ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ ವಿಶ್ವ ಗುರುವಾಗದಂತೆ ತಡೆಯುತ್ತಿರುವುದು ಸಿದ್ದತೆಯ ಕೊರತೆ: ಮೋಹನ್ ಭಾಗವತ್

ಭಾರತ ವಿಶ್ವ ಗುರು ಆಗಿದೆ ಅಥವಾ ಆಗಬೇಕು ಎಂದು ನಾವು ಬಹಳ ವರ್ಷಗಳಿಂದ ಹೇಳುತ್ತಿದ್ದೇವೆ. ಆದರೆ ಇದನ್ನು ಪೂರ್ವ ಸಿದ್ದತೆಯ ಕೊರತೆ ತಡೆಯುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ಅವರು ಗುರುವಾರ ನಾಗ್ಪುರದಲ್ಲಿ ನಡೆದ ಆರ್‌ಎಸ್‌ಎಸ್ ಸ್ವಯಂಸೇವಕ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

ಈಗ ಭಾರತದ ಸಮಯ: ಮೋಹನ್ ಭಾಗವತ್

ಸಂಗ್ರಹ ಚಿತ್ರ -

ನಾಗ್ಪುರ: ಜಗತ್ತಿನ ದೃಷ್ಟಿ ಈಗ ಭಾರತದ ಮೇಲೆ ಇದೆ. ನಿರ್ದೇಶನಕ್ಕಾಗಿ ಈಗ ಜಗತ್ತು ಭಾರತದತ್ತ ಹೆಚ್ಚು ನೋಡುತ್ತಿದೆ. ಹೀಗಾಗಿ ರಾಷ್ಟ್ರವು ತನ್ನ ಸಾಮೂಹಿಕ ಶಕ್ತಿಯನ್ನು ಒಗ್ಗೂಡಿಸಿಕೊಳ್ಳಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಹೇಳಿದರು. ಅವರು ಗುರುವಾರ ನಾಗ್ಪುರದಲ್ಲಿ (Nagpur) ನಡೆದ ಆರ್‌ಎಸ್‌ಎಸ್ (RSS) ಸ್ವಯಂಸೇವಕ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಸಂಘರ್ಷ ಮತ್ತು ಬಿಕ್ಕಟ್ಟಿನಲ್ಲಿರುವ ಜಗತ್ತಿಗೆ ಭಾರತದಿಂದ ಸಮಗ್ರ ಪರಿಹಾರ ನೀಡುವುದು ಸಾಧ್ಯವಿದೆ ಎಂದು ತಿಳಿಸಿದರು.

ಭಾರತ ವಿಶ್ವಗುರು ಆಗಿದೆ ಅಥವಾ ಆಗಬೇಕು ಎಂದು ನಾವು ಬಹಳ ವರ್ಷಗಳಿಂದ ಹೇಳುತ್ತಲೇ ಬಂದಿದ್ದೇವೆ. ಆದರೆ ಇದನ್ನು ಸಿದ್ದತೆಯ ಕೊರತೆ ತಡೆಯುತ್ತಿದೆ. ಪಶ್ಚಿಮ ಏಷ್ಯಾ ಭಾಗದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮ ಅದರೊಂದಿಗೆ ಸಂಪರ್ಕವಿಲ್ಲದ ದೇಶಗಳು ಕೂಡ ಅನುಭವಿಸುತ್ತಿದೆ. ಈ ಸಂದರ್ಭದಲ್ಲಿ ಅಧಿಕಾರ ಚಲಾಯಿಸುವವರ ಮಾತನ್ನು ಜಗತ್ತು ಕೇಳುತ್ತದೆ ಎಂದು ತಿಳಿಸಿದರು.

ಆಂಧ್ರ ರಾಜ್ಯಸಭಾ ಸ್ಥಾನವನ್ನು ಬಿಟ್ಟುಕೊಟ್ಟ ಬಿಜೆಪಿ! ಕಾರಣವೇನು?

ನಾವು ನಮ್ಮ ದೇಶವನ್ನು ಸಮೃದ್ಧಗೊಳಿಸಬೇಕಾಗಿದೆ. ಭಾರತವು ಸತ್ಯವನ್ನು ಮಾತನಾಡುತ್ತದೆ ಎಂದು ಜಗತ್ತಿಗೆ ತಿಳಿದಿದ್ದರೂ ಅದು ಸತ್ಯ ಎಂಬ ಕಾರಣಕ್ಕಾಗಿ ಸ್ವೀಕರಿಸಲಾಗುವುದಿಲ್ಲ. ಪ್ರಬಲ ಕೃತ್ಯಗಳು ನಿರಂಕುಶವಾಗಿರುತ್ತದೆ. ಶಕ್ತಿ ಇಲ್ಲದವರು ತಲೆ ಬಾಗಿಸುತ್ತಾರೆ. ಎಲ್ಲವೂ ಅಧಿಕಾರದಿಂದಲೇ ನಡೆಯುತ್ತದೆ ಎಂದರು.

ಭಾರತವು ಆಧ್ಯಾತ್ಮಿಕ ಮತ್ತು ಧಾರ್ಮಿಕ ಜೀವನದ ರಾಷ್ಟ್ರ. ಜಗತ್ತಿಗೆ ಧರ್ಮದ ಮಾರ್ಗವನ್ನು ತೋರಿಸುತ್ತದೆ. ಅಭಿವೃದ್ಧಿ ಮತ್ತು ಪರಿಸರ ನಾಶದ ನಡುವೆ ಮಧ್ಯದ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಾಗದೆ ಜಗತ್ತು ಜಗಳಗಳಲ್ಲಿ ಸಿಲುಕಿಕೊಂಡಿದೆ. ಅದಕ್ಕೆ ಈಗ ಭಾರತದ ಅಗತ್ಯವಿದೆ ಎಂದು ಹೇಳಿದರು.

ಇವತ್ತು ಸಂಪೂರ್ಣ ವಿಶ್ವವೇ ವೈಯಕ್ತಿಕ ಹಕ್ಕುಗಳು, ಸಾಮಾಜಿಕ ಹಿತಾಸಕ್ತಿಗಳು ಮತ್ತು ಪರಿಸರ ಸಂರಕ್ಷಣೆಯನ್ನು ಒಳಗೊಂಡ ಸಂದಿಗ್ಧತೆಯಲ್ಲಿ ಸಿಲುಕಿಕೊಂಡಿದೆ. ಒಬ್ಬ ವ್ಯಕ್ತಿಗೆ ವೈಯಕ್ತಿಕ ಹಕ್ಕುಗಳನ್ನು ನೀಡುವುದು ಸಮಾಜದ ಹಿತಾಸಕ್ತಿಗೆ ಧಕ್ಕೆ ತರುತ್ತದೆ. ಆದ್ದರಿಂದ ಸಮಾಜಕ್ಕೆ ಅಧಿಕಾರ ನೀಡಬೇಕಾದರೆ ವ್ಯಕ್ತಿಯ ಹಕ್ಕುಗಳನ್ನು ನಿಗ್ರಹಿಸಬೇಕು. ಭೌತಿಕ ಬೆಳವಣಿಗೆಗೆ ಪರಿಸರವನ್ನು ಬಳಸಿಕೊಳ್ಳಲಾಗುತ್ತಿದೆ. ಕೆಲವರು ಪರಿಸರವನ್ನು ರಕ್ಷಿಸಲು ಅಭಿವೃದ್ಧಿಯನ್ನು ನಿಲ್ಲಿಸುವಂತೆ ಒತ್ತಾಯಿಸುತ್ತಿದ್ದಾರೆ. ಜಗತ್ತು ಈಗ ಇಂತಹ ಸ್ಥಿತಿಯಲ್ಲಿ ಸಿಲುಕಿ ಗೊಂದಲಕ್ಕೊಳಗಾಗಿದೆ ಎಂದರು.

ಭಾರತ ಶ್ರೇಷ್ಠ ರಾಷ್ಟ್ರವಾಗುವುದನ್ನು ಬಯಸದ ಕೆಲವು ಶಕ್ತಿಗಳು ಸಣ್ಣ ನೆಪಗಳನ್ನು ಹುಡುಕುವ ಮೂಲಕ ಸಾಮಾಜಿಕ ಜೀವನದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಭಾರತೀಯ ಮೌಲ್ಯಗಳು ಪ್ರಬಲವಾದರೆ ಜಗತ್ತಿನಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತವೆ ಎಂದು ಭಾವಿಸಿ ಅನೇಕರು ನಮ್ಮ ಸಂಪ್ರದಾಯಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದರು.

"ಇಸ್ಲಾಂ ಸ್ನೇಹಿ ಜಿಮ್": ಕೇರಳದಲ್ಲಿ ಭುಗಿಲೆದ್ದ ಭಾರಿ ವಿವಾದ

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಮುಖ ಕೈಗಾರಿಕೋದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರು ಮಾತನಾಡಿ, 100 ವರ್ಷಗಳಷ್ಟು ಹಳೆಯದಾದ ಆರ್‌ಎಸ್‌ಎಸ್ ಸಂಘಟನೆಯು ಯಾವಾಗಲೂ ಸವಾಲುಗಳ ನಡುವೆ ಸಮಾಜ ಮತ್ತು ರಾಷ್ಟ್ರದೊಂದಿಗೆ ನಿಂತಿದೆ. ಇದು ಶ್ಲಾಘನೀಯ ಎಂದು ಹೇಳಿದರು.