ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಾಕಿಸ್ತಾನದ ರಕ್ಷಣಾ ಸಚಿವ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ; ಖವಾಜಾ ಆಸಿಫ್‌ಗೆ ಭಾರತ ತಿರುಗೇಟು

ಇತ್ತೀಚೆಗೆ ಸೀಶೆಲ್ಸ್‌ಗೆ ಪ್ರವಾಸ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿ ಹೊಸದಾಗಿ ಸ್ಥಾಪಿಸಲಾದ "ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್" ಅಧ್ಯಕ್ಷೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಈ ಕುರಿತು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ವ್ಯಂಗ್ಯವಾಡಿದ್ದು, ಇದಕ್ಕೆ ಭಾರತ ಈಗ ತಿರುಗೇಟು ನೀಡಿದೆ.

ಪ್ರಧಾನಿ ಮೋದಿ ವಿರುದ್ಧ ಹೇಳಿಕೆ: ಖವಾಜಾ ಆಸಿಫ್ ಗೆ ಭಾರತ ತಿರುಗೇಟು

ಸಂಗ್ರಹ ಚಿತ್ರ -

ನವದೆಹಲಿ: ಪಾಕಿಸ್ತಾನ (Pakistan) ರಕ್ಷಣಾ ಸಚಿವ ಖವಾಜಾ ಆಸಿಫ್ (Defense Minister, Khawaja Asif) ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi ) ಸೀಶೆಲ್ಸ್‌ ಅತ್ಯುನ್ನತ ಪ್ರಶಸ್ತಿ ನೀಡಿರುವುದನ್ನು ಟೀಕಿಸಿರುವುದಕ್ಕೆ ಭಾರತ ತಿರುಗೇಟು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಸೀಶೆಲ್ಸ್‌ (Seychelles) ಪ್ರವಾಸ ಮಾಡಿದ್ದು ಈ ಸಂದರ್ಭದಲ್ಲಿ ಅವರಿಗೆ ಅಲ್ಲಿ ಹೊಸದಾಗಿ ಸ್ಥಾಪಿಸಲಾದ "ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್" (Guardian of the Blue Horizon) ಅಧ್ಯಕ್ಷೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಇದನ್ನು ಖವಾಜಾ ಆಸಿಫ್ ಅವರು ತೀವ್ರವಾಗಿ ಟೀಕಿಸಿದ್ದರು.

ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್ ಪ್ರಶಸ್ತಿ ಪಡೆದ ಪ್ರಧಾನಿ ಮೋದಿ ಅವರನ್ನು ಟೀಕಿಸಿರುವ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿಕೆಗೆ ತಿರುಗೇಟು ನೀಡಿರುವ ಭಾರತ ಸರ್ಕಾರ, ಖವಾಜಾ ಆಸಿಫ್ ಅವರಿಗೆ ಯಾವುದೇ ನಿತ್ಯದ ಕೆಲಸವಿಲ್ಲ. ಹೀಗಾಗಿ ಅವರ ತಿಳುವಳಿಕೆಗೆ ಮೀರಿದ ವಿಷಯಗಳ ಬಗ್ಗೆ ಮೂರ್ಖತನದ ಹೇಳಿಕೆಗಳನ್ನು ನೀಡುತ್ತಾ ಸಮಯ ಕಳೆಯುತ್ತಾರೆ ಎಂದು ಹೇಳಿದೆ.

ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿಗೆ ಜೀವ ಬೆದರಿಕೆ; ತನಿಖೆ ಚುರುಕು

ಖವಾಜಾ ಆಸಿಫ್ ಅವರು ಮಾನಸಿಕವಾಗಿ ಅಸ್ಥಿರರಾಗಿದ್ದಾರೆ. ಅವರು ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸುತ್ತಿರುವುದು ಪಾಕಿಸ್ತಾನದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಬಹಳಷ್ಟು ಹೇಳುತ್ತದೆ. ಖವಾಜಾ ಆಸಿಫ್ ಅವರು ಯಾವಾಗಲು ಅಸೂಯೆಯಿಂದ ಮಾತನಾಡುತ್ತಾರೆ. ವಿಶೇಷವಾಗಿ ದ್ವೇಷ ಭಾಷಣದಲ್ಲೇ ಮುಳುಗಿರುತ್ತಾರೆ ಎಂದು ತಿಳಿಸಿದೆ.

ಖವಾಜಾ ಆಸಿಫ್ ಅವರು ಪ್ರಧಾನಿ ಮೋದಿಯವರಿಗೆ ನೀಡಿರುವ ಸೀಶೆಲ್ಸ್ ಗೌರವವನ್ನು ಎಂಜಿನಿಯರಿಂಗ್ ಮಾನ್ಯತೆ ಎಂದು ಹೇಳಿ ವ್ಯಂಗ್ಯವಾಡಿದ್ದರು. ಇದಕ್ಕೆ ಈಗ ಭಾರತ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದೆ.

ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ನಾಯಕತ್ವಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೀಶೆಲ್ಸ್‌ನ ಅತ್ಯುನ್ನತ ಪ್ರಶಸ್ತಿ 'ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್' ಅನ್ನು ನೀಡಿ ಇತ್ತೀಚೆಗೆ ಗೌರವಿಸಲಾಗಿದೆ. ಇದು ನೈಸರ್ಗಿಕ ಸಂಪನ್ಮೂಲಗಳು ಮತ್ತು ಆರ್ಥಿಕ ಪ್ರಗತಿಯ ನಡುವೆ ಸಮತೋಲನ, ಪರಿಸರ ಸಂರಕ್ಷಣೆ ಮತ್ತು ನೀಲಿ ಆರ್ಥಿಕತೆಗೆ ಪ್ರಧಾನಿ ಮೋದಿ ಅವರ ದೀರ್ಘಕಾಲದ ಬದ್ಧತೆಯನ್ನು ಈ ಮೂಲಕ ಗುರುತಿಸಲಾಗಿದೆ.

ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಪ್ರಧಾನಿ ಎಂದೆನಿಸಿಕೊಂಡ ನರೇಂದ್ರ ಮೋದಿ ಅವರಿಗೆ ಹೊಸದಾಗಿ ರಚಿಸಲಾದ ಈ ಪ್ರಶಸ್ತಿ ನೀಡಿರುವುದು ಭಾರತದಲ್ಲಿ ಸಾಕಷ್ಟು ರಾಜಕೀಯ ವಿವಾದವನ್ನು ಎಬ್ಬಿಸಿತ್ತು. ಈ ಕುರಿತು ವಿರೋಧ ಪಕ್ಷಗಳು ಸಾಕಷ್ಟು ಟೀಕೆಯನ್ನು ಮಾಡಿದ್ದವು.

ಇದನ್ನು ಗುರುತಿಸಿದ ಸೀಶೆಲ್ಸ್ ಸರ್ಕಾರ ತನ್ನ ಹಳೆಯ ರಾಷ್ಟ್ರೀಯ ಗೌರವವನ್ನು ಹೊಸ ನಿಯಮಗಳ ಅಡಿಯಲ್ಲಿ ಪರಿವರ್ತಿಸುತ್ತಿರುವುದಾಗಿ ಸ್ಪಷ್ಟಪಡಿಸಿತು. ಇದನ್ನು ಪ್ರಧಾನಿ ಮೋದಿ ಅವರ ಭೇಟಿಗೂ ಮೊದಲು ಅಂದರೆ ಜೂನ್ 24 ರಂದು ಕ್ಯಾಬಿನೆಟ್ ನಲ್ಲಿ 'ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್' ಗೆ ಅನುಮೋದನೆಯನ್ನು ನೀಡಿತ್ತು.

ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್: ಸೀಶೆಲ್ಸ್‌ನ ಅತ್ಯುನ್ನತ ಗೌರವ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕೃತ ಮತ್ತು ಸರಿಯಾಗಿ ಅನುಮೋದಿಸಲಾದ ಪ್ರಶಸ್ತಿಯ ಆವೃತ್ತಿಯನ್ನು ನೀಡಲಾಗಿದೆ. ಇದನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ತಯಾರಿಸಲಾಗಿದೆ ಎಂದು ಸೀಶೆಲ್ಸ್ ತಿಳಿಸಿದೆ.