ದೆಹಲಿಯ ರೆಸ್ಟೋರೆಂಟ್‌ನಲ್ಲಿ ಭಾರಿ ಬೆಂಕಿ ಅವಘಡ: 20 ಮಂದಿ ಸಾವು
Fire at Delhi Restaurant: ರೆಸ್ಟೋರೆಂಟ್‌ವೊಂದರ ನೆಲಮಾಳಿಗೆಯಲ್ಲಿ ಇಂದು ಬೆಳಗ್ಗೆ ಭಾರಿ ಬೆಂಕಿ ಅವಘಡ ಸಂಭವಿಸಿದ್ದು ಹೊತ್ತಿ ಉರಿದ ಘಟನೆ ದೆಹಲಿಯ ಮಾಳವೀಯ ನಗರದ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದೆ. ದುರ್ಘಟನೆ ಬೆನ್ನಲ್ಲೇ ಹಲವಾರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ದೌಡಾಯಿಸಿದವು.
ದೆಹಲಿಯ ರೆಸ್ಟೋರೆಂಟ್‌ನಲ್ಲಿ ಭಾರಿ ಬೆಂಕಿ ಅವಘಡ -
ನವದೆಹಲಿ, ಜೂ.3: ರೆಸ್ಟೋರೆಂಟ್‌ವೊಂದರ ನೆಲಮಾಳಿಗೆಯಲ್ಲಿ ಇಂದು ಬೆಳಗ್ಗೆ ಭಾರಿ ಬೆಂಕಿ ಅವಘಡ (fire accident) ಸಂಭವಿಸಿದ್ದು ಹೊತ್ತಿ ಉರಿದ ಘಟನೆ ದೆಹಲಿಯ (Delhi) ಮಾಳವೀಯ ನಗರದ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದೆ. ಅಗ್ನಿ ಅವಘಡದಲ್ಲಿ ಕನಿಷ್ಠ 20 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಹಲವರನ್ನು ರಕ್ಷಿಸಲಾಗಿದೆ. ಲೆಮನ್ ಗ್ರೀನ್ ರೆಸ್ಟೋರೆಂಟ್‌ನಲ್ಲಿ ಬೆಳಗ್ಗೆ 8.50 ರ ಸುಮಾರಿಗೆ ಬೆಂಕಿ ದುರಂತ ಸಂಭವಿಸಿದೆ. ದುರ್ಘಟನೆ ಬೆನ್ನಲ್ಲೇ ಹಲವಾರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ದೌಡಾಯಿಸಿದವು.
ಕಟ್ಟಡದೊಳಗೆ ಹಲವಾರು ಜನರು ಸಿಲುಕಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯಲ್ಲಿ ಸಿಲುಕಿದ್ದವರನ್ನು ಸ್ಥಳಾಂತರಿಸಲು ರಕ್ಷಣಾ ಪ್ರಯತ್ನಗಳನ್ನು ಆರಂಭಿಸಿದರು. ಬೆಂಕಿ ಅವಘಡ ಸಂಭವಿಸಲು ಕಾರಣ ಏನು ಎಂಬುದು ಇನ್ನೂ ಪತ್ತೆಯಾಗಿಲ್ಲ.
ದೆಹಲಿ ಅಗ್ನಿಶಾಮಕ ದಳಕ್ಕೆ ಬೆಳಗ್ಗೆ ತುರ್ತು ಕರೆ ಬಂದ ತಕ್ಷಣವೇ ಎರಡು ವಾಟರ್ ಟೆಂಡರ್‌ಗಳು, ಎರಡು ವಾಟರ್ ಬೌಸರ್‌ಗಳು, ತ್ವರಿತ ಪ್ರತಿಕ್ರಿಯಾ ವಾಹನ ಸೇರಿದಂತೆ ಇತರೆ ತುರ್ತು ಉಪಕರಣಗಳೊಂದಿಗೆ ಹಲವು ಅಗ್ನಿಶಾಮಕ ಘಟಕಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿ ಹೊತ್ತಿ ಉರಿಯುತ್ತಿರುವ ಕಟ್ಟಡದಿಂದ ಮೂವರು ಮಕ್ಕಳನ್ನು ರಕ್ಷಿಸಿ ಪ್ರಾಣ ಬಿಟ್ಟ ದಿಟ್ಟ ಮಹಿಳೆ
"ಇದು ಅತ್ಯಂತ ದುಃಖದ ಘಟನೆ. ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ಈ ಅವಘಡ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡ ಮಾಹಿತಿ ಸಿಕ್ಕ ತಕ್ಷಣವೇ ನಾವು ಸಂಪೂರ್ಣ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದ್ದೇವೆ. ವಿಪತ್ತು ನಿರ್ವಹಣಾ ತಂಡ, ಜಿಲ್ಲಾಧಿಕಾರಿ, ಪೊಲೀಸ್ ಠಾಣೆಯ ಅಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ಮಹಾನಗರ ಪಾಲಿಕೆಯ ಉಪ ಆಯುಕ್ತರನ್ನು ಸಂಪರ್ಕಿಸಿದ್ದೇವೆ. ಸಂಬಂಧಿತ ಎಲ್ಲಾ ಅಧಿಕಾರಿಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದ್ದು, ನಾನು ಕೂಡ ಸ್ವತಃ ಘಟನಾ ಸ್ಥಳಕ್ಕೆ ಬಂದಿದ್ದೇನೆ. ಬೆಂಕಿ ಅವಘಡದ ನಿಖರ ಕಾರಣವು ಸಮಗ್ರ ತನಿಖೆಯ ನಂತರವೇ ತಿಳಿಯಲಿದೆ. ಈ ಸಮಯದಲ್ಲಿ ಸ್ಥಳೀಯ ನಿವಾಸಿಗಳೂ ಸಾಕಷ್ಟು ಸಹಕಾರ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಂತರ ಲಭ್ಯವಾಗಲಿದ್ದು, ಆಡಳಿತಾಧಿಕಾರಿಗಳಿಂದ ಸಂಪೂರ್ಣ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ" ಎಂದು ಎಂದು ಶಾಸಕ ಸತೀಶ್ ಉಪಾಧ್ಯಾಯ ಹೇಳಿದರು.
ಘಟನೆಯಲ್ಲಿ ಕನಿಷ್ಠ 20 ಜನರು ಮೃತಪಟ್ಟಿದ್ದಾರೆ ಎಂದು ದೆಹಲಿ ಪೊಲೀಸರು ದೃಢಪಡಿಸಿದರು. ಕಾರ್ಯಾಚರಣೆಯ ಸಮಯದಲ್ಲಿ, ಅಗ್ನಿಶಾಮಕ ದಳದ ಸಿಬ್ಬಂದಿ ರೆಸ್ಟೋರೆಂಟ್‌ನ ನೆಲಮಾಳಿಗೆಗೆ ಪ್ರವೇಶಿಸಿ ಒಳಗೆ ಸಿಲುಕಿದ್ದ ಜನರನ್ನು ರಕ್ಷಿಸಿದರು.
ಬೆಂಕಿ ಹೊತ್ತಿಕೊಂಡಾಗ ರೆಸ್ಟೋರೆಂಟ್ ಒಳಗೆ ಎಷ್ಟು ಜನರಿದ್ದರು ಎಂಬುದು ನಿಖರವಾಗಿ ತಿಳಿದಿಲ್ಲ. ಹಾಗೆಯೇ ಬೆಂಕಿಗೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಬೆಂಕಿ ಅವಘಡ ಹೇಗೆ ಪ್ರಾರಂಭವಾಯಿತು? ಯಾವುದೇ ಅಗ್ನಿ ಸುರಕ್ಷತಾ ಉಲ್ಲಂಘನೆ ಅಥವಾ ಲೋಪಗಳು ದುರಂತಕ್ಕೆ ಕಾರಣವಾಗಿವೆಯೇ ಎಂದು ತಿಳಿಯಲು ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.