ಇವಿಎಂ ಬದಲಿಗೆ ಮತಪತ್ರ ಪದ್ಧತಿ ಬಳಕೆಗೆ ಆಗ್ರಹ: ರಾಷ್ಟ್ರಪತಿಗೆ ಇಂಡಿಯಾ ಒಕ್ಕೂಟದಿಂದ ಮನವಿ
ಇಂಡಿಯಾ ಒಕ್ಕೂಟದ ನಾಯಕರು ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ನಾಲ್ಕು ಪ್ರಮುಖ ಬೇಡಿಕೆಯನ್ನು ಸಲ್ಲಿಸಿತ್ತು.ಇದರಲ್ಲಿ ಇವಿಎಂ ಬದಲಿಗೆ ಹಳೆಯ ಮತಪತ್ರ ಪದ್ಧತಿ ಬಳಕೆಗೆ ಕೂಡ ಆಗ್ರಹಿಸಲಾಗಿದೆ. ಮತ ಕಳ್ಳತನ ಕುರಿತಾಗಿ ರಾಷ್ಟ್ರಪತಿಗೆ ಮನವರಿಕೆ ಮಾಡಿರುವುದಾಗಿ ಕೂಡ ಇಂಡಿಯಾ ಒಕ್ಕೂಟದ ನಾಯಕರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Opposition Rahul Gandhi), ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Congress president Mallikarjun Kharge), ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (TMC chief Mamata Banerjee) ಸೇರಿದಂತೆ ಇಂಡಿಯಾ ಒಕ್ಕೂಟದ ( INDIA bloc) ನಿಯೋಗವೊಂದು ಶುಕ್ರವಾರ ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರನ್ನು ಭೇಟಿ ಮಾಡಿ ಮತ ಕಳ್ಳತನದ ಕುರಿತು ನಾಲ್ಕು ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಿತು. ಇದರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಚುನಾವಣಾ ಅಕ್ರಮ ಆರೋಪವನ್ನು ರಾಷ್ಟ್ರಪತಿಗಳು ನಿರಾಕರಿಸಲಿಲ್ಲ ಎಂಬುದು ತಮಗೆ ಆಘಾತ ಉಂಟುಮಾಡಿದೆ ಎಂದು ತಿಳಿಸಿದರು.
'ಪ್ರಜಾಪ್ರಭುತ್ವ ಉಳಿಸಿ' ಎಂಬ ಬ್ಯಾನರ್ ಹಿಡಿದು ಇಂಡಿಯಾ ಒಕ್ಕೂಟದ ಸದಸ್ಯರು ಸಂಸತ್ ಭವನದಿಂದ ವಿಜಯ್ ಚೌಕ್ ವರೆಗೆ ಮೆರವಣಿಗೆ ನಡೆಸಿದರು. ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ಅವರನ್ನು ತಡೆದರು. ಇದರ ಬಳಿಕ ಒಂದು ನಿಯೋಗವು ರಾಷ್ಟ್ರಪತಿ ಭವನಕ್ಕೆ ರಾಷ್ಟ್ರಪತಿ ಮುರ್ಮು ಅವರನ್ನು ಭೇಟಿಯಾಗಲು ತೆರಳಿತು.
ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ; ಕೆಲವು ಜಿಲ್ಲೆಗಳಲ್ಲಿ ಒಣಹವೆ
ರಾಷ್ಟ್ರಪತಿ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಮತ ಕಳ್ಳತನದ ಸಾಕ್ಷ್ಯವನ್ನು ರಾಷ್ಟ್ರಪತಿಗಳು ಕೇಳಿದರು. ಅದನ್ನು ನಾವು ಒದಗಿಸುತ್ತೇವೆ. ವಿರೋಧ ಪಕ್ಷದ ನಾಯಕರು ಸೋಮವಾರ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಭೇಟಿಯಾಗಿ ಅವರಿಗು ಕೂಡ ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಭವಿಷ್ಯದ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಮತಪತ್ರ ಪದ್ಧತಿಗೆ ಮರಳುವಂತೆ 'ಇಂಡಿಯಾ' ಮೈತ್ರಿಕೂಟದ ನಾಯಕರು ಕೋರಿದ್ದಾರೆ ಎಂದು ತಿಳಿಸಿದರು.
ಮಮತಾ ಬ್ಯಾನರ್ಜಿ ಅವರು ಮಾತನಾಡಿ, ಇಂಡಿಯಾ ಒಕ್ಕೂಟ ಒಗ್ಗಟ್ಟಾಗಿದೆ ಮತ್ತು ಬಲವಾಗಿದೆ ಎಂದು ತಿಳಿಸಿದರು. ನಿಯೋಗದಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಎನ್‌ಸಿಪಿ(ಎಸ್‌ಪಿ)ಯ ಸುಪ್ರಿಯಾ ಸುಳೆ, ಎಸ್‌ಪಿಯ ರಾಜೀವ್ ರೈ, ಆರ್‌ಜೆಡಿಯ ಮನೋಜ್ ಝಾ, ವಿಸಿಕೆ ಮುಖ್ಯಸ್ಥ ತೋಲ್ ತಿರುಮಾವಲವನ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಮತ್ತು ಸಿಪಿಐನ ಡಿ. ರಾಜಾ ಅವರು ಕೂಡ ಇದ್ದರು.
ಇಂಡಿಯಾ ಒಕ್ಕೂಟದ ಬೇಡಿಕೆಗಳೇನು?
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಪಡೆಯಬೇಕು. ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರಿಗೆ ಜೀವಮಾನದ ರಕ್ಷಣೆ ನೀಡುವ 2023ರ ಕಾನೂನನ್ನು ರದ್ದುಪಡಿಸಬೇಕು.
ವಿಶೇಷ ಮತಪಟ್ಟಿ ಪರಿಷ್ಕರಣೆಯನ್ನು ತಕ್ಷಣವೇ ಅಮಾನತುಗೊಳಿಸಬೇಕು. ಮತದಾರರ ಪಟ್ಟಿಯಿಂದ ಅಕ್ರಮವಾಗಿ ತೆಗೆದುಹಾಕಲಾದ ಎಲ್ಲಾ 13.30 ಕೋಟಿ ಮತದಾರರ ಹೆಸರನ್ನು ತಕ್ಷಣವೇ ಮರುಸ್ಥಾಪಿಸಬೇಕು.
ಎಲ್ಲಾ ಚುನಾವಣೆಗಳಿಗೆ ಕಾಗದದ ಮತಪತ್ರ ಅಥವಾ ಪೇಪರ್ ಬ್ಯಾಲೆಟ್ ವಿಧಾನವನ್ನು ಅನುಸರಿಸಬೇಕು.
ಮತ ಕಳ್ಳತನದ ನಿರ್ಣಾಯಕ ಸಾಕ್ಷ್ಯಗಳನ್ನು ಮಂಡಿಸಲಾಗಿರುವ ಕಳೆದ ಎರಡು ವರ್ಷಗಳ ಎಲ್ಲಾ ವಿಧಾನಸಭಾ ಚುನಾವಣೆಗಳನ್ನು ರದ್ದುಪಡಿಸಬೇಕು.
ಈ ನಾಲ್ಕು ಪ್ರಮುಖ ಬೇಡಿಕೆಯೊಂದಿಗೆ ಇಂಡಿಯಾ ಒಕ್ಕೂಟದ ನಾಯಕರು ನಾವು ನಿಮ್ಮನ್ನು ಸಂಪರ್ಕಿಸುತ್ತಿದ್ದೇವೆ. ಯಾಕೆಂದರೆ ಇತರ ಎಲ್ಲಾ ದಾರಿಗಳು ಮುಚ್ಚಿವೆ. ಭಾರತದ ಜನರು ಸಂವಿಧಾನದ ಅಂತಿಮ ರಕ್ಷಕರಾಗಿ ರಾಷ್ಟ್ರಪತಿಗಳ ಕಚೇರಿಯತ್ತ ನೋಡುತ್ತಾರೆ. ದೇಶದ ರಾಷ್ಟ್ರಪತಿಯಾಗಿ ಭಾರತದ ಸಂವಿಧಾನವನ್ನು ರಕ್ಷಿಸುವ ನಿಮ್ಮ ಕರ್ತವ್ಯವನ್ನು ನೀವು ದೃಢವಾಗಿ ನಿರ್ವಹಿಸುತ್ತೀರಿ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಭೇಟಿಗೆ ತೆರಳುವ ಮುನ್ನ ಇಂಡಿಯಾ ಒಕ್ಕೂಟದ ನಾಯಕರು ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ಸಭೆ ಸೇರಿ ಮತ ಕಳ್ಳತನದ ವಿರುದ್ಧದ ಹೋರಾಟದ ಯೋಜನೆಯನ್ನು ಮುಂದುವರಿಸುವ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಒತ್ತಾಯಿಸುವ ಹೋರಾಟವನ್ನು ಮುಂದುವರಿಸುವ ಕಾರ್ಯವಿಧಾನಗಳ ಕುರಿತು ಚರ್ಚೆ ನಡೆಸಿದರು.
ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಸುಖವಿಂದರ್ ಸಿಂಗ್ ಸುಖು, ಒಕ್ಕೂಟದ ಇತರ ನಾಯಕರು ಮತ್ತು ಕೆಲವು ಪಕ್ಷೇತರರು ಭಾಗವಹಿಸಿದ್ದರು.
Udupi Uchila Dasara 2026: ಉಡುಪಿ ಉಚ್ಚಿಲ ದಸರಾ-2026: ಅ.11ರಿಂದ 21ರವರೆಗೆ ವೈಭವದ ಸಂಭ್ರಮ
ಇಂಡಿಯಾ ಒಕ್ಕೂಟವು ಹಿಂದಿನ ವಾರದಿಂದಲೇ SIR ವಿವಾದದ ಕುರಿತು ತೀವ್ರ ಹೋರಾಟಕ್ಕೆ ಇಳಿದಿದೆ. ಸತತ ಮೂರನೇ ಗುರುವಾರ ಮಹಾತ್ಮ ಗಾಂಧಿಯವರ ಸ್ಮಾರಕವಾದ ರಾಜ್‌ಘಾಟ್‌ನಲ್ಲಿ ಧರಣಿ ನಡೆಸಿತ್ತು. ಇದರೊಂದಿಗೆ ರಾಲಿ, ಪ್ರಜಾಪ್ರಭುತ್ವ ಉಳಿಸಿ ಮೆರವಣಿಗೆಗಳನ್ನು ಕೂಡ ನಡೆಸಿವೆ.