ಏನಿದು ಎಂ-ನರೇಗಾ ಬದಲು ಜಾರಿಗೆ ಬರುವ ಜಿ ರಾಮ್ ಜಿ ಬಿಲ್?
48 ಗಂಟೆಗಳಲ್ಲಿ ಸಂಸತ್ತಿನಲ್ಲಿ ಅನುಮೋದನೆ ಪಡೆದ ಈ ಹೊಸ ಮಸೂದೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಔಪಚಾರಿಕ ಸಹಿಯ ನಂತರ ಕಾನೂನಾಗುವ ಸಾಧ್ಯತೆಯಿದೆ. 2005 ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಇದು ಬದಲಾಯಿಸುತ್ತದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಡಿ.19: ಪ್ರತಿಪಕ್ಷಗಳ ತೀವ್ರ ವಿರೋಧ, ಗದ್ದಲದ ನಡುವೆಯೇ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ)ಯನ್ನು(MNREGA) ಬದಲಿಸಿ ವರ್ಷಕ್ಕೆ 125 ದಿನಗಳ ಕಾಲ ಉದ್ಯೋಗ ಖಾತರಿ ಒದಗಿಸುವ ‘ವಿಬಿ- ಜಿ ರಾಮ್ ಜಿ’(G RAM G) ವಿಧೇಯಕಕ್ಕೆ ಲೋಕಸಭೆಯಲ್ಲಿ ಗುರುವಾರ ಧ್ವನಿಮತದ ಮೂಲಕ ಅಂಗೀಕಾರ ನೀಡಲಾಗಿತ್ತು.
ಇಂಥದ್ದೊಂದು ಬದಲಾವಣೆ ಮೂಲಕ ಕೇಂದ್ರ ಸರ್ಕಾರ ಗ್ರಾಮೀಣ ಆರ್ಥಿಕತೆಯನ್ನು ನಾಶ ಮಾಡಸುತ್ತಿದೆ ಮತ್ತು ಮಹಾತ್ಮಾ ಗಾಂಧೀಜಿ ಹೆಸರು ಕೈಬಿಡುವ ಮೂಲಕ ಅವರ ತತ್ವಗಳನ್ನು ಕಡೆಗಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ತೀವ್ರ ಆಕ್ರೋಶ ಹೊರಹಾಕಿದರು. ಜತೆಗೆ, ಜಿ ರಾಮ್ ಜಿ ವಿಧೇಯಕದ ಪ್ರತಿಗಳನ್ನು ಹರಿದು ಸ್ಪೀಕರ್ ಕುರ್ಚಿಯತ್ತ ಎಸೆದರು. ಆಗ ಗದ್ದಲದ ನಡುವೆಯೇ ಜಿ ರಾಮ್ ಜಿ ವಿಧೇಯಕಕ್ಕೆ ಧ್ವನಿ ಮತದ ಮೂಲಕ ಅಂಗೀಕಾರ ನೀಡಲಾಯಿತು.
20 ವರ್ಷಗಳಷ್ಟು ಹಳೆಯದಾದ ಈ ಯೋಜನೆಯನ್ನು ನವೀಕರಿಸುವ ಅಗತ್ಯವನ್ನು ಒತ್ತಿ ಹೇಳುವ ಮೂಲಕ ಸರ್ಕಾರ ತನ್ನ ಹೊಸ ಯೋಜನೆಯನ್ನು ಸಮರ್ಥಿಸಿಕೊಂಡಿದೆ. ಮನರೇಗಾ ಅಸಮರ್ಥ ಮತ್ತು ಭ್ರಷ್ಟಾಚಾರದಿಂದ ಕೂಡಿದೆ ಎಂದು ಅದು ವಾದಿಸಿದೆ.
48 ಗಂಟೆಗಳಲ್ಲಿ ಸಂಸತ್ತಿನಲ್ಲಿ ಅನುಮೋದನೆ ಪಡೆದ ಈ ಹೊಸ ಮಸೂದೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಔಪಚಾರಿಕ ಸಹಿಯ ನಂತರ ಕಾನೂನಾಗುವ ಸಾಧ್ಯತೆಯಿದೆ. 2005 ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಇದು ಬದಲಾಯಿಸುತ್ತದೆ.
ಏನಿದು ಜಿ ರಾಮ್ ಜಿ ಬಿಲ್?
ಕೇಂದ್ರ ಸರ್ಕಾರದ 2047ರ ವಿಕಸಿತ ಭಾರತದ ಪರಿಕಲ್ಪನೆಗೆ ಸರಿಹೊಂದುವಂತೆ ನರೇಗಾ ಯೋಜನೆ ಬದಲಿಗೆ ಜಾರಿಗೆ ತರುತ್ತಿರುವ ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬಿಲ್ ಇದಾಗಿದೆ. ಈ ವಿಧೇಯಕದಡಿ ಪ್ರತಿ ಗ್ರಾಮೀಣ ಕುಟುಂಬಕ್ಕೆ ನರೇಗಾದಡಿ ಸಿಗುತ್ತಿದ್ದ 100 ದಿನಗಳ ಕೆಲಸವನ್ನು 125ಕ್ಕೆ ಹೆಚ್ಚಿಸಲಾಗಿದೆ. ಈ ಹಿಂದೆ ನರೇಗಾ ಯೋಜನೆ ಕಾಮಗಾರಿಗಳಿಗೆ ಕೇಂದ್ರ ಸರ್ಕಾರವೇ ಹೆಚ್ಚಿನ ಅನುದಾನ ನೀಡುತ್ತಿತ್ತು. ಆದರೆ, ಈ ಹೊಸ ವಿಧೇಯಕದಡಿ ಕೇಂದ್ರ ಸರ್ಕಾರ ಶೇ.60ರಷ್ಟು ಅನುದಾನ ನೀಡಿದರೆ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೇ.40 ಅನುದಾನ ನೀಡಬೇಕಾಗಿದೆ. ಇದರಿಂದ ರಾಜ್ಯಗಳಿಗೆ ಹೆಚ್ಚಿನ ಹೊರೆ ಬೀಳುವ ನಿರೀಕ್ಷೆ ಇದೆ.
ಇದನ್ನೂ ಓದಿ ಶಿಲ್ಪಾ ಶೆಟ್ಟಿಯ ಮುಂಬೈ ಮನೆ ಮೇಲೆ ಐಟಿ ರೇಡ್ ಸುದ್ದಿ ಸುಳ್ಳಾ? ವಕೀಲ ಹೇಳಿದ್ದೇನು?
ಹೊಸ ಶಾಸನದ ಪ್ರಮುಖ ಅಂಶಗಳು ಖಾತರಿಪಡಿಸಿದ ಕೆಲಸದ ದಿನಗಳು, ಹಣಕಾಸಿನ ರಚನೆ ಮತ್ತು ನಿಧಿ ಹಂಚಿಕೆಯ ಮೇಲೆ ಹೆಚ್ಚಿದ ಫೆಡರಲ್ ನಿಯಂತ್ರಣ, ಇದನ್ನು ಸರ್ಕಾರವು "ಬೇಡಿಕೆ ಆಧಾರಿತ" ಕ್ಕಿಂತ "ಪ್ರಮಾಣಿತ" ಎಂದು ವಿವರಿಸಿದೆ. ಅಂದರೆ, "ವಸ್ತುನಿಷ್ಠ ನಿಯತಾಂಕಗಳ" ಆಧಾರದ ಮೇಲೆ ಪ್ರತಿ ರಾಜ್ಯವು ಪ್ರತಿ ವರ್ಷ ಎಷ್ಟು ಪಡೆಯುತ್ತದೆ ಎಂಬುದನ್ನು ಕೇಂದ್ರವು ನಿರ್ಧರಿಸುತ್ತದೆ.
ಖಾತರಿಪಡಿಸಿದ ಕೆಲಸದ ದಿನಗಳು
ʼಜಿ ರಾಮ್ ಜಿʼ 125 ದಿನಗಳ ಕೆಸಲ ನೀಡುತ್ತದೆ. ಆದರೆ ಕೇಂದ್ರದಿಂದ 'ಗ್ರಾಮೀಣ ಪ್ರದೇಶ'ದ ಅಧಿಸೂಚನೆ ಸೇರಿದಂತೆ ಷರತ್ತುಗಳಿವೆ. ಅಂದರೆ, ʼಜಿ ರಾಮ್ ಜಿʼ ಅಡಿಯಲ್ಲಿ ಉದ್ಯೋಗ ಖಾತರಿಗಳು ಕೇಂದ್ರ ಸರ್ಕಾರದಿಂದ 'ಗ್ರಾಮೀಣ' ಎಂದು ಪಟ್ಟಿ ಮಾಡದ ಪ್ರದೇಶಗಳಿಗೆ ವಿಸ್ತರಿಸುವುದಿಲ್ಲ.
ಹಣಕಾಸಿನ ವಿಚಾರದಲ್ಲಿ...
ಮನರೇಗಾ ಅಡಿಯಲ್ಲಿ ಕೇಂದ್ರವು ವೇತನ ಮತ್ತು ಕಚ್ಚಾ ವಸ್ತುಗಳು ಸೇರಿದಂತೆ ಎಲ್ಲಾ ವೆಚ್ಚಗಳಲ್ಲಿ ಸುಮಾರು 90 ಪ್ರತಿಶತವನ್ನು ಪಾವತಿಸುತ್ತಿತ್ತು. ಆದರೆ ʼಜಿ ರಾಮ್ ಜಿʼ ಅಡಿಯಲ್ಲಿ ಅದು ಬದಲಾಗುತ್ತದೆ. ರಾಜ್ಯಗಳು ಆ ಮೊತ್ತದ 40 ಪ್ರತಿಶತವನ್ನು ಪಾವತಿಸಬೇಕಾಗುತ್ತದೆ. ಆದರೆ ಬೆಟ್ಟಗುಡ್ಡದ ರಾಜ್ಯಗಳು ಮತ್ತು ಈಶಾನ್ಯದ ರಾಜ್ಯಗಳು ಕೇವಲ 10 ಪ್ರತಿಶತವನ್ನು ಪಾವತಿಸಬೇಕಾಗುತ್ತದೆ.