ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೊರ್ಮುಜ್ ಜಲಸಂಧಿ ತೆರೆಯಲು 35 ದೇಶಗಳ ಜೊತೆ ಕೈಜೋಡಿಸಿದ ಭಾರತ

ಕಳೆದ ಫೆಬ್ರವರಿ ತಿಂಗಳ ಅಂತ್ಯಕ್ಕೆ ಪ್ರಾರಂಭವಾದ ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಇದೀಗ ಒಂದೊಂದೇ ದೇಶಗಳು ಇರಾನ್ ವಿರುದ್ಧ ಅಮೆರಿಕದ ಕೈ ಜೋಡಿಸಿವೆ. ಮುಖ್ಯವಾಗಿ ಇರಾನ್ ನಿರ್ಬಂಧಿಸಿರುವ ಹೊರ್ಮುಜ್ ಜಲಸಂಧಿ ತೆರೆಯಲು 35 ದೇಶಗಳ ಜೊತೆ ಭಾರತವು ಕೂಡ ಸೇರಿಕೊಂಡಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ.

ಇರಾನ್ ವಿರುದ್ದ ಅಮೆರಿಕ ಜೊತೆ ಕೈಜೋಡಿಸಿದ ಭಾರತ

ಸಂಗ್ರಹ ಚಿತ್ರ -

ನವದೆಹಲಿ: ಇಸ್ರೇಲ್ (Israel) ಮತ್ತು ಯುಎಸ್ (US) ಸೇನಾ ಪಡೆಯು ನಡೆಸಿರುವ ದಾಳಿಗೆ ಪ್ರತಿಯಾಗಿ ಇರಾನ್ (Iran war) ನಿರ್ಬಂಧಿಸಿರುವ ಪ್ರಮುಖ ಜಲ ಮಾರ್ಗವಾದ ಹೊರ್ಮುಜ್ ಜಲಸಂಧಿ (Strait of Hormuz) ತೆರೆಯಲು ಈಗ ಭಾರತ (India) ಕೂಡ ಅಮೆರಿಕ (America) ಜೊತೆ ಸರಿಕೊಂಡಿವೆ. ಹೊರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ನಿರ್ಬಂಧವನ್ನು ಮತ್ತೆ ತೆರೆಯಲು (Reopen Strait Of Hormuz) 35 ದೇಶಗಳ ಜೊತೆ ಭಾರತ ಕೂಡ ಕೈಜೋಡಿಸಲಿದೆ. ಈ ಜಲ ಮಾರ್ಗದ ಮೂಲಕ ವಿಶ್ವಕ್ಕೆ ಶೇ. 20ರಷ್ಟು ಇಂಧನ ಪೂರೈಕೆಯಾಗುತ್ತದೆ.

ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಪಶ್ಚಿಮ ಏಷ್ಯಾ ಭಾಗದಲ್ಲಿ ಉಂಟಾದ ಯುದ್ಧದ ಪರಿಣಾಮ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿ ತೈಲ ಸಾಗಾಟದ ಪ್ರಮುಖ ಮಾರ್ಗವನ್ನು ತಡೆದಿತ್ತು.

ರಕ್ಷಣಾ ವಲಯದ ರಫ್ತಿನಲ್ಲಿ ಭಾರತ ಹೊಸ ಮೈಲಿಗಲ್ಲು: ಒಂದೇ ವರ್ಷ 38,424 ಕೋಟಿ ರುಪಾಯಿ ವಹಿವಾಟು; ಶೇಕಡಾ 63ರಷ್ಟು ಏರಿಕೆ

ಇದನ್ನು ಮತ್ತೆ ತೆರೆಯಲು ಅಮೆರಿಕವು ವಿಶ್ವದ ಎಲ್ಲಾ ರಾಷ್ಟ್ರಗಳ ನೆರವನ್ನು ಕೋರಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು 35 ದೇಶಗಳ ಸಭೆಯಲ್ಲಿ ಭಾಗವಹಿಸಲು ಯುಕೆ ಭಾರತವನ್ನು ಆಹ್ವಾನಿಸಿದೆ. ಇದನ್ನು ಒಪ್ಪಿಕೊಂಡಿರುವುದಾಗಿ ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ.

35 ದೇಶಗಳ ಸಭೆಯಲ್ಲಿ ಗುರುವಾರ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ವರ್ಚುವಲ್ ಆಗಿ ಭಾಗವಹಿಸಲಿದ್ದಾರೆ ಎಂದು ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಈ ಸಭೆಯಲ್ಲಿ ಎಲ್‌ಪಿಜಿ, ಎಲ್‌ಎನ್‌ಜಿ ಮತ್ತು ಇತರ ಉತ್ಪನ್ನಗಳನ್ನು ಸಾಗಿಸುವ ನಮ್ಮ ಹಡಗುಗಳು ಯಾವುದೇ ಅಡೆ ತಡೆ ಇಲ್ಲದಂತೆ ಸಾಗಲು ಸುರಕ್ಷಿತ ಸಾಗಣೆ ಹೇಗೆ ಎಂಬುದನ್ನು ನೋಡಲು ಇರಾನ್ ಮತ್ತು ಸುತ್ತಮುತ್ತಲಿನ ಇತರ ದೇಶಗಳೊಂದಿಗೆ ನಿರಂತರ ಸಂಪರ್ಕ ನಡೆಸುತ್ತಿದ್ದೇವೆ. ಕಳೆದ ಹಲವಾರು ದಿನಗಳಿಂದ ನಾವು ನಡೆಸುತ್ತಿರುವ ಈ ಸಂಭಾಷಣೆಯ ಫಲವಾಗಿ ಆರು ಭಾರತೀಯ ಹಡಗುಗಳು ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಲು ಸಾಧ್ಯವಾಯಿತು ಎಂದರು.

ಅಮೆರಿಕ ಪತ್ರಕರ್ತೆ ಶೆಲ್ಲಿ ಕಿಟಲ್ಸನ್ ಬಾಗ್ದಾದ್‌ನಲ್ಲಿ ಕಿಡ್ನಾಪ್‌: ಬೆದರಿಕೆಯ ಹೊರತಾಗಿಯೂ ಇರಾಕ್ ತೆರಳಿದ್ದ ವರದಿಗಾರ್ತಿ

ಈ ಜಲ ಮಾರ್ಗವು ವಿಶ್ವ ಆರ್ಥಿಕತೆಯ ಜೀವನಾಡಿಯಾಗಿದೆ. ಯಾಕೆಂದರೆ ಇದರ ಮೂಲಕವೇ ಜಾಗತಿಕ ಇಂಧನ ಪೂರೈಕೆಯ ಶೇ. 20ರಷ್ಟು ಹಾಡು ಬರುತ್ತದೆ. ಇಸ್ರೇಲ್ ಮತ್ತು ಯುಎಸ್ ದಾಳಿಯ ಬಳಿಕ ಇಲ್ಲಿ ಅಪಾಯ ಹೆಚ್ಚಾಗಿದ್ದು, ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ತೈಲ ಬಿಕ್ಕಟ್ಟು ಉಂಟಾಗಿತ್ತು.

ಭಾರತವು ಆಮದು ಮಾಡಿಕೊಳ್ಳುವ ತೈಲದ ಸರಿಸುಮಾರು ಶೇ. 40ರಷ್ಟು, ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ)ದ ಶೇ. 50 ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲದ (ಎಲ್‌ಪಿಜಿ) ಶೇ. 80ರಷ್ಟು ಈ ಮಾರ್ಗದ ಮೂಲಕವೇ ಬರಬೇಕಿದೆ. ಹೀಗಾಗಿ ಈ ಜಲಸಂಧಿಯನ್ನು ಅಪಾಯ ಮುಕ್ತಗೊಳಿಸುವುದು ಭಾರತಕ್ಕೆ ಅನಿವಾರ್ಯವಾಗಿದೆ.