ಉದ್ಯೋಗದ ಆಸೆಗೆ ಬಿದ್ದು ಮ್ಯಾನ್ಮಾರ್‌ನಲ್ಲಿ ಟ್ರ್ಯಾಪ್ ಆಗಿದ್ದ 270 ಭಾರತೀಯರ ರಕ್ಷಣೆ
Myanmar Cyber Scam: ಮ್ಯಾನ್ಮಾರ್ ನಕಲಿ ಉದ್ಯೋಗ ಹಗರಣದಲ್ಲಿ ವಂಚನೆ ಕೇಂದ್ರಗಳಲ್ಲಿ ಸಿಲುಕಿದ್ದ 270 ಪ್ರಜೆಗಳನ್ನು ಭಾರತ ಸ್ವದೇಶಕ್ಕೆ ಕರೆತಂದಿದೆ. ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಮ್ಯಾನ್ಮಾರ್‌ನಲ್ಲಿ ನಕಲಿ ಉದ್ಯೋಗ ಕೊಡುಗೆಗಳಿಗೆ ಬಲಿಯಾಗಿದ್ದ 270 ಭಾರತೀಯ ನಾಗರಿಕರನ್ನು ವಿದೇಶಾಂಗ ಸಚಿವಾಲಯ (MEA) ಯಶಸ್ವಿಯಾಗಿ ರಕ್ಷಿಸಿ ಮರಳಿ ಕರೆತಂದಿದೆ.
ಮ್ಯಾನ್ಮಾರ್‌ನಲ್ಲಿ ಸಿಲುಕಿದ್ದ 270 ಭಾರತೀಯರನ್ನು ರಕ್ಷಣೆ ಮಾಡಲಾಯಿತು -
ನವದೆಹಲಿ: ಮ್ಯಾನ್ಮಾರ್‌ನಲ್ಲಿ(Myanmar) ಸೈಬರ್ ವಂಚನೆಗೆ(Cyber Scam) ಸಿಲುಕಿದ್ದ 270 ಭಾರತೀಯ ನಾಗರಿಕರನ್ನು (India Secures Repatriation Nationals) ಥಾಯ್ಲ್ಯಾಂಡ್‌ನ ಮೇ ಸಾಟ್ ಪಟ್ಟಣದಿಂದ ರಕ್ಷಿಸಿದ ಭಾರತ ಸೇನೆ ಅವರನ್ನು ಗುರುವಾರ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದಿದೆ, ಅವರು ವಿದೇಶಿ ಉದ್ಯೋಗಗಳ ಆಮಿಷಕ್ಕೆ ಬಲಿಯಾಗಿ ಗ್ಲೋಬಲ್ ಆನ್ಲೈನ್ ಫ್ರಾಡ್ ಕಾರ್ಯಾಚರಣೆಗಳಲ್ಲಿ ತೊಡಗಿಸಲಾಗಿತ್ತು. ಉದ್ಯೋಗ ಸಿಗುವ ಭರವಸೆಯೊಂದಿಗೆ ಥೈಲ್ಯಾಂಡ್‌ಗೆ ಹೋಗಿದ್ದ ಭಾರತೀಯರನ್ನು ಥೈಲ್ಯಾಂಡ್‌ನಿಂದ ಮ್ಯಾನ್ಮಾರ್‌ಗೆ ಅಕ್ರಮವಾಗಿ ಸಾಗಿಸಲಾಗಿತ್ತು. ಅದಾದ ಬಳಿಕ ಉದ್ಯೋಗ ನೀಡದೆ ಭಾರತೀಯರಿಗೆ ಮೋಸ ಮಾಡಲಾಗಿತ್ತು. ಜೊತೆಗೆ ಅಕ್ರಮ ಮಾನವ ಕಳ್ಳ ಸಾಗಾಣಿಕೆ ಯತ್ನ ಕೂಡ ನಡೆದಿತ್ತು ಎನ್ನಲಾಗಿದೆ
ಈ ಹಿನ್ನಲೆಯಲ್ಲಿ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ನಡೆಸಿ ಗುರುವಾರ ಥೈಲ್ಯಾಂಡ್‌ನ ಮೇ ಸೋಟ್‌ನಿಂದ ಭಾರತೀಯ ವಾಯುಪಡೆಯ (ಐಎಎಫ್) ವಿಮಾನದ ಮೂಲಕ ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ. ಅಲ್ಲದೇ ‘ವಂಚನೆಗೊಳಗಾದ ಭಾರತೀಯ ಜನರನ್ನು ಮ್ಯಾನ್ಮಾರ್-ಥೈಲ್ಯಾಂಡ್ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಗರಣ ಕೇಂದ್ರಗಳಲ್ಲಿ ಸೈಬರ್ ಅಪರಾಧ ಮತ್ತು ಇತರ ವಂಚನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸಿಲುಕಲ್ಪಟ್ಟಿದ್ದರು’ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Viral Video: ಸಾರ್ವಜನಿಕರ ಮುಂದೆಯೇ ವೃದ್ಧನ ಮೈಮೇಲೆ ಎಣ್ಣೆ ಎರಚಿದಲ್ಲದೆ ಕಪಾಳಮೋಕ್ಷ ಮಾಡಿದ ಮಹಿಳೆ; ಇಲ್ಲಿದೆ ವಿಡಿಯೊ
ಈ ವ್ಯಕ್ತಿಗಳನ್ನು ನಕಲಿ ಉದ್ಯೋಗದ ಆಮಿಷ ಒಡ್ಡಿ ವಂಚಿಸಿ ನಂತರ ಥೈಲ್ಯಾಂಡ್, ಕಾಂಬೋಡಿಯಾ, ಲಾವೋಸ್ ಮತ್ತು ಮ್ಯಾನ್ಮಾರ್‌ನಾದ್ಯಂತ ಸೈಬರ್ ಹಗರಣಗಳಲ್ಲಿ ಭಾಗಿಯಾಗಿರುವ ಮೋಸದ ಕಾಲ್ ಸೆಂಟರ್‌ಗಳಿಗೆ ಮಾರಾಟ ಮಾಡುವ ಪ್ರಯತ್ನ ನಡೆದಿತ್ತು ಎನ್ನಲಾಗಿದೆ. ಮ್ಯಾನ್ಮಾರ್-ಥೈಲ್ಯಾಂಡ್ ಗಡಿಯ ಬಳಿ ಇರುವ ಹಗರಣ ಕೇಂದ್ರಗಳಲ್ಲಿ ಸೈಬರ್ ಅಪರಾಧ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಅವರನ್ನು ಒತ್ತಾಯಿಸಲಾಗಿತು ಎಂದು ತಿಳಿದು ಬಂದಿದೆ.
ಇನ್ನು ವಂಚನೆಗೆ ಸಿಲುಕಿದ ಸಂತ್ರಸ್ತರನ್ನು ರಕ್ಷಿಸುವಲ್ಲಿ ಮ್ಯಾನ್ಮಾರ್ ಸೈನ್ಯವು ಪ್ರಮುಖ ಪಾತ್ರ ವಹಿಸಿದೆ. ರಕ್ಷಿಸಲ್ಪಟ್ಟ ವ್ಯಕ್ತಿಗಳನ್ನು ಮೊದಲು ಥೈಲ್ಯಾಂಡ್‌ನ ಮೇ ಸೋಟ್‌ಗೆ ಕರೆತರಲಾಯಿತು. ನಂತರ ಅವರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ. ಸದ್ಯ ಈ ಘಟನೆಯು ಸೈಬರ್ ಅಪರಾಧದ ಕುಖ್ಯಾತ ಕೇಂದ್ರವಾದ ಗೋಲ್ಡನ್ ಟ್ರಯಾಂಗಲ್ ಪ್ರದೇಶದ ಅಪಾಯಗಳನ್ನು ಎತ್ತಿ ತೋರಿಸುತ್ತಿದ್ದು, ಮ್ಯಾನ್ಮಾರ್ ಸೈಬರ್ ಸ್ಕ್ಯಾಮ್ನ ಗ್ಲೋಬಲ್ ಕ್ಯಾಪಿಟಲ್ ಆಗಿ ಬೆಳೆಯುತ್ತಿದೆಯೇ ಎಂಬ ಆತಂಕವೂ ಮೂಡಿದೆ.
ಈ ಹಿಂದೆ ಅಕ್ಟೋಬರ್ ತಿಂಗಳಲ್ಲಿಯೂ ಮ್ಯಾನ್ಮಾರ್ ಸೇನೆ ನಡೆಸಿದ ದಾಳಿಯಲ್ಲಿ ಈ ಜಾಲಗಳನ್ನು ಸಂಪೂರ್ಣವಾಗಿ ಮಟ್ಟಹಾಕಲಾಗಿತ್ತು. ಈ ಘಟನೆ ಬಳಿಕ ವಂಚನೆ ಜಾಲದಲ್ಲಿ ಸಿಲುಕಿದ 28 ದೇಶಗಳ 1,500 ಕ್ಕೂ ಹೆಚ್ಚು ಜನರು ಥಾಯ್ಲ್ಯಾಂಡ್‌ಗೆ ಓಡಿ ಬಂದಿದ್ದರು. ಥಾಯಿ ಅಧಿಕಾರಿಗಳು ಮೇ ಸಾಟ್ ಪಟ್ಟಣದಲ್ಲಿ ತಾತ್ಕಾಲಿಕ ಶಿಬಿರಗಳನ್ನು ಪ್ರಾರಂಭಿಸಿ, ಸಂತ್ರಸ್ತರಿಗೆ ಆಶ್ರಯ ನೀಡಲು ಕ್ರಮ ಕೈಗೊಂಡಿದ್ದಾರೆ. ಇದೇ ವೇಳೆ, ಭಾರತವು ತನ್ನ ಥಾಯ್ಲ್ಯಾಂಡ್ ಮತ್ತು ಮ್ಯಾನ್ಮಾರ್ ರಾಯಭಾರ ಕಚೇರಿಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
ಈ ಸುದ್ದಿಯನ್ನೂ ಓದಿ: Viral Video: ವ್ಯಕ್ತಿಯೊಬ್ಬರನ್ನು ಅಟ್ಟಾಡಿಸಿಕೊಂಡು ಹೋದ ಬೀದಿನಾಯಿಗಳು; ತೀವ್ರ ಗಾಯಗೊಂಡು ಸಾವು, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ವಿದೇಶಗಳಲ್ಲಿ ಸುಳ್ಳು ಐಟಿ ಅಥವಾ ಕಚೇರಿ ಉದ್ಯೋಗದ ಆಫರ್‌ಗಳ ಮೂಲಕ ದಕ್ಷಿಣ ಏಷ್ಯಾದ ಯುವಕರನ್ನು ವಂಚಿಸುವ ಅಪರಾಧ ಜಾಲಗಳ ವಿರುದ್ಧ ಭಾರತದ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಮ್ಯಾನ್ಮಾರ್, ಕಂಬೋಡಿಯಾ ಮತ್ತು ಲಾವೋಸ್‌ನಂತಹ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ “ಸ್ಕ್ಯಾಮ್ ಫ್ಯಾಕ್ಟರಿ” ಗಳಿಂದ ವರ್ಷಕ್ಕೆ ಸುಮಾರು 40 ಬಿಲಿಯನ್ ಅಮೆರಿಕನ್ ಡಾಲರ್ ಗಳ ಲಾಭ ಆಗುತ್ತಿದೆ ಎಂಬ ಆಘಾತಕಾರಿ ವಿಷಯವನ್ನು UNODC ತಿಳಿಸಿದೆ
ಈ ಹಿನ್ನಲೆ ಭಾರತ ಸರ್ಕಾರವು ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ್ದು, ವಿದೇಶಿ ಉದ್ಯೋಗ ಆಫರ್ ಗಳನ್ನು ಸ್ವೀಕರಿಸುವ ಮೊದಲು ಸಂಪೂರ್ಣ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದ್ದು, ಉದ್ಯೋಗಕ್ಕಾಗಿ ಥಾಯ್ಲ್ಯಾಂಡ್ ಅಥವಾ ನೆರೆ ರಾಷ್ಟ್ರಗಳಿಗೆ ವೀಸಾ ರಹಿತ ಪ್ರವಾಸವನ್ನು ಕೈಗೊಳ್ಳಬಾರದು ಎಂದು ಸೂಚಿಸಿದೆ.