎಂದು ಕಮೆಂಟ್ ಮಾಡಿದ್ದಾರೆ.