ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Droupadi Murmu: ಪ್ರಧಾನಿ ಮೋದಿ ನನ್ನನ್ನು ಬ್ಲ್ಯಾಕ್‌ಮೇಲ್‌ ಮಾಡ್ತಿದ್ದಾರೆ.... ವೈರಲಾಗ್ತಿರುವ ದ್ರೌಪದಿ ಮುರ್ಮು ವಿಡಿಯೊದ ಅಸಲಿಯತ್ತೇನು?

President Droupadi Murmu:ದ್ರೌಪದಿ ಮುರ್ಮು ಸಾರ್ವಜನಿಕ ಭಾಷಣ ಮಾಡುತ್ತಿರುವ ವಿಡಿಯೊವೊಂದು ಭಾರೀ ವೈರಲ್‌ ಆಗುತ್ತಿದೆ. ರಫೇಲ್‌ ಯುದ್ಧ ವಿಮಾನ ಖರೀದಿ ಬಗ್ಗೆ ಮಾತನಾಡುತ್ತಿರುವ ಮುರ್ಮು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಮ್ಮನ್ನು ಪ್ರಚಾರದ ಭಾಗವಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳುತ್ತಿರುವುದನ್ನು ಕಾಣಬಹುದಾಗಿದೆ.

ರಾಷ್ಟ್ರಪತಿಯನ್ನೂ ಬಿಡದ AI ಡೀಪ್‌ ಫೇಕ್‌ ವಿಡಿಯೊ ಪೆಡಂಭೂತ!

-

Rakshita Karkera Rakshita Karkera Oct 29, 2025 11:13 AM

ನವದೆಹಲಿ: ಕೆಲವು ತಿಂಗಳ ಹಿಂದೆ ಭಾರೀ ಸದ್ದು ಮಾಡಿದ್ದ ಡೀಪ್‌ ಫೇಕ್‌(Deep Fake) ವಿಡಿಯೊ ಇದೀಗ ಮತ್ತೆ ಸುದ್ದಿಯಲ್ಲಿದೆ. ಹಲವು ಸೆಲೆಬ್ರಿಟಿಗಳು ಈ ಡೀಪ್‌ ಫೇಕ್‌ ವಿಡಿಯೊ ಸಮಸ್ಯೆ ತುತ್ತಾದ ಸುದ್ದಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಇದೀಗ ಈ ಸಮಸ್ಯೆ ರಾಷ್ಟ್ರಪತಿ ದ್ರೌಪದಿ ಮುರ್ಮು(President Droupadi Murmu) ಅವರನ್ನೂ ಬಿಟ್ಟಿಲ್ಲ. ದ್ರೌಪದಿ ಮುರ್ಮು ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿರುವ ನಕಲಿ ವಿಡಿಯೊ ಇದೀಗ ಭಾರೀ ವೈರಲ್‌ ಆಗಿದೆ.

ವಿಡಿಯೊದಲ್ಲೇನಿದೆ?

ದ್ರೌಪದಿ ಮುರ್ಮು ಸಾರ್ವಜನಿಕ ಭಾಷಣ ಮಾಡುತ್ತಿರುವ ವಿಡಿಯೊವೊಂದು ಭಾರೀ ವೈರಲ್‌ ಆಗುತ್ತಿದೆ. ರಫೇಲ್‌ ಯುದ್ಧ ವಿಮಾನ ಖರೀದಿ ಬಗ್ಗೆ ಮಾತನಾಡುತ್ತಿರುವ ಮುರ್ಮು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಮ್ಮನ್ನು ಪ್ರಚಾರದ ಭಾಗವಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳುತ್ತಿರುವುದನ್ನು ಕಾಣಬಹುದಾಗಿದೆ. ರಫೇಲ್‌ ಬಗೆಗಿನ ಪ್ರಚಾರಕ್ಕಾಗಿ ನನ್ನನ್ನು ಬಲವಂತವಾಗಿ ರಫೇಲ್‌ ಯುದ್ಧ ವಿಮಾನದಲ್ಲಿ ಕುಳಿತು ಹಾರಾಟ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ. ನನ್ನನ್ನು ಬ್ಲ್ಯಾಕ್‌ಮೇಲ್‌ ಮಾಡಿ ಈ ಹಾರಾಟ ನಡೆಸುವಂತೆ ಮೋದಿಜೀ ಮತ್ತು ಸರ್ಕಾರ ಒತ್ತಡ ಹೇರುತ್ತಿವೆ. ನನಗೆ ನನ್ನ ಪ್ರಾಣ, ಪತಿ ಮತ್ತು ಮಕ್ಕಳು ನನಗೆ ಮುಖ್ಯ ಎಂದು ಮುರ್ಮು ಹೇಳುತ್ತಿರುವಂತೆ ವಿಡಿಯೊವನ್ನು ತಿರುಚಲಾಗಿದೆ.

ಈ ಸುದ್ದಿಯನ್ನೂ ಓದಿ: Droupadi Murmu: ನೆಲದಲ್ಲಿ ಸಿಲುಕಿಕೊಂಡ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಚಕ್ರ; ತಪ್ಪಿದ ಭಾರಿ ದುರಂತ



ವಿಡಿಯೊ ಹಂಚಿಕೊಂಡ ಕುತಂತ್ರಿ ಪಾಕ್‌!

ಇನ್ನು ವಿಡಿಯೊವನ್ನು ಕುತಂತ್ರಿ ಪಾಕಿಸ್ತಾನ ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿತ್ತು. ಈ ನಕಲಿ ವಿಡಿಯೊವನ್ನು ರಚಿಸಿದ್ದೇ ಪಾಕಿಸ್ತಾನ ಎನ್ನಲಾಗಿದೆ. ಈ ವಿಡಿಯೊ ಹಂಚಿಕೊಂಡಿರುವ ಪಾಕಿಸ್ತಾನ, ರಫೇಲ್‌ ಯುದ್ಧ ವಿಮಾನ ಬಗ್ಗೆ ಪ್ರಚಾರ ಹೆಚ್ಚಿಸಲು ರಾಷ್ಟ್ರಪತಿಯನ್ನು ಪ್ರಧಾನಿ ಮೋದಿ ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಬರೆದುಕೊಂಡಿದೆ.

ಪಾಕ್‌ ಮುಖವಾಡ ಕಳಚಿದ PIB

ಇನ್ನು ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪ್ರೆಸ್ ಇನ್ಫರ್ಮೇಷನ್ ಬ್ಯೂರೊ (PIB)ಫ್ಯಾಕ್ಟ್‌ ಚೆಕ್‌ ಮಾಡಿ, ಇದೊಂದು ನಕಲಿ ವಿಡಿಯೊ ಎಂದು ಸ್ಪಷ್ಟನೆ ನೀಡಿದೆ. ಪಾಕಿಸ್ತಾನಿ ಪ್ರಚಾರ ಖಾತೆಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತಿವೆ ಮತ್ತು ಭಾರತದ ರಾಷ್ಟ್ರಪತಿಗಳು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಫ್ಯಾಕ್ಟ್‌ ಚೆಕ್‌ ತಜ್ಞರು, ಈ ವೀಡಿಯೊ ಎಐ-ರಚಿತ ಮತ್ತು ನಕಲಿ ಎಂಬುದನ್ನು ಸಾಬೀತು ಪಡಿಸಿದ್ದಾರೆ ಭಾರತದ ರಾಷ್ಟ್ರಪತಿಗಳು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ! ಈ ಎಐ-ರಚಿತ ನಕಲಿ ವೀಡಿಯೊವನ್ನು ಜನರನ್ನು ದಾರಿ ತಪ್ಪಿಸಲು ಪ್ರಸಾರ ಮಾಡಲಾಗುತ್ತಿದೆ" ಎಂದು ಅದು ಹೇಳಿದೆ.

ಇಂದು ರಫೇಲ್‌ನಲ್ಲಿ ಮುರ್ಮು ಹಾರಾಟ!

ದ್ರೌಪದಿ ಮುರ್ಮು ಬುಧವಾರ ಹರಿಯಾಣದ ಅಂಬಾಲಾ ವಾಯುಪಡೆ ನೆಲೆಯಿಂದ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಲಿದ್ದಾರೆ. IAF ನ ಅತ್ಯಂತ ಆಧುನಿಕ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. ದ್ರೌಪದಿ ಮುರ್ಮು ಈಗಾಗಲೇ 2023 ರಲ್ಲಿ ಸುಖೋಯ್-30MKI ನಲ್ಲಿ ಹಾರಾಟ ನಡೆಸಿದ್ದಾರೆ. ಏಪ್ರಿಲ್ 22 ರಂದು ನಡೆದ ಭೀಕರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಪ್ರಾರಂಭಿಸಿದ ಆಪರೇಷನ್ ಸಿಂಧೂರ್ ಸಮಯದಲ್ಲಿ ರಫೇಲ್ ಜೆಟ್‌ಗಳನ್ನು ಬಳಸಲಾಗಿತ್ತು.

ಇದಕ್ಕೂ ಮೊದಲು, ಮಾಜಿ ರಾಷ್ಟ್ರಪತಿಗಳಾದ ಎ ಪಿ ಜೆ ಅಬ್ದುಲ್ ಕಲಾಂ ಮತ್ತು ಪ್ರತಿಭಾ ಪಾಟೀಲ್ ಅವರು ಕ್ರಮವಾಗಿ ಜೂನ್ 8, 2006 ಮತ್ತು ನವೆಂಬರ್ 25, 2009 ರಂದು ಪುಣೆ ಬಳಿಯ ಲೋಹೆಗಾಂವ್‌ನಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ ಸುಖೋಯ್-30 MKI ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು.