ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದೇಶದಲ್ಲಿ ಅನಿಲ ಕೊರತೆ; ರಿಲಯನ್ಸ್‌ನಿಂದ ಅನಿಲ ಉತ್ಪಾದನೆ ಹೆಚ್ಚಳದ ಬಗ್ಗೆ ಘೋಷಣೆ

LPG Crisis: ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ದೇಶಾದ್ಯಂತ ಅಡುಗೆ ಅನಿಲದ ಕೊರತೆ ಉಂಟಾಗಿದೆ. ಇದೀಗ ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಮಹತ್ತರವಾದ ಘೋಷಣೆ ಮಾಡಿದೆ. ಜಾಮ್ ನಗರದಲ್ಲಿ ಇರುವಂಥ ಸಂಸ್ಕರಣಾಗಾರ ಹಾಗೂ ಪೆಟ್ರೋಕೆಮಿಕಲ್ಸ್ ಸಮುಚ್ಚಯದಿಂದ ಎಲ್ ಪಿಜಿ ಉತ್ಪಾದನೆಯನ್ನು ಸ್ವಯಂಪ್ರೇರಿತವಾಗಿ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸುವುದಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ.

ರಿಲಯನ್ಸ್‌ನಿಂದ ಅನಿಲ ಉತ್ಪಾದನೆ ಹೆಚ್ಚಳದ ಬಗ್ಗೆ ಘೋಷಣೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Mar 11, 2026 12:54 PM

ಮುಂಬೈ: ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ದೇಶಾದ್ಯಂತ ಅಡುಗೆ ಅನಿಲದ ಕೊರತೆ ಉಂಟಾಗಿದೆ. ಇದೀಗ ರಿಲಯನ್ಸ್ (Reliance) ಇಂಡಸ್ಟ್ರೀಸ್ ನಿಂದ ಮಹತ್ತರವಾದ ಘೋಷಣೆ ಮಾಡಿದೆ. ಜಾಮ್ ನಗರದಲ್ಲಿ ಇರುವಂಥ (LPG Crisis) ಸಂಸ್ಕರಣಾಗಾರ ಹಾಗೂ ಪೆಟ್ರೋಕೆಮಿಕಲ್ಸ್ ಸಮುಚ್ಚಯದಿಂದ ಎಲ್ ಪಿಜಿ ಉತ್ಪಾದನೆಯನ್ನು ಸ್ವಯಂಪ್ರೇರಿತವಾಗಿ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸುವುದಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಜಾಮ್ ನಗರದಲ್ಲಿ ಇರುವ ಇದು ವಿಶ್ವದಲ್ಲಿಯೇ ಅತಿದೊಡ್ಡ ಸಂಯೋಜಿತ ಸಂಸ್ಕರಣೆ ಹಬ್ ಎಂಬ ದಾಖಲೆಗೆ ಪಾತ್ರವಾಗಿದೆ ಎಂದು ಕಂಪನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ. KG- D6 ಬ್ಲಾಕ್ ನಲ್ಲಿ ಉತ್ಪಾದನೆ ಆದಂಥ ಅನಿಲವನ್ನು ಆದ್ಯತೆ ವಲಯಗಳ ಕಡೆಗೆ ತಿರುಗಿಸಲಾಗುವುದು. ರಾಷ್ಟ್ರೀಯ ಇಂಧನ ಆದ್ಯತೆಗಳು ಹಾಗೂ ಸರ್ಕಾರಿ ಮಾರ್ಗದರ್ಶನದ ಅನ್ವಯ ಆದ್ಯತಾ ವಲಯಗಳಿಗೆ ಪೂರೈಕೆ ಬೆಂಬಲ ನೀಡುವುದಕ್ಕಾಗಿ ಇಂಥ ಮಹತ್ವದ ಘೋಷಣೆ ಮಾಡಿದೆ.

“ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ವಿಪರೀತದ ಏರಿಳಿತ ಕಾಣುತ್ತಿರುವ ಸಂದರ್ಭದಲ್ಲಿ, ಭಾರತೀಯ ಕುಟುಂಬಗಳಿಗೆ ಅಗತ್ಯವಾದ ಇಂಧನವನ್ನು ಅಡೆತಡೆಯೇ ಇಲ್ಲದೆ ಪೂರೈಕೆ ಮಾಡುತ್ತೇವೆ ಎಂದು ಖಾತ್ರಿ ಪಡಿಸುತ್ತೇವೆ. ಇದೀಗ ರಾಷ್ಟ್ರೀಯ ಆದ್ಯತೆಯಾಗಿದೆ,” ಎಂದು ಮುಕೇಶ್ ಅಂಬಾನಿ ನೇತೃತ್ವದ ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ತೈಲದಿಂದ ರಾಸಾಯನಿಕ ವ್ಯವಹಾರಗಳ ತನಕ ವ್ಯವಹಾರಗಳ ಸಮೂಹವಾದ ರಿಲಯನ್ಸ್ ಇಂಡಸ್ಟ್ರೀಸ್ ತಿಳಿಸಿರುವಂತೆ, ಹಗಲು-ರಾತ್ರಿ ನಮ್ಮ ತಂಡ ಸಂಸ್ಕರಣಾಗಾರದಿಂದ ಗರಿಷ್ಠ ಪ್ರಮಾಣದ ಉತ್ಪಾದನೆಗಾಗಿ ಶ್ರಮಿಸುತ್ತಿದೆ. ಮತ್ತು ಎಲ್ ಪಿಜಿ ಉತ್ಪಾದನೆ ವಿಸ್ತರಣೆಗೆ ಪ್ರಯತ್ನಿಸುತ್ತಿದೆ. ಈ ಶ್ರಮದ ಹಿಂದಿನ ಉದ್ದೇಶ ಏನೆಂದರೆ, ದೇಶೀಯ ಮಾರುಕಟ್ಟೆಗೆ ಸ್ಥಿರವಾದ ಹಾಗೂ ವಿಶ್ವಾಸಾರ್ಹ ಅನಿಲ ಪೂರೈಕೆ ಮಾಡುವುದಾಗಿದೆ.

LPG Price Hike: ಜನರಿಗೆ ಶಾಕ್‌ ಮೇಲೆ ಶಾಕ್‌; ಪೆಟ್ರೋಲ್‌ ಆಯ್ತು ,ಇದೀಗ LPG ಸಿಲಿಂಡರ್‌ ದರ 50 ರೂ. ಏರಿಕೆ

“ರಿಲಯನ್ಸ್ ಗೆ ಕೋಟ್ಯಂತರ ಭಾರತೀಯ ಕುಟುಂಬಗಳ ಯೋಗಕ್ಷೇಮ ಹಾಗೂ ಭಾರತೀಯ ಇಂಧನ ಭದ್ರತೆ ಯಾವಾಗಲೂ ಮೊದಲಿಗೆ ಬರುತ್ತದೆ. ನಾವು ಭಾರತ ಸರ್ಕಾರದ ಜೊತೆಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಮತ್ತು ರಾಷ್ಟ್ರೀಯ ಮಾರ್ಗದರ್ಶಿ ಸೂತ್ರಗಳಿಗೆ ಮತ್ತು ವಿತರಣೆ ಆದ್ಯತೆಗಳಿಗೆ ಸಂಪೂರ್ಣ ಬದ್ಧರಾಗಿದ್ದೇವೆ. ಇಂಧನ ಪೂರೈಕೆ ಯಾವ ವಲಯಕ್ಕೆ ಹಾಗೂ ಸಮುದಾಯಕ್ಕೆ ಬಹಳ ಅಗತ್ಯ ಆಗಿರುತ್ತದೋ ಅವರಿಗೆ ತಲುಪಿಸುವುದನ್ನು ಖಾತ್ರಿ ಪಡಿಸುತ್ತೇವೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ನಾವು ದೇಶದೊಂದಿಗೆ ದೃಢವಾಗಿ ನಿಲ್ಲುತ್ತೇವೆ ಮತ್ತು ಭಾರತದ ಇಂಧನ ಭದ್ರತೆಗೆ ಹಾಗೂ ದೇಶಕ್ಕೆ ಬೇಕಾದ ಅಗತ್ಯ ಇಂಧನ ಪೂರೈಕೆ ವಿಶ್ವಾಸಾರ್ಹತೆ ಉಳಿಯುವುದಕ್ಕೆ ಏನೆಲ್ಲ ಮಾಡುವುದಕ್ಕೆ ಸಾಧ್ಯವೋ ಆ ಎಲ್ಲವನ್ನೂ ಮಾಡುವುದಕ್ಕೆ ಬದ್ಧರಾಗಿದ್ದೇವೆ ಎಂದು ಕಂಪನಿ ಹೇಳಿದೆ.