ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎವರೆಸ್ಟ್ ಬ್ರ್ಯಾಂಡ್ ವಿರುದ್ಧ ಕಠಿಣ ಕ್ರಮ: ಹಿಂಗ್ ಮಾರಾಟಕ್ಕೆ ತಾತ್ಕಾಲಿಕ ನಿಷೇಧ, 3 ಮಸಾಲೆ ಪದಾರ್ಥಗಳಲ್ಲಿ ನಿಯಮ ಉಲ್ಲಂಘನೆ ಪತ್ತೆ

FSSAI Takes Strict Action Against Everest Brand: ಎವರೆಸ್ಟ್ ಬ್ರ್ಯಾಂಡ್ ವಿರುದ್ಧ ಎಫ್ಎಸ್ಎಸ್ಎಐ ಕಠಿಣ ಕ್ರಮ ಕೈಗೊಂಡಿದೆ. ನಿಯಮಗಳ ಉಲ್ಲಂಘನೆಗೆ ಸೂಕ್ತ ವಿವರಣೆ ನೀಡುವಂತೆ ಮತ್ತು ನಿಗದಿಪಡಿಸಿದ ಮಾನದಂಡಗಳನ್ನು ಹೇಗೆ ಪಾಲಿಸಲಾಗುವುದು ಎಂಬುದರ ಕುರಿತು ವಿವರವಾದ ಕಾರ್ಯಯೋಜನೆಗಳನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದೆ.

ಎವರೆಸ್ಟ್ ಬ್ರ್ಯಾಂಡ್‌ನ ಹಿಂಗ್ ನಿಷೇಧ

ಎವರೆಸ್ಟ್ ಬ್ರ್ಯಾಂಡ್‌ (ಸಂಗ್ರಹ ಚಿತ್ರ) -

Priyanka P
Priyanka P Aug 29, 2026 7:55 PM

ನವದೆಹಲಿ, ಆ. 29: ಪ್ರಯೋಗಾಲಯ ಪರೀಕ್ಷೆಗಳಲ್ಲಿ ಉತ್ಪನ್ನಗಳು ಕಳಪೆ ಗುಣಮಟ್ಟದ್ದಾಗಿರುವುದು ಪತ್ತೆಯಾದ ನಂತರ, ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಎವರೆಸ್ಟ್ ಫುಡ್ ಪ್ರಾಡಕ್ಟ್ಸ್ (Everest brand) ಮತ್ತು ಲಾಲ್ಜೀ ಗೋಧೂ ತಯಾರಿಸಿದ ಹಿಂಗ್ ಮಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ನಿಯಮಾವಳಿಗಳ ಉಲ್ಲಂಘನೆಗೆ ಸೂಕ್ತ ವಿವರಣೆ ನೀಡುವಂತೆ ಮತ್ತು ನಿಗದಿಪಡಿಸಿದ ಮಾನದಂಡಗಳನ್ನು ಹೇಗೆ ಪಾಲಿಸಲಾಗುವುದು ಎಂಬುದರ ಕುರಿತು ವಿವರವಾದ ಕಾರ್ಯಯೋಜನೆಗಳನ್ನು ಸಲ್ಲಿಸುವಂತೆ ಕಂಪನಿಗಳಿಗೆ ನಿರ್ದೇಶನ ನೀಡಿದೆ.

ಅಲ್ಲದೆ, ಈಗಾಗಲೇ ಮಾರುಕಟ್ಟೆಯಲ್ಲಿರುವ ಗುಣಮಟ್ಟವಿಲ್ಲದ ಉತ್ಪನ್ನಗಳನ್ನು ಸ್ವಯಂಪ್ರೇರಿತವಾಗಿ ಹಿಂಪಡೆಯುವಂತೆ ಸೂಚನೆ ನೀಡಲಾಗಿದೆ. ಕಂಪನಿಗಳು ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುವವರೆಗೆ ಈ ನಿಷೇಧವು ಜಾರಿಯಲ್ಲಿರಲಿದೆ.

ಎವರೆಸ್ಟ್‌ನ ಎಗ್ ಕರಿ ಮಸಾಲ, ಚಿಕನ್ ಮಸಾಲ ಮತ್ತು ಗರಂ ಮಸಾಲಗಳಲ್ಲಿಯೂ ನಿಯಮ ಉಲ್ಲಂಘನೆಯಾಗಿರುವುದನ್ನು ಎಫ್‌ಎಸ್‌ಎಸ್‌ಎಐ ಪತ್ತೆಹಚ್ಚಿದೆ. ಆದರೆ ಈ 3 ಉತ್ಪನ್ನಗಳನ್ನು ನಿಷೇಧಿಸಲಾಗಿಲ್ಲ. ಗ್ರಾಹಕರ ದೂರಿನ ಮೇರೆಗೆ ಪ್ರಮುಖ ಹಿಂಗ್ ಬ್ರ್ಯಾಂಡ್‌ಗಳ ಮೇಲೆ ತನಿಖೆ ಪ್ರಾರಂಭಿಸಲಾಗಿದೆ ಎಂದು FSSAI ಹೇಳಿಕೆಯಲ್ಲಿ ತಿಳಿಸಿದೆ. ಮುಂಬೈಯಲ್ಲಿರುವ ಕಂಪನಿಗಳ ಉತ್ಪಾದನಾ ಘಟಕಗಳು ಮತ್ತು ಗುಜರಾತ್‌ನ ಉಂಬರ್‌ಗಾಂವ್‌ನಲ್ಲಿರುವ ಎವರೆಸ್ಟ್ ಘಟಕದಿಂದ ಸಂಗ್ರಹಿಸಲಾದ ಮಾದರಿಗಳು ನಿಗದಿತ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿವೆ.

ರೈಲಿನಲ್ಲಿ ಸಮೋಸ ಬುಟ್ಟಿ ಮೇಲೆ ಕಾಲಿಟ್ಟು ಕುಳಿತ ವ್ಯಾಪಾರಿ

ನಿಯಮಗಳ ಅಡಿಯಲ್ಲಿ, ಹಿಂಗ್ ಕನಿಷ್ಠ ಶೇಕಡಾ 5ರಷ್ಟು ಆಲ್ಕೋಹಾಲ್-ಕರಗುವ ಸಾರವನ್ನು ಹೊಂದಿರಬೇಕು. ಪರೀಕ್ಷೆಗಳ ಮಾದರಿಗಳಲ್ಲಿ ಕೇವಲ ಶೇಕಡಾ 0ರಿಂದ 3ರಷ್ಟು ಮಾತ್ರ ಇರುವುದು ಕಂಡುಬಂದಿದೆ. ಉತ್ಪಾದಕರು ಅಗತ್ಯಕ್ಕಿಂತ ಶೇಕಡಾ 30ರಿಂದ 40 ಕಡಿಮೆ ಕಚ್ಚಾ ಹಿಂಗ್ ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ ಎಂಬುದಾಗಿ ಆಹಾರ ಸುರಕ್ಷತಾ ನಿಯಂತ್ರಕ ತಿಳಿಸಿದೆ.

ಲಾಲ್ಜೀ ಗೋಧೂ ಘಟಕದಿಂದ ಸಂಗ್ರಹಿಸಲಾದ ಆರು ಬಗೆಯ ಕಚ್ಚಾ ಹಿಂಗ್‌ಗಳು ಶೇಕಡಾ 15ರಿಂದ 32ರಷ್ಟು ಪಿಷ್ಟವನ್ನು ಹೊಂದಿರುವುದು ಬೆಳಕಿಗೆ. ಇದು ಅನುಮತಿಸಲಾದ ಗರಿಷ್ಠ ಶೇಕಡಾ 1ಕ್ಕಿಂತ ಹೆಚ್ಚಿನದಾಗಿದೆ.

ಹೆಚ್ಚಿನ ಪ್ರಮಾಣದ ಸಕ್ಕರೆ, ಉಪ್ಪು ಅಥವಾ ಸಚುರೇಟೆಡ್ ಕೊಬ್ಬನ್ನು ಹೊಂದಿರುವ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮುಂಭಾಗದಲ್ಲಿ ಗಾಢ ಕೆಂಪು ಬಣ್ಣದ, ಷಡ್ಭುಜಾಕೃತಿಯ ಎಚ್ಚರಿಕೆ ಲೇಬಲ್ ಅನ್ನು ಅಳವಡಿಸಲು ಪ್ರಸ್ತಾಪಿಸಿರುವುದಾಗಿ ಎಫ್‌ಎಸ್‌ಎಸ್‌ಎಐ (FSSAI) ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಪ್ಯಾಕೆಟ್‌ಗಳ ಮುಂಭಾಗದಲ್ಲಿ ಎಚ್ಚರಿಕೆ ಲೇಬಲ್‌ಗಳನ್ನು ಪರಿಚಯಿಸುವಲ್ಲಿ ವಿಳಂಬ ಮಾಡುತ್ತಿರುವುದಕ್ಕಾಗಿ ಎಫ್‌ಎಸ್‌ಎಸ್‌ಎಐ (FSSAI) ಮತ್ತು ಸರ್ಕಾರವನ್ನು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ತರಾಟೆಗೆ ತೆಗೆದುಕೊಂಡ ಕೆಲವೇ ದಿನಗಳಲ್ಲಿ ಈ ಪ್ರಸ್ತಾಪವನ್ನು ಸಲ್ಲಿಸಲಾಗಿದೆ.