ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಧಾನಿ ಅಂಗಳಕ್ಕೆ ತಲುಪಿದ ಭಾವಿ ಪತ್ನಿಯಿಂದಲೇ ಕೊಲೆಯಾದ ಕೇತನ್‌ ಅಗರ್ವಾಲ್‌ ಪ್ರಕರಣ; ನ್ಯಾಯಕ್ಕಾಗಿ ಮೋದಿಗೆ ಭಾವನಾತ್ಮಕ ಪತ್ರ ಬರೆದ ತಾಯಿ

Ketan Agarwal Case: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾವನಾತ್ಮಕ ಪತ್ರ ಬರೆದ ಕೇತನ್ ಅಗರ್ವಾಲ್ ಅವರ ತಾಯಿ ರಾಖಿ ಅಗರ್ವಾಲ್ ನ್ಯಾಯಕ್ಕಾಗಿ ಮನವಿ ಸಲ್ಲಿಸಿದ್ದಾರೆ. ತಮ್ಮ ಮಗನನ್ನು ಕ್ರೂರವಾಗಿ ಹತ್ಯೆಗೈದಿರುವ ಬಗ್ಗೆ ತಿಳಿಸಿದ ರಾಖಿ ಅಗರ್ವಾಲ್, ಕೇತನ್ ಸಾವಿನೊಂದಿಗೆ ಪ್ರಪಂಚವನ್ನೇ ಕಳೆದುಕೊಂಡಿದ್ದಾಗಿ ನೀವು ತೋಡಿಕೊಂಡಿದ್ದಾರೆ.

ಪ್ರಧಾನಿಗೆ ಕೇತನ್ ಅಗರ್ವಾಲ್ ತಾಯಿ ಮಾಡಿದ ಮನವಿ ಏನು?

ಕೇತನ್ ಅಗರ್ವಾಲ್ ಅವರ ತಾಯಿ ಮತ್ತು ಕೇತನ್‌ ಅಗರ್ವಾಲ್‌, ಸಿಯಾ -

Priyanka P
Priyanka P Jul 14, 2026 5:35 PM

ಮುಂಬೈ, ಜು. 14: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪುಣೆ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal Murder Case) ಕೊಲೆ ಪ್ರಕರಣ ಇದೀಗ ಪ್ರಧಾನಿ ನರೇಂದ್ರ ಮೋದಿ ಅಂಗಳಕ್ಕೆ ತಲುಪಿದೆ. ಕೇತನ್‌ ಅವರ ತಾಯಿ ರಾಖಿ ಅಗರ್ವಾಲ್ ನ್ಯಾಯಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ (PM Narendra Modi) ಭಾವನಾತ್ಮಕ ಪತ್ರ ಬರೆದಿದ್ದು, ಮಗನ ಪ್ರಕರಣವು ಮತ್ತೊಂದು ಪ್ರಕರಣದ ಕಡತವಾಗಿ ಉಳಿಸದಂತೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಜುಲೈ 13ರಂದು ಪ್ರಧಾನಿ ಮೋದಿ ಅವರಿಗೆ ಇಮೇಲ್ ಮಾಡಿದ ಅವರು, ಒಬ್ಬ ತಾಯಿಯಾಗಿ ತಮ್ಮ ಮಗನ ಬಗ್ಗೆ ಕಂಡ ಕನಸುಗಳನ್ನು ತೆರೆದಿಟ್ಟಿದ್ದಾರೆ. ಮಗುವನ್ನು ದಹನ ಮಾಡುವ ನೋವನ್ನು ರಾಖಿ ಅಗರ್ವಾಲ್ ವಿವರಿಸಿದ್ದಾರೆ.

“ಪ್ರತಿಯೊಬ್ಬ ತಾಯಿಯಂತೆ, ಕೇತನ್ ನಮ್ಮೊಂದಿಗೆ ಸುಂದರವಾದ ಜೀವನವನ್ನು ಕಟ್ಟಿಕೊಳ್ಳುವುದನ್ನು, ಮದುವೆಯಾಗುವುದನ್ನು ಮತ್ತು ಬೆಳೆಯುವುದನ್ನು ನೋಡಬೇಕೆಂದು ನಾನು ಕನಸು ಕಂಡಿದ್ದೆ. ಬದಲಾಗಿ, ನನ್ನ ಮಗುವಿನ ಅಂತ್ಯಕ್ರಿಯೆಯನ್ನು ನಾನು ಮಾಡಬೇಕಾಯಿತು. ಒಬ್ಬ ತಾಯಿಗೆ, ಇದಕ್ಕಿಂತ ದೊಡ್ಡ ನೋವು ಇನ್ನೊಂದಿಲ್ಲ” ಎಂದು ದುಃಖಿತರಾಗಿ ಬರೆದಿದ್ದಾರೆ.

ಕೇತನ್ ಅಗರ್ವಾಲ್ ಕೊಲೆಗೆ ಸಂಚು ರೂಪಿಸುವ ಮೊದಲೇ ಮದುವೆಯಾಗಿದ್ದರಾ ಸಿಯಾ-ಚೇತನ್?

ತಮ್ಮ ಮಗನ ಕ್ರೂರ ಹತ್ಯೆಯ ಬಗ್ಗೆ ತಿಳಿಸಿದ ರಾಖಿ ಅಗರ್ವಾಲ್, ಕೇತನ್ ಸಾವಿನೊಂದಿಗೆ ಪ್ರಪಂಚವನ್ನೇ ಕಳೆದುಕೊಂಡಿದ್ದಾಗಿ ಹೇಳಿದ್ದಾರೆ. “ನಮ್ಮ ಮನೆಯ ಪ್ರತಿಯೊಂದು ಮೂಲೆಯೂ ನನಗೆ ಅವನನ್ನು ನೆನಪಿಸುತ್ತದೆ. ಅವನ ಕೋಣೆ, ಅವನ ಬಟ್ಟೆಗಳು, ಅವನ ಫೋಟೊಗಳು ಮತ್ತು ಅವನ ನಗುವನ್ನು ಬದಲಿಸಿದ ಮೌನವು ಅವನು ಎಂದಿಗೂ ಹಿಂತಿರುಗುವುದಿಲ್ಲ ಎನ್ನುವುದನ್ನು ಪ್ರತಿದಿನ ನೆನಪಿಸುತ್ತದೆ” ಎಂದು ಭಾವುಕರಾಗಿದ್ದಾರೆ.

ಆಘಾತದ ಮೇಲೆ ಆಘಾತ

ಅಗರ್ವಾಲ್ ಕುಟುಂಬಕ್ಕೆ ತಿಂಗಳ ಅಂತರದಲ್ಲಿ ಎರಡೆರಡು ಆಘಾತ ಎದುರಾಗಿದೆ. ಮೊಮ್ಮಗನ ಮರಣದ ನಂತರ ಅಸ್ವಸ್ಥರಾಗಿದ್ದ ಕೇತನ್ ಅವರ ತಾತ ದೇವಿಚಂದ್ ಅಗರ್ವಾಲ್ ಮೊಮ್ಮಗನ ಹತ್ಯೆಯ 20 ದಿನಗಳ ನಂತರ ಹೃದಯಾಘಾತದಿಂದ ನಿಧನರಾದರು. ಅವರು ಕೇತನ್‌ನನ್ನು ತುಂಬಾ ಹಚ್ಚಿಕೊಂಡಿದ್ದರು. ಮೊಮ್ಮಗನನ್ನು ಕಳೆದುಕೊಂಡ ದುಃಖವನ್ನು ಅವರಿಗೆ ಸಹಿಸಲು ಸಾದ್ಯವಾಗಲಿಲ್ಲ ಎಂದು ರಾಖಿ ತಿಳಿಸಿದ್ದಾರೆ.

ತಾನೊಬ್ಬ ಕೇವಲ ಒಬ್ಬ ತಾಯಿ, ನ್ಯಾಯವನ್ನು ಕೇಳುತ್ತಿರುವುದಾಗಿ ಹೇಳಿದ್ದಾರೆ. ಸಹಾನುಭೂತಿ ಅಥವಾ ಯಾವುದೇ ವಿಶೇಷ ಉಪಕಾರವನ್ನು ಬಯಸುತ್ತಿಲ್ಲ ಎಂದೂ ಉಲ್ಲೇಖಿಸಿದ್ದಾರೆ. ತಮ್ಮ ಮಗನನ್ನು ಕೊಂದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಬರೆದಿದ್ದಾರೆ. “ದಯವಿಟ್ಟು ಕೇತನ್ ಕೇವಲ ಮತ್ತೊಂದು ಪ್ರಕರಣವಾಗಲು ಬಿಡಬೇಡಿ. ಅವನು ಯಾರೊಬ್ಬರ ಮಗ, ಯಾರೊಬ್ಬರ ಮೊಮ್ಮಗ, ಯಾರೊಬ್ಬರ ಸಹೋದರ, ಆದರೆ ಅವನು ನನ್ನ ಪ್ರಪಂಚ” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಕಳೆದ ವಾರ ಕೇತನ್ ಅವರ ತಂದೆ ವಿಶಾಲ್ ಅಗರ್ವಾಲ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ತ್ವರಿತ ತನಿಖೆ ಮತ್ತು ಶೀಘ್ರ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದರು. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಅವರು ಆಗ್ರಹಿಸಿದ್ದರು.