ಉತ್ತರ ಪ್ರದೇಶದ ಈ ಗ್ರಾಮದಲ್ಲಿ ಅಪ್ರಾಪ್ತರು ಶಾರ್ಟ್ಸ್ ಹಾಕುವಂತಿಲ್ಲ, ಫೋನ್ ಬಳಸುವಂತಿಲ್ಲ
ಉತ್ತರಪ್ರದೇಶದ ಗ್ರಾಮ ಪಂಚಾಯತ್ ವ್ಯಾಪ್ತಿಯೊಂದರಲ್ಲಿ ಅಪ್ರಾಪ್ತರು ಫೋನ್ ಬಳಸುವುದನ್ನು ಶಾರ್ಟ್ಸ್ ಧರಿಸುವುದನ್ನು ನಿಷೇಧಿಸಲಾಗಿದೆ. ಸಾಮಾಜಿಕ ಮೌಲ್ಯಗಳು ಮತ್ತು ಶಿಸ್ತನ್ನು ಉಲ್ಲೇಖಿಸಿ ಅಪ್ರಾಪ್ತ ವಯಸ್ಕರಿಗೆ ಸ್ಮಾರ್ಟ್‌ಫೋನ್ ಬಳಕೆ ಮತ್ತು ಸಾರ್ವಜನಿಕವಾಗಿ ಶಾರ್ಟ್ಸ್ ಧರಿಸುವುದನ್ನು ನಿಷೇಧಿಸಲಾಗಿದೆ. ಇದಕ್ಕೆ ರಾಜಕೀಯ ನಾಯಕರು ಕೂಡ ಬೆಂಬಲ ಸೂಚಿಸಿದ್ದಾರೆ.
(ಸಂಗ್ರಹ ಚಿತ್ರ) -
ಉತ್ತರಪ್ರದೇಶ: ಅಪ್ರಾಪ್ತ ವಯಸ್ಕರು ಶಾರ್ಟ್ಸ್ ಧರಿಸುವುದನ್ನು (wearing shorts), ಸ್ಮಾರ್ಟ್ ಫೋನ್ ಬಳಸುವುದನ್ನು (smartphones ban for minors) ಉತ್ತರಪ್ರದೇಶದ (Uttarpradesh) ಗ್ರಾಮ ಪಂಚಾಯತ್ ವೊಂದರ ವ್ಯಾಪ್ತಿಯಲ್ಲಿ ನಿಷೇಧಿಸಲಾಗಿದೆ. ಇದು ಈಗ ದೇಶಾದ್ಯಂತ ಸುದ್ದಿ ಮಾಡಿದೆ ಮಾತ್ರವಲ್ಲ ಸಾಕಷ್ಟು ಮಂದಿಯಿಂದ ಈ ಕ್ರಮಕ್ಕೆ ಶ್ಲಾಘನೆ ಕೂಡ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಬಾಗ್‌ಪತ್ (Baghpat) ಜಿಲ್ಲೆಯ ಖಾಪ್ ಪಂಚಾಯತ್ ಸಾಮಾಜಿಕ ಮೌಲ್ಯಗಳು ಮತ್ತು ಶಿಸ್ತಿನ ಬಗ್ಗೆ ಕಳವಳ ವ್ಯಕ್ತಪಡಿಸಿ ಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ಸ್ಮಾರ್ಟ್‌ಫೋನ್ ಬಳಸುವುದು, ಶಾರ್ಟ್ಸ್ ಗಳನ್ನೂ ಧರಿಸುವುದನ್ನು ನಿಷೇಧಿಸಿದೆ.
ಥಂಬಾ ಪಟ್ಟಿ ಮೆಹರ್ ದೇಶ್‌ಖಾಪ್‌ನ ಸಭೆಯಲ್ಲಿ ಶನಿವಾರ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಖಾಪ್ ನಾಯಕರು, ಸಾರ್ವಜನಿಕ ಸ್ಥಳಗಳಲ್ಲಿ ಹುಡುಗರು ಕುರ್ತಾ, ಪೈಜಾಮಾ ಮತ್ತು ಹುಡುಗಿಯರು ಸಲ್ವಾರ್, ಕುರ್ತಾ ಧರಿಸಲು ಸಲಹೆ ನೀಡಿದ್ದಾರೆ. ಯಾವುದೇ ಕಾರಣಕ್ಕೆ ಅರ್ಧ ಪ್ಯಾಂಟ್ ಗಳನ್ನು ಧರಿಸುವಂತಿಲ್ಲ. ಇದು ಸಾಮಾಜಿಕ ರೂಢಿಗಳಿಗೆ ವಿರುದ್ಧವಾಗಿದ್ದು, ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
ಹಾಲಿಗೆ ಡಿಟರ್ಜೆಂಟ್, ಯೂರಿಯಾ ಬೆರೆಸಿ ಮಾರಾಟ! ಯಾಮಾರಿದ್ರೆ ಜೀವ ಹೋಗೋದು ಗ್ಯಾರಂಟಿ
ಮನೆಯೊಳಗೆ ಯಾವ ರೀತಿಯ ಬಟ್ಟೆಗಳನ್ನು ಧರಿಸಲಿ. ಇದಕ್ಕೆ ನಮ್ಮ ಯಾವುದೇ ಆಕ್ಷೇಪಣೆ ಇಲ್ಲ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಸಾಧಾರಣ ಮತ್ತು ಸರಳವಾದ ಬಟ್ಟೆಗಳನ್ನು ಧರಿಸುವುದು ಸಾಮಾಜಿಕವಾಗಿ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಶೈಕ್ಷಣಿಕ ಕಾರಣದಿಂದ ಕೆಲವೇ ಕೆಲವು ಮಕ್ಕಳು ಮೊಬೈಲ್ ಫೋನ್‌ಗಳನ್ನು ಬಳಸುತ್ತಾರೆ. ಆದರೆ ಹೆಚ್ಚಿನ ಮಕ್ಕಳು ತಮ್ಮ ಫೋನ್‌ಗಳಲ್ಲಿ ಅನಗತ್ಯವಾಗಿ ಮುಳುಗಿರುತ್ತಾರೆ. ಇದು ಅವರ ಅಧ್ಯಯನದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹಿರಿಯರಿಗೆ ಅವಿಧೇಯರಾಗುವಂತೆ ಮಾಡುತ್ತದೆ. ಆದ್ದರಿಂದ 18 ವರ್ಷದೊಳಗಿನ ಮಕ್ಕಳಿಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡುವುದನ್ನು ಅನುಚಿತವೆಂದು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಇನ್ನು ಮಂಟಪಗಳಲ್ಲಿ ಮದುವೆ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಖಾಪ್ ನಾಯಕರು, ಮದುವೆಗಳನ್ನು ಹಳ್ಳಿಗಳು ಮತ್ತು ಮನೆಗಳಲ್ಲಿ ನಡೆಸಬೇಕು. ಮದುವೆ ಮಂಟಪಗಳಲ್ಲಿ ನಡೆಯುವ ವಿವಾಹಗಳು ಕುಟುಂಬ ಸಂಬಂಧಗಳನ್ನು ದುರ್ಬಲಗೊಳಿಸುತ್ತವೆ ಮತ್ತು ವೈವಾಹಿಕ ಸಂಬಂಧಗಳಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುತ್ತವೆ. ವಾಟ್ಸಾಪ್ ಮೂಲಕ ಕಳುಹಿಸಲಾದ ವಿವಾಹ ಆಮಂತ್ರಣಗಳು ಸ್ವೀಕಾರಾರ್ಹವಾಗಿರುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಖಾಪ್ ಪಂಚಾಯತ್‌ನ ಚೌಧರಿ ಬ್ರಿಜ್‌ಪಾಲ್ ಸಿಂಗ್ ಮತ್ತು ಸುಭಾಷ್ ಚೌಧರಿ ಅವರು ಸಭೆಯ ನಿರ್ಧಾರಗಳ ಕುರಿತು ಎಲ್ಲರಿಗೂ ಮಾಹಿತಿ ನೀಡಿದರು.
ಆಪರೇಷನ್ ಸಿಂದೂರ್‌ನಲ್ಲಿ ನೂರ್ ಖಾಸ್ ಏರ್ ಬೇಸ್ ನಾಶ; ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್
ಪಂಚಾಯತ್ ಕೈಗೊಂಡಿರುವ ನಿರ್ಣಯಗಳು ಅನುಷ್ಠಾನಕ್ಕೆ ಖಾಪ್ ನಾಯಕರು ಹಳ್ಳಿಗಳಿಗೆ ಭೇಟಿ ನೀಡಿ ನಿರ್ಧಾರಗಳನ್ನು ಕಾರ್ಯಗತಗೊಳಿಸಲು ಜವಾಬ್ದಾರಿಯುತ ಸದಸ್ಯರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು. ಖಾಪ್ ಮಂಡಳಿಗಳನ್ನು ಸಂಪರ್ಕಿಸುವ ಮೂಲಕ ಉತ್ತರ ಪ್ರದೇಶದಾದ್ಯಂತ ಇದನ್ನು ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.
ಪಂಚಾಯತ್ ನ ಈ ನಿರ್ಣಯಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಚೌಧರಿ ಯಶ್ಪಾಲ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ಯುವಜನರನ್ನು ಸರಿಯಾದ ದಿಕ್ಕಿನಲ್ಲಿ ಸಾಗಲು ಮಾರ್ಗದರ್ಶನ ಮಾಡುವ ತೀರ್ಮಾನವಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಲೋಕದಳ ಬಾಗ್ಪತ್ ಸಂಸದ ರಾಜ್‌ಕುಮಾರ್ ಸಾಂಗ್ವಾನ್ ಕೂಡ ಖಾಪ್‌ನ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದರು.