ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

7 ವರ್ಷಗಳಿಂದ ಸ್ವಾತಂತ್ರ್ಯ ಹೋರಾಟಗಾರನ ಪತ್ನಿಗೆ ಪಿಂಚಣಿ ಸ್ಥಗಿತ: ಕೇಂದ್ರ- ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೊಟೀಸ್‌

Karnataka High Court: ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯೊಬ್ಬರ ಪಿಂಚಣಿ ತಡೆಹಿಡಿದಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್ ಇದೀಗ ನೋಟಿಸ್ ನೀಡಿದೆ. ಮೃತ ಸ್ವಾತಂತ್ರ್ಯ ಹೋರಾಟಗಾರನ 92 ವರ್ಷದ ಪತ್ನಿ ಸಲ್ಲಿಸಿರುವ ಅರ್ಜಿಯ ಮೇರೆಗೆ ಇದೀಗ ಹೈಕೋರ್ಟ್‌ ಸರ್ಕಾರಕ್ಕೆ ತುರ್ತು ನೊಟೀಸ್‌ ಜಾರಿ ಮಾಡಿದೆ.

ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯ ಪಿಂಚಣಿ ಸ್ಥಗಿತ: ಹೈಕೋರ್ಟ್ ಆದೇಶವೇನು?

ಸಾಂದರ್ಭಿಕ ಚಿತ್ರ -

Profile
Pushpa Kumari Apr 30, 2026 7:28 PM

ಬೆಂಗಳೂರು, ಏ. 30: ಹಿರಿಯ ನಾಗರಿಕರಿಗೆ ಆರ್ಥಿಕ ನೆರವು ನೀಡಲು ಭಾರತ ಸರ್ಕಾರವು ಹಲವು ಪಿಂಚಣಿ ಯೋಜನೆಗಳನ್ನು ಜಾರಿ ಮಾಡಿದೆ. ಈ ಸೌಲಭ್ಯಗಳ ಮೂಲಕವೇ ಬದುಕು ಕಟ್ಟಿಕೊಂಡ ಅನೇಕ ಹಿರಿಯ ನಾಗರಿಕರಿದ್ದಾರೆ. ಇದೀಗ ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯೊಬ್ಬರ ಪಿಂಚಣಿ ತಡೆಹಿಡಿದಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್ (Karnataka High Court) ನೊಟೀಸ್‌ ಜಾರಿ ಮಾಡಿದೆ. ಮೃತ ಸ್ವಾತಂತ್ರ್ಯ ಹೋರಾಟಗಾರನ 92 ವರ್ಷದ ಪತ್ನಿ ಸಲ್ಲಿಸಿರುವ ಅರ್ಜಿಯ ಮೇರೆಗೆ ಇದೀಗ ಹೈಕೋರ್ಟ್‌ ಸರ್ಕಾರಕ್ಕೆ ತುರ್ತು ನೊಟೀಸ್‌ ನೀಡಿದೆ.

2019ರಿಂದ ಸಿಗಬೇಕಾದ ಪಿಂಚಣಿಯನ್ನು ಸರ್ಕಾರ ಬಾಕಿ ಉಳಿಸಿಕೊಂಡಿದ್ದು, ಪಿಂಚಣಿ ಸ್ಥಗಿತವಾಗಿದ್ದನ್ನು ಪ್ರಶ್ನಿಸಿ ವೃದ್ಧೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ದೊಡ್ಡಬಳ್ಳಾಪುರ ತಾಲೂಕಿನ ಗಾಳಿಬಿಳಿಕೋಟೆ ಗ್ರಾಮದ ನಿವಾಸಿ 92 ವರ್ಷದ ಸೊಣ್ಣಮ್ಮ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯ ಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಪೀಠ ನಡೆಸಿತು. ಸೊಣ್ಣಮ್ಮ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಎಂ.ವಿ. ರಾಮಯ್ಯ ಅವರ ಪತ್ನಿ.

ಹಳೆಯ ಪಿಂಚಣಿ ಯೋಜನೆ ಬಯಸುವ ನೌಕರರಿಗೆ ಸಿಹಿ ಸುದ್ದಿ, ಒಪಿಎಸ್‌ ಪರಿಶೀಲನೆಗೆ ಮೂರು ತಂಡ ರಚನೆ

ಪಿಂಚಣಿ ಪುಸ್ತಕ ಲಭ್ಯವಿಲ್ಲ, ತಪ್ಪಿ ಹೋಗಿದೆ ಎಂಬ ಕಾರಣ ನೀಡಿ 2019ರಿಂದಲೇ ಪಿಂಚಣಿ ಸ್ಥಗಿತಗೊಂಡಿತ್ತು. ಈ ಕುರಿತಾಗಿ‌ ಹಲವು ಬಾರಿ ಮನವಿ ಸಲ್ಲಿಕೆ ಮಾಡಿದರೂ ಇದಕ್ಕೆ ಪ್ರತಿಕ್ರಿಯೆ ಬಂದಿರಲಿಲ್ಲ. ಆದ್ದರಿಂದ ಸ್ಥಗಿತಗೊಂಡಿರುವ ಪಿಂಚಣಿ ಮತ್ತು ಹಿಂಬಾಕಿಯನ್ನು ಪಾವತಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಅರ್ಜಿಯಲ್ಲಿ ಕೋರಿದ್ದರು. ರಾಜ್ಯ ಸರ್ಕಾರದ ಪಿಂಚಣಿ ಮೊತ್ತ ಮಾತ್ರ ದೊರಕುತ್ತಿದ್ದು ಕೇಂದ್ರದ ಪಿಂಚಣಿ ಬಾರದೇ ಇರುವುದಕ್ಕೆ ಅರ್ಜಿ ಸಲ್ಲಿಸಿದ್ದರು.

ವಾದ ಆಲಿಸಿದ ಪೀಠವು ಕೇಂದ್ರ ಗೃಹ ಇಲಾಖೆ, ಕೇಂದ್ರೀಯ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ವಿಭಾಗ, ರಾಜ್ಯ ಲೆಕ್ಕಪತ್ರ ಮಹಾನಿರ್ದೇಶಕರು ಹಾಗೂ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ನೊಟೀಸ್‌ ಜಾರಿ ಮಾಡಿದೆ. ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರ ಪರ ಮಾತನಾಡಿದ ವಕೀಲರು, ಸೊಣ್ಣಮ್ಮ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಜೀವನ ನಿರ್ವಹಣೆಗೆ ಇದೇ ಪಿಂಚಣಿಯನ್ನು ನಂಬಿದ್ದಾರೆ ಎಂದು ವಾದಿಸಿದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಗೃಹ ಇಲಾಖೆ, ಕೇಂದ್ರೀಯ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ವಿಭಾಗ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ನೊಟೀಸ್‌ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.