2025ರಲ್ಲಿ ಮತ್ತೊಮ್ಮೆ ವಿಶ್ವದ ಗಮನ ಸೆಳೆದ ಪ್ರಧಾನಿ ಮೋದಿ; ಇಲ್ಲಿದೆ ಅಪರೂಪದ ಕ್ಷಣಗಳ ಫೋಟೊ
ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರಾಗಿ ಗುರುತಿಸಿಕೊಂಡರೂ 2025ರಲ್ಲಿ ಅವರು ವಿಶ್ವದ ಗಮನವನ್ನು ಸಂಪೂರ್ಣವಾಗಿ ಭಾರತದತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಹ ಕೆಲವು ಅಪರೂಪದ ಕ್ಷಣದ ಚಿತ್ರಗಳು ಇಲ್ಲಿವೆ. ಇವುಗಳಲ್ಲಿ ಭಾರತದ ರಾಜಕೀಯ ನಡೆ, ಹೃದಯಸ್ಪರ್ಶಿ ಕ್ಷಣಗಳೂ ಇದ್ದು ಇವು ಭಾರತದ ಶಕ್ತಿ ಮತ್ತು ಕನಸಿನ ಪ್ರತಿಬಿಂಬದಂತಿದೆ.
(ಸಂಗ್ರಹ ಚಿತ್ರ) -
ಆಪರೇಷನ್ ಸಿಂದೂರ್, ಅಯೋಧ್ಯೆ ಮಂದಿರದ ಮೇಲೆ ಪವಿತ್ರ ಧ್ವಜ, ಭಾರತ ಮತ್ತು ಚೀನಾ ಮೈತ್ರಿ, ಅಮೆರಿಕದ ವಿರುದ್ಧ ಸಾಗಿ ರಷ್ಯಾದೊಂದಿಗೆ ಮೈತ್ರಿ ಕಾಪಾಡಿಕೊಂಡ ಭಾರತ.. ಈ ಎಲ್ಲ ಘಟನಾವಳಿಗೆ 2025 ಸಾಕ್ಷಿಯಾಯಿತು. ಇದರಲ್ಲಿ ಪ್ರಮುಖ ಪಾತ್ರವಹಿಸಿದ್ದು ಪ್ರಧಾನಿ ನರೇಂದ್ರ ಮೋದಿ. ಭಕ್ತಿ, ರಾಜತಾಂತ್ರಿಕತೆ, ಅಭಿವೃದ್ಧಿ ಮತ್ತು ಆಳವಾದ ಮಾನವ ಸಂಪರ್ಕದ ಪ್ರತಿಬಿಂಬವಾಗಿದೆ ಈ ಚಿತ್ರಗಳು.
ಅಹಮದಾಬಾದ್ನಲ್ಲಿ ನಡೆದ ರೋಡ್ ಶೋನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಮಹಿಳೆಯೊಬ್ಬರು ಸಂತೋಷದ ಕಣ್ಣೀರು ಸುರಿಸಿದರು. ಛತ್ತೀಸ್ಗಢದ ರಾಯ್ಪುರದಲ್ಲಿ ವಿದ್ಯಾರ್ಥಿಗಳು ಪ್ರಧಾನಿ ಮೋದಿಯವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇವು ರಾಜಕೀಯ ನಾಯಕನ ಬದುಕಿನ ಹೃದಯ ಸ್ಪರ್ಶಿ ಕ್ಷಣವಾಗಿ ಗುರುತಿಸಲ್ಪಟ್ಟಿದೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀ ರಾಮ ಜನ್ಮಭೂಮಿ ಮಂದಿರದ ಶಿಖರದ ಮೇಲೆ ಪ್ರಧಾನಿ ಮೋದಿ ಪವಿತ್ರ ಧರ್ಮ ಧ್ವಜವನ್ನು ಹಾರಿಸಿದರು. ದೆಹಲಿಯ ಕೆಂಪು ಕೋಟೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ತಮಿಳುನಾಡಿನ ಭವ್ಯವಾದ ಗಂಗೈಕೊಂಡ ಚೋಳಪುರಂ ದೇವಾಲಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ.
ಚೀನಾದ ಟಿಯಾಂಜಿನ್ನಲ್ಲಿ ನಡೆದ 2025ರ ಎಸ್ಸಿಒ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಜೊತೆಯಾಗಿ ಕಾಣಿಸಿಕೊಂಡರು. ಇದು ವಿಶ್ವಕ್ಕೆ ಭಾರತದ ಶಕ್ತಿಯನ್ನು ಪ್ರದರ್ಶಿಸುವಂತಿತ್ತು.
ಗೋವಾ ರಾಜ್ಯದ ಕಾಣಕೋಣದಲ್ಲಿರುವ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಪ್ರಧಾನಿ ಮೋದಿ 77 ಅಡಿಯ ಶ್ರೀರಾಮನ ಬೃಹತ್ ವಿಗ್ರಹವನ್ನು ಅನಾವರಣ ಮಾಡಿ ಪಂಚ ಶತಮಾನೋತ್ಸವ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.
ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಪ್ರಧಾನಿ ಮೋದಿ ಹಾಗೂ ಕೆನಡಾದ ಕನನಸ್ಕಿಸ್ನಲ್ಲಿ ನಡೆದ 51ನೇ ಜಿ7 ಶೃಂಗಸಭೆಯ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಮತ್ತು ಬ್ರೆಜಿಲ್ ಅಧ್ಯಕ್ಷ ಲುಲಾ ಅವರೊಂದಿಗೆ ಪ್ರಧಾನಿ ಮೋದಿ. ಶ್ವೇತಭವನದಲ್ಲಿ ಪ್ರಧಾನ ಮಂತ್ರಿಗೆ ಪುಸ್ತಕ ಉಡುಗೊರೆಯಾಗಿ ನೀಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ .
14 ವರ್ಷಗಳ ಹಿಂದೆ ಪ್ರಧಾನಿ ಮೋದಿ ಪ್ರಧಾನಿಯಾಗುವವರೆಗೂ ಪಾದರಕ್ಷೆಗಳನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಹರಿಯಾಣದ ರಾಂಪಾಲ್ ಕಶ್ಯಪ್ ಅವರಿಗೆ ಪ್ರಧಾನಿ ಮೋದಿ ಅವರು ಒಂದು ಜೋಡಿ ಶೂಗಳನ್ನು ನೀಡಿದರು.
ಆಪರೇಷನ್ ಸಿಂಧೂರ್ ಯಶಸ್ಸಿನ ಬಳಿಕ ಪಂಜಾಬ್ನ ಅದಮ್ಪುರ ವಾಯುಪಡೆ ನೆಲೆ ಹಾಗೂ ಪಾಕಿಸ್ತಾನಿ ದಾಳಿಯ ನಂತರ 1971 ರ ಯುದ್ಧದಲ್ಲಿ 72 ಗಂಟೆಗಳಲ್ಲಿ ವಾಯುನೆಲೆಯನ್ನು ಪುನರ್ನಿರ್ಮಿಸಿದ ಭುಜ್ನ ಮಹಿಳೆಯನ್ನು ಭೇಟಿಯಾದ ಪ್ರಧಾನಿ ಮೋದಿ.
ಜೋರ್ಡಾನ್ ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯುವರಾಜ ಅಲ್ ಹುಸೇನ್ ಬಿನ್ ಅಬ್ದುಲ್ಲಾ II ಅವರು ದೇಶದ ಅತೀ ದೊಡ್ಡ ವಸ್ತು ಸಂಗ್ರಹಾಲಯಕ್ಕೆ ಕರೆದುಕೊಂಡು ಹೋದರು.
ತಮಿಳುನಾಡಿನ ರಾಮೇಶ್ವರಂನಲ್ಲಿ ಪಂಬನ್ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ ಹಾಗೂ ಬಿಹಾರದ ಬೇಗುಸರಾಯ್ನಲ್ಲಿ ಅತ್ತ-ಸಿಮಾರಿಯಾ ಸೇತುವೆಯ ಉದ್ಘಾಟನೆ ವೇಳೆ ಉತ್ಸಾಹಭರಿತ ಜನಸಮೂಹಕ್ಕೆ ಕೈ ಬೀಸುತ್ತಿರುವ ಪ್ರಧಾನಿ ಮೋದಿ ಮತ್ತು ಸಿಎಂ ನಿತೀಶ್ ಕುಮಾರ್.
ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ವರ್ಲ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಧ್ಯಾನ, ದರ್ಶನ ಮತ್ತು ಪೂಜೆ ಸಲ್ಲಿಸಿದರು. ಕರ್ನಾಟಕದ ಉಡುಪಿಯಲ್ಲಿರುವ ಪವಿತ್ರ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು.