ರಾಹುಲ್ ಗಾಂಧಿ ವಿರುದ್ಧ ಶಶಿ ತರೂರ್ ಅಸಮಾಧಾನ! ಕಾಂಗ್ರೆಸ್‌ನ ಮಹತ್ವದ ಸಭೆಗೆ ಗೈರು
ಕಾಂಗ್ರೆಸ್ ಸದಸ್ಯ ಶಶಿ ತರೂರ್ ರಾಹುಲ್ ಗಾಂಧಿಯಿಂದ ಸರಿಯಾದ ಗೌರವ ಸಿಕ್ಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ವಾರ್ಷಿಕ ವಿಧಾನಸಭಾ ಚುನಾವಣಾ ಸಿದ್ಧತೆ ಕುರಿತು ಕೇರಳದಲ್ಲಿ ನಡೆಯಬೇಕಿದ್ದ ಪ್ರಮುಖ ಕಾಂಗ್ರೆಸ್ ಸಭೆಗೆ ಅವರು ಗೈರಾಗಿದ್ದಾರೆ. ಸಭೆಯಲ್ಲಿ ರಾಹುಲ್ ಗಾಂಧಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇರಳ ಘಟಕದ ಹಿರಿಯ ನಾಯಕರು ಭಾಗಿಯಾಗಿದ್ದರು. ತಿರುಬನುಂತಪುರಂನಿಂದ ನಾಲ್ಕು ಬಾರಿ ಸಂಸದರಾಗಿರುವ ಶಶಿ ತರೂರ್ ಹಾಜರಾತಿ ನೀಡದೇ ಹೋದುದರಿಂದ ಪಕ್ಷದೊಳಗಿನ ವಾತಾವರಣ ಚರ್ಚೆಗಳಿಗೆ ವ್ಯಾಪಕ ಗಮನ ಸೆಳೆದಿದೆ.
ನಾಯಕ ರಾಹುಲ್ ಗಾಂಧಿ-ಸಂಸದ ಶಶಿ ತರೂರ್ -
ನವದೆಹಲಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ(Rahul Gandhi) ಇತ್ತೀಚೆಗೆ ಕೊಚ್ಚಿಗೆ ಭೇಟಿ ನೀಡಿದ್ದ ವೇಳೆ ತಮಗೆ ಪಕ್ಷದಿಂದ “ಸರಿಯಾದ ಗೌರವ” ಸಿಕ್ಕಿಲ್ಲ ಎಂಬ ಕಾರಣಕ್ಕೆ ಸಂಸದ ಶಶಿ ತರೂರ್ (Shashi Tharoor) ಅಸಮಾಧಾನಗೊಂಡಿದ್ದಾರೆ ಎಂದು ಶುಕ್ರವಾರ ಮೂಲಗಳು ತಿಳಿಸಿವೆ. ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಸಿದ್ಧತೆ ಕುರಿತು ಚರ್ಚಿಸಲು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಹಾಗೂ ಕೇರಳ ಘಟಕದ ಹಿರಿಯ ನಾಯಕರು ಇಂದು ಮಧ್ಯಾಹ್ನ 2.30ಕ್ಕೆ ಸಭೆ ನಡೆಸಲಿದ್ದಾರೆ. ಆದರೆ, ಕೇರಳ ರಾಜಧಾನಿ ತಿರುವನಂತಪುರಂ(Thiruvananthapuram)ನಿಂದ ನಾಲ್ಕು ಬಾರಿ ಸಂಸದರಾಗಿರುವ ಶಶಿ ತರೂರ್ ಈ ಸಭೆಗೆ ಗೈರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತರೂರ್‌ರಿಂದ, ಪ್ರಧಾನಮಂತ್ರಿ ಮತ್ತು ಆಡಳಿತಾರೂಢ ಬಿಜೆಪಿಯನ್ನು ಹೊಗಳುವಂತೆ ಕಾಣುವ ಕೆಲವು ಹೇಳಿಕೆಗಳು ಬಂದಿದ್ದು, ಕಾಂಗ್ರೆಸ್‌ನ ಕೇಂದ್ರ ನಾಯಕತ್ವದ ಬಗ್ಗೆ ಅಸಮಾಧಾನವಿದೆ ಎಂಬ ಅಭಿಪ್ರಾಯ ವ್ಯಾಕ್ತವಾಗಿದೆ. ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಪಾಕಿಸ್ತಾನದ ಮೇಲೆ ನಡೆದ ಮಿಲಿಟರಿ ದಾಳಿಗಳನ್ನು ಪ್ರಧಾನಮಂತ್ರಿ ನಿರ್ವಹಿಸಿದ ರೀತಿಯನ್ನು ಶ್ಲಾಘಿಸಿ ತರೂರ್ ಕೆಲ ಮಾತುಗಳನ್ನಾಡಿದ್ದರು, ಜೊತೆಗೆ ಮಾಧ್ಯಮಗಳಲ್ಲಿ ಕೆಲವೊಂದು ಟೀಕಾತ್ಮಕ ಹೇಳಿಕೆಗಳನ್ನು ಸಹ ನೀಡಿದ್ದರು.
Fund for Badami Development: ಬಾದಾಮಿ ಅಭಿವೃದ್ಧಿಗೆ ಬರುವುದೇ ಅನುದಾನ ?
ಬಿಜೆಪಿ ಆಗಾಗ್ಗೆ ತನ್ನ ರಾಜಕೀಯ ಎದುರಾಳಿ ಪಕ್ಷವನ್ನು ಅಣುಕಿಸಲು ಬಳಸಿಕೊಳ್ಳುವ ತರೂರ್ ಮತ್ತು ಕಾಂಗ್ರೆಸ್ ನಡುವಿನ ತಿಕ್ಕಾಟವು ಗುರುವಾರ ಮತ್ತೆ ಬಹಿರಂಗವಾಗಿದೆ. ಲೋಕಸಭಾ ಸಂಸದರಾದ ತರೂರ್, ಮಾಜಿ ಬಿಜೆಪಿ ಸಂಸದ ಹಾಗೂ ಪ್ರಸ್ತುತ ಭಾರತ ಪುರುಷರ ಕ್ರಿಕೆಟ್ ತಂಡದ ಕೋಚ್ ಆಗಿರುವ ಗೌತಮ್ ಗಂಭೀರ್ ಅವರೊಂದಿಗೆ ತೆಗೆಸಿಕೊಂಡ ಸೆಲ್ಫಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, “ಪ್ರಧಾನಮಂತ್ರಿ ನರೇಂದ್ರ ಮೋದಿ ನಂತರ ಭಾರತದ ಎರಡನೇ ಅತಿ ಕಠಿಣ ಕೆಲಸ ನಿರ್ವಹಿಸುತ್ತಿದ್ದಾರೆ," ಎಂದು ಶ್ಲಾಘಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಶೆಹಜಾದ್ ಪೂನಾವಲ್ಲಾ, ಗಂಭೀರ್ ಅವರ ಕೋಚಿಂಗ್ ಮತ್ತು ತಂತ್ರಗಳನ್ನು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸುವುದನ್ನು, ಪ್ರಧಾನಮಂತ್ರಿಯ ಕಾರ್ಯವೈಖರಿಯನ್ನು ವಿರೋಧ ಪಕ್ಷ ಪ್ರಶ್ನಿಸುವುದಕ್ಕೆ ಹೋಲಿಕೆ ಮಾಡಿದ್ದಾರೆ. ವಿಪಕ್ಷವು ರಾಷ್ಟ್ರೀಯ ಹಿತಾಸಕ್ತಿಗಳ ವಿರುದ್ಧವಾಗಿ ವರ್ತಿಸುತ್ತಿದೆ ಎಂಬ ಪೂನಾವಲಾ ಆರೋಪಿಸಿದ್ದಾರೆ.
ಪ್ರಧಾನಮಂತ್ರಿ ಮೋದಿಯವರ ಕೆಲಸವೇ ಭಾರತದ ಅತಿ ಕಠಿಣ ಕೆಲಸ ಎಂದು ತರೂರ್ ಒಪ್ಪಿಕೊಂಡಿರುವುದು ಗಮನಾರ್ಹ ದೇಶದ ಹಿತಾಸಕ್ತಿಗಿಂತ ಕುಟುಂಬಾಧಾರಿತ (ಪರಿವಾರಿಕ) ಹಿತಾಸಕ್ತಿಗಳೇ ಮೇಲು ಎನ್ನುವ ವಿಪಕ್ಷವು ಪ್ರಧಾನಿಯ ಪ್ರತಿಯೊಂದು ನಿರ್ಧಾರವನ್ನೂ ಅನುಮಾನಿಸುತ್ತಿದೆ,” ಎಂದು ಪೂನಾವಲಾ ಹೇಳಿದ್ದಾರೆ. ಇದೇ ವೇಳೆ, ತರೂರ್ ಮತ್ತು ಕಾಂಗ್ರೆಸ್ ನಡುವಿನ ಮುಂದುವರಿದ ಘರ್ಷಣೆಯನ್ನು ಉಲ್ಲೇಖಿಸಿ, “ತರೂರ್ ವಿರುದ್ಧ ಇನ್ನೊಂದು ಕಾಂಗ್ರೆಸ್ ಫತ್ವಾ ಬರಬಹುದು” ಎಂಬ ಪೂನಾವಲ್ಲಾ ಟೀಕೆ ಮಾಡಿದ್ದಾರೆ.