79th Independence Day: ದೀಪಾವಳಿಗೆ ಸರ್ಕಾರದ ವತಿಯಿಂದ ಬಿಗ್ ಗಿಫ್ಟ್; ಜಿಎಸ್‌ಟಿ ಕುರಿತು ಮೋದಿ ಹೇಳಿದ್ದೇನು?
ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ವರ್ಷದ ದೀಪಾವಳಿಯ ವೇಳೆಗೆ ಸರ್ಕಾರ ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಇದನ್ನು ಅವರು ಸರ್ಕಾರದ ವತಿಯಿಂದ ನೀಡುವ ಬಹು ದೊಡ್ಡ ಉಡುಗೊರೆ ಎಂದು ಕರೆದಿದ್ದಾರೆ.


ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ವರ್ಷದ ದೀಪಾವಳಿಯ ವೇಳೆಗೆ ಸರ್ಕಾರ ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಇದನ್ನು ಅವರು ಸರ್ಕಾರದ ವತಿಯಿಂದ ನೀಡುವ ಬಹು ದೊಡ್ಡ ಉಡುಗೊರೆ ಎಂದು ಕರೆದಿದ್ದಾರೆ. ಈ ಸುಧಾರಣೆಗಳು, ತೆರಿಗೆ ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸುವುದು ಮತ್ತು ಅಗತ್ಯ ಮತ್ತು ದಿನನಿತ್ಯದ ವಸ್ತುಗಳ ಮೇಲಿನ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡುವುದರ ಮೇಲೆ ಕೇಂದ್ರೀಕರಿಸುತ್ತವೆ.
ಈ ದೀಪಾವಳಿಯನ್ನು ನಿಮಗಾಗಿ ಡಬಲ್ ದೀಪಾವಳಿಯನ್ನಾಗಿ ಮಾಡಲಿದ್ದೇನೆ. ಈ ದೀಪಾವಳಿಯಲ್ಲಿ ನಾಗರಿಕರಿಗೆ ದೊಡ್ಡ ಉಡುಗೊರೆ ಸಿಗಲಿದೆ. ಕಳೆದ ಎಂಟು ವರ್ಷಗಳಲ್ಲಿ, ನಾವು ಜಿಎಸ್ಟಿಯಲ್ಲಿ ಪ್ರಮುಖ ಸುಧಾರಣೆಯನ್ನು ಕೈಗೊಂಡಿದ್ದೇವೆ. ನಾವು ದೇಶಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡಿದ್ದೇವೆ ಮತ್ತು ತೆರಿಗೆ ಪ್ರಕ್ರಿಯೆಯನ್ನು ಸರಳಗೊಳಿಸಿದ್ದೇವೆ. ಎಂಟು ವರ್ಷಗಳ ನಂತರ, ಬದಲಾವಣೆಗಳನ್ನು ಪರಿಶೀಲಿಸುವ ಸಮಯ ಬಂದಿದೆ. ಪರಿಶೀಲನಾ ಪ್ರಕ್ರಿಯೆಗಾಗಿ ನಾವು ಉನ್ನತಾಧಿಕಾರ ಸಮಿತಿಯನ್ನು ರಚಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಅಷ್ಟೇ ಅಲ್ಲದೆ, ರಾಜ್ಯಗಳೊಂದಿಗೆ ಸಮಾಲೋಚನೆಯನ್ನು ಸರ್ಕಾರ ನಡೆಸಿದೆ. ನಾವು ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳನ್ನು ತರುತ್ತಿದ್ದೇವೆ. ಇದು ದೇಶಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.