ಅಜಿತ್ ಪವಾರ್ ಜನ್ಮ ದಿನಾಚರಣೆ: ಪುಣೆಯಲ್ಲಿ 30 ಅಡಿ ಕಟೌಟ್‌ಗೆ ಎನ್‌ಸಿಪಿ ಕಾರ್ಯಕರ್ತರಿಂದ ಹಾಲಿನ ಅಭಿಷೇಕ
Viral Video: ಮಹಾರಾಷ್ಟ್ರ ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ದಿವಂಗತ ನಾಯಕ ಅಜಿತ್ ಪವಾರ್ ಜನ್ಮ ದಿನಾಚರಣೆಯನ್ನು ಇಂದು ಆಚರಣೆ ಮಾಡಲಾಗಿದೆ. ಈ ನಡುವೆ ಎನ್‌ಸಿಪಿ ಕಾಂಗ್ರೆಸ್ ಕಾರ್ಯಕರ್ತರು ಮಧ್ಯರಾತ್ರಿಯಲ್ಲಿ 30 ಅಡಿ ಎತ್ತರದ ಅಜಿತ್ ಪವಾರ್ ಕಟೌಟ್‌ಗೆ ಹಾಲಿನ ಅಭಿಷೇಕ ಅರ್ಪಣೆ ಮಾಡಿದ್ದಾರೆ. ಪುಣೆಯ ಮಾರ್ಕೆಟ್ ಯಾರ್ಡ್ ಪ್ರದೇಶದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಹೆಚ್ಚಿನ ಜನಸಂಖ್ಯೆ ನೆರೆದಿತ್ತು. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಜಿತ್ ಪವಾರ್ 30 ಅಡಿ ಕಟೌಟ್‌ಗೆ ಹಾಲಿನ ಅಭಿಷೇಕ -
ಮುಂಬೈ, ಜು. 22: ಮಹಾರಾಷ್ಟ್ರದ ದಿವಂಗತ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರ ಜನ್ಮದಿನ. ಮಹಾರಾಷ್ಟ್ರ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅವರ ಜನ್ಮ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಈ ನಡುವೆ ಎನ್‌ಸಿಪಿ ಕಾಂಗ್ರೆಸ್ ಕಾರ್ಯಕರ್ತರು ಮಧ್ಯರಾತ್ರಿಯಲ್ಲಿ 30 ಅಡಿ ಎತ್ತರದ ಅಜಿತ್ ಪವಾರ್ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಪುಣೆಯ ಮಾರ್ಕೆಟ್ ಯಾರ್ಡ್ ಪ್ರದೇಶದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಹೆಚ್ಚಿನ ಜನಸಂಖ್ಯೆ ನೆರೆದಿತ್ತು. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ಭಾರೀ ಮಳೆಯ ಮಧ್ಯೆಯೂ, ಮಧ್ಯರಾತ್ರಿ ಹಲವಾರು ಪಕ್ಷದ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದರು. ಎನ್‌ಸಿಪಿ ಯುವ ಘಟಕದ ಉಪಾಧ್ಯಕ್ಷ ಕರನ್ ಗಾಯಕ್ವಾಡ್ ಅವರು ಕ್ರೇನ್ ಬಳಸಿ ಈ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಗೌರವ ಸಲ್ಲಿಸಿದರು. ಈ ವಿಡಿಯೊ ಈಗ ಭಾರೀ ವೈರಲ್ ಆಗುತ್ತಿದೆ.
ವಿಡಿಯೊ ನೋಡಿ:
On what would have been his first birthday since his tragic death, the rain couldn't stop emotions in #Pune. At midnight, #NCP workers performed a dugdhabhishek on a 30-foot cutout of late #AjitPawar, remembering the leader many still call 'Dada'. The #video is now going viral. pic.twitter.com/C5jkk3qUxZ
— Varad Bhatkhande | Journalist (@VaradBhatkhande) July 22, 2026
ಎನ್‌ಸಿಪಿ ಇವರ ಜನ್ಮದಿನವನ್ನು 'ಜನಸೇವಾ ಸಪ್ತಾಹ' ಎಂದು ಆಚರಿಸುತ್ತಿದ್ದು, ಆರೋಗ್ಯ ಶಿಬಿರ, ಮರ ನೆಡುವ ಅಭಿಯಾನಗಳು, ರೈತರ ಅಭಿನಂದನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಣೆ ಮಾಡುತ್ತಿದೆ. ಮಹಾರಾಷ್ಟ್ರ ಸರ್ಕಾರವು ಜುಲೈ 22 ಅನ್ನು ಅಧಿಕೃತವಾಗಿ ಅಜಿತ್ ಪವಾರ್ ಜಯಂತಿಯನ್ನಾಗಿ ಆಚರಣೆ ಮಾಡಲು ನಿರ್ದೇಶನ ಕೂಡ ನೀಡಲಾಗಿದೆ.
ನೆರೆಮನೆಯ ಯುವಕನಿಂದನೇ ಕಿರುಕುಳ; ವಿಡಿಯೊ ಮಾಡಿ ಕಣ್ಣೀರು ಹಾಕಿದ ಬಾಲಕಿ
ಕಳೆದ ಜನವರಿ ತಿಂಗಳಲ್ಲಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನರಾಗಿದ್ದು ಅವರಿಗೆ ಗೌರವಾರ್ಥ ಸಲ್ಲಿಕೆ ಮಾಡುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಈ ನಿರ್ದೇಶನವನ್ನು ನೀಡಿದೆ. ಅಜಿತ್ ಪವಾರ್ ಅವರು ನಿಧನರಾದ ನಂತರ ಬರುತ್ತಿರುವ ಅವರ ಮೊದಲ ಜನ್ಮದಿನ ಇದಾಗಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದ ಅಜಿತ್ ಪವಾರ್ ಜನವರಿ 28 ರಂದು ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಪ್ರಯಾಣಿಸುತ್ತಿದ್ದಾಗ ಬಾರಾಮತಿ ಬಳಿ ಚಾರ್ಟರ್ಡ್ ವಿಮಾನ ಅಪಘಾತದಲ್ಲಿ ನಿಧನರಾದರು.