ಅರುಣಾಚಲ ಪ್ರದೇಶದಲ್ಲಿ ಅಸ್ಸಾಂ ರೈಫಲ್ಸ್ ಗಸ್ತು ತಂಡದ ಮೇಲೆ ಉಗ್ರರ ದಾಳಿ; ಯೋಧ ಹುತಾತ್ಮ
Militant Attack: ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯಲ್ಲಿ ಭಾರತ–ಮ್ಯಾನ್ಮಾರ್ ಗಡಿ ಸಮೀಪ ಅಸ್ಸಾಂ ರೈಫಲ್ಸ್ ಗಸ್ತು ತಂಡದ ಮೇಲೆ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ. ನಾಂಪಾಂಗ್ ನಾಲಾ ಪ್ರದೇಶದಲ್ಲಿ ಬೆಳಗ್ಗೆ 6.30ರ ಸುಮಾರಿಗೆ ಘಟನೆ ನಡೆದಿದ್ದು, ದಾಳಿಯ ಬಳಿಕ ಭದ್ರತಾ ಪಡೆಗಳು ಕಾರ್ಯಾಚರಣೆ ತೀವ್ರಗೊಳಿಸಿವೆ.
ಸಾಂದರ್ಭಿಕ ಚಿತ್ರ -
ಇಟಾನಗರ, ಸೆ. 29: ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯ ಭಾರತ–ಮ್ಯಾನ್ಮಾರ್ ಗಡಿ (India–Myanmar Border) ಸಮೀಪ ಅಸ್ಸಾಂ ರೈಫಲ್ಸ್‌ನ (Assam Rifles) ಗಸ್ತು ತಂಡದ ಮೇಲೆ ಶಂಕಿತ ಉಗ್ರರು ಗುಂಡಿನ ದಾಳಿ (Militant Attack) ನಡೆಸಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆ. ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಘಟನೆ ಮಂಗಳವಾರ (ಸೆಪ್ಟೆಂಬರ್ 29) ಬೆಳಗ್ಗೆ ಸುಮಾರು 6.30ಕ್ಕೆ ನಾಂಪಾಂಗ್ ನಾಲಾ ಪ್ರದೇಶದಲ್ಲಿ ನಡೆದಿದೆ.
21 ಅಸ್ಸಾಂ ರೈಫಲ್ಸ್ ಸಿಬ್ಬಂದಿ ಗಡಿ ಬೇಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲಿ ನಿಯಮಿತ ಗಸ್ತು ನಡೆಸುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಶಂಕಿತ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ದಾಳಿಯಲ್ಲಿ 42 ವರ್ಷದ ಹವಿಲ್ದಾರ್ ಜಂಕ್‌ಖೋಯಿ ಕುಕಿ ಮೃತಪಟ್ಟಿದ್ದಾರೆ. ಗಾಯಗೊಂಡ ನಾಲ್ವರು ಸಿಬ್ಬಂದಿಯನ್ನು ತಕ್ಷಣ ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದ್ದು, ಅವರ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
🚨 ARUNACHAL PRADESH
— Shadow IND (@ShadowIND_IN) September 29, 2026
Assam Rifles Havildar Jankhokai Kuki, 42, was martyred on September 29 after an Assam Rifles patrol came under attack near Nampong Nallah in Changlang district, along the India–Myanmar border.
Preliminary reports suspect the involvement of NSCN-K-YA cadres.… pic.twitter.com/dnoCcx80zf
ಘಟನೆ ಬಳಿಕ ಭದ್ರತಾ ಪಡೆಗಳು ಪ್ರದೇಶದಲ್ಲಿ ಶೋಧ ಮತ್ತು ಕಾರ್ಯಾಚರಣೆಗಳನ್ನು ತೀವ್ರಗೊಳಿಸಿವೆ. ದಾಳಿಕೋರರನ್ನು ಪತ್ತೆಹಚ್ಚಲು ಹಾಗೂ ಗಡಿ ಪ್ರದೇಶದ ಭದ್ರತೆಯನ್ನು ಹೆಚ್ಚಿಸಲು ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ.
ಹತ್ಯೆಗೀಡಾದ ಮೂವರೂ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರು-ಅಮಿತ್ ಶಾ
ಪ್ರಾಥಮಿಕ ಮಾಹಿತಿಯಲ್ಲಿ NSCN (K-YA) ಬಣದ ಉಗ್ರರ ಕೈವಾಡದ ಶಂಕೆ ವ್ಯಕ್ತವಾಗಿದೆ. ಆದರೆ ದಾಳಿಕೋರರ ಗುರುತು ಅಥವಾ ಸಂಘಟನೆಯ ನೇರ ಭಾಗವಹಿಸುವಿಕೆ ಕುರಿತು ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ. ಅಸ್ಸಾಂ ರೈಫಲ್ಸ್ ಕೂಡ ಹವಿಲ್ದಾರ್ ಜಂಕ್‌ಖೋಯಿ ಕುಕಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ಕರ್ತವ್ಯ ನಿರ್ವಹಿಸುವ ವೇಳೆ ಅವರು ಪ್ರಾಣತ್ಯಾಗ ಮಾಡಿದ್ದಾರೆ ಎಂದು ತಿಳಿಸಿದೆ.
ಚಾಂಗ್ಲಾಂಗ್ ಜಿಲ್ಲೆಯ ಭಾರತ–ಮ್ಯಾನ್ಮಾರ್ ಗಡಿ ಪ್ರದೇಶವು ಈ ಹಿಂದೆ ಕೂಡ ಬಂಡುಕೋರ ಗುಂಪುಗಳ ಚಟುವಟಿಕೆಗಳಿಂದ ಸೂಕ್ಷ್ಮ ಪ್ರದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚಿನ ದಾಳಿಯ ಬಳಿಕ ಗಡಿ ಪ್ರದೇಶದಲ್ಲಿ ಭದ್ರತೆ ಮತ್ತು ನಿಗಾವಹಿಸುವಿಕೆ ಮತ್ತಷ್ಟು ಹೆಚ್ಚಿಸಲಾಗಿದೆ.