Operation Sindoor: "ಪಿಒಕೆ ನಮ್ಮದು" ಪಾಕಿಸ್ತಾನದ ವಿರುದ್ಧ ಗುಡುಗಿದ ಮೋದಿ
ಪಾಕಿಸ್ತಾನದೊಂದಿಗಿನ ಸುಮಾರು 100 ಗಂಟೆಗಳ ಮಿಲಿಟರಿ ಸಂಘರ್ಷವನ್ನು ನಿಲ್ಲಿಸಿದ ಕದನ ವಿರಾಮದ ನಂತರ ಸೋಮವಾರ ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಭಾಷಣದಲ್ಲಿ ಮೋದಿ, ಭಾರತೀಯ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದರು. ಭಾರತ ಹಾಗೂ ಪಾಕಿಸ್ತಾನದ ಕದನ ವಿರಾಮದ ಕುರಿತು ಮಾತನಾಡಿದ ಅವರು, ಪಾಕ್ ಜೊತೆಗೆ ಇನ್ನು ಯಾವುದೇ ಮಾತುಕತೆ ಇಲ್ಲ ಎಂದು ಹೇಳಿದ್ದಾರೆ.
 
                                -
 Vishakha Bhat
                            
                                May 12, 2025 9:14 PM
                                
                                Vishakha Bhat
                            
                                May 12, 2025 9:14 PM
                            ನವದೆಹಲಿ: ಪಾಕಿಸ್ತಾನದೊಂದಿಗಿನ ಸುಮಾರು 100 ಗಂಟೆಗಳ ಮಿಲಿಟರಿ ಸಂಘರ್ಷವನ್ನು ನಿಲ್ಲಿಸಿದ ಕದನ ವಿರಾಮದ ನಂತರ ಸೋಮವಾರ ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಭಾಷಣದಲ್ಲಿ ಮೋದಿ, ಭಾರತೀಯ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದರು. ಭಾರತ ಹಾಗೂ ಪಾಕಿಸ್ತಾನದ ಕದನ ವಿರಾಮದ ಕುರಿತು ಮಾತನಾಡಿದ ಅವರು, ಪಾಕ್ ಜೊತೆಗೆ ಇನ್ನು ಯಾವುದೇ ಮಾತುಕತೆ ಇಲ್ಲ. ಮಾತನಾಡುವುದೇನಿದ್ದರೂ, ಪಿಒಕೆ ಹಾಗೂ ಉಗ್ರರ ಸಂಹಾರದ ಕುರಿತು ಎಂದು ಅವರು ಹೇಳಿದ್ದಾರೆ. ತಮ್ಮ 22 ನಿಮಿಷಗಳ ಭಾಷಣದಲ್ಲಿ ಪ್ರಧಾನಿಯವರು, ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಪಾಕ್ ಸೇನೆ ಮತ್ತು ಸರ್ಕಾರವನ್ನು ಟೀಕಿಸಿದ್ದಾರೆ.
ಪಾಕಿಸ್ತಾನ ಭಯೋತ್ಪಾದಕತೆಯನ್ನು ಪೋಷಿಸುತ್ತಿದೆ. ಒಂದಲ್ಲಾ ಒಂದು ಇದೇ ಭಯೋತ್ಪಾದಕತೆ ನಿಮ್ಮನ್ನ ಮುಳುಗಿಸುತ್ತದೆ ಎಂದು ಮೋದಿ ಹೇಳಿದ್ದಾರೆ. ಈ ಹಿಂದಿನ ಸರ್ಕಾರಗಳು ಪಿಒಕೆಯ ವಿಷಯದಲ್ಲಿ ನಡೆದುಕೊಂಡತೆ ನಾವು ನಡೆದುಕೊಳ್ಳುವುದಿಲ್ಲ. ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ನಾವು ಎಂದಾದರೂ ಪಾಕಿಸ್ತಾನದೊಂದಿಗೆ ಮಾತನಾಡಿದರೆ, ಅದು ಭಯೋತ್ಪಾದನೆ ಮತ್ತು ಪಿಒಕೆ ಬಗ್ಗೆ ಮಾತ್ರ" ಎಂದು ಅವರು ಒತ್ತಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Operation Sindoor: ಪಾಕಿಸ್ತಾನದ ವಾಯು ಪ್ರದೇಶದೊಳಗೆ ನುಗ್ಗಿ ಹೊಡೆದ ಭಾರತ; ಕರಾಚಿಯ ಮಾಲಿರ್ ಕ್ಯಾಂಟ್ ಮೇಲೆ ದಾಳಿ
ಉಗ್ರರನ್ನು ಮಟ್ಟ ಹಾಕಲು ಭಾರತಕ್ಕೆ ಬೆಂಬಲ ಕೊಡುವ ಬದಲು ಪಾಕಿಸ್ತಾನ ನಮ್ಮ ಅಮಾಯಕರ ಮೇಲೆ ದಾಳಿ ಮಾಡಿದೆ. ಪಹಲ್ಗಾಮ್ ದಾಳಿ ಉಗ್ರರು , ಮಾಸ್ಟರ್‌ಮೈಂಡ್‌ಗಳು ಖುಲ್ಲಾಂ ಖುಲ್ಲಾ ಓಡಾಡುತ್ತಿದ್ದರು. ಅವರನ್ನು ಹುಡುಕಿ ಹುಡುಕಿ ಕೊಂದು ಹಾಕಿದ್ದೇವೆ. ನಮ್ಮ ದಾಳಿಗೆ ಹೆದರಿದ ಪಾಕಿಸ್ತಾನ ಜಗತ್ತಿನ ಮುಂದೆ ಕಣ್ಣೀರಿಟ್ಟಿತು ಎಂದು ತಿಳಿಸಿದ್ದಾರೆ. ಪ್ರತಿಯೊಬ್ಬ ಭಾರತೀಯ ಶಾಂತಿಯಿಂದ ಬದುಕಲು ಶಕ್ತಿಯ ಉಪಯೋಗವೂ ಮುಖ್ಯ. ನೀರು ಮತ್ತು ರಕ್ತ ಜೊತೆ ಜೊತೆಗೆ ಹರಿಯಲು ಸಾಧ್ಯವಿಲ್ಲ. ಅಂತೆಯೇ ವ್ಯಾಪಾರ ಮತ್ತು ಉಗ್ರವಾದ ಜೊತೆಗಿರಲು ಸಾಧ್ಯವಿಲ್ಲ. ಪಾಕಿಸ್ತಾನ ಉಗ್ರರನ್ನು ನಿರ್ಣಾಮ ಮಾಡಲೇಬೇಕು ಎಂದು ಪಾಕ್‌ಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
 
            