ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕೊನೆಗೂ ಹೊರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಬಂತು ಮೊದಲ ತೈಲ ಹಡಗು; ಮುಂಬೈ ಬಂದರಿಗೆ ತಲುಪಿದ್ದು ಟ್ಯಾಂಕರ್‌ ಅಲ್ಲ ಕೋಟ್ಯಂತರ ಭಾರತೀಯರ ನಿರೀಕ್ಷೆ

First oil tanker reaches India: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಮಧ್ಯೆ ಭಾರತೀಯ ಕ್ಯಾಪ್ಟನ್ ಮುನ್ನಡೆಸುತ್ತಿರುವ ಲೈಬೀರಿಯನ್ ಧ್ವಜವನ್ನು ಹೊಂದಿರುವ ಕಚ್ಚಾ ತೈಲ ಟ್ಯಾಂಕರ್, ಹೊರ್ಮುಜ್ ಜಲಸಂಧಿಯನ್ನು ದಾಟಿ ಮುಂಬೈ ಬಂದರನ್ನು ತಲುಪಿದೆ. ಇರಾನ್ ಈ ಹಡಗಿಗೆ ಅನುಮತಿ ನೀಡಿದ ನಂತರವೇ ಇದು ಹೊರ್ಮುಜ್ ಜಲಸಂಧಿಯನ್ನು ದಾಟಿದೆ.

ಹೊರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಬಂತು ತೈಲ ಹಡಗು

ಹೊರ್ಮುಜ್ ಜಲಸಂಧಿಯನ್ನು ದಾಟಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -

Priyanka P
Priyanka P Mar 12, 2026 2:18 PM

ಮುಂಬೈ, ಮಾ. 12: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ (Middle east crisis) ಮಧ್ಯೆ ಭಾರತಕ್ಕೆ ಗುಡ್‌ನ್ಯೂಸ್‌ ಸಿಕ್ಕಿದೆ. ಲೈಬೀರಿಯನ್ ಧ್ವಜವನ್ನು ಹೊಂದಿರುವ ಕಚ್ಚಾ ತೈಲ ಹಡಗು ಇರಾನ್‌ನ ಹೊರ್ಮುಜ್ ಜಲಸಂಧಿಯನ್ನು (Strait of Hormuz) ದಾಟಿ ಮುಂಬೈ ಬಂದರನ್ನು (Mumbai port) ತಲುಪಿದೆ. ಈ ಹಡಗನ್ನು ಭಾರತೀಯ ಕ್ಯಾಪ್ಟನ್ ಮುನ್ನಡೆಸುತ್ತಿದ್ದಾರೆ. ಶೆನ್‌ಲಾಂಗ್ ಸ್ಯೂಝ್‌ಮ್ಯಾಕ್ಸ್ ಎಂಬ ಈ ಟ್ಯಾಂಕರ್ ಸೌದಿ ಅರೇಬಿಯಾದ ರಾಸ್ ತನುರಾ ಬಂದರಿಂದ ಕಚ್ಚಾ ತೈಲವನ್ನು ತುಂಬಿಸಿಕೊಂಡ ಬುಧವಾರ (ಮಾ. 11) ಮುಂಬೈ ತಲುಪಿದೆ. ಇರಾನ್ ಈ ಹಡಗಿಗೆ ಸಣ್ಣ ಜಲಮಾರ್ಗದ ಮೂಲಕ ಸಾಗಲು ಅನುಮತಿ ನೀಡಿದ ನಂತರವೇ ಇದು ಹೊರ್ಮುಜ್ ಜಲಸಂಧಿಯನ್ನು ದಾಟಿದೆ.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಇರಾನ್ ಸಚಿವ ಅಬ್ಬಾಸ್ ಅರಗ್ಚಿ ನಡುವಿನ ಮಾತುಕತೆಯ ನಂತರ ಇರಾನ್, ಭಾರತೀಯ ತೈಲ ಟ್ಯಾಂಕರ್‌ಗಳಿಗೆ ಹೊರ್ಮುಜ್ ಜಲಸಂಧಿಯ ಮೂಲಕ ಸಾಗಲು ಅವಕಾಶ ನೀಡಿದ ನಂತರ ಈ ಹಡಗು ಆಗಮಿಸಿದೆ ಎಂದು ಮೂಲಗಳು ತಿಳಿಸಿವೆ. ಲೈಬೀರಿಯಾ ಧ್ವಜ ಹೊತ್ತ ಟ್ಯಾಂಕರ್ ಮಾರ್ಚ್ 1ರಂದು ಸೂಕ್ಷ್ಮ ಕಾರಿಡಾರ್‌ನಲ್ಲಿ ಸಂಚರಿಸುವ ಮೊದಲು ರಾಸ್ ತನುರಾದಿಂದ ಹೊರಟಿತ್ತು ಎಂದು ವರದಿಯೊಂದು ತಿಳಿಸಿದೆ.

ಹೊರ್ಮುಜ್ ಜಲಸಂಧಿ ದಾಟಿ ಮುಂಬೈಗೆ ಬಂದ ಹಡಗು:



ಹೊರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ನಿರ್ಣಾಯಕ ಕಡಲ ಚಾಕ್‌ಪಾಯಿಂಟ್‌ಗಳಲ್ಲಿ ಒಂದಾಗಿದೆ. ಇದರ ಮೂಲಕ ಜಾಗತಿಕ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಗಮನಾರ್ಹ ಪಾಲು ಹಾದುಹೋಗುತ್ತದೆ. ಫೆಬ್ರವರಿ 28ರಂದು ಇರಾನ್‌ ರಾಜಧಾನಿ ಟೆಹರಾನ್‌ ವಿರುದ್ಧ ಅಮೆರಿಕ-ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ ಇರಾನ್ ಈ ಜಲಸಂಧಿಯ ಮೇಲೆ ನಿಯಂತ್ರಣವನ್ನು ಬಿಗಿಗೊಳಿಸಿದೆ. ಇದು ಜಾಗತಿಕ ತೈಲ ಪೂರೈಕೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.

ವಿಡಿಯೊ ನೋಡಿ:



ಈ ಮಾರ್ಗವು ಬಹುತೇಕ ಮುಚ್ಚುವ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ, ವಿಶ್ವದ ಮೂರನೇ ಅತಿದೊಡ್ಡ ತೈಲ ಬಳಕೆದಾರ ದೇಶವಾದ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಹೆಚ್ಚಿಸುವಂತಹ ಪರ್ಯಾಯ ಮಾರ್ಗಗಳನ್ನು ಪರಿಶೀಲಿಸಲು ಆರಂಭಿಸಿದೆ.

ಈ ಮಧ್ಯೆವನೌಕಾಯಾನ ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, ಪ್ರಸ್ತುತ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ 28 ಭಾರತೀಯ ಧ್ವಜ ಹೊಂದಿರುವ ಹಡಗುಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಹೊರ್ಮುಜ್ ಜಲಸಂಧಿಯ ಪಶ್ಚಿಮ ಭಾಗದಲ್ಲಿ 677 ಭಾರತೀಯ ನಾವಿಕರನ್ನು ಹೊತ್ತ 24 ಹಡಗುಗಳಿದ್ದು, ಜಲಸಂಧಿಯ ಪೂರ್ವ ಭಾಗದಲ್ಲಿ 101 ಭಾರತೀಯ ನಾವಿಕರೊಂದಿಗೆ 4 ಹಡಗುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವಾಲಯ ತಿಳಿಸಿದೆ.

ಕೊನೆಗಾಣುತ್ತಾ ಯುದ್ಧ; ಕದನ ವಿರಾಮಕ್ಕೆ 3 ಷರತ್ತುಗಳನ್ನು ಮುಂದಿಟ್ಟ ಇರಾನ್‌!

ಭಾರತೀಯ ಹಡಗುಗಳು ಮತ್ತು ನಾವಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಫೆಬ್ರವರಿ 28ರಿಂದ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲು ಹಾಗೂ ಅಗತ್ಯ ಸಹಾಯ ಸಂಯೋಜಿಸಲು ಸಚಿವಾಲಯ ಮತ್ತು ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್‍ನಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸುತ್ತಿದೆ.

ಫೆಬ್ರವರಿ ಅಂತ್ಯದಲ್ಲಿ ಇಸ್ರೇಲ್ ಮತ್ತು ಅಮೆರಿಕ ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ ನಂತರ ಇರಾನ್ ಈ ಮಾರ್ಗದಲ್ಲಿ ಕನಿಷ್ಠ 16 ಹಡಗುಗಳ ಮೇಲೆ ದಾಳಿ ಮಾಡಿದೆ. ತೈಲ ಬೆಲೆಗಳು ಬ್ಯಾರೆಲ್‌ಗೆ ಡಾಲರ್ 200ಕ್ಕೆ ಏರಿಕೆಯಾಗಬಹುದು. ಇದು ಪ್ರಸ್ತುತ ಮಟ್ಟಕ್ಕಿಂತ ಎರಡು ಪಟ್ಟು ಹೆಚ್ಚಾಗಬಹುದು ಎಂದು ಇರಾನ್ ಎಚ್ಚರಿಸಿದೆ.