ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗೂಗಲ್‌ಗೇ ಸೆಡ್ಡು ಹೊಡೆದ ಭಾರತದ 'ಚಾರಿಯಟ್': 10 ಭಾಷೆಗಳಲ್ಲಿ ಹೊಸ 'ಎಐ ವಾಯ್ಸ್ ಮಾಡೆಲ್' ಬಿಡುಗಡೆ!

ಭಾರತದ ಎಐ ಸಂಶೋಧನಾ ಸಂಸ್ಥೆ ಚಾರಿಯಟ್, ಭಾರತದ 10 ಪ್ರಮುಖ ಭಾಷೆಗಳಿಗಾಗಿ ಅತ್ಯಾಧುನಿಕ ಧ್ವನಿ ಗುರುತಿಸುವಿಕೆ ಮಾದರಿಯಾದ 'Chariot-1-ASR Realtime' ಅನ್ನು ಗುರುವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿದೆ. ವಿವಿಧ ಜಟಿಲ ಹಾಗೂ ನೈಜ ಆಡಿಯೋ ಪರೀಕ್ಷೆಗಳಲ್ಲೂ ಈ ಹೊಸ ಮಾದರಿ ಮೊದಲ ಸ್ಥಾನ ಗಳಿಸಿದೆ.

ಗೂಗಲ್‌ಗೇ ಸೆಡ್ಡು ಹೊಡೆದ 'ಚಾರಿಯಟ್': 10 ಭಾಷೆಗಳಲ್ಲಿ ಎಐ ವಾಯ್ಸ್ ಮಾಡೆಲ್

-

Profile
Siddalinga Swamy Oct 22, 2026 7:45 PM

ನವದೆಹಲಿ, ಅ.22: ಭಾರತದ ಹೆಮ್ಮೆಯ ಎಐ ಸಂಶೋಧನಾ ಸಂಸ್ಥೆಯಾದ ಚಾರಿಯಟ್, ಭಾರತದ 10 ಪ್ರಮುಖ ಭಾಷೆಗಳಿಗಾಗಿ ಅತ್ಯಾಧುನಿಕ ಧ್ವನಿ ಗುರುತಿಸುವಿಕೆ ಮಾದರಿಯಾದ 'Chariot-1-ASR Realtime' ಅನ್ನು ಗುರುವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿದೆ. ಗೂಗಲ್ ಡೀಪ್‌ಮೈಂಡ್‌ ಮತ್ತು ಮೆಟಾದ ಮಾಜಿ ಸಂಶೋಧಕರಿಂದ ಸ್ಥಾಪಿಸಲ್ಪಟ್ಟಿರುವ ಹಾಗೂ 'ಇಂಡಿಯಾ ಎಐ ಮಿಷನ್' ಅಡಿಯಲ್ಲಿ ಆಯ್ಕೆಯಾದ ಮೊದಲ ನಾಲ್ಕು ತಂಡಗಳಲ್ಲಿ ಒಂದಾಗಿರುವ ಈ ಸಂಸ್ಥೆಯು ಜಾಗತಿಕ ದೈತ್ಯ ಕಂಪನಿಗಳಿಗೇ ಪೈಪೋಟಿ ನೀಡುತ್ತಿದೆ.

ಚಾರಿಯಟ್ ಹೊಸ ಮಾಡೆಲ್‌ನ ವಿಶೇಷತೆ ಎಂದರೆ ಅತ್ಯುತ್ತಮ ನಿಖರತೆ. ಇದು ಲೈವ್ ಆಗಿ ಧ್ವನಿಯನ್ನು ಪಠ್ಯಕ್ಕೆ ಪರಿವರ್ತಿಸುವ ವ್ಯವಸ್ಥೆಯಾಗಿದ್ದರೂ, ಸಂಪೂರ್ಣ ರೆಕಾರ್ಡಿಂಗ್ ಮುಗಿಯುವವರೆಗೆ ಕಾಯುವ ಇತರೆ ದೊಡ್ಡ ಬ್ಯಾಚ್ ಸಿಸ್ಟಮ್‌ಗಳಿಗಿಂತಲೂ ಹೆಚ್ಚು ನಿಖರವಾದ ಫಲಿತಾಂಶ ನೀಡುತ್ತದೆ.

ಅಲ್ಲದೆ ಗೂಗಲ್‌ನ ಜೆಮಿನಿ 3.5 ಟ್ರಾನ್ಸ್‌ಕ್ರೈಬ್‌ಗಿಂತ ಸರಾಸರಿ ಶೇ. 26ರಷ್ಟು ಕಡಿಮೆ ತಪ್ಪುಗಳನ್ನು ಮಾಡಿದೆ. ಇನ್ನು, ಸರ್ವಮ್, ಎಲೆವೆನ್‌ಲ್ಯಾಬ್ಸ್, ಡೀಪ್‌ಗ್ರಾಮ್‌ನಂತಹ ಸಂಸ್ಥೆಗಳ ಲೈವ್ ಸೇವೆಗಳಿಗಿಂತಲೂ ಎಲ್ಲಾ 10 ಭಾಷೆಗಳಲ್ಲಿ ಅತ್ಯಂತ ಕಡಿಮೆ ಎರರ್ ರೇಟ್ ಹೊಂದಿದೆ. ಅದರಲ್ಲೂ ಮುಖ್ಯವಾಗಿ ಹಿಂದಿ ಭಾಷೆಯಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದು, ತನ್ನ ಮುಂದಿನ ಅತ್ಯುತ್ತಮ ಪ್ರತಿಸ್ಪರ್ಧಿಗಿಂತ ಶೇ. 23ರಷ್ಟು ಕಡಿಮೆ ತಪ್ಪುಗಳನ್ನು ಮಾಡುವ ಮೂಲಕ ದಾಖಲೆ ಬರೆದಿದೆ.

ನೈಜ ಜಗತ್ತಿನ ಸವಾಲುಗಳಲ್ಲೂ ನಂ.1!

ವಿವಿಧ ಜಟಿಲ ಹಾಗೂ ನೈಜ ಆಡಿಯೋ ಪರೀಕ್ಷೆಗಳಲ್ಲೂ ಈ ಹೊಸ ಮಾದರಿ ಮೊದಲ ಸ್ಥಾನ ಗಳಿಸಿದೆ. ನೈಜ ಹಿಂದಿ ಮತ್ತು ಭಾರತೀಯ-ಇಂಗ್ಲಿಷ್ ಫೋನ್ ಕರೆಗಳಲ್ಲಿ, ಭಾರತದ ವಿವಿಧ ಜಿಲ್ಲೆಗಳ ವಿಭಿನ್ನ ಹಿಂದಿ ಉಚ್ಚಾರಣೆಗಳು ಮತ್ತು ಭಾಷಾ ಶೈಲಿಯಲ್ಲಿ ಮತ್ತು ಗದ್ದಲದ ಹಾಗೂ ಶಬ್ದವಿರುವ ರೆಕಾರ್ಡಿಂಗ್‌ಗಳಲ್ಲಿಯೂ ಅತ್ಯುತ್ತಮ ಕಾರ್ಯಕ್ಷಮತೆ ತೋರಿಸಿದೆ.

ವ್ಯವಹಾರಗಳಿಗೆ ಇದರಿಂದೇನು ಲಾಭ?

ಬ್ಯಾಂಕ್‌ಗಳು, ವಿಮಾ ಕಂಪನಿಗಳು, ಟೆಲಿಕಾಂ ಆಪರೇಟರ್‌ಗಳು ಮತ್ತು ಕಾಲ್ ಸೆಂಟರ್‌ಗಳು ಭಾರತದ ಪ್ರಮುಖ 10 ಭಾಷೆಗಳಲ್ಲಿ ಗ್ರಾಹಕರೊಂದಿಗೆ ವ್ಯವಹರಿಸಲು ಈ ಒಂದೇ ಮಾದರಿಯನ್ನು ಬಳಸಬಹುದು. ಪ್ರಾದೇಶಿಕ ಉಚ್ಚಾರಣೆಗಳು ಮತ್ತು ಭಾಷೆ ಬೆರೆಯುವುದನ್ನು ಯಾವುದೇ ಮುಂಗಡ ಸೂಚನೆ ಇಲ್ಲದೆ ತಾನಾಗಿಯೇ ಗ್ರಹಿಸುವುದು ಇದರ‌ ಇನ್ನೊಂದು ವಿಶೇಷತೆಯಾಗಿದೆ. ಇನ್ನು ಇಂಗ್ಲಿಷ್ ಪದಗಳನ್ನು ಲ್ಯಾಟಿನ್ ಲಿಪಿಯಲ್ಲಿ ಅಥವಾ ಹಿಂದಿಗೆ ದೇವನಾಗರಿ ಲಿಪಿಯಲ್ಲಿ ಬರೆಯುವ ಸೌಲಭ್ಯವನ್ನೂ ಇದು ಹೊಂದಿದೆ.

BSA Gold Star 650 Bike: ಹಬ್ಬದ ಸೀಸನ್‌ಗೆ ರಾಯಲ್ ಎಂಟ್ರಿ: 'ಬಿಎಸ್‌ಎ ಗೋಲ್ಡ್ ಸ್ಟಾರ್ 650' ಬೈಕ್‌ನ 2 ಹೊಸ ಎಡಿಷನ್‌ಗಳು ಬಿಡುಗಡೆ, ದರ ಎಷ್ಟು?

ಈ‌ ಬಗ್ಗೆ ಮತ್ತಷ್ಟು ವಿವರಗಳನ್ನು ಹಂಚಿಕೊಂಡಿರುವ ಚಾರಿಯಟ್ ಸಂಸ್ಥೆಯ ಸಹ-ಸಂಸ್ಥಾಪಕರಾದ ಪಾರ್ಥ ಸಾರ್ಥಿ ಮತ್ತು ಸುವ್ರತ್ ಭೂಷಣ್, "ಧ್ವನಿ ಗ್ರಹಿಕೆ ಮತ್ತು ಧ್ವನಿ ಉತ್ಪಾದನೆ ಎಂಬುದು ಬೇರೆ ಬೇರೆಯಲ್ಲ. ಇವೆರಡೂ ಒಂದೇ. ಭಾಷೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಮಾತನಾಡುವುದು ಒಂದೇ ಜ್ಞಾನದ ಮೇಲೆ ಆಧಾರಿತವಾಗಿರುವುದರಿಂದ, ಇವೆರಡನ್ನೂ ಒಟ್ಟಿಗೆ ನಿರ್ವಹಿಸಲು 'Chariot-1' ಫೌಂಡೇಶನ್ ಮಾದರಿಯನ್ನು ರೂಪಿಸಲಾಗಿದೆ" ಎಂದು ವಿವರಿಸಿದ್ದಾರೆ.