ಬೆಳಕಿಲ್ಲ, ಎಸಿಯಿಲ್ಲ, ವಿಮಾನದೊಳಗೆ ಬೆವರು ಹರಿಸಿದ ಪ್ರಯಾಣಿಕರು: ಇಂಡಿಗೋ ಫ್ಲೈಟ್‌ನೊಳಗೆ 30 ನಿಮಿಷ ವಿದ್ಯುತ್ ವ್ಯತ್ಯಯ
Passengers left sweating inside aircraft: ವಡೋದರಾದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕರು ವಿದ್ಯುತ್ ವ್ಯತ್ಯಯದ ಸಮಸ್ಯೆಯನ್ನು ಎದುರಿಸಿದ ಘಟನೆ ಭಾನುವಾರ (ಮೇ 17) ರಾತ್ರಿ ನಡೆದಿದೆ. ವಿಮಾನವು ಟೇಕ್-ಆಫ್ ಆಗುವ ಮುನ್ನ, ನಿಲುಗಡೆ ಮಾಡಲಾದ ವಿಮಾನಗಳಿಗೆ ವಿದ್ಯುತ್ ಸರಬರಾಜು ಮಾಡುವ ಗ್ರೌಂಡ್ ಪವರ್ ಯೂನಿಟ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು.
ಸಾಂದರ್ಭಿಕ ಚಿತ್ರ -
ನವದೆಹಲಿ, ಮೇ 19: ವಡೋದರಾದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿದ್ದ (IndiGo flight) ಪ್ರಯಾಣಿಕರು ವಿದ್ಯುತ್ ವ್ಯತ್ಯಯದ ಸಮಸ್ಯೆಯನ್ನು ಎದುರಿಸಿದ ಘಟನೆ ಭಾನುವಾರ (ಮೇ 17) ರಾತ್ರಿ ನಡೆದಿದೆ. ವಿಮಾನದ ಗ್ರೌಂಡ್ ಪವರ್ ಸಪ್ಲೈನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದಾಗಿ ಸುಮಾರು ಅರ್ಧ ಗಂಟೆಯ ಕಾಲ ವಿಮಾನದ ಕ್ಯಾಬಿನ್‌ನಲ್ಲಿ ವಿದ್ಯುತ್ ಮತ್ತು ಹವಾನಿಯಂತ್ರಣ (AC) ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿತು.
ಮೇ 17ರ ರಾತ್ರಿ 8.40ಕ್ಕೆ ವಡೋದರಾದಿಂದ ಹೊರಡಬೇಕಿದ್ದ ಇಂಡಿಗೋ ವಿಮಾನ 6E 657ರಲ್ಲಿ ಈ ಘಟನೆ ನಡೆದಿದೆ. ವಿಮಾನವು ಟೇಕ್-ಆಫ್ ಆಗುವ ಮುನ್ನ, ನಿಲುಗಡೆ ಮಾಡಲಾದ ವಿಮಾನಗಳಿಗೆ ವಿದ್ಯುತ್ ಸರಬರಾಜು ಮಾಡುವ ಗ್ರೌಂಡ್ ಪವರ್ ಯೂನಿಟ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು. ಆ ಹೊತ್ತಿಗಾಗಲೇ ಸುಮಾರು 160 ಪ್ರಯಾಣಿಕರು ವಿಮಾನವನ್ನು ಹತ್ತಿದ್ದರು ಎಂದು ಹೇಳಲಾಗಿದೆ.
ಇಂಡಿಗೋ ವಿಮಾನದೊಳಗೆ ಪ್ರಯಾಣಿಕರ ಪರದಾಟ:
Indigo flight 6e657 from baroda to delhi had no power for last 45-50 mins. now light has come but no ac. people are suffocating inside and crew isn’t allowing to deboard or open the doors @DGCAIndia pic.twitter.com/DRwZVALJLP
— riya (@reeyonisus) May 17, 2026
ಕತ್ತಲೆಯಲ್ಲಿ ಮುಳುಗಿದ ಕ್ಯಾಬಿನ್
ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರ ಪ್ರಕಾರ, ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡ ಸಮಯದಲ್ಲಿ ವಿಮಾನವು ವಿದ್ಯುತ್ ಪೂರೈಕೆಗಾಗಿ ಗ್ರೌಂಡ್ ಪವರ್ ಯೂನಿಟ್ ಅನ್ನು ಅವಲಂಬಿಸಿತ್ತು. ತಾಂತ್ರಿಕ ದೋಷವನ್ನು ಸರಿಪಡಿಸಲು ಎಂಜಿನಿಯರ್‌ಗಳಿಗೆ ಸುಮಾರು 12ರಿಂದ 15 ನಿಮಿಷಗಳು ಬೇಕಾಯಿತು. ಬಳಿಕ ವಿಮಾನಕ್ಕೆ ವಿದ್ಯುತ್ ಅನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಲು ಇನ್ನೂ 15 ನಿಮಿಷಗಳು ಬೇಕಾಯಿತು.
ಟಿಕೆಟ್ ಇದ್ದರೂ ವಿಮಾನದೊಳಗೆ ಪ್ರಯಾಣಿಕನಿಗೆ ಪ್ರವೇಶ ನಿರಾಕರಿಸಿದ ಇಂಡಿಗೋ
ಈ 30 ನಿಮಿಷಗಳ ಅವಧಿಯಲ್ಲಿ, ಕ್ಯಾಬಿನ್‌ನಲ್ಲಿ ಸಂಪೂರ್ಣ ಕತ್ತಲೆ ಆವರಿಸಿತ್ತು. ಎಸಿ ಸಹ ಕಾರ್ಯನಿರ್ವಹಿಸದ ಕಾರಣ, ಪ್ರಯಾಣಿಕರು ತೀವ್ರವಾಗಿ ಬೆವರುತ್ತಿದ್ದರು. ಅಲ್ಲದೆ ಪ್ರಯಾಣಿಕರು ವಿಮಾನದೊಳಗೆ ಭಯಭೀತರಾಗಿ ಕುಳಿತೇ ಇದ್ದರು. ರಾತ್ರಿ 8.40ಕ್ಕೆ ಹೊರಡಲು ನಿಗದಿಯಾಗಿದ್ದ ವಿಮಾನವು ಅಂತಿಮವಾಗಿ ರಾತ್ರಿ 10 ಗಂಟೆಗೆ ಹೊರಟಿತು. ಸುಮಾರು 1 ಗಂಟೆ 20 ನಿಮಿಷ ವಿಳಂಬವಾಯಿತು.
ಇಂಡಿಗೋ ಅಧಿಕಾರಿಗಳು ಹೇಳಿದ್ದೇನು?
ʼʼತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೇ 17ರಂದು ವಡೋದರಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ 6E 657 ಹಾರಾಟ ವಿಳಂಬವಾಯಿತು. ಸಮಸ್ಯೆಯನ್ನು ತಕ್ಷಣವೇ ಪರಿಹರಿಸಲಾಯಿತು. ವಿಮಾನವು ಶೀಘ್ರದಲ್ಲೇ ತನ್ನ ಗಮ್ಯಸ್ಥಾನಕ್ಕೆ ತೆರಳಿತು. ವಿಳಂಬದ ಉದ್ದಕ್ಕೂ ಗ್ರಾಹಕರಿಗೆ ಮಾಹಿತಿ ನೀಡಲಾಯಿತು. ನಮ್ಮ ಗ್ರಾಹಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ಅವರ ತಾಳ್ಮೆ ಮತ್ತು ತಿಳುವಳಿಕೆಯನ್ನು ಪ್ರಶಂಸಿಸುತ್ತೇವೆ. ನಮ್ಮ ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆʼʼ ಎಂದು ಇಂಡಿಗೋ ತಿಳಿಸಿದೆ.
GPU ಎಂದರೇನು?
ಗ್ರೌಂಡ್ ಪವರ್ ಯೂನಿಟ್ ಎಂದರೆ, ವಿಮಾನ ನಿಲ್ದಾಣದ ಗೇಟ್‌ನಲ್ಲಿ ನಿಂತಿರುವಾಗ ಅದಕ್ಕೆ ವಿದ್ಯುತ್ ಒದಗಿಸಲು ಬಳಸುವ ಉಪಕರಣ. ಇದು ವಿಮಾನದ ಎಂಜಿನ್‌ಗಳು ಅಥವಾ ಆನ್‌ಬೋರ್ಡ್ ಜನರೇಟರ್‌ಗಳನ್ನು ಚಲಾಯಿಸದೆಯೇ ಕ್ಯಾಬಿನ್ ದೀಪಗಳು, ಏವಿಯಾನಿಕ್ಸ್ ಮತ್ತು ಹವಾನಿಯಂತ್ರಣದಂತಹ ವ್ಯವಸ್ಥೆಗಳಿಗೆ ವಿದ್ಯುತ್ ನೀಡುತ್ತದೆ.