ಸುಪ್ರೀಂ ಕೋರ್ಟ್‌ನಲ್ಲಿ ಐತಿಹಾಸಿಕ ತೀರ್ಪು; ಸರ್ವೋಚ್ಛ ನ್ಯಾಯಾಲಯದಲ್ಲಿ ವಾದ ಮಾಡಿ ಗೆದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ!
Historic verdict in the SC: ಸರ್ವೋಚ್ಛ ನ್ಯಾಯಾಲಯದಲ್ಲಿ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ. ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ್ದ ವಿದ್ಯಾರ್ಥಿಯೊಬ್ಬ ಸ್ವತಃ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿ ಐತಿಹಾಸಿಕ ತೀರ್ಪು ಪಡೆದುಕೊಂಡಿದ್ದಾನೆ. ತನ್ನ ಹಕ್ಕಿಗಾಗಿ ಹೋರಾಡಿದ ಈ ಯುವಕನ ಧೈರ್ಯ ಮತ್ತು ಆತ್ಮವಿಶ್ವಾಸವು ದೇಶದ ಗಮನ ಸೆಳೆದಿದೆ.
ಸರ್ವೋಚ್ಛ ನ್ಯಾಯಾಲಯದಲ್ಲಿ ವಾದ ಮಾಡಿ ಗೆದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ -
ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಐತಿಹಾಸಿಕ ತೀರ್ಪೊಂದು ಹೊರಬಿದ್ದಿದೆ. ಹದಿಹರೆಯದ ಯುವಕನೊಬ್ಬ ಸರ್ವೋಚ್ಛ ನ್ಯಾಯಾಲಯದಲ್ಲಿ ವಾದ ಮಾಡಿ ಗೆದ್ದಿದ್ದಾನೆ. ಇಡಬ್ಲ್ಯೂಎಸ್ (EWS) ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳಲ್ಲೂ ತಾತ್ಕಾಲಿಕ ಎಂಬಿಬಿಎಸ್ ಪ್ರವೇಶಕ್ಕೆ ತೀರ್ಪು ಹೊರಡಿಸಲಾಗಿದೆ. ಇದಕ್ಕೂ ಮುನ್ನ ಸರ್ವೋಚ್ಛ ನ್ಯಾಯಾಲಯದಲ್ಲಿ ನಡೆದ ವಾದ ಎಲ್ಲರ ಚಿತ್ತ ನೆಟ್ಟಿತ್ತು.
ಒಂದು ಮಧ್ಯಾಹ್ನದ ವೇಳೆ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠ ವಿಚಾರಣೆ ಮುಗಿಸಿ ಎದ್ದೇಳಲು ಸಜ್ಜಾಗುತ್ತಿದ್ದ ಕ್ಷಣದಲ್ಲಿ ಇನ್ನೂ ಹತ್ತು ನಿಮಿಷ ನೀಡಿ ಎಂದು ವಿನಂತಿಸಿದ ಧ್ವನಿಯೊಂದು ಕೇಳಿಬಂತು. ಈ ಧ್ವನಿ ಯಾರದ್ದೋ ಹಿರಿಯ ವಕೀಲರದ್ದಲ್ಲ, ಸಂವಿಧಾನ ತಜ್ಞರದ್ದಲ್ಲ. ಅದು ಮಧ್ಯಪ್ರದೇಶದ ಜಬಲ್ಪುರದ 19 ವರ್ಷದ ಅಥರ್ವ ಚತುರ್ವೇದಿ ಎಂಬ ದ್ವಿತೀಯ ಪಿಯುಸಿಯ ವಿದ್ಯಾರ್ಥಿಯದ್ದಾಗಿತ್ತು. ವೈದ್ಯನಾಗಬೇಕು ಎಂಬ ಕನಸಿಗಾಗಿ ಆತ ನ್ಯಾಯಾಲಯದ ಮುಂದೆ ನಿಂತಿದ್ದನು.
ಹತ್ತು ನಿಮಿಷಗಳ ನಂತರ, ತೀರ್ಪು ಅವರ ಪರವಾಗಿ ಬಂದಿತು. ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ತನ್ನ ಅಸಾಧಾರಣ ಅಧಿಕಾರವನ್ನು ಬಳಸಿಕೊಂಡ ಸುಪ್ರೀಂ ಕೋರ್ಟ್, ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ಮಧ್ಯಪ್ರದೇಶ ಸರ್ಕಾರಕ್ಕೆ ಆರ್ಥಿಕವಾಗಿ ದುರ್ಬಲ ವರ್ಗದ ನೀಟ್ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ತಾತ್ಕಾಲಿಕ ಎಂಬಿಬಿಎಸ್ ಪ್ರವೇಶವನ್ನು ನೀಡುವಂತೆ ನಿರ್ದೇಶಿಸಿತು. ಅಥರ್ವ ಅವರಿಗೆ ಇದು ಕೇವಲ ಕಾನೂನು ವಿಜಯವಲ್ಲ, ಬದಲಾಗಿ ಅವರ ಕನಸು ನನಸಾದ ಕ್ಷಣವಾಗಿತ್ತು.
ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಭಾರೀ ಹಿನ್ನಡೆ; SIR ಪ್ರಕ್ರಿಯೆಗೆ ಯಾವುದೇ ಅಡೆತಡೆ ಒಡ್ಡದಂತೆ ಸುಪ್ರೀಂ ಎಚ್ಚರಿಕೆ
ಪ್ರಕರಣದ ಹಿನ್ನೆಲೆ
ಅಥರ್ವ ಚತುರ್ವೇದಿ ಸಾಮಾನ್ಯ ವಿದ್ಯಾರ್ಥಿ. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಎರಡರಲ್ಲೂ ಉತ್ತೀರ್ಣನಾಗಿದ್ದರೂ, ಆತ ಜೀವಶಾಸ್ತ್ರವನ್ನು ಆರಿಸಿಕೊಂಡರು. ನೀಟ್ ಪರೀಕ್ಷೆಯಲ್ಲಿ ಒಂದಲ್ಲ, ಎರಡು ಬಾರಿ ಉತ್ತೀರ್ಣರಾದರು. ಅವರು 530 ಅಂಕಗಳನ್ನು ಗಳಿಸಿದರು. ಆದರೆ ಇಡಬ್ಲ್ಯೂಎಸ್ ಕೋಟಾದಡಿಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಎಂಬಿಬಿಎಸ್ ಸೀಟು ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ರಾಜ್ಯವು ಅಲ್ಲಿ ಮೀಸಲಾತಿಯನ್ನು ವಿಸ್ತರಿಸುವ ನೀತಿಯನ್ನು ಜಾರಿಗೆ ತಂದಿರಲಿಲ್ಲ.
ಇಡಬ್ಲ್ಯೂಎಸ್ ಮೀಸಲಾತಿ ಸಂವಿಧಾನಬದ್ಧವಾಗಿದೆ. ಸರ್ಕಾರಿ ಕಾಲೇಜುಗಳಿಗೆ ಮಾತ್ರ ಸೀಮಿತವಾಗದೆ, ನೀತಿ ಜಾರಿಗೆ ಸಂಬಂಧಿಸಿದ ಅನಿಶ್ಚಿತತೆ ವಿದ್ಯಾರ್ಥಿಗಳ ಭವಿಷ್ಯವನ್ನು ಹಾನಿಗೊಳಿಸಬಾರದು. ಅರ್ಹತೆ ಪಡೆದ ವಿದ್ಯಾರ್ಥಿಗೆ ಆಡಳಿತಾತ್ಮಕ ಲೋಪದಿಂದ ಅವಕಾಶ ತಪ್ಪಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಭಾರತದ ಗೌಪ್ಯತಾ ಕಾನೂನು ಪಾಲಿಸಲು ಆಗದಿದ್ದರೆ ದೇಶ ಬಿಟ್ಟು ಹೋಗಿ: ವಾಟ್ಸ್‌ಆ್ಯಪ್‌ಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ
ಅಥರ್ವನ ತಂದೆ ಮನೋಜ್ ಚತುರ್ವೇದಿ ವಕೀಲರು. ಆದರೆ, ಅವರು ಎಂದಿಗೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡಿರಲಿಲ್ಲ. ನನ್ನ ಮಗ ಕಾನೂನು ಓದಿಲ್ಲ ಎಂದು ಚತುರ್ವೇದಿ ಹೇಳಿದರು. ಆದರೆ, ಅವನು ಎಲ್ಲವನ್ನೂ ಕಲಿತಿದ್ದ. ಎಷ್ಟು ಮಾತನಾಡಬೇಕು, ಯಾವಾಗ ಮೌನವಾಗಿರಬೇಕು ಎಂಬುದು. ವಾಸ್ತವವಾಗಿ, ಅರ್ಜಿಗಳನ್ನು ಸ್ಕ್ಯಾನ್ ಮಾಡುವುದು ಮತ್ತು ಅಪ್‌ಲೋಡ್ ಮಾಡುವುದು ಹೇಗೆ ಎಂದು ಅವನು ನನಗೆ ಕಲಿಸಿದ್ದ ಎಂದು ಅವರು ಹೇಳಿದರು.
ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಜಗತ್ತು ಬ್ರೆಡ್ ಬೇಯಿಸುವುದು ಮತ್ತು ಜೂಮ್ ಸಭೆಗಳಿಗೆ ಹಾಜರಾಗುವುದು ಹೇಗೆಂದು ಕಲಿಯುತ್ತಿರುವಾಗ. ಅಥರ್ವ ಆನ್‌ಲೈನ್‌ನಲ್ಲಿ ಕೋರ್ಟ್ ವಿಚಾರವನ್ನು ತಿಳಿದುಕೊಳ್ಳುತ್ತಿದ್ದ ಎಂದು ಅವರು ಹೇಳಿದರು.
ಅಂದಹಾಗೆ, ಈ ತೀರ್ಪು ಕೇವಲ ಅಥರ್ವನಿಗಷ್ಟೇ ಅಲ್ಲ, ದೇಶದಾದ್ಯಂತ ಇಡಬ್ಲ್ಯೂಎಸ್ ವರ್ಗದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ. ಇಡಬ್ಲ್ಯೂಎಸ್ ಎಂದರೆ, ಭಾರತದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಸಾಮಾನ್ಯ ವರ್ಗದ ಕುಟುಂಬಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 10 ಮೀಸಲಾತಿ ನೀಡಲು ಈ ವರ್ಗವನ್ನು ಪರಿಚಯಿಸಲಾಗಿದೆ.