ಶಾಲೆಯಲ್ಲಿ ಭೀಕರ ದುರಂತ; ಮೆಟ್ಟಿಲಿಂದ ಆಕಸ್ಮಿಕವಾಗಿ ಬಿದ್ದು 9 ವರ್ಷದ ಬಾಲಕಿ ದುರ್ಮರಣ: ವಿಡಿಯೊ ವೈರಲ್
School Accident: ಶಾಲೆಯ ಮೆಟ್ಟಿಲಿನಿಂದ ಆಕಸ್ಮಿಕವಾಗಿ ಬಿದ್ದು, ಒಂಬತ್ತು ವರ್ಷದ 4ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಿರುವ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೆಟ್ಟಿಲುಗಳಿಂದ ಬಿದ್ದ ಪರಿಣಾಮ ಬಾಲಕಿಯ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಶಾಲಾ ಸಿಬ್ಬಂದಿ ತಕ್ಷಣವೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ.
ಸಾಂದರ್ಭಿಕ ಚಿತ್ರ -
ಹೈದರಾಬಾದ್, ಸೆ. 19: ಖಾಸಗಿ ಶಾಲೆಯ ಮೆಟ್ಟಿಲಿನಿಂದ ಆಕಸ್ಮಿಕವಾಗಿ ಬಿದ್ದು, ಒಂಬತ್ತು ವರ್ಷದ 4ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ತೆಲಂಗಾಣ (Telangana)ದ ರಂಗಾರೆಡ್ಡಿ ಜಿಲ್ಲೆಯ ಶಾದ್‌ನಗರ ಪಟ್ಟಣದ ಶಾಲೆಯೊಂದರಲ್ಲಿ ಈ ಶಾಕಿಂಗ್ ಘಟನೆ ನಡೆದಿದೆ. ಶಾದ್ ನಗರದ ಇಂಡಿಯನ್ ಪಬ್ಲಿಕ್ ಶಾಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ವಿದ್ಯಾರ್ಥಿನಿ ಮೆಟ್ಟಿಲು ಇಳಿಯುವಾಗ ಜಾರಿ ಬಿದ್ದು ಸಮತೋಲನ ಕಳೆದುಕೊಂಡಿದ್ದಳು ಎನ್ನಲಾಗಿದೆ..
ಮೆಟ್ಟಿಲಿನಿಂದ ಬಿದ್ದ ಪರಿಣಾಮ ಬಾಲಕಿಯ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಪ್ರಜ್ಞೆ ತಪ್ಪಿದೆ. ಶಾಲಾ ಸಿಬ್ಬಂದಿ ತಕ್ಷಣವೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ಮೆಟ್ಟಿಲುಗಳ ಬಳಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಹೆಚ್ಚಿನ ವಿವರ ನಿರೀಕ್ಷಿಲಾಗುತ್ತಿದೆ.
ಮೆಟ್ಟಿಲಿನಿಂದ ಬಿದ್ದು ಮೃತಪಟ್ಟ ಬಾಲಕಿ:
A fourth-grade student, Varnika, died after accidentally falling down the stairs at Indian Heights Private School in Shadnagar during school hours.
— Sowmith Yakkati (@YakkatiSowmith) September 18, 2026
She was rushed to a hospital but succumbed while undergoing treatment. The exact circumstances leading to the fall are yet to be… pic.twitter.com/VoQtHjStd6
ಗಂಟೆಗೆ 198 ಕಿ.ಮೀ. ವೇಗದಲ್ಲಿ ಚಲಿಸಿದ ಕಾರ್, ಚಾಲಕ ಸ್ಥಳದಲ್ಲೇ ಸಾವು
ಅತಿವೇಗದ ಚಾಲನೆ ಜೀವವನ್ನೇ ಬಲಿ ಪಡೆದ ಘಟನೆ ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ನಡೆದಿದೆ. ಡಿಯೋಲಿ-ಟೋಂಕ್ ಹೆದ್ದಾರಿಯ ಪಾಲಿಯಾಡಾ ಬಳಿ ವೇಗವಾಗಿ ಬಂದ ಕಾರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 41 ವರ್ಷದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತನನ್ನು ಮಾಲ್ಪುರ ಪೊಲೀಸ್ ಠಾಣೆಯ ಜನಕ್‌ಪುರ ತೋರ್ಡಿಯ ನಿವಾಸಿ ರಾಜರಾಮ್ (41) ಎಂದು ಗುರುತಿಸಲಾಗಿದೆ. ರಾಜರಾಮ್ ರೈತನಾಗಿದ್ದು, ಇಬ್ಬರು ಮಕ್ಕಳಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಭೀಕರ ಅಪಘಾತ; ಮೇಲ್ಸೇತುವೆಯಿಂದ ಕಾರು ಬಿದ್ದು ಮಹಿಳೆ ಸಾವು
ರಾಜಾರಾಮ್, ಡಿಯೋಲಿಯಿಂದ ಟೋಂಕ್‌ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಘಟನೆಯ ಸಮಯದಲ್ಲಿ ಅವರು ಫೇಸ್‌ಬುಕ್‌ನಲ್ಲಿಯೂ ಲೈವ್ ಬಂದಿದ್ದರು. ಲೈವ್ ವಿಡಿಯೊದಲ್ಲಿ ಕಾರು ಗಂಟೆಗೆ ಸುಮಾರು 197-198 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿರುವುದನ್ನು ತೋರಿಸಲಾಗಿದೆ. ದುನಿ ಪ್ರದೇಶದ ಪಾಲಿಯಾಡಾ ಬಳಿ ಕಾರ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ ಕಾರಿನ ಮುಂಭಾಗ ತೀವ್ರವಾಗಿ ಹಾನಿಗೊಳಗಾಗಿದ್ದು, ರಾಜಾರಾಮ್ ಸ್ಥಳದಲ್ಲೇ ಮೃತಪಟ್ಟರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಅಗತ್ಯ ಕ್ರಮ ಕೈಗೊಂಡರು. ಮರಣೋತ್ತರ ಪರೀಕ್ಷೆಯ ನಂತರ, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಮೃತರ ಮಕ್ಕಳಲ್ಲಿ ಒಬ್ಬ ಪುತ್ರ ಪ್ರಸ್ತುತ ಎಂಬಿಬಿಎಸ್ ಓದುತ್ತಿದ್ದಾರೆ ಎನ್ನಲಾಗಿದೆ. ಅಪಘಾತದ ಸುದ್ದಿ ತಿಳಿದ ಕುಟುಂಬವು ಶೋಕ ಸಾಗರದಲ್ಲಿ ಮುಳುಗಿದೆ.